ಭಾರತದಲ್ಲಿ ಬಿಡುಗಡೆಯಾಗಲಿವೆ ಮಾರುತಿ ಸುಜುಕಿಯ 3 ಜಬರ್ದಸ್ತ್ ಕಾರುಗಳು: ಇವೇ ನಂಬರ್ 1 ಪಕ್ಕಾ..!

ದೇಶದ ಅತಿದೊಡ್ಡ ವಾಹನ ತಯಾರಕ 'ಮಾರುತಿ ಸುಜುಕಿ' ಕಾರುಗಳನ್ನು ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಅವುಗಳ ಕಾರ್ಯಕ್ಷಮತೆ, ವೈಶಿಷ್ಟ್ಯ ಹಾಗೂ ಕೈಗೆಟುಕುವ ಬೆಲೆ ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ. ಮುಂದಿನ ನಾಲ್ಕು ತಿಂಗಳಲ್ಲಿ ಕಂಪನಿಯು ಬಹುನೀರಿಕ್ಷಿತ ಮೂರು ಎಸ್‍ಯುವಿಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಮೊದಲಿಗೆ ಮಾರುತಿ ಸುಜುಕಿಯ ಬಹು ಬೇಡಿಕೆಯ ಫ್ರಾಂಕ್ಸ್ (Fronx) ಎಸ್‍ಯುವಿ ಬಗ್ಗೆ ಮಾತನಾಡುವುದಾದರೆ, ಇದು ಈ ವರ್ಷದ ದ್ವಿತೀಯಾರ್ಧದಲ್ಲಿ ಭಾರತದಲ್ಲಿ ಬಿಡುಗಡೆಯಾಗಬಹುದು. ಬಲೆನೊ ಆಧಾರಿತ ಎಂಜಿನ್ ಪಡೆದಿರುವ ಫ್ರಾಂಕ್ಸ್ ಕಾರು, ಕಿಯಾ ಸೊನೆಟ್ ಹಾಗೂ ಹುಂಡೈ ವೆನ್ಯೂ ಕಾರುಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ. 9-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್ ಹಾಗೂ ಸನ್ ರೊಫ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಮುಂದಿನ 4 ತಿಂಗಳಲ್ಲಿ ಬರಲಿವೆ ಮಾರುತಿ ಸುಜುಕಿಯ 3 ಕಾರುಗಳು: ಇವೇ ನಂಬರ್ 1..!

1.2-ಲೀಟರ್ 4-ಸಿಲಿಂಡರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಫ್ರಾಂಕ್ಸ್‌ ಎಸ್‌ಯುವಿ, 89 bhp ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು, 1.0-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು, 100 bhp ಪವರ್, 148 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮ್ಯಾನುವಲ್/ ಆಟೋಮೆಟಿಕ್ ಟ್ರಾಸ್ಮಿಷನ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ರೂ.11,000 ಮುಂಗಡ ಹಣ ಪಾವತಿಸಿ, ಬುಕಿಂಗ್ ಮಾಡಬಹುದು.

ಮಾರುತಿ ಸುಜುಕಿ ತನ್ನ ಬಹುನೀರಿಕ್ಷಿತ 'ಜಿಮ್ನಿ 5-ಡೋರ್' ಆಫ್-ರೋಡ್ ಎಸ್‍ಯುವಿಯನ್ನು ಕಳೆದ ಜನವರಿಯಲ್ಲಿ ನಡೆದ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಿತ್ತು. ಅಂದಿನಿಂದಲೇ ಬುಕಿಂಗ್ ಆರಂಭಿಸಿತ್ತು. ಆಸಕ್ತ ಗ್ರಾಹಕರು, ರೂ.25,000 ಪಾವತಿಸುವ ಮೂಲಕ ಬುಕಿಂಗ್ ಮಾಡಬಹುದು. ಸದ್ಯ, ಮಾರುತಿ ಸುಜುಕಿ ಜಿಮ್ನಿ 5-ಡೋರ್ ಎಸ್‍ಯುವಿಗೆ ದೇಶೀಯ ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿ ಇಲ್ಲದಿದ್ದರೂ ಮಹೀಂದ್ರಾ ಥಾರ್ ಪೈಪೋಟಿ ನೀಡಬಹುದು. ಬಹುತೇಕ ಈ ಜಿಮ್ನಿ ಮೇ ತಿಂಗಳಲ್ಲಿ ಬಿಡುಗಡೆಯಾಗಬಹುದು.

ಮುಂದಿನ 4 ತಿಂಗಳಲ್ಲಿ ಬರಲಿವೆ ಮಾರುತಿ ಸುಜುಕಿಯ 3 ಕಾರುಗಳು: ಇವೇ ನಂಬರ್ 1..!

ಜಿಮ್ನಿ 5-ಡೋರ್, ಆಫ್-ರೋಡ್ ಎಸ್‍ಯುವಿಯಾಗಿರುವುದರಿಂದ ಪವರ್ ಫುಲ್ ಎಂಜಿನ್ ಪಡೆದುಕೊಂಡಿದೆ. ಇದು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ದೊರೆಯಲಿದೆ. 1.5-ಲೀಟರ್ 4-ಸಿಲಿಂಡರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 105 bhp ಪವರ್, 134 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್/ 4-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

ಮಾರುತಿ ಸುಜುಕಿಯ ಮತ್ತೊಂದು ಬ್ರೆಝಾ ಸಿಎನ್‌ಜಿ ಕೂಡ ಈ ವರ್ಷದ ದ್ವಿತೀಯಾರ್ಧದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಇದರ ಒಳಭಾಗ ಹಾಗೂ ಹೊರಭಾಗದ ವೈಶಿಷ್ಟ್ಯ ಬಹುತೇಕ ಪೆಟ್ರೋಲ್ ಮಾದರಿಗೆ ಹೋಲಿಕೆಯಾಗುತ್ತದೆ. ಈ ಕಾರು ನಾಲ್ಕು ರೂಪಾಂತರಗಳಲ್ಲಿ ಖರೀದಿಗೆ ಸಿಗಲಿದೆ. ಸುಮಾರು 70,000 ಹೆಚ್ಚುವರಿ ಬೆಲೆಯನ್ನು ಪಡೆದಿರಬಹುದು. ಹೆಚ್ಚು ಇಂಧನ ದಕ್ಷತೆ ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರು ಖರೀದಿಸಬಹುದು.

ಮುಂದಿನ 4 ತಿಂಗಳಲ್ಲಿ ಬರಲಿವೆ ಮಾರುತಿ ಸುಜುಕಿಯ 3 ಕಾರುಗಳು: ಇವೇ ನಂಬರ್ 1..!

ಬ್ರೆಝಾ ಸಿಎನ್‌ಜಿ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 1.5-ಲೀಟರ್, 4-ಸಿಲಿಂಡರ್ K15C ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 87 hp ಪವರ್ ಉತ್ಪಾದಿಸಲಿದೆ. ಒಂದು ಕೆಜಿ ಸಿಎನ್‌ಜಿ ಇಂಧನ ದಹಿಸಿ, 28 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಕಾರು, ಆಪಲ್ ಕಾರ್‌ ಪ್ಲೇ, ಆಂಡ್ರಾಯ್ಡ್ ಆಟೋ ಹಾಗೂ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ನವೀನ ವೈಶಿಷ್ಟ್ಯಗಳನ್ನು ಪಡೆದಿದ್ದು, ಈ ಕಾರು 8.18 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ.

ಇನ್ನು, ಮಾರುತಿ ಸುಜುಕಿ ಫ್ರಾಂಕ್ಸ್, ಜಿಮ್ನಿ 5-ಡೋರ್ ಹಾಗೂ ಬ್ರೆಝಾ ಸಿಎನ್‌ಜಿ ಎಸ್‍ಯುವಿಗಳನ್ನು ಈ ವರ್ಷವೇ ಬಿಡುಗಡೆ ಮಾಡಲಿದೆ. ಇವು ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದ್ದು, ಅದಕ್ಕೆ ತಕ್ಕಂತೆ ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದಿರಲಿದೆ. ಜೊತೆಗೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಬಹುದು. ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಆದ ಮೇಲೆ ಈ ಎಸ್‍ಯುವಿಗಳ ನಿಜವಾದ ಕಾರ್ಯಕ್ಷಮತೆ ಬಗ್ಗೆ ಮಾಹಿತಿ ಸಿಗಲಿದೆ.

Article Published On: Wednesday, March 15, 2023, 13:15 [IST]
English summary
Maruti suzuki launch 3 new suv in next 4 months indian market details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+