Maruti Suzuki: ಮಾರುತಿ ಗ್ರಾಹಕರು ತಿಳಿಯಲೇಬೇಕಾದ ಸುದ್ದಿ... ಹೊಸ ಮೈಲಿಗಲ್ಲು!
Maruti Suzuki ಇಂಡಿಯಾ ಲಿಮಿಟೆಡ್ (MSIL) ದೇಶಾದ್ಯಂತ 10 ಲಕ್ಷ ಆಟೋಮ್ಯಾಟಿಕ್ ವಾಹನ ಮಾರಾಟದ ಮೈಲಿಗಲ್ಲನ್ನು ದಾಟಿದೆ. ಭಾರತದಲ್ಲಿ ಎರಡು ಪೆಡಲ್ ಆಟೋಮ್ಯಾಟಿಕ್ ಕಾರು ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ.
ಪ್ರಸ್ತುತ, MSIL ನಾಲ್ಕು ವಿಭಿನ್ನ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ವ್ಯವಸ್ಥೆಗಳನ್ನು ನೀಡುತ್ತಿದೆ. ಅವುಗಳನ್ನು ನೋಡುವುದಾದರೆ, ಆಟೋ ಗೇರ್ ಶಿಫ್ಟ್ (AGS), 4 - ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (AT), ಸ್ಟೀರಿಂಗ್ ಮೌಂಟೆಡ್ ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಸುಧಾರಿತ 6 - ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (AT) ಮತ್ತು ಎಲೆಕ್ಟ್ರಾನಿಕ್ - ನಿರಂತರ ವೇರಿಯಬಲ್ ಟ್ರಾನ್ಸ್‌ಮಿಷನ್ (e-CVT).

ಈಗ Maruti Suzuki 10 ಲಕ್ಷ ಆಟೋಮ್ಯಾಟಿಕ್ ವಾಹನಗಳನ್ನು ಮಾರಾಟ ಮಾಡುವ ಮೂಲಕ ಭಾರತದ ನಂ. 1 ಆಟೋಮ್ಯಾಟಿಕ್ ಕಾರು ತಯಾರಕರಾಗಿರುವುದಾಗಿ ಕಂಪನಿ ಘೋಷಿಸಿದೆ. 2014 ರಲ್ಲಿ, ಕಂಪನಿಯು AGS ತಂತ್ರಜ್ಞಾನವನ್ನು ಪರಿಚಯಿಸಿತು, ಅದು ತಕ್ಷಣವೇ ಅಗಾಧ ಗ್ರಾಹಕರ ಸ್ವೀಕಾರವನ್ನು ಪಡೆಯಿತು. ಇಂದು, MSIL ನಿಂದ ಮಾರಾಟವಾಗುವ ಶೇ 65 ರಷ್ಟು ಆಟೋಮ್ಯಾಟಿಕ್ ವಾಹನಗಳು AGS ತಂತ್ರಜ್ಞಾನದೊಂದಿಗೆ ಅಳವಡಿಸಲ್ಪಟ್ಟಿವೆ.
ಯಾವು ಕಾರುಗಳಲ್ಲಿ ಯಾವ ಟ್ರಾನ್ಸ್‌ಮಿಷನ್: ಮಾರುತಿ ಸುಜುಕಿಯ ಆಟೋಮ್ಯಾಟಿಕ್ ಕಾರು ಮಾರಾಟಕ್ಕೆ ಪ್ರಮುಖ ಕೊಡುಗೆ ನೀಡುವ ಪ್ರದೇಶಗಳೆಂದರೆ ದೆಹಲಿ ಮತ್ತು NCR ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮತ್ತು ಕೇರಳ ರಾಜ್ಯಗಳಾಗಿವೆ. 5-ಸ್ಪೀಡ್ AGS ಗೇರ್‌ಬಾಕ್ಸ್ ಆಲ್ಟೊ K-10, S-ಪ್ರೆಸ್ಸೊ, ಸೆಲೆರಿಯೊ, ವ್ಯಾಗನ್ಆರ್, ಇಗ್ನಿಸ್, ಸ್ವಿಫ್ಟ್, ಡಿಜೈರ್, ಬಲೆನೊ ಮತ್ತು ಫ್ರಾಂಕ್ಸ್‌ನಲ್ಲಿ ಲಭ್ಯವಿದೆ.

ಹೆಚ್ಚುವರಿಯಾಗಿ ಜಿಮ್ನಿ ಮತ್ತು ಸಿಯಾಜ್‌ನಲ್ಲಿ 4-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡಲಾಗುತ್ತದೆ. ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಸುಧಾರಿತ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಫ್ರಾಂಕ್ಸ್, ಬ್ರೆಝಾ, ಎರ್ಟಿಗಾ, XL6 ಮತ್ತು ಗ್ರಾಂಡ್ ವಿಟಾರಾದಲ್ಲಿ ಲಭ್ಯವಿದೆ. ಇ-ಸಿವಿಟಿ ತಂತ್ರಜ್ಞಾನವು ಗ್ರ್ಯಾಂಡ್ ವಿಟಾರಾ ಮತ್ತು ಇನ್ವಿಕ್ಟೊದ ಇಂಟೆಲಿಜೆಂಟ್ ಎಲೆಕ್ಟ್ರಿಕ್ ಹೈಬ್ರಿಡ್ ಮಾದರಿಗಳಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ.
ಮಾರಾಟ: AT ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮಾದರಿಗಳ ಪಾಲು ಒಟ್ಟು MSIL ಮಾರಾಟದಲ್ಲಿ ಶೇ27 ರಷ್ಟಿದೆ, ಹಾಗೆಯೇ ಹೈಬ್ರಿಡ್ e-CVT ಟ್ರಾನ್ಸ್‌ಮಿಷನ್ ಮಾರಾಟವು MSIL ಒಟ್ಟು ಮಾರಾಟದಲ್ಲಿ ಶೇ8 ರಷ್ಟಿದೆ ಎಂದು ಮಾರುತಿ ಸುಜುಕಿ ತಿಳಿಸಿದೆ. ಅಲ್ಲಿಗೆ ಮಾರುತಿ ಸುಜುಕಿ ಒಟ್ಟಾರೆ ಮಾರಾಟದಲ್ಲಿ ಆಟೋಮ್ಯಾಟಿಕ್ ಮಾದರಿಗಳ ಪಾಲು ಹೆಚ್ಚಾಗುತ್ತಲೇ ಬಂದಿದ್ದು, ಮುಂಬರುವ ವರ್ಷಗಳಲ್ಲಿ ಈ ಅಂಕಿ ಅಂಶ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ.

"ಗ್ರಾಹಕರ ನಡವಳಿಕೆಯನ್ನು ಮತ್ತಷ್ಟು ಪರಿಶೀಲಿಸಿದಾಗ, NEXA ಗ್ರಾಹಕರು ಉನ್ನತ-ಮಟ್ಟದ ಆಟೋಮ್ಯಾಟಿಕ್ ವೇರಿಯೆಂಟ್‌ಗಳಿಗೆ ಆದ್ಯತೆ ನೀಡುತ್ತಿರುವುದು ತಿಳಿದುಬಂದಿದೆ. ಅರೆನಾ ಗ್ರಾಹಕರು ಈ ಮಧ್ಯೆ ಖರೀದಿ ನಿರ್ಧಾರವನ್ನು ಮಾಡುವಾಗ ಮಧ್ಯ-ವೇರಿಯಂಟ್‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ MSIL ನಲ್ಲಿ ಶೇ58 ರಷ್ಟು ಆಟೋಮ್ಯಾಟಿಕ್ ಕಾರು ಮಾರಾಟವನ್ನು NEXA ಹೊಂದಿದೆ. ಅರೆನಾ ಶೇ42 ರಷ್ಟು ಕೊಡುಗೆ ನೀಡಿರುವುದಾಗಿ ಕಂಪನಿ ತಿಳಿಸಿದೆ.
ಮಾರುತಿ ಸುಜುಕಿ ಇಂಡಿಯಾದ ಮಾರ್ಕೆಟಿಂಗ್ ಮತ್ತು ಸೇಲ್ಸ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಮಾತನಾಡಿ, "ಮಾರುತಿ ಸುಜುಕಿಯಲ್ಲಿ, ನಾವು ನಮ್ಮ ಗ್ರಾಹಕರಿಗೆ ಅತ್ಯುತ್ತಮ ಚಾಲನಾ ಅನುಭವವನ್ನು ನೀಡುವಲ್ಲಿ ಉತ್ಸುಕರಾಗಿದ್ದೇವೆ. 'ಜಾಯ್ ಆಫ್ ಮೊಬಿಲಿಟಿ' ಅನ್ನು ಎಲ್ಲರಿಗೂ ಹರಡುವುದನ್ನು ನಾವು ನಮ್ಮ ಧ್ಯೇಯವನ್ನಾಗಿ ಮಾಡಿಕೊಂಡಿದ್ದೇವೆ. ಹಾಗಾಗಿ ಹಲವಾರು ರೀತಿಯ ಆಯ್ಕೆಗಳೊಂದಿಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ತಂತ್ರಜ್ಞಾನವನ್ನು ನೀಡುತ್ತಿದ್ದೇವೆ.
MSIL ನ ಸ್ವಯಂಚಾಲಿತ ಕಾರು ಮಾರಾಟವು ನಿರಂತರವಾಗಿ ಹೆಚ್ಚುತ್ತಿದೆ. ನಾವು ಆರ್ಥಿಕ ವರ್ಷದ ಮಧ್ಯದಲ್ಲಿ ನಿಂತಿರುವಂತೆ 2023-24 ಕ್ಕೆ ನಾವು ಈಗಾಗಲೇ ಒಂದು ಲಕ್ಷ ಸ್ವಯಂಚಾಲಿತ ವಾಹನ ಮಾರಾಟದ ಗಡಿಯನ್ನು ಮುಟ್ಟುವ ಸಮೀಪದಲ್ಲಿದ್ದೇವೆ. ಇದು ನಿಜವಾಗಿಯೂ ನಮಗೆ ಅದ್ಭುತ ಸಾಧನೆಯಾಗಿದೆ ಶಶಾಂಕ್ ಶ್ರೀವಾಸ್ತವ ಹೇಳಿದರು.


Click it and Unblock the Notifications