Maruti Suzuki Jimny: ಬಿಡುಗಡೆಗೊಂಡು 7 ದಿನವಷ್ಟೇ.. ಮಾರುತಿ ಸುಜುಕಿ ಜಿಮ್ನಿ ಐತಿಹಾಸಿಕ ದಾಖಲೆ

ಭಾರತ ಮಾರುಕಟ್ಟೆಯಲ್ಲಿ ಕೆಲವು ದಿನಗಳ ಹಿಂದೆ, ಮಾರುತಿ ಸುಜುಕಿ (Maruti Suzuki) ತನ್ನ ಬಹುನೀರಿಕ್ಷಿತ ಆಫ್-ರೋಡ್ ಎಸ್‌ಯುವಿ ಜಿಮ್ನಿ '5 ಡೋರ್' ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿತ್ತು. ಇದೀಗ, ಈ ಎಸ್‌ಯುವಿ ಬಗ್ಗೆ ಮಹತ್ವದ ಮಾಹಿತಿ ಬಹಿರಂಗಪಡಿಸಿದೆ. ಸಂಪೂರ್ಣ ವಿವರ ಇಲ್ಲಿದೆ.

ಕಳೆದ ಜನವರಿಯಲ್ಲಿ (2023) ನವದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಕಂಪನಿಯು 'ಜಿಮ್ನಿ 5 ಡೋರ್' ಅನ್ನು ಪ್ರದರ್ಶಿಸಿ, ಬುಕಿಂಗ್ ಕೂಡ ಪ್ರಾರಂಭಿಸಿತ್ತು. ಅಂದಿನಿಂದಲೇ ದೊಡ್ಡಮಟ್ಟದ ನೀರಿಕ್ಷೆ ಹುಟ್ಟುಹಾಕಿದ್ದ ಈ ಎಸ್‌ಯುವಿ, ಈವರೆಗೆ 31,000ಕ್ಕೂ ಹೆಚ್ಚಿನ ಬುಕ್ಕಿಂಗ್‌ ಪಡೆದುಕೊಂಡಿದ್ದು, ಇವತ್ತು ಆರ್ಡರ್ ಮಾಡಿದರೂ ವಿತರಣೆಯಾಗಲು ಸರಿ ಸುಮಾರು 8 ತಿಂಗಳು ಹಿಡಿಯುತ್ತದೆ.

Maruti Suzuki Jimny: ಬಿಡುಗಡೆಗೊಂಡು 7 ದಿನವಷ್ಟೇ.. ಮಾರುತಿ ಸುಜುಕಿ ಜಿಮ್ನಿ ಐತಿಹಾಸಿಕ ದಾಖಲೆ

ಮಾರುತಿ ಸುಜುಕಿ ಜಿಮ್ನಿ ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಝೀಟಾ ಹಾಗೂ ಆಲ್ಫಾ. ಬೆಲೆ ವಿಚಾರಕ್ಕೆ ಬರುವುದಾದರೆ, ಮ್ಯಾನ್ಯುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿರುವ ಝೀಟಾ ರೂಪಾಂತರ ರೂ.12.74 ಲಕ್ಷ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಪಡೆದಿರುವ ಟಾಪ್ ಎಂಡ್ ಮಾದರಿ ಆಲ್ಫಾ ವೇರಿಯೆಂಟ್ ರೂ.15.05 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದೆ.

ಈ ನೂತನ ಜಿಮ್ನಿ 5 ಡೋರ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಪವರ್ ಫುಲ್ ಎಂಜಿನ್ ಹೊಂದಿದೆ. ಇದರ 1.5L ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ 104.8 Ps ಪವರ್ ಹಾಗೂ 134.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಸಿಗುತ್ತದೆ.

ಮಾರುತಿ ಸುಜುಕಿ ಮಾರಾಟ ಮಾಡುವ ಇತರೆ ಕಾರುಗಳಿಗೆ ಹೋಲಿಸಿದರೆ, ಜಿಮ್ನಿ ಕೊಂಚ ಕಡಿಮೆ ಇಂಧನ ದಕ್ಷತೆ ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 16.94 ರಿಂದ 16.39km/l ಮೈಲೇಜ್ ನೀಡುತ್ತದೆ. ಹೊರಭಾಗದಿಂದ ಅತ್ಯುತ್ತಮ ಲುಕ್ ಹೊಂದಿರುವ ಈ ಎಸ್‌ಯುವಿ, ತಕ್ಷಣ ನೋಡುಗರನ್ನು ತನ್ನತ್ತ ಸೆಳೆಯುತ್ತದೆ. ಕ್ಯಾಬಿನ್ ಒಳಭಾಗವು ಅತ್ಯಾಕರ್ಷಕವಾಗಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಅನುಭವ ನೀಡುತ್ತದೆ.

ಜಿಮ್ನಿ ಪಡೆದಿರುವ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಅಲಾಯ್ ವೀಲ್ಸ್ ಹಾಗೂ 195/80 ಅಳತೆಯ ಟೈಯರ್ಸ್ ಪಡೆದಿದೆ. ಜೊತೆಗೆ ಕ್ಯಾಬಿನ್ ಒಳಭಾಗದಲ್ಲಿ 9 ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

4WD (ಫೋರ್ ವೀಲ್ಸ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿರುವ ಮಾರುತಿ ಸುಜುಕಿ ಜಿಮ್ನಿ, ಸುರಕ್ಷತೆಯ ದೃಷ್ಟಿಯಿಂದ , 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಹಿಲ್ ಡಿಸೆಂಟ್ ಕಂಟ್ರೋಲ್, ಸೈಡ್ ಇಂಪ್ಯಾಕ್ಟ್ ಡೋರ್ ಬೀಮ್ಸ್, 3-ಪಾಯಿಂಟ್ ಎಮರ್ಜೆನ್ಸಿ ಲಾಕಿಂಗ್, ರೇರ್ ವ್ಯೂ ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಇನ್ನು, ಮಾರುತಿ ಸುಜುಕಿ ಜಿಮ್ನಿ ಕಳೆದ ಆರು ತಿಂಗಳಿಂದ ದೇಶೀಯ ಮಾರುಕಟ್ಟೆಯಲ್ಲಿ ಸಖತ್ ಸುದ್ದಿ ಮಾಡಿ, ದೊಡ್ಡಮಟ್ಟದ ಬುಕ್ಕಿಂಗ್‌ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಿಡುಗಡೆಯಾದ 7 ದಿನದಲ್ಲಿಯೇ ಗರಿಷ್ಠ 8 ತಿಂಗಳ ಕಾಯುವಿಕೆ ಅವಧಿ ಹೊಂದಿದೆ ಎಂಬ ವಿಚಾರ ಗೊತ್ತಾಗಿದ್ದು, ಜಿಮ್ನಿಯ ಈ ಸಾಧನೆ ಪ್ರತಿಸ್ಪರ್ಧಿ ಕಂಪನಿಗಳಿಗೆ ನಡುಕ ಹುಟ್ಟಿಸಿರುವುದು ಸುಳ್ಳಲ್ಲ.

Article Published On: Wednesday, June 14, 2023, 14:50 [IST]
English summary
Maruti suzuki jimny bookings 31000 waiting period 8 months
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+