ಮಾರುತಿ ಸುಜುಕಿ ಹೊಸ ಇವಿ ಕಾರು... ಕಡಿಮೆ ಬೆಲೆ, 500 ಕಿ.ಮೀ ರೇಂಜ್, ಅತ್ಯಾಧುನಿಕ ಫೀಚರ್ಸ್

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿ ಬಹುತೇಕ ಎಲ್ಲಾ ಬ್ರಾಂಡ್‌ಗಳು ಇವಿಗಳನ್ನು ಪರಿಚಯಿಸುತ್ತಿದ್ದಾರೆ. ಆದರೆ ದೇಶದ ಅತಿದೊಡ್ಡ ಕಂಪನಿಯಾದ Maruti Suzuki ಈವರೆಗೆ ಒಂದು ಇವಿ ಕೂಡ ಬಿಡುಗಡೆಯಾಗಿಲ್ಲ. ಆದ್ರೆ ಈಗಾಗಲೇ ಆಟೋ ಎಕ್ಸ್‌ಪೋದಲ್ಲಿ ಎಲೆಕ್ಟ್ರಿಕ್ ಉತ್ಪದಾನಾ ಅವೃತ್ತಿಯನ್ನು ಮಾರುತಿ ಕಂಪನಿ ಪ್ರದರ್ಶಿಸಿದೆ.

ಮಾರುತಿ ಸುಜುಕಿ (Maruti Suzuki) ಬಹಳ ವರ್ಷಗಳಿಂದ ಈ ಇವಿ ಜಾಗಕ್ಕೆ ಎಂಟ್ರಿಕೊಡಲು ತನ್ನ ಆಲೋಚನೆಯನ್ನು ಕೇಂದ್ರೀಕರಿಸಿದೆ. ಕಂಪನಿಯು ಪ್ರಸ್ತುತ ಹೈಬ್ರಿಡ್ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದರೂ, ಮುಂಬರುವ EVX ಅದರ ಅತ್ಯಂತ ಜನಪ್ರಿಯ SUV ಗಳಲ್ಲಿ ಒಂದಾಗಬಹುದು. ಏಕೆಂದರೆ EV ಯಲ್ಲಿ ಗ್ರಾಹಕರ ಆಸಕ್ತಿಯು ಪೂರ್ಣ ಸ್ವಿಂಗ್‌ನಲ್ಲಿದೆ.

maruti-suzuki-new-evx-electric-car-low-price-500-km-range

ಹಾಗಾಗಿ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರು ಎಂದು ಹೇಳಲಾಗುತ್ತಿರುವ ಇವಿಎಕ್ಸ್ ಉತ್ಪಾದನಾ ರೂಪಾಂತರವು ಶೀಘ್ರದಲ್ಲೇ ಭಾರತೀಯ ರಸ್ತೆಗಳಿಗೆ ಬರಲಿದೆ. ಇದು ದೇಶೀಯ ಮಾರುಕಟ್ಟೆಗೆ ನಿರ್ಣಾಯಕವಾಗಲಿದೆ. ಮಾರುತಿ ಸುಜುಕಿ, ಮಾರಾಟ ಮತ್ತು ಮಾರುಕಟ್ಟೆಯ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ, ಮುಂದಿನ ವರ್ಷ EVX ಅದರ ಉತ್ಪಾದನಾ ರೂಪಾಂತರದ ಅವತಾರದಲ್ಲಿ ಬರಲಿದೆ ಎಂದು ಘೋಷಿಸಿದ್ದಾರೆ.

Maruti Suzuki EVX ಉತ್ಪಾದನಾ ರೂಪಾಂತರವನ್ನು ಹೊಸ ಹೆಸರಿನೊಂದಿಗೆ ಪರಿಚಯಿಸುವ ನಿರೀಕ್ಷೆಯಿದೆ. 2024-25ರ ಆರ್ಥಿಕ ವರ್ಷದಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ಆಟೋ ಎಕ್ಸ್‌ಪೋದಲ್ಲಿ ಪರಿಕಲ್ಪನೆಯ ಮಾದರಿಯಾಗಿ ಪ್ರದರ್ಶಿಸಲಾದ eVX ಅನ್ನು ಇತ್ತೀಚೆಗೆ ಉತ್ಪಾದನಾ ಅವತಾರದಲ್ಲಿ ಅನಾವರಣಗೊಳಿಸಲಾಯಿತು. ಇದು ಬಹುತೇಕ ಪರಿಕಲ್ಪನೆಯಾಗಿ ಪ್ರದರ್ಶಿಸಿದ್ದ ಮಾದರಿಯಂತೆಯೇ ಇರುವುದು ವಿಶೇಷ.

maruti-suzuki-new-evx-electric-car-low-price-500-km-range

ಉತ್ಪಾದನೆಗೆ ಸಿದ್ಧವಾಗಿರುವ ಈ ಮಾದರಿಯು ವಿವಿಧ ಸೀಟು ಆಯ್ಕೆಗಳೊಂದಿಗೆ ಬರಲಿದೆ. ಹೊಸ EVX ಕಾನ್ಸೆಪ್ಟ್ ಮಾದರಿಯು ಎಲೆಕ್ಟ್ರಾನಿಕ್-ಕಂಟ್ರೋಲ್ 4×4 ತಂತ್ರಜ್ಞಾನಗಳೊಂದಿಗೆ ಬರಲಿದೆ ಎಂದು ಸುಜುಕಿ ದೃಢಪಡಿಸಿದೆ. ಅನುಪಾತದಲ್ಲಿ, ಹೊಸ ಸುಜುಕಿ EVX ಉದ್ದ 4300mm, ಅಗಲ 1800mm ಮತ್ತು ಎತ್ತರ 1600mm ಆಗಿದೆ. ಈ ಮಾದರಿಯು ಸಿಂಗಲ್-ಮೋಟರ್ ಮತ್ತು ಡ್ಯುಯಲ್-ಮೋಟಾರ್ (ಆಲ್-ವೀಲ್ ಡ್ರೈವ್) ಸೆಟಪ್‌ಗಳಲ್ಲಿ ಬರುವ ನಿರೀಕ್ಷೆಯಿದೆ.

ಈ ಮೂಲಕ ಮಾರುತಿ ಸುಜುಕಿಯ ಅತ್ಯಂತ ವಿಶಾಲವಾದ SUV ಆಗಿರಬಹುದು ಎಂದು ಸಹ ಹೇಳಲಾಗುತ್ತಿದೆ. ಎರಡನೆಯದಾಗಿ, ಅದರ ಬ್ಯಾಟರಿ ಪ್ಯಾಕ್ ಕೂಡ ದೊಡ್ಡದಾಗಿರಲಿದೆ ಎನ್ನಲಾಗಿದೆ. EVX ಬೆಲೆಯ ವಿಷಯದಲ್ಲೂ ಸ್ಪರ್ಧಾತ್ಮಕವಾಗಿರುತ್ತದೆ. ಮಾರುತಿ ತನ್ನ ಇವಿಎಕ್ಸ್ ಅನ್ನು ಗುಜರಾತ್‌ನ ಹಂಸಲ್‌ಪುರ ಸೌಲಭ್ಯದಲ್ಲಿ ಉತ್ಪಾದಿಸುತ್ತದೆ. ಟೊಯೊಟಾದ ಹೊಸ ಎಲೆಕ್ಟ್ರಿಕ್ ಕಾರು ಸಹ ಅಲ್ಲಿಂದಲೇ ತಯಾರಿಸಲ್ಪಡಲಿದೆ.

maruti-suzuki-new-evx-electric-car-low-price-500-km-range

ಮುಂದಿನ ದಿನಗಳಲ್ಲಿ ಈ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಬಹುದು. ಎಲೆಕ್ಟ್ರಿಕ್ ಎಸ್‌ಯುವಿಯನ್ನು ಗುರ್‌ಗಾಂವ್‌ನಲ್ಲಿ ಕಂಪನಿಯ ಸ್ಥಾವರದ ಬಳಿ ಪರೀಕ್ಷೆ ನಡೆಸಲಾಗುತ್ತಿದೆ. ಸುಜುಕಿ eVX ಕಾನ್ಸೆಪ್ಟ್ ಮಾದರಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸುಜುಕಿ ಇವಿಎಕ್ಸ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಮಾದರಿಯು ಹೊಸದಾಗಿ ವಿನ್ಯಾಸಗೊಳಿಸಿದ ಎಲ್ಇಡಿ ಲ್ಯಾಂಪ್ ಗಳೊಂದಿಗೆ ಬರುತ್ತದೆ.

ಇದು ರೂಫ್-ಇಂಟಿಗ್ರೇಟೆಡ್ ಸ್ಪಾಯ್ಲರ್ ಮತ್ತು ಡ್ಯುಯಲ್-ಟೋನ್ ಲೋವರ್ ಬಂಪರ್ ಅನ್ನು ಪಡೆಯಲಿದೆ. ಹೊರಭಾಗಕ್ಕಿಂತ ಭಿನ್ನವಾಗಿ, ಮಾರುತಿ ಸುಜುಕಿ EVX ಮಾದರಿಯ ಒಳಭಾಗವು ಫ್ಯೂಚರಿಸ್ಟಿಕ್ ಆಗಿ ಕಾಣುತ್ತದೆ. ಒಳಭಾಗದಲ್ಲಿ, ಸುಜುಕಿ eVX ಹೊಸ ಬಿಎಂಡಬ್ಲ್ಯು ಕಾರುಗಳಂತೆಯೇ ವಿಶಾಲವಾದ ಡ್ಯುಯಲ್-ಸ್ಕ್ರೀನ್ ಸೆಟಪ್ ಮತ್ತು ಫ್ಲೋಟಿಂಗ್ ಸೆಂಟರ್ ಕನ್ಸೋಲ್ ಒಳಗೊಂಡಿದೆ.

maruti-suzuki-new-evx-electric-car-low-price-500-km-range

ಇದರೊಂದಿಗೆ ಟಚ್-ಸೆನ್ಸಿಟಿವ್ ಬಟನ್‌ಗಳು, ಎರಡು ಸ್ಪೋಕ್ ಸ್ಟೀರಿಂಗ್ ವೀಲ್, ಸ್ಪೋರ್ಟಿ ಸೀಟ್‌ಗಳು, ದೊಡ್ಡ ಪನೋರಮಿಕ್ ಸನ್‌ ರೂಫ್ ಮತ್ತು ರೋಟರಿ ಡ್ರೈವ್ ಅನ್ನು ಒಳಗೊಂಡಿದೆ. ಈ ಮಾರುತಿ ಎಲೆಕ್ಟ್ರಿಕ್ಕ್ ಕಾರಿನ ಮುಂಭಾಗ ಮತ್ತು ಹಿಂಭಾಗದ ಸೀಟುಗಳು ಹೊಂದಾಣಿಕೆಯ ಹೆಡ್‌ರೆಸ್ಟ್ ಗಳೊಂದಿಗೆ ಬರಲಿವೆ.

ಸುಜುಕಿ eVX ಎಲೆಕ್ಟ್ರಿಕ್ ಎಸ್‍ಯುವಿ 60kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ದೊಡ್ಡ ಬ್ಯಾಟರಿ ಪ್ಯಾಕ್‌ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದ್ರೆ ಸುಮಾರು 500 ಕಿಲೋಮೀಟರ್ ರೇಂಜ್ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಸುಜುಕಿ ಇವಿಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಮುಂಬರುವ ಎಲೆಕ್ಟ್ರಿಕ್ ಎಸ್‌ಯುವಿಗಳಾದ ಟಾಟಾ ಕರ್ವ್ವ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ ಇ.8 ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Article Published On: Thursday, December 21, 2023, 14:37 [IST]
English summary
Maruti suzuki new evx electric car low price 500 km range
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+