ಜನಪ್ರಿಯ ಮಾರುತಿ ಸುಜುಕಿ ಜಿಮ್ನಿ 5-ಡೋರ್ ಬಗ್ಗೆ ಮಹತ್ವದ ಮಾಹಿತಿ ಬಹಿರಂಗ!

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಮಾರುತಿ ಸುಜುಕಿಯ ಬಹುನಿರೀಕ್ಷಿತ ಆಫ್-ಡೋರ್ ಎಸ್‌ಯುವಿ ಜಿಮ್ನಿ 5-ಡೋರ್ ಉತ್ಪಾದನೆ ಹಾಗೂ ಬಿಡುಗಡೆ ಸಂಬಂಧ ಮಹತ್ವದ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಆ ಪ್ರಕಾರ, ಎಸ್‌ಯುವಿ ಇನ್ನೆರಡು ತಿಂಗಳಲ್ಲಿ ಲಾಂಚ್ ಆಗಲಿದೆ ಎಂದು ವರದಿಯಾಗಿದೆ.

ಮಾರುತಿ ಸುಜುಕಿ, ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಜನಪ್ರಿಯ ಜಿಮ್ನಿ 5-ಡೋರ್ ಎಸ್‌ಯುವಿಯನ್ನು ಅನಾವರಣಗೊಳಿಸಿ, ಬುಕಿಂಗ್ ಕೂಡ ಶುರು ಮಾಡಿತ್ತು. ಅಂದಿನಿಂದಲೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತು. ಬುಕಿಂಗ್ ಆರಂಭವಾಗಿ 50 ದಿನಗಳಲ್ಲೂ ಕಳೆದಿಲ್ಲ, ಅಷ್ಟರೊಳಗೆ ಬರೋಬ್ಬರಿ 20,000ಕ್ಕೂ ಹೆಚ್ಚಿನ ಮಂದಿ ಈ ಜಿಮ್ನಿಗಾಗಿ ಬುಕ್ ಮಾಡಿದ್ದಾರೆ. ಈಗಲೂ ಅವಕಾಶವಿದ್ದು, ಆಸಕ್ತ ಖರೀದಿದಾರರು ರೂ.25,000 ಮುಂಗಡ ಹಣ ಪಾವತಿಸಿ, ಕಾಯ್ದಿರಿಸಬಹುದು.

ಜನಪ್ರಿಯ ಮಾರುತಿ ಸುಜುಕಿ ಜಿಮ್ನಿ 5-ಡೋರ್ ಬಗ್ಗೆ ಮಹತ್ವದ ಮಾಹಿತಿ ಬಹಿರಂಗ!

ಸದ್ಯ, ಮೂಲಗಳಿಂದ ದೊರೆತ್ತಿರುವ ಮಾಹಿತಿ ಪ್ರಕಾರ, ಕಂಪನಿಯು ಈ ಜಿಮ್ನಿ 5-ಡೋರ್ ಎಸ್‌ಯುವಿ ಉತ್ಪಾದನೆಯನ್ನು ಏಪ್ರಿಲ್ ತಿಂಗಳಿಂದ ಆರಂಭಿಸಲಿದ್ದು, ಮೇನಲ್ಲಿ ಬಿಡುಗಡೆ ಮಾಡಲಾಗುತ್ತದೆಯಂತೆ. ಅಲ್ಲದೆ, ವಾರ್ಷಿಕ 1 ಲಕ್ಷ ಯುನಿಟ್ ಉತ್ಪಾದಿಸುವ ಗುರಿಯನ್ನು ಕಂಪನಿ ಹಾಕಿಕೊಂಡಿದೆ. ಅದರಲ್ಲಿ ಪ್ರತಿ ತಿಂಗಳು ದೇಶೀಯ ಗ್ರಾಹಕರಿಗಾಗಿ 7,000 ಉತ್ಪಾದಿಸಲು ನಿರ್ಧರಿಸಿದೆ. ಜೊತೆಗೆ ಒಟ್ಟು ಉತ್ಪಾದನೆಯಲ್ಲಿ 66% ಯುನಿಟ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಉಳಿದಿದ್ದನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ.

ಮುಂಬರಲಿರುವ ಮಾರುತಿ ಸುಜುಕಿ ಜಿಮ್ನಿ 5-ಡೋರ್ ಬೆಲೆ ವಿವರವನ್ನು ನೋಡುವುದಾದರೆ, ಇದು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಲಿದೆ ಎಂದು ಅಂದಾಜಿಸಲಾಗಿದ್ದು, ಬೆಲೆಯು 12 ಲಕ್ಷ ರೂಪಾಯಿ ಇರಬಹುದು. ಬಿಡುಗಡೆಯಾದ ಮೇಲೆ ಭಾರತದ ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ. ಆದರೆ, ಮುಂಬರಲಿರುವ ಮಹೀಂದ್ರಾ ಥಾರ್ ಹಾಗೂ ಫೋರ್ಸ್ ಗೂರ್ಖಾ 5-ಡೋರ್ ಎಸ್‌ಯುವಿಗಳು ಭಾರೀ ಪೈಪೋಟಿ ನೀಡಬಹುದು ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.

ಮಾರುತಿ ಸುಜುಕಿ ಜಿಮ್ನಿ 5 ಡೋರ್ ಎಸ್‌ಯುವಿ ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 1.5 ಲೀಟರ್ 4 ಸಿಲಿಂಡರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 105 bhp ಗರಿಷ್ಠ ಪವರ್ ಹಾಗೂ 134 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 - ಸ್ವೀಡ್ ಮ್ಯಾನುವಲ್ ಅಥವಾ 4 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.

ಈ ಎಸ್‌ಯುವಿ ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಇದು ಖಂಡಿತವಾಗಿಯು ಆಫ್-ರೋಡ್ ಡ್ರೈವಿಂಗ್ ಇಷ್ಟಪಡುವವರೂ ಮೆಚ್ಚಿಕೊಳ್ಳುತ್ತಾರೆ. ಇದು 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಕ್ರೂಸ್ ಕಂಟ್ರೋಲ್ ಹಾಗೂ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಅನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಆರು ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಜಿಮ್ನಿ 5 ಡೋರ್ ಎಸ್‌ಯುವಿ ಬಹು ಬೇಡಿಕೆಯನ್ನು ಹೊಂದಿದೆ. ಆಸ್ಟ್ರೇಲಿಯಾಕ್ಕೆ ಈ ಎಸ್‌ಯುವಿಯನ್ನು ರಫ್ತು ಮಾಡಲಾಗುತ್ತದೆ ಎಂದು ಕಂಪನಿ ಪ್ರಕಟಿಸಿದೆ. ಹರಿಯಾಣದ ಗುರುಗ್ರಾಮದ ಉತ್ಪಾದನಾ ಘಟಕದಲ್ಲಿ ಈ ಎಸ್‌ಯುವಿಯನ್ನು ತಯಾರಿಸಲಾಗುತ್ತಿದೆ. ಅಲ್ಲದೆ, ಯುರೋಪ್ ಮಾರುಕಟ್ಟೆಯಲ್ಲಿ 3 ಡೋರ್ ಎಲೆಕ್ಟ್ರಿಕ್ ಜಿಮ್ನಿಯನ್ನು ಬಿಡುಗಡೆಗೊಳಿಸಲು ಸುಜುಕಿ ಕಾರ್ಯಪ್ರವೃತವಾಗಿದ್ದು, ಮುಂಬರುವ ವರ್ಷದಲ್ಲಿ ಅದು ಲಾಂಚ್ ಆಗುವ ಸಾಧ್ಯತೆ ಇದೆ.

ಒಟ್ಟಾರೆ, ಜನಪ್ರಿಯ ಮಾರುತಿ ಸುಜುಕಿ ಜಿಮ್ನಿ 5-ಡೋರ್ ಕೆಲವೇ ತಿಂಗಳಲ್ಲಿ ಲಾಂಚ್ ಆಗಲಿದ್ದು, ಗ್ರಾಹಕರಿಗೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಬೆಲೆಯು ಅಷ್ಟೇನೂ ಹೆಚ್ಚಿರುವುದಿಲ್ಲ ಎಂದು ಹೇಳಲಾಗಿದೆ. ಜೊತೆಗೆ ಕೈಗೆಟುಕುವ ದರವನ್ನು ಹೊಂದಿರುವುದರಿಂದ ಬಹುತೇಕ ಗ್ರಾಹಕರು ಖರೀದಿಸಲು ಮನಸ್ಸು ಮಾಡಬಹುದು. ಈಗಾಗಲೇ ಅದರ ಬುಕಿಂಗ್ ಗಮನಿಸಿದರೆ ಅದರ ಬೇಡಿಕೆ ಎಷ್ಟು ಪ್ರಮಾಣದಲ್ಲಿದೆ ಎಂಬುದು ತಿಳಿಯುತ್ತದೆ. ಮಾರುಕಟ್ಟೆಗೆ ಬಂದ ಮೇಲೆ ಹೇಗೆ ಕಮಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Article Published On: Saturday, March 4, 2023, 13:58 [IST]
English summary
Maruti suzuki jimny 5 door production important information
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+