ಬಹುಬೇಡಿಕೆಯ ಗ್ರ್ಯಾಂಡ್ ವಿಟಾರಾ ಸಾಮರ್ಥ್ಯ ಪ್ರದರ್ಶಿಸುವ ಟಿವಿಸಿ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು 2022ರ ಕೊನೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಎಸ್‍ಯುವಿಯನ್ನು ಟೊಯೊಟಾ ಕಂಪನಿಯೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಮಾರುತಿ ಸುಜುಕಿ ಕಂಪನಿಯು ಈ ಎಸ್‌ಯುವಿಯನ್ನು ಹಲವು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರಫ್ತು ಮಾಡಲು ಯೋಜಿಸುತ್ತಿದೆ.
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿಗಳೊಂದಿಗೆ ಪೈಪೋಟಿ ನೀಡುತ್ತದೆ, ಈ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಇದೀಗ ಮಾರುತಿ ಸುಜುಕಿ ಕಂಪನಿಯು ತನ್ನ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯ ಟಿವಿಸಿಯನ್ನು ಬಿಡುಗಡೆಗೊಳಿಸಿದ್ದಾರೆ. ಈ ಟಿವಿಸಿ ವಿಡಿಯೋದಲ್ಲಿ ನೆಕ್ಸಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ವೀಡಿಯೊದಲ್ಲಿ ಎಸ್‍ಯುವಿಯ ಬಾಹ್ಯ ನೋಟ, ವೈಶಿಷ್ಟ್ಯಗಳು ಮತ್ತು ಒಳಾಂಗಣ ವಿನ್ಯಾಸದ ಜೊತೆಗೆ ವೈಶಿಷ್ಟ್ಯಗಳನ್ನು ಪ್ರದರ್ಶಿಸಲಾಗಿದೆ. ಈ ಜಾಹೀರಾತು ವಿಶೇಷವಾಗಿ ಸಾಹಸಮಯವಾಗಿದೆ , ಈ ಎಸ್‍ಯುವಿಯ ಆಫ್-ರೋಡ್ ಕೋನದ ಮೇಲೆ ಹೆಚ್ಚು ಕೇಂದ್ರೀಕರಿಸಿದೆ. ಈ ವಿಭಾಗದಲ್ಲಿನ ಇತರ ಎಸ್‍ಯುವಿಗಳಿಗಿಂತ ಗ್ರ್ಯಾಂಡ್ ವಿಟಾರಾವನ್ನು ಪ್ರತ್ಯೇಕಿಸುವ ಅಂಶವೆಂದರೆ ಅದು ಸುಜುಕಿಯ AWD ಸಿಸ್ಟಮ್‌ನೊಂದಿಗೆ ಬರುತ್ತದೆ. ಇದನ್ನು ಸುಜುಕಿ ಆಲ್‌ಗ್ರಿಪ್ ಎಂದು ಕರೆಯಲಾಗುತ್ತದೆ.
ಇದು ಪಕ್ಕ ಆಫ್-ರೋಡರ್ ಅಲ್ಲ ಆದರೆ, ಇದು ಇನ್ನೂ ಸಾಮಾನ್ಯ ಫ್ರಂಟ್-ವೀಲ್ ಡ್ರೈವ್ ಎಸ್‍ಯುವಿಗಿಂತ ಹೆಚ್ಚಿನದನ್ನು ಮಾಡಬಹುದು. ಕ್ಯಾಬಿನ್‌ನಲ್ಲಿ ಸೆಲೆಕ್ಟರ್ ನಾಬ್ ಇದೆ, ಅದನ್ನು ಮೇಲ್ಮೈಯನ್ನು ಅವಲಂಬಿಸಿ ಮೋಡ್ ಅನ್ನು ಬದಲಾಯಿಸಲು ಬಳಸಬಹುದು. ಇದು ಹೊಸ ಗ್ರ್ಯಾಂಡ್ ವಿಟಾರಾದಲ್ಲಿನ AWD ವ್ಯವಸ್ಥೆಯು ಕಾರ್ಯನಿರ್ವಹಿಸುವ ವಿಧಾನವನ್ನು ಬದಲಾಯಿಸುತ್ತದೆ. ಹೆಸರಿನ ಹೊರತಾಗಿ, ಹಳೆಯ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ನಿಮಗೆ ನೆನಪಿಸುವ ಯಾವುದೇ ಅಂಶಗಳು ಇಲ್ಲ.
ಈ ಹೊಚ್ಚಹೊಸ ಎಸ್‍ಯುವಿಯನ್ನು ಹೊಸ ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮೊದಲಿನಿಂದ ಅಭಿವೃದ್ಧಿಪಡಿಸಲಾಗಿದೆ. ರಫ್ತು ಮಾದರಿಯು ಸಣ್ಣ ಸಾಮರ್ಥ್ಯದ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಎಸ್‍ಯುವಿಯು 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ ಮತ್ತು 1.5-ಲೀಟರ್ TNGA ಪೆಟ್ರೋಲ್ ಮೋಟರ್ ಸ್ಟ್ರಾಂಗ್-ಹೈಬ್ರಿಡ್ ಸಿಸ್ಟಂ ಅನ್ನು ಒಳಗೊಂಡಿದೆ.
ಇದರಲ್ಲಿ 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ 102 ಬಿಹೆಚ್‍ಪಿ ಪವರ್ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಯುನಿಟ್ ಅನ್ನು ನೀಡಿದೆ. ಇನ್ನು ಈ ಎಸ್‍ಯುವಿಯ ಎಡಬ್ಲ್ಯೂಡಿ ಸಿಸ್ಟಂ ಅನ್ನು ಮ್ಯಾನುವಲ್ ರೂಪಾಂತರಗಳೊಂದಿಗೆ ಮಾತ್ರ ನೀಡಲಾಗುತ್ತದೆ.
ಇಂಟೆಲಿಜೆಂಟ್ ಎಲೆಕ್ಟ್ರಿಕ್ ಹೈಬ್ರಿಡ್ ಸಿಸ್ಟಮ್ ಎಂದೂ ಕರೆಯಲ್ಪಡುವ ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಯು ಐಸಿಇ ಯುನಿಟ್ ಮೂಲಕ ಸಂಯೋಜಿತವಾಗಿ 115 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದನ್ನು ಇ-ಸಿವಿಟಿ ಯೊಂದಿಗೆ ಮಾತ್ರ ಜೋಡಿಸಲಾಗಿದೆ. ಈ ಪವರ್‌ಟ್ರೇನ್‌ಗಾಗಿ 27.97 ಕಿ.ಮೀ ಮೈಲೇಜ್ ಅನ್ನು ಒದಗಿಸುತ್ತದೆ. ಈ ಹೊಸ ಎಸ್‍ಯುವಿಯು 4,345 ಎಂಎಂ ಉದ್ದ, 1,795 ಎಂಎಂ ಅಗಲ ಮತ್ತು 1,645 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್‌ಬೇಸ್ ಹೊಂದಿದೆ.
ಈ 5-ಸೀಟರ್ ಎಸ್‍ಯುವಿಯು 45-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಹೊಂದಿದೆ. ಇದು ಹೈರೈಡರ್‌ನೊಂದಿಗೆ ಕೆಲವು ಬಾಹ್ಯ ವಿಶೇಷಣಗಳನ್ನು ಹಂಚಿಕೊಂಡದೆ. ಹೈರೈಡರ್‌ನಿಂದ ಗ್ರಾಂಡ್ ವಿಟಾರಾ ದೊಡ್ಡ ವ್ಯತ್ಯಾಸವೆಂದರೆ ಅದರ ಮುಂಭಾಗದ ವಿನ್ಯಾಸ. ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸುಜುಕಿ ಎಸ್-ಕ್ರಾಸ್ ಮಾದರಿಗೆ ಹೋಲುತ್ತಿದೆ. ಈ ಎಸ್‍ಯುವಿಯ ಸೈಡ್ ಬಾಡಿ ಪ್ಯಾನೆಲ್‌ಗಳು, ಟೈಲ್‌ಗೇಟ್ ಮತ್ತು ಇಂಟಿಗ್ರೇಟೆಡ್ ಟೈಲ್ ಲ್ಯಾಂಪ್‌ಗಳೊಂದಿಗೆ ಹಿಂಭಾಗದ ಬಂಪರ್ ಕೂಡ ಹೈರೈಡರ್‌ಗೆ ಹೋಲುತ್ತವೆ.


Click it and Unblock the Notifications