Maruti Jimny: ಹೊಸ ಮಾರುತಿ ಸುಜುಕಿ ಜಿಮ್ನಿಗೆ ಬೃಹತ್ ಆಫರ್.. ಜೇಬು ತುಂಬಾ ಹಣ ಉಳಿಸಬಹುದು!
ಯುವಕರಿಗೆ ನಿಮ್ಮ ಮೆಚ್ಚಿನ ಆಫ್-ರೋಡ್ ಎಸ್‌ಯುವಿ ಯಾವುದೆಂದು ಕೇಳಿದರೆ ತಕ್ಷಣ ಬರುವ ಒಂದೇ ಉತ್ತರ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny). ಅಷ್ಟರ ಮಟ್ಟಿಗೆ ಈ ಕಾರು ದೇಶಾದ್ಯಂತ ಅಭಿಮಾನಿ ಬಳಗವನ್ನು ಸಂಪಾದಿಸಿದೆ.
ಈಗಾಗಲೇ ಹಬ್ಬದ ಋತು ಶುರುವಾಗಿದೆ. ದೇಶಾದ್ಯಂತ ವಿವಿಧೆಡೆ ಮಾರುತಿ ಸುಜುಕಿ ನೆಕ್ಸಾ ಡೀಲರ್ಸ್ (Nexa dealers), ಜಿಮ್ನಿಯ ಎಂಟ್ರಿ ಲೆವೆಲ್ ಝೀಟಾ (Zeta) ರೂಪಾಂತರದ ಮೇಲೆ ರೂ.1 ಲಕ್ಷದವರೆಗೆ ರಿಯಾಯಿತಿ ಪ್ರಯೋಜನವನ್ನು ನೀಡುತ್ತಿವೆ ಎಂದು ಮೂಲಗಳನ್ನು ಆಧರಿಸಿ, ಆಟೊಕಾರ್ ವರದಿ ಮಾಡಿದೆ. ಸದ್ಯ, ಝೀಟಾ ವೇರಿಯೆಂಟ್ ರೂ.50,000 ಫ್ಲಾಟ್ ರಿಯಾಯಿತಿಯನ್ನು ಒಳಗೊಂಡಿದೆ.

ಹೆಚ್ಚುವರಿಯಾಗಿ ರೂ.50,000 ವಿನಿಮಯ (exchange) ಅಥವಾ ಲಾಯಲ್ಟಿ (loyalty) ಬೋನಸ್ ಅನ್ನು ಹೊಂದಿದ್ದು, ವಿಶೇಷ ಕೊಡುಗೆ ತಿಂಗಳಾಂತ್ಯದವರೆಗೆ ಲಭ್ಯವಿರಲಿದೆ. ನೀವು ಗಮನಿಸಿ.. ಈ ರಿಯಾಯಿತಿ ಪ್ರಯೋಜನಗಳು ರಾಜ್ಯದಿಂದ ರಾಜ್ಯಕ್ಕೆ ಆಧರಿಸಿ, ಬೇರೆಯಿರಲಿದೆ. ಹೆಚ್ಚಿನ ವಿವರಗಳನ್ನು ಪಡೆಯಲು ಸಮೀಪದ ನೆಕ್ಸಾ ಡೀಲರ್ ಶಿಪ್ ಭೇಟಿ ನೀಡುವುದು ಉತ್ತಮ.
ಪ್ರಸ್ತುತ, ಭಾರತದ ಮಾರುಕಟ್ಟೆಯಲ್ಲಿ ನೂತನ ಮಾರುತಿ ಸುಜುಕಿ ಜಿಮ್ನಿ, ರೂ.12.74 ಲಕ್ಷದಿಂದ ರೂ.15.05 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಈ ಎಸ್‌ಯುವಿ, 1.5ಎಲ್ ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 104.8 Ps ಪವರ್, 134.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. 5 ಸ್ವೀಡ್ ಮ್ಯಾನುವಲ್/ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.
ವಿನ್ಯಾಸದ ದೃಷ್ಟಿಯಿಂದ ಮಾರುತಿ ಸುಜುಕಿ ಜಿಮ್ನಿ ಅತ್ಯಾಧುನಿಕವಾಗಿದ್ದು, ಫ್ಲಾಟ್ ಕ್ಲಾಮ್‌ಶೆಲ್ ಬಾನೆಟ್, ವಾಷರ್‌ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಪಡೆದಿದೆ. ಅಲಾಯ್ ವೀಲ್ಸ್, 195/80 ಅಳತೆಯ ಟೈಯರ್ಸ್ ಒಳಗೊಂಡಿದೆ. ಮೈಲೇಜ್ ವಿಷಯವಾಗಿ ಮಾತನಾಡುವುದಾದರೆ, ರೂಪಾಂತರಗಳಿಗೆ ಅನುಗುಣವಾಗಿ 16.39km/l - 16.94 km/l ಇಂಧನ ದಕ್ಷತೆಯನ್ನು ಹೊಂದಿದೆ.
ಈ ಎಸ್‌ಯುವಿ ಪಡೆದಿರುವ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ, 9 ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. 2590 ಎಂಎಂ ಅಳತೆಯ ವೀಲ್ ಬೇಸ್ ಪಡೆದಿದೆ.
ಮಾರುತಿ ಸುಜುಕಿ ಜಿಮ್ನಿಯ ಸುರಕ್ಷತಾ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, ಇದು 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಸೈಡ್ ಇಂಪ್ಯಾಕ್ಟ್ ಡೋರ್ ಬೀಮ್ಸ್ ಒಳಗೊಂಡಂತೆ ವಿವಿಧ ಪಿಚರ್ಸ್ ಹೊಂದಿದೆ.
ಇನ್ನು, ಈ ಹಬ್ಬದ ಋತುವಿನಲ್ಲಿ ವಿವಿಧ ಕಂಪನಿಗಳು ರಿಯಾಯಿತಿಯನ್ನು ಘೋಷಿಸುತ್ತವೆ. ಅದರಲ್ಲೂ ಮಾರುತಿ ಸುಜುಕಿಯ ನೆಕ್ಸಾ ಡೀಲರ್ಸ್, ಜಿಮ್ನಿಯ ಎಂಟ್ರಿ ಲೆವೆಲ್ ಝೀಟಾ ರೂಪಾಂತರಕ್ಕೆ ಕೊಂಚ ಹೆಚ್ಚು ಆಫರ್ ನೀಡಿರುವುದು ಅದರ ಅಮಾನಿಗಳಿಗೆ ಖುಷಿ ನೀಡಿದೆ. ಇದರಿಂದ ಮುಂಬರುವ ದಿನಗಳಲ್ಲಿ ಜಿಮ್ನಿಗೆ ಮತ್ತಷ್ಟು ಬೇಡಿಕೆ ಬರಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications