Maruti Jimny: ಭಾರತದ ಮಣ್ಣಿನಲ್ಲಿ ತಯಾರಾಗುವ ಶಕ್ತಿಯುತ ಮಾರುತಿ ಜಿಮ್ನಿ 5-ಡೋರ್ ವಿದೇಶಕ್ಕೆ ಎಂಟ್ರಿ
ದೇಶದಲ್ಲಿ ನಿಮ್ಮಿಷ್ಟದ ಆಫ್-ರೋಡ್ ಎಸ್‌ಯುವಿ ಯಾವುದೆಂದು ಯುವ ಜನರಿಗೆ ಕೇಳಿದರೆ, ತಕ್ಷಣ ಬರುವ ಉತ್ತರ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) 5-ಡೋರ್ ಎಂದು. ಅಷ್ಟರಮಟ್ಟಿಗೆ ದೇಶಾದ್ಯಂತ ಜನಪ್ರಿಯತೆ ಗಳಿಸಿದೆ. ಇದೀಗ, ಭಾರತದಲ್ಲಿ ತಯಾರಾಗುವ ಜಿಮ್ನಿ 5-ಡೋರ್ ವಿದೇಶಿ ಮಾರುಕಟ್ಟೆಗೂ ಪ್ರವೇಶಿಸಿದೆ.
ದಕ್ಷಿಣ ಆಫ್ರಿಕಾಕ್ಕೆ ಕಾಲಿಟ್ಟಿರುವ ಜಿಮ್ನಿ 5-ಡೋರ್ ಎಸ್‌ಯುವಿಯನ್ನು ಸುಜುಕಿ ಬ್ಯಾಡ್ಜ್ ಅಡಿಯಲ್ಲಿ ಮಾರಾಟ ಮಾಡಲು ಕಂಪನಿ ತೀರ್ಮಾನ ಮಾಡಿದೆ. ಸದ್ಯ, ಮಿಲಿಟರಿ ಗ್ರೀನ್ ಕಲರ್ ಆಯ್ಕೆಯಲ್ಲಿ ಅನಾವರಣಗೊಳಿಸಿದೆ. ಈ ಬಣ್ಣದಲ್ಲಿ ಜಿಮ್ನಿ 5-ಡೋರ್ ಭಾರತದಲ್ಲಿ ಲಭ್ಯವಿಲ್ಲ. ಅಲ್ಲಿ ಪರಿಚಯಿಸಲಾಗಿರುವ ಜಿಮ್ನಿ, ದೇಶದಲ್ಲಿ ಸಿಗುವ ಜಿಮ್ನಿ ವಿನ್ಯಾಸಕ್ಕೆ ಹೋಲಿಕೆಯಾಗುತ್ತದೆ. ಹೆಚ್ಚುಕಮ್ಮಿ ಒಂದೇ ರೀತಿಯ ಡಿಸೈನ್ ಹೊಂದಿದೆ.

ಆಫ್ರಿಕಾದಲ್ಲಿ ಸಿಗುವ ಜಿಮ್ನಿ 5-ಡೋರ್ ಎಸ್‌ಯುವಿ ಅದ್ಬುತವಾದ ವಿನ್ಯಾಸ ಹೊಂದಿದ್ದು, 6 ಸ್ಲೇಟ್ ಗ್ರಿಲ್, ವಾಷರ್‌ನೊಂದಿಗೆ ಎಲ್ಇಡಿ ಹೆಡ್‌ಲ್ಯಾಂಪ್ಸ್, ಫಾಗ್ ಲ್ಯಾಂಪ್ಸ್, 20 - ಇಂಚಿನ ಅಲಾಯ್ ವೀಲ್ಸ್, ಡ್ರಿಪ್ ರೈಲ್ ಅನ್ನು ಹೊಂದಿದೆ. ಜೊತೆಗೆ ಫ್ರಂಟ್ ಸೀಟ್ಸ್ ನಡುವೆ ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ವೀಲ್ ಮತ್ತು ಪವರ್ ವಿಂಡೋಸ್ ಬಟನ್‌ನ್ನು ಪಡೆದಿದೆ.
ಜಿಮ್ನಿ 5-ಡೋರ್ ಕ್ಯಾಬಿನ್ ಒಳಭಾಗದಲ್ಲಿ ಬ್ಲ್ಯಾಕ್ ಇಂಟೀರಿಯರ್ ಥೀಮ್ ಇದ್ದು, 9.0 - ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಆಟೋ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಕೀಲೆಸ್ ಎಂಟ್ರಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ರೇರ್ ವ್ಯೂ ಕ್ಯಾಮೆರಾವನ್ನು ಪಡೆದಿದೆ.

ದಕ್ಷಿಣ ಆಫ್ರಿಕಾ ಹಾಗೂ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಜಿಮ್ನಿ 5-ಡೋರ್ ಎಸ್‌ಯುವಿಗಳು ಒಂದೇ ರೀತಿಯ ಎಂಜಿನ್ ಆಯ್ಕೆಯನ್ನು ಹೊಂದಿವೆ. 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್, 100 hp ಗರಿಷ್ಠ ಪವರ್ ಹಾಗೂ 134 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್, 4 ಸ್ವೀಡ್ ಆಟೋಮೆಟಿವ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಜಿಮ್ನಿ 5-ಡೋರ್, ರೂಪಾಂತರಗಳಿಗೆ ಅನುಗುಣವಾಗಿ ರೂ.12.74 ಲಕ್ಷದಿಂದ ರೂ.15.05 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 4 ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯಲಿದ್ದು, 4WD (ಫೋರ್ ವೀಲ್ಸ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. 3985ಎಂಎಂ ಉದ್ದ, 1645ಎಂಎಂ ಅಗಲ, 1720 ಎತ್ತರವಿದ್ದು, 2590ಎಂಎಂ ಅಳತೆಯ ವೀಲ್ಸ್ ಬೇಸ್ ಪಡೆದಿದೆ.
ಮಾರುತಿ ಸುಜುಕಿ ಜಿಮ್ನಿ 5-ಡೋರ್ ಆಫ್-ರೋಡ್ ಎಸ್‌ಯುವಿಯಾಗಿದ್ದರೂ ಅತ್ಯುತ್ತಮ ಇಂಧನ ದಕ್ಷತೆಯನ್ನು ಹೊಂದಿದೆ. ಇದರ 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ರೂಪಾಂತರ, 16.94 km/l ಮತ್ತು 4-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಪಡೆದಿರುವ ವೇರಿಯೆಂಟ್ 16.39km/l ಇಂಧನ ದಕ್ಷತೆಯನ್ನು ಪಡೆದಿದೆ. 2 ಡ್ಯೂಯಲ್ ಟೋನ್ ಹಾಗೂ 5 ಮೊನೊಟೊನ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.
ಜಿಮ್ನಿ 5-ಡೋರ್ ಎಸ್‌ಯುವಿಗೆ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾ ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಕಂಪನಿಯು ಈ ಜಿಮ್ನಿಯನ್ನು ಅನಾವರಣಗೊಳಿಸಿದ ಕೆಲವೇ ದಿನಗಳಲ್ಲಿ 30,000ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡು ದೊಡ್ಡ ದಾಖಲೆ ನಿರ್ಮಾಣ ಮಾಡಿತ್ತು. ಇನ್ನು, ಭಾರತದಲ್ಲಿ ಮಾರಾಟವಾಗುವ ಬಲೆನೊ ಆಧಾರಿತ ಫ್ರಾಂಕ್ಸ್ ಎಸ್‌ಯುವಿಯನ್ನು ಕಳೆದ ಕೆಲವು ದಿನಗಳ ಹಿಂದೆ, ಸುಜುಕಿ ಬ್ಯಾಡ್ಜ್ ಅಡಿಯಲ್ಲಿ ದಕ್ಷಿಣ ಆಫ್ರಿಕಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications