87 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆಯಲು ಮುಂದಾದ ಮಾರುತಿ ಸುಜುಕಿ: ಯಾಕೆ ಗೊತ್ತಾ?

ಜನಪ್ರಿಯ ಮತ್ತು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಎಸ್-ಪ್ರೆಸ್ಸೊ ಮತ್ತು ಇಕೋ ವ್ಯಾನ್‌ನ 87,000 ಕ್ಕೂ ಹೆಚ್ಚು ಯುನಿಟ್‌ಗಳನ್ನು ಹಿಂಪಡೆದಿದೆ. ಈ ಕಾರುಗಳಲ್ಲಿ ಸ್ಟೀರಿಂಗ್ ವೀಲ್ ಸೆಟಪ್‌ನಲ್ಲಿ ಪತ್ತೆಯಾದ ಸಂಭಾವ್ಯ ದೋಷದಿಂದಾಗಿ ಈ ವಾಹನಗಳನ್ನು ಹಿಂಪಡೆಯಲಾಗಿದೆ ಮಾರುತಿ ಸುಜುಕಿ ಕಂಪನಿ ಹೇಳಿಕೊಂಡಿದೆ.

ಮಾರುತಿ ಸುಜುಕಿ ಕಂಪನಿಯು ದೋಷ ಪೂರಿತ ಕಾರು 87,000ಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆಯುವುದಾಗಿ ಜುಲೈ 24, ಸೋಮವಾರ ಹೇಳಿಕೆಯನ್ನು ನೀಡಿದ್ದಾರೆ. ದೋಷ ಪೂರಿತ ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಮತ್ತು ಮಾರುತಿ ಸುಜುಕಿ ಇಕೊ (Maruti Suzuki Eeco) ವ್ಯಾನ್‌ನ ಮಾಲೀಕರಿಗೆ ಯಾವುದೇ ಹಣ ಪಾವತಿಸದೇ ಸಮಸ್ಯೆಯನ್ನು ಪರಿಹರಿಸಲು ಹತ್ತಿರದ ಡೀಲರ್ ಅನ್ನು ಸಂಪರ್ಕಿಸಲು ತಿಳಿಸಲಾಗುವುದು ಎಂದು ಕಾರು ತಯಾರಕರು ಭರವಸೆ ನೀಡಿದ್ದಾರೆ.

Maruti Suzuki

ಸೋಮವಾರ, ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮತ್ತು ಇಕೊ ಮಾದರಿಗಳ 87,599 ಯುನಿಟ್‌ಗಳನ್ನು ಹಿಂಪಡೆಯುವ ಕುರಿತು ಹೇಳಿಕೆಯನ್ನು ನೀಡಿತು. ಈ ವಾಹನಗಳಲ್ಲಿನ ಸ್ಟೀರಿಂಗ್ ಟೈ ರಾಡ್ ದೋಷಪೂರಿತವಾಗಿದೆ ಎಂದು ಕಾರು ತಯಾರಕರು ತಿಳಿಸಿದ್ದಾರೆ. ಮಾರುತಿ ಹೇಳಿಕೆಯ ಪ್ರಕಾರ, ಅಂತಹ ವಾಹನಗಳಲ್ಲಿ ಬಳಸಲಾಗುವ ಸ್ಟೀರಿಂಗ್ ಟೈ ರಾಡ್‌ನ ಒಂದು ಭಾಗದಲ್ಲಿ ಸಂಭವನೀಯ ದೋಷವಿದೆ ಎಂದು ಶಂಕಿಸಲಾಗಿದೆ.

ಇದು ಅಪರೂಪದ ಸಂದರ್ಭದಲ್ಲಿ, ವಾಹನದ ಸ್ಟೀರಬಿಲಿಟಿ ಮತ್ತು ನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ಎಸ್-ಪ್ರೆಸ್ಸೊ ಮತ್ತು ಇಕೋ ಮಾದರಿಗಳನ್ನು ಜುಲೈ 5, 2021 ಮತ್ತು ಫೆಬ್ರವರಿ 15 ರ ನಡುವೆ ತಯಾರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಅತಿ ದೊಡ್ಡ ಕಾರು ತಯಾರಕರಿಂದ ಇದು ಅತಿ ದೊಡ್ಡ ಹಿಂಪಡೆಯುವಿಕೆಗಳಲ್ಲಿ ಒಂದಾಗಿದೆ.

ಎರಡು ವರ್ಷಗಳ ಹಿಂದೆ ಮಾರುತಿ ಸುಜುಕಿಯು ಸಿಯಾಝ್, ವಿಟಾರಾ ಬ್ರೆಝಾ ಮತ್ತು ಎಕ್ಸ್‌ಎಲ್ 6 ಪೆಟ್ರೋಲ್ ವೇರಿಯಂಟ್‌ಗಳು ಸೇರಿದಂತೆ ವಿವಿಧ ಮಾದರಿಗಳ ಸುಮಾರು ಎರಡು ಲಕ್ಷ ಯುನಿಟ್‌ಗಳನ್ನು ಹಿಂಪಡೆಯಲು ಬಲವಂತವಾಗಿ ಮೋಟಾರ್ ಜನರೇಟರ್ ಘಟಕದ ದೋಷದಿಂದಾಗಿ. ಹಿಂದಿನ ವರ್ಷದಲ್ಲಿ, ಸಂಭವನೀಯ ದೋಷಯುಕ್ತ ಇಂಧನ ಪಂಪ್‌ಗಳಿಗಾಗಿ ಮಾರುತಿ 1.34 ಲಕ್ಷಕ್ಕೂ ಹೆಚ್ಚು ವ್ಯಾಗನ್ಆರ್ ಮತ್ತು ಬಲೆನೊ ಹ್ಯಾಚ್‌ಬ್ಯಾಕ್‌ಗಳನ್ನು ಹಿಂಪಡೆದಿತ್ತು.

ಈ ಮಾರುತಿ ಇಕೋ ವ್ಯಾನ್ ನಲ್ಲಿ ಹೊಸ 1.2-ಲೀಟರ್ ಸುಧಾರಿತ ಕೆ-ಸೀರಿಸ್ ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಅದು ಹೆಚ್ಚು ಶಕ್ತಿಶಾಲಿ ಮತ್ತು ಹೆಚ್ಚು ಮೈಲೇಜ್ ಹೊಂದಿದೆ. ಈ ಎಂಜಿನ್ 6,000rpm ನಲ್ಲಿ 80.76 ಬಿಹೆಚ್‍ಪಿ ಪವರ್ ಮತ್ತು 3,000rpm ನಲ್ಲಿ 104.4 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಈ ಮಾರುತಿ ಸುಜುಕಿ ವ್ಯಾನ್ ಫ್ಯಾಕ್ಟರಿ ಅಳವಡಿಸಲಾಗಿರುವ ಸಿಎನ್‌ಜಿ ಕಿಟ್‌ನೊಂದಿಗೆ ಲಭ್ಯವಿದೆ. ಸಿಎನ್‌ಜಿ ಮೋಡ್‌ನಲ್ಲಿ, ಈ ಎಂಜಿನ್ 6000rpm ನಲ್ಲಿ 71.65 ಬಿಹೆಚ್‍ಪಿ ಪವರ್ ಮತ್ತು 3,000rpm ನಲ್ಲಿ 95 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಮೂಲಕ ಮುಂಭಾಗದ ಚಕ್ರಗಳಿಗೆ ಪವರ್ ರವಾನೆಯಾಗುತ್ತದೆ. ಮಾರುತಿ ಸುಜುಕಿ ಇಕೋ ವ್ಯಾನ್ ಟೂರ್ ರೂಪಾಂತರವು 20.20 ಕಿ.ಮೀ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿನಲ್ಲಿ 1.0-ಲೀಟರ್ ಮೂರು-ಸಿಲಿಂಡರ್ K10C ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು ಗರಿಷ್ಠ 66 ಬಿಹೆಚ್‍ಪಿ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಮ್‌ಟಿಯ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಮೈಕ್ರೋ-ಎಸ್‌ಯುವಿಯು ಸಿಎನ್‌ಜಿ ಡ್ರೈವ್‌ಟ್ರೇನ್‌ನೊಂದಿಗೆ ಕೂಡ ಲಭ್ಯವಿದೆ.

Article Published On: Tuesday, July 25, 2023, 13:59 [IST]
English summary
Maruti suzuki recalls over 87000 s presso and eeco reason details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+