Maruti Suzuki ಹೊಸ ಮೈಲಿಗಲ್ಲು... ವಿದೇಶಗಳಿಗೆ 25 ಲಕ್ಷ ಕಾರುಗಳ ರಫ್ತು

ಮಾರುತಿ ಸುಜುಕಿ ಭಾರತದಲ್ಲಿ ತನ್ನ ಕೈಗೆಟುಕುವ ಬೆಲೆಯ ಕಾರುಗಳಿಂದಲೇ ಜನಪ್ರಿಯತೆ ಪಡೆದಿದೆ. ಹಾಗೆಯೇ ವಿದೇಶಗಳಲ್ಲೂ ಈ ಬ್ರಾಂಡ್‌ಗೆ ಸಖತ್ ಬೇಡಿಕೆ ಇದೆ ಎಂಬುದು ಎಷ್ಟು ಮಂದಿಗೆ ಗೊತ್ತು. ಹೌದು ಮಾರುತಿ ಸುಜುಕಿ ವಿದೇಶಗಳಿಗೆ ದಾಖಲೆ ಮಟ್ಟದ ವಾಹನಗಳನ್ನು ಈಗ ರಫ್ತು ಮಾಡಿ ಹೊಸ ಮೈಲಿಗಲ್ಲನ್ನು ಮುಟ್ಟಿದೆ.

ಮಾರುತಿ ಸುಜುಕಿ 1986-87 ರಲ್ಲಿ ತನ್ನ ವಾಹನಗಳ ರಫ್ತನ್ನು ಆರಂಭಿಸಿ ಆಗಿನ ಕಾಲಕ್ಕೆ ಬಾಂಗ್ಲಾದೇಶ ಮತ್ತು ನೇಪಾಳದಂತಹ ಮಾರುಕಟ್ಟೆಗಳಿಗೆ ವಾಹನಗಳನ್ನು ರವಾನಿಸುವ ಮೂಲಕ ಸದ್ದು ಮಾಡಿತ್ತು. ಅಂದರೆ 500 ಕಾರುಗಳ ಮೊದಲ ದೊಡ್ಡ ರವಾನೆಯನ್ನು 1987 ರಲ್ಲಿ ಹಂಗೇರಿಗೆ ರಫ್ತು ಮಾಡಿ ದಾಖಲಿ ನಿರ್ಮಿಸಿತ್ತು. ಈಗ ಆ ಸಂಖ್ಯೆಯು 2.5 ಮಿಲಿಯನ್ (25 ಲಕ್ಷ)ಗೆ ಮುಟ್ಟಿದೆ. ಒಟ್ಟಾರೆಯಾಗಿ ಮಾರುತಿ ಸುಜುಕಿ 1986 ರಿಂದ 2023ರ ನಡುವೆ ಬರೋಬ್ಬರಿ 25 ಲಕ್ಷ ಕಾರುಗಳನ್ನು ರಫ್ತು ಮಾಡಿದೆ.

Maruti Suzuki ಹೊಸ ಮೈಲಿಗಲ್ಲು... ವಿದೇಶಗಳಿಗೆ 25 ಲಕ್ಷ ಕಾರುಗಳ ರಫ್ತು

ಪ್ರಸ್ತುತ ಮಾರುತಿ ಸುಜುಕಿ ತಯಾರಕರು ತಮ್ಮ ವಿವಿಧ ಕಾರು ಮಾದರಿಗಳನ್ನು ಲ್ಯಾಟಿನ್ ಅಮೇರಿಕಾ, ಏಷ್ಯಾ, ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ಸೇರಿದಂತೆ ಸುಮಾರು 100 ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಇತ್ತೀಚಿಗೆ ಭಾರತದಲ್ಲಿ ಬಿಡುಗಡೆಯಾಗಿದ್ದ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮಾದರಿಗೂ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಬಂದಿದ್ದು, ರಫ್ತು ಮಾಡಲಾದ ವಾಹನಗಳ ಪಟ್ಟಿಗೆ ಗ್ರಾಂಡ್ ವಿಟಾರಾ ಕೂಡ ಸೇರಿಕೊಂಡಿದೆ. ಅದರ ಮೊದಲ ಬ್ಯಾಚ್ ಅನ್ನು ಲ್ಯಾಟಿನ್ ಅಮೆರಿಕಕ್ಕೆ ರಫ್ತು ಮಾಡಲಾಗಿದೆ.

ಈ ಕುರಿತು ಮಾತನಾಡಿದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಿಸಾಶಿ ಟಕೆಯುಚಿ, ಈ ಸಾಧನೆಯು ಭಾರತ ಸರ್ಕಾರದ ಪ್ರಮುಖ ಮೇಕ್-ಇನ್-ಇಂಡಿಯಾ ಉಪಕ್ರಮಕ್ಕೆ ಮಾರುತಿ ಸುಜುಕಿಯ ದೃಢವಾದ ಬದ್ಧತೆಯನ್ನು ಪ್ರದರ್ಶಿಸುತ್ತದೆ. "2.5 ಮಿಲಿಯನ್ ವಾಹನಗಳ ಹೆಗ್ಗುರುತು ಭಾರತದ ಉತ್ಪಾದನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ವಾಹನ ರಫ್ತುಗಳನ್ನು ಹೆಚ್ಚಿಸಲು ಸರ್ಕಾರದ ಪ್ರಯತ್ನಗಳನ್ನು ಹೆಚ್ಚಿಸುತ್ತದೆ. ಹಾಗೆಯೇ ವಿದೇಶಗಳಲ್ಲಿ ನಮ್ಮ ಬ್ರಾಂಡ್‌ನ ವಿಸ್ತರಣೆಗೆ ಸಹಕಾರಿಯಾಗಿದೆ ಎಂದರು.

ನಮ್ಮ ಮೂಲ ಕಂಪನಿಯಾದ ಸುಜುಕಿ ಮೋಟಾರ್ ಕಾರ್ಪೊರೇಶನ್ ಅವರು ಪ್ರಬಲವಾದ ತಾಂತ್ರಿಕ ಬೆಂಬಲವನ್ನು ಒದಗಿಸಿದ್ದಾರೆ. ‌ಅವರ ಬಲವಾದ ಬೆಂಬಲದಿಂದಾಗಿ ಇದು ಸಾಧ್ಯವಾಯಿತು. ಹಾಗೆಯೇ ಈ ಮೈಲಿಗಲ್ಲನ್ನು ಸಾಧಿಸಲು ತಮ್ಮ ವಿಶಾಲವಾದ ಜಾಗತಿಕ ನೆಟ್‌ವರ್ಕ್ ಅನ್ನು ಹತೋಟಿಗೆ ತರಲು ನಮಗೆ ಸಹಾಯ ಮಾಡಿದ್ದಾರೆ. ನಮ್ಮ ಜಾಗತಿಕ ಗ್ರಾಹಕರು ಮತ್ತು ನಮ್ಮ ಸಾಗರೋತ್ತರ ವಿತರಕರ ಬೆಂಬಲ ಮತ್ತು ವಿಶ್ವಾಸಕ್ಕಾಗಿ ನಾವು ಧನ್ಯವಾದ ತಿಳಿಸುತ್ತೇವೆ ಎಂದು ಅವರು ಹೇಳಿದರು.

2.5 ಮಿಲಿಯನ್ ಹೆಗ್ಗುರುತು ವಾಹನವು ಮಾರುತಿ ಸುಜುಕಿ ಬಲೆನೊ ಆಗಿದ್ದು, ಗುಜರಾತ್‌ನ ಮುಂದ್ರಾ ಬಂದರಿನಿಂದ ಲ್ಯಾಟಿನ್ ಅಮೆರಿಕಕ್ಕೆ ಇದನ್ನು ರಫ್ತು ಮಾಡಲಾಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಮಾರುತಿ ಸುಜುಕಿ ವಿದೇಶಿ ಮಾರುಕಟ್ಟೆ ಮಾತ್ರವಲ್ಲದೇ ದೇಶೀಯ ಮಾರುಕಟ್ಟಯಲ್ಲೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಪ್ರತಿ ತಿಂಗಳ ಒಟ್ಟಾರೆ ಮಾರಾಟದಲ್ಲಿ ಮಾರುತಿ ಕಂಪನಿಯೇ ಅಗ್ರ ಸ್ಥಾನವನ್ನು ಆಳುತ್ತಿದ್ದು, ಕಂಪನಿಯ ಹೊಸ ಮಾದರಿಗಳಾದ ಮಾರುತಿ ಜಿಮ್ನಿ ಹಾಗೂ ಫ್ರಾಂಕ್ಸ್‌ಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ.

ಮಾರುತಿ ಸುಜುಕಿ ಇತ್ತೀಚೆಗೆ ನಡೆದ 2023 ಆಟೋ ಎಕ್ಸ್‌ಪೋದಲ್ಲಿ ಮಾರುತಿ ಜಿಮ್ನಿ ಹಾಗೂ ಫ್ರಾಂಕ್ಸ್ ಮಾದರಿಗಳನ್ನು ಅನಾವರಣಗೊಳಿಸಿತ್ತು. ಈ ಎರಡೂ ಮಾದರಿಗಳು ಭಾರತದಲ್ಲಿ ದಾಖಲೆಯ ಬುಕಿಂಗ್ಸ್ ಪಡೆದುಕೊಳ್ಳುತ್ತಿವೆ. ಗ್ರಾಹಕರು ಕಾತುರದಿಂದ ಈ ಎರಡೂ ಮಾದರಿಗಳ ಡೆಲಿವರಿಗಾಗಿ ಕಾಯುತ್ತಿದ್ದಾರೆ. ಕಂಪನಿಯ ಪ್ರಕಾರ ಕಳೆದ ಬಾರಿಯ ಹೇಳಿಕೆಯಂತೆ ಮಾರು ಜಿಮ್ನಿ ಮಾದರಿಯು ಈವೆರೆಗೆ 23,500 ಬುಕಿಂಗ್ಸ್ ಪಡೆದಿದ್ದರೆ, ಮಾರುತಿ ಫ್ರಾಂಕ್ಸ್ ಮಾದರಿಯು 15,500 ಬುಕಿಂಗ್ಸ್ ಪಡೆದುಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, March 29, 2023, 18:30 [IST]
English summary
Maruti suzuki new milestone export of 25 lakh cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+