Maruti Suzuki: ಅಗ್ಗದ ಮಾರುತಿ ಸುಜುಕಿ ಕಾರುಗಳನ್ನು ಖರೀದಿಸಬೇಕೇ.. ಭರ್ಜರಿ ಸಿಹಿಸುದ್ದಿ

ಮಾರುತಿ ಸುಜುಕಿ (Maruti Suzuki) ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದ್ದು, ವರ್ಷವಿಡಿ ರಿಯಾಯಿತಿ ನೀಡಲು ಹೆಸರುವಾಸಿಯಾಗಿದೆ. ಈ ಜುಲೈ ತಿಂಗಳಲ್ಲಿಯೂ ಅರೆನಾ ಡೀಲರ್‌ಶಿಪ್ ಮೂಲಕ ಮಾರಾಟ ಮಾಡುವ ಆಯ್ದ ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ಮೊದಲಿಗೆ ಮಾರುತಿ ಸುಜುಕಿ ಕಂಪನಿಯ ಎಂಟ್ರಿ ಲೆವೆಲ್ ಕಾರಾಗಿರುವ ಆಲ್ಟೊ ಕೆ10 ಬಗ್ಗೆ ಮಾತನಾಡೋಣ. ಇದು ದೊಡ್ಡ ಮಟ್ಟದಲ್ಲಿ ರಿಯಾಯತಿ ಪ್ರಯೋಜನವನ್ನು ಹೊಂದಿದೆ. ಜುಲೈ ತಿಂಗಳು ಬರೋಬ್ಬರಿ ರೂ.59,000 ಡಿಸ್ಕೌಂಟ್ ಸಿಗುತ್ತಿದೆ. ಅದರಲ್ಲಿ ರೂ.40000 ನಗದು ರಿಯಾಯಿತಿ, ರೂ.15,000 ಎಕ್ಸ್ಚೇಂಜ್ ಬೋನಸ್ ಹಾಗೂ 4,100 ಕಾರ್ಪೊರೇಟ್ ಡಿಸ್ಕೌಂಟ್ ಪಡೆದಿದೆ.

Maruti Suzuki: ಅಗ್ಗದ ಮಾರುತಿ ಸುಜುಕಿ ಕಾರುಗಳನ್ನು ಖರೀದಿಸಬೇಕೇ.. ಭರ್ಜರಿ ಸಿಹಿಸುದ್ದಿ

ದೇಶೀಯ ಮಾರುಕಟ್ಟೆಯಲ್ಲಿ ಆಲ್ಟೊ ಕೆ10 ರೂ.3.99 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ CNG ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, 24.39 - 24.9 kmpl ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಮಾರುತಿ ಸುಜುಕಿಯ 'ಸೆಲರಿಯೊ' ಸಹ ಭಾರೀ ಡಿಸ್ಕೌಂಟ್ ಪ್ರಯೋಜನವನ್ನು ಪಡೆದಿದೆ. ಈ ಕಾರು, ರೂ.54,000 ವರೆಗೆ ರಿಯಾಯತಿಯನ್ನು ಹೊಂದಿದೆ. ರೂ.35,000 ಕ್ಯಾಶ್ ಡಿಸ್ಕೌಂಟ್, ರೂ.15,000 ಎಕ್ಸ್ಚೇಂಜ್ ಬೋನಸ್ ಮತ್ತು ರೂ.4,100 ಕಾರ್ಪೊರೇಟ್ ರಿಯಾಯಿತಿ ಸೌಲಭ್ಯಗಳು ಸೇರಿವೆ. ಸೆಲರಿಯೊ ರೂ.5.37 ಲಕ್ಷದಿಂದ ರೂ.7.14 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ.

Maruti Suzuki: ಅಗ್ಗದ ಮಾರುತಿ ಸುಜುಕಿ ಕಾರುಗಳನ್ನು ಖರೀದಿಸಬೇಕೇ.. ಭರ್ಜರಿ ಸಿಹಿಸುದ್ದಿ

ಸೆಲರಿಯೊ ಕಾರು, 1 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 67 PS ಪವರ್, 89 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್/ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. CNG ಎಂಜಿನ್ ಆಯ್ಕೆ ಹೊಂದಿರುವ ಕಾರು, 57 PS ಪವರ್, 82 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮಾರ್ಥ್ಯ ಹೊಂದಿದ್ದು, 24.97 - 26.68 kmpl ಮೈಲೇಜ್ ನೀಡುತ್ತದೆ.

ಕಂಪನಿ ಎಸ್-ಪ್ರೆಸ್ಸೊ ಕಾರು ಒಟ್ಟು ರೂ.58,000 ಡಿಸ್ಕೌಂಟ್ ಆಫರ್ ಒಳಗೊಂಡಿದೆ. ಅದರಲ್ಲಿ ರೂ.39,000 ನಗದು ರಿಯಾಯಿತಿ, ರೂ.15,000 ವಿನಿಮಯ ಬೋನಸ್ ರೂ.4,100 ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಹೊಂದಿದೆ. ಮಾರುತಿ ಸುಜುಕಿಯ ಈ ಕಾರು, ರೂ.4.26 ಲಕ್ಷದಿಂದ ರೂ.6.12 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಜೊತೆಗೆ 24.12 - 25.3 kmpl ಮೈಲೇಜ್ ನೀಡುತ್ತದೆ.

Maruti Suzuki: ಅಗ್ಗದ ಮಾರುತಿ ಸುಜುಕಿ ಕಾರುಗಳನ್ನು ಖರೀದಿಸಬೇಕೇ.. ಭರ್ಜರಿ ಸಿಹಿಸುದ್ದಿ

ಮಾರುತಿ ಸುಜುಕಿಯ ಜನಪ್ರಿಯ ಕಾರುಗಳಲ್ಲಿ ವ್ಯಾಗನ್ಆರ್ ಪ್ರಮುಖವಾಗಿದ್ದು, ರೂ.54,000 ರಿಯಾಯಿತಿ ಪ್ರಯೋಜನವನ್ನು ಪಡೆದಿದೆ. ಅದರಲ್ಲಿ ರೂ.30,000 ಕ್ಯಾಶ್ ಡಿಸ್ಕೌಂಟ್, ರೂ.20,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ. 4,100 ಕಾರ್ಪೊರೇಟ್ ಡಿಸ್ಕೌಂಟ್ ಇದೆ. ಈ ಕಾರು, ರೂ.5.54 - ರೂ.7.42 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ.

ಮಾರುತಿ ಸುಜುಕಿ ಸ್ವಿಫ್ಟ್ ನಗದು ಹಾಗೂ ಕಾರ್ಪೊರೇಟ್ ಡಿಸ್ಕೌಂಟ್ ಸೇರಿ, ರೂ.49,000 ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಈ ಕಾರು, ರೂ.5.99 ಲಕ್ಷದಿಂದ ರೂ.9.03 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯ ಪ್ರಮುಖ ವ್ಯಾನ್ ಗಳಲ್ಲಿ ಇಕೋ ಒಂದಾಗಿದ್ದು, ರೂ.33,000 ಡಿಸ್ಕೌಂಟ್ ಆಫರ್ ಹೊಂದಿದೆ. ಇದು, ರೂ.5.27 - 6.53 ಲಕ್ಷ ದರದಲ್ಲಿ ಸಿಗುತ್ತದೆ. ಹೆಚ್ಚಿನ ಮಾಹಿತಿಗೆ ಸಮೀಪದ ಡೀಲರ್‌ಶಿಪ್ ಗೆ ಭೇಟಿ ನೀಡಿರಿ.

Article Published On: Monday, July 10, 2023, 17:34 [IST]
English summary
Maruti suzuki july discounts full details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+