Maruti Suzuki: ಐತಿಹಾಸಿಕ ಸಾಧನೆ ಮಾಡಿದ ಮಾರುತಿ ಸುಜುಕಿ, ದೇಶದಲ್ಲಿ ನಂಬರ್ 1!

ಭಾರತದಲ್ಲಿ ಮಾರುತಿ ಸುಜುಕಿ (Maruti Suzuki) ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಅದರ ಕಾರುಗಳು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಹೆಚ್ಚಿನ ಗ್ರಾಹಕರು ಇಷ್ಟುಪಟ್ಟು ಖರೀದಿಸುತ್ತಾರೆ. ಪ್ರಸ್ತುತ, ಕಂಪನಿಯು ತನ್ನ ಕಾರು ಮಾರಾಟದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಮಾರುತಿ ಸುಜುಕಿ 2023-24 ಹಣಕಾಸಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ್ದು, ದೇಶೀಯ ಮಾರುಕಟ್ಟೆಯಲ್ಲಿ 4,34,812 ಯುನಿಟ್ ವಾಹನಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿ, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಶೇಕಡ 9.1% ಬೆಳವಣಿಗೆ ಸಾಧಿಸಿದೆ. ಅದರಲ್ಲೂ ಕಂಪನಿಯು ಎಸ್‌ಯುವಿ ವಿಭಾಗದಲ್ಲಿ ಭರ್ಜರಿಯಾಗಿ ಮುನ್ನುಗ್ಗುತ್ತಿದ್ದು, ಶೇಕಡ 20% ಬೆಳವಣಿಗೆ ಸಾಧಿಸಿದೆ.

Maruti Suzuki: ಐತಿಹಾಸಿಕ ಸಾಧನೆ ಮಾಡಿದ ಮಾರುತಿ ಸುಜುಕಿ, ದೇಶದಲ್ಲಿ ನಂಬರ್ 1!

ಕಂಪನಿಯ ರಫ್ತಿಗೆ ಸಂಬಂಧಿಸಿದಂತೆ ಮಾತನಾಡುವುದಾದರೆ, ಸರಿ ಸುಮಾರು 63,000 ಯುನಿಟ್‌ಗಳನ್ನು ವಾಹನಗಳನ್ನು ವಿದೇಶಗಳಿಗೆ ಈ ಹಣಕಾಸು ವರ್ಷದಲ್ಲಿ ರಫ್ತು ಮಾಡಿದೆ. ಈ ಮೂಲಕ ಭಾರತದ ಅತಿದೊಡ್ಡ ಪ್ರಯಾಣಿಕ ವಾಹನ ರಫ್ತುದಾರ ಕಂಪನಿಯಾಗಿ ಮಾರುತಿ ಸುಜುಕಿ ಗುರಿತಿಸಿಕೊಂಡಿದೆ. ಆದರೆ, ಕಳೆದ ಹಣಕಾಸು ವರ್ಷಕ್ಕೆ (69,437 ಯುನಿಟ್) ಹೋಲಿಸಿದರೆ ಕೊಂಚ ಕಡಿಮೆ ಎಂದು ಹೇಳಬಹುದು.

ಇದೀಗ, ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾಕ್ಕೆ ಫ್ರಾಂಕ್ಸ್ ಎಸ್‌ಯುವಿ ರಫ್ತು ಮಾಡುತ್ತಿರುವುದರಿಂದ ಅದು ಸುಧಾರಿಸಿದೆ. ಈ ತ್ರೈಮಾಸಿಕದಲ್ಲಿ ಸೆಮಿಕಂಡಕ್ಟರ್ ಚಿಪ್‌ ಕೊರತೆಯಿಂದ 28,000 ಯುನಿಟ್ ಕಾರುಗಳನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ ಎಂದು ಮಾರುತಿ ಸುಜುಕಿ ಕಂಪನಿಯೇ ಹೇಳಿದೆ. ಸದ್ಯ, 3.55 ಲಕ್ಷ ಯುನಿಟ್‌ ಆರ್ಡರ್ ಬಾಕಿ ಉಳಿಸಿಕೊಂಡಿದ್ದು, ಅದನ್ನು ಬೇಗನೇ ಪೂರೈಸುವ ವಿಶ್ವಾಸದಲ್ಲಿದೆ.

Maruti Suzuki: ಐತಿಹಾಸಿಕ ಸಾಧನೆ ಮಾಡಿದ ಮಾರುತಿ ಸುಜುಕಿ, ದೇಶದಲ್ಲಿ ನಂಬರ್ 1!

ಮಾರುತಿ ಸುಜುಕಿ ಇಂಗಾಲ ಹೊರಸೂಸುವ ವಾಹನಗಳ ಉತ್ಪಾದನೆಯನ್ನು ನಿಧಾನವಾಗಿ ಕಡಿಮೆಗೊಳಿಸಿದಂತೆ ಕಾಣುತ್ತಿದ್ದು, ಅದರ ಗಮನವನ್ನು ಸಿಎನ್‌ಜಿ ಕಾರುಗಳ ಮೇಲೆ ಹರಿಸಿದೆ. ಅದಕ್ಕೆ ಸಾಕ್ಷಿ ಎಂಬಂತೆ ಈ ತ್ರೈಮಾಸಿಕದಲ್ಲಿ 113,000 ಸಿಎನ್‌ಜಿ ಕಾರುಗಳನ್ನು ಮಾರಾಟ ಮಾಡಿ, ಶೇಕಡ 27% ಪ್ರಗತಿ ಕಂಡಿದೆ. ಕಂಪನಿಯು ತನ್ನ ಕಾರು ಮಾರಾಟದಲ್ಲಿ ಯಶಸ್ಸು ಸಾಧಿಸಲು ಕಾರಣ, ದೇಶಾದ್ಯಂತ ಸರ್ವಿಸ್ ನೆಟ್ವರ್ಕ್ ಅನ್ನು 4,500 ಕೇಂದ್ರಗಳಿಗೆ ವಿಸ್ತರಿಸಿರುವುದು.

ಈ ವರ್ಷ, ಮಾರುತಿ ಸುಜುಕಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಫ್ರಾಂಕ್ಸ್ ಎಸ್‌ಯುವಿ, ಜಿಮ್ನಿ ಆಫ್-ರೋಡ್ ಎಸ್‌ಯುವಿ ಹಾಗೂ ಇನ್ವಿಕ್ಟೋ ಎಂಪಿವಿಗಳು ಈ ಪರಿಪ್ರಮಾಣದಲ್ಲಿ ಬೆಳವಣಿಗೆ ಸಾಧಿಸಲು ನೆರವಾಗಿವೆ. ಇದರೊಟ್ಟಿಗೆ ಕಂಪನಿಯ ಎಲ್ಲ ಕಾರುಗಳು (ಇನ್ವಿಕ್ಟೋ ಹೊರತುಪಡಿಸಿ) ರೂ.20 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗುವುದರಿಂದ ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ. ಪ್ರಮುಖವಾಗಿ ಮಾರುತಿ ಸುಜುಕಿ ಕಾರುಗಳು ದೇಶದ ಗ್ರಾಮೀಣ ಭಾಗದ ಜನರನ್ನು ಹೆಚ್ಚು ಆಕರ್ಷಿಸಿವೆ.

Maruti Suzuki: ಐತಿಹಾಸಿಕ ಸಾಧನೆ ಮಾಡಿದ ಮಾರುತಿ ಸುಜುಕಿ, ದೇಶದಲ್ಲಿ ನಂಬರ್ 1!

ಮೊದಲಿಗೆ ಮಾರುತಿ ಸುಜುಕಿ, ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಫ್ರಾಂಕ್ಸ್ ಎಸ್‌ಯುವಿ ಬಗ್ಗೆ ತಿಳಿಯೋಣ. ಇದು, ರೂ.7.46 ಲಕ್ಷದಿಂದ ರೂ.13.13 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಸಿಗುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 20.01 - 22.89 kmpl ಮೈಲೇಜ್ ನೀಡುತ್ತದೆ. 9 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಮಾರುತಿ ಸುಜುಕಿಯ ಜನಪ್ರಿಯ ಆಫ್-ರೋಡ್ ಎಸ್‌ಯುವಿ, ಜಿಮ್ನಿ 5 ಡೋರ್ ಬಗ್ಗೆ ತಿಳಿಯುವುದಾದರೆ, ಇದು ರೂ.12.74 ಲಕ್ಷದಿಂದ ರೂ.15.05 ಲಕ್ಷ ಬೆಲೆಯಲ್ಲಿ ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಸಿಗುತ್ತದೆ. ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಕೊಂಚ ಕಡಿಮೆ ಮೈಲೇಜ್ ನೀಡಲಿದ್ದು, 16.39 - 16.94 kmpl ಇಂಧನ ದಕ್ಷತೆ ಹೊಂದಿದೆ. AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.

ಇತ್ತೀಚೆಗೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಮಾರುತಿ ಸುಜುಕಿ ಇನ್ವಿಕ್ಟೋ ಎಂಪಿವಿ, ರೂ.24.84 ಲಕ್ಷದಿಂದ ರೂ.28.42 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗಲಿದೆ. 2-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹಾಗೂ e-CVT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, 23.24 kmpl ಮೈಲೇಜ್ ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Article Published On: Tuesday, August 1, 2023, 12:34 [IST]
English summary
Maruti suzuki q1 fy23 24 sells 4 35 lakh vehicles details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+