ಮಾರುತಿ ಸುಜುಕಿ ನೆಕ್ಸಾ ಕಾರುಗಳ ಬೆಲೆ ಏರಿಕೆ: ಯಾವುದಕ್ಕೆ ಎಷ್ಟು?

ಭಾರತದ ಪ್ರಮುಖ ವಾಹನ ತಯಾರಕ ಕಂಪನಿ ಮಾರುತಿ ಸುಜುಕಿ ತನ್ನ ನೆಕ್ಸಾ ರೇಂಜ್ ಕಾರುಗಳ ಬೆಲೆಗಳನ್ನು 25,000 ರೂ. ವರೆಗೆ ಹೆಚ್ಚಿಸಿದೆ. ವಿವಿಧ ವೆಚ್ಚವನ್ನು ಸರಿದೂಗಿಸಲು ತನ್ನ ಕಾರುಗಳ ಬೆಲೆಯನ್ನು ಜನವರಿ 2023 ರಿಂದ ಏರಿಸುವುದಾಗಿ ಈ ಹಿಂದೆ ಕಂಪನಿ ಘೋಷಿಸಿತ್ತು.

ನೂತನ ದರಗಳು ಜ.16 ರಿಂದಲೇ ಜಾರಿ ಬಂದಿವೆ. ಮಾರುತಿ ಸುಜುಕಿ ಇಗ್ನಿಸ್ ಕಾರು ಸೇರಿದಂತೆ ಎಲ್ಲಾ ನೆಕ್ಸಾ ರೇಂಜ್ ಕಾರುಗಳ ಬೆಲೆ ಭಾರೀ ಏರಿಕೆಯಾಗಿದೆ. ಆದರೆ, ಬಲೆನೊ ಮತ್ತು XL6 ಬೆಲೆ ಕಾರಿನ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿದೆ. ಮಾರುತಿ ಸುಜುಕಿಯು ಗ್ರ್ಯಾಂಡ್ ವಿಟಾರಾ ಬೆಲೆಯನ್ನು ಏರಿಕೆ ಮಾಡಿಲ್ಲ. ಹೊಸದಾಗಿ ಬಿಡುಗಡೆಯಾದ ಈ ಎಸ್‌ಯುವಿಯ ಆರಂಭಿಕ ಬೆಲೆ 10.45 ಲಕ್ಷ ಇದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.19.49 ಲಕ್ಷದವರೆಗೆ (ಎಕ್ಸ್-ಶೋರೂಂ ಭಾರತ) ಇರಲಿದೆ.

ಮಾರುತಿ ಸುಜುಕಿ ನೆಕ್ಸಾ ಕಾರುಗಳ ಬೆಲೆ ಏರಿಕೆ: ಯಾವುದಕ್ಕೆ ಎಷ್ಟು?

ಅಲ್ಲದೆ, ಮಾರುತಿ ಸುಜುಕಿ ಸಿಯಾಜ್ ಸೆಡಾನ್ ಬೆಲೆಯನ್ನು 20,000 ರೂ.ವರೆಗೆ ಹೆಚ್ಚಿಸಲಾಗಿದೆ. ಜೊತೆಗೆ ಜನಪ್ರಿಯ ಕಾರುಗಳಾದ ಮಾರುತಿ ಸುಜುಕಿ ಬಲೆನೊ ಹ್ಯಾಚ್‌ಬ್ಯಾಕ್ ಮತ್ತು ಮಾರುತಿ ಸುಜುಕಿ XL6 ಎಂಪಿವಿ ಬೆಲೆಯನ್ನು ಆಯಾ ರೂಪಾಂತರಗಳಿಗೆ ಅನುಗುಣವಾಗಿ 12,000 ರೂ.ವರೆಗೆ ಹೆಚ್ಚಿಸಲಾಗಿದ್ದು, ಮಾರುತಿ ಸುಜುಕಿ ಇಗ್ನಿಸ್‌ ಬೆಲೆ ಏರಿಕೆಯು ರೂ. 10,000 ರಿಂದ ರೂ.25,000 ರ ನಡುವೆ ಇರಲಿದೆ. ಬೇರೆ ಕಂಪನಿ ಕಾರುಗಳಿಗೆ ಹೋಲಿಸಿದರೆ ಇದು ಕಡಿಮೆ ಪ್ರಮಾಣದ ಏರಿಕೆಯಾಗಿದೆ.

ಮಾರುತಿ ಸುಜುಕಿ ಇಗ್ನಿಸ್‌, 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಹೊಂದಿರುವ ಕಾರಾಗಿದ್ದು, ಇದರ ಬೆಲೆ ರೂ.5.55 ಲಕ್ಷ (ಎಕ್ಸ್ ಶೋರೂಂ, ಭಾರತ) ಆಗಿದ್ದು, ಇದು ನೆಕ್ಸಾ ರೇಂಜ್ ಕಾರುಗಳಲ್ಲಿ ಅತ್ಯಂತ ಕಡಿಮೆ ಬೆಲೆಯ ಮಾದರಿಯಾಗಿದೆ. ಗ್ರಾಹಕರು ಅತಿ ಹೆಚ್ಚು ಖರೀದಿ ಮಾಡುವ ಕಾರುಗಳಲ್ಲಿ ಮಾರುತಿ ಸುಜುಕಿ ಬಲೆನೊ ಒಂದಾಗಿದ್ದರೂ ಬೆಲೆ ಏರಿಕೆಯು 2,000 ರೂ.ಗಳಿಂದ 12,000 ರೂ.ಗಳ ಮಧ್ಯದಲ್ಲಿ ಇದ್ದು, ಅತಿ ಕಡಿಮೆಯಾಗಿದೆ.

ಹೊಸ ಬಲೆನೊ ಹ್ಯಾಚ್‌ಬ್ಯಾಕ್ ಆರಂಭಿಕ ಬೆಲೆ ರೂ.6.56 ಲಕ್ಷ (ಎಕ್ಸ್-ಶೋರೂಂ, ಭಾರತ) ಇದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.9.83 ಲಕ್ಷ ಇದೆ ಎಂದು ಹೇಳಬಹುದು. ಇದಲ್ಲದೆ, ಮಾರುತಿ ಸುಜುಕಿ ಸಿಯಾಜ್‌ನ ಪ್ರಾರಂಭಿಕ ಬೆಲೆ ರೂ.9.19 ಲಕ್ಷ ಇದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.12.18 ಲಕ್ಷ ಇದೆ. ಮಾರುತಿ ಸುಜುಕಿ ಎಕ್ಸ್‌ಎಲ್ 6 ಬೆಲೆ ರೂ.11.14 ಲಕ್ಷ ದಿಂದ ಶುರುವಾಗಲಿದೆ. ಟಾಪ್ ಎಂಡ್ ಮಾದರಿ ಬೆಲೆ ರೂ.14.52 ಲಕ್ಷ ಇದೆ.

ದೇಶದ ಪ್ರಮುಖ ವಾಹನ ತಯಾರಕ ಕಂಪನಿ ಮಹೀಂದ್ರಾ, ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದ ಬಹುನಿರೀಕ್ಷಿತ ಸ್ಕಾರ್ಪಿಯೋ ಎನ್ ಬೆಲೆಯನ್ನು ಗರಿಷ್ಠ ರೂ. 1 ಲಕ್ಷದವರೆಗೆ ಏರಿಕೆ ಮಾಡಿದೆ. ದರ ಹೆಚ್ಚಳವು ವೇರಿಯಂಟ್, ಪೆಟ್ರೋಲ್ ಮತ್ತು ಡೀಸೆಲ್ ಟ್ರಿಮ್‌ಗಳ ಆಯ್ಕೆಯ ಆಧಾರದ ಮೇಲೆ ಬೇರೆ - ಬೇರೆಯಾಗಿದೆ. ಇದೀಗ ಹೊಸ ಎಸ್‌ಯುವಿ ಬೆಲೆ ಇದೀಗ 12.74 ಲಕ್ಷದಿಂದ 24.05 ಲಕ್ಷದವರೆಗೆ (ಎಕ್ಸ್ - ಶೋರೊಂ) ಇದೆ ಎಂದು ಹೇಳಬಹುದು.

ಹೊಸ ಮಹೀಂದ್ರಾ ಸ್ಕಾರ್ಪಿಯೊ ಎನ್ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಅವುಗಳೆಂದರೆ, 2.2-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್, 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್. ಡೀಸೆಲ್ ಎಂಜಿನ್ 175 PS ಪವರ್ ಮತ್ತು 400 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ಎಂಜಿನ್ 203 PS ಪವರ್ ಮತ್ತು 380 Nm ಟಾರ್ಕ್ ಉತ್ಪಾದಿಸುತ್ತದೆ. ಸುರಕ್ಷತಾ ದೃಷ್ಟಿಯಿಂದ ಇದು 6 ಏರ್‌ಬ್ಯಾಗ್‌ಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Friday, January 20, 2023, 6:30 [IST]
English summary
Maruti suzuki nexa price hike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+