Maruti Suzuki: ದೇಶದಲ್ಲಿ ಅಬ್ಬರಿಸುತ್ತಿವೆ ಮಾರುತಿ ಸುಜುಕಿಯ ಈ ಕಾರುಗಳು, ಸಾಮಾನ್ಯವಲ್ಲ ಇವು..!
ದೇಶದಲ್ಲಿ ಎಸ್‌ಯುವಿಗಳಿಗೆ ಭಾರೀ ಬೇಡಿಕೆಯಿದ್ದು, ಮಾರುತಿ ಸುಜುಕಿ (Maruti Suzuki) ಈ ವಿಭಾಗದಲ್ಲಿ ಪವರ್ ಫುಲ್ ಆಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕಾರುಗಳನ್ನೇ ಮಾರಾಟ ಮಾಡುತ್ತಿದೆ. ಜೂನ್ ತಿಂಗಳ (2023) ಮಾರಾಟ ವರದಿ ಪ್ರಕಟಗೊಂಡಿದ್ದು, 32,000 ಯುನಿಟ್ ಎಸ್‌ಯುವಿಗಳನ್ನು ಸೇಲ್ ಮಾಡಿ, ಉತ್ತಮ ಬೆಳವಣಿಗೆ ಸಾಧಿಸಿದೆ.
ಮೊದಲಿಗೆ ಮಾರುತಿ ಸುಜುಕಿ ಕಳೆದ ಜೂನ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟ ಮಾಡಿರುವ ಬ್ರೆಝಾ ಎಸ್‌ಯುವಿ ಬಗ್ಗೆ ಮಾತನಾಡೋಣ. ಕಂಪನಿಯು ಬರೋಬ್ಬರಿ 10,578 ಯುನಿಟ್ ಕಾರುಗಳನ್ನು ಸೇಲ್ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (4,404 ಯುನಿಟ್) ವರ್ಷದಿಂದ ವರ್ಷಕ್ಕೆ (YOY) ಶೇಕಡ 140% ಧನಾತ್ಮಕ ಪ್ರಗತಿ ಕಂಡಿದೆ.

ಎರಡನೇ ಸ್ಥಾನದಲ್ಲಿ ಮಿಡ್ ಸೈಜ್ ಎಸ್‌ಯುವಿ ಗ್ರ್ಯಾಂಡ್ ವಿಟಾರಾ ಇದ್ದು, ಮಾರುತಿ ಸುಜುಕಿ ಕಳೆದ ಜೂನ್ ತಿಂಗಳಲ್ಲಿ 10,486 ಕಾರುಗಳನ್ನು ಮಾರಾಟ ಮಾಡಿದೆ. ಫ್ರಾಂಕ್ಸ್ ಎಸ್‌ಯುವಿ ಸೇಲ್ಸ್ ಕೂಡ ಉತ್ತಮವಾಗಿದ್ದು, 8,000 ಯುನಿಟ್ ಮಾರಾಟವಾಗಿದೆ. ಕಂಪನಿಯ ಪ್ರಮುಖ ಆಫ್- ರೋಡ್ ಎಸ್‌ಯುವಿ ಜಿಮ್ನಿ ಕೂಡ ಒಳ್ಳೆಯ ಸಂಖ್ಯೆ (3,071 ಯುನಿಟ್)ಯಲ್ಲಿ ಸೇಲ್ ಆಗಿದೆ.
ಮಾರುತಿ ಸುಜುಕಿಯ ಈ ಎಸ್‌ಯುವಿಗಳ ಬಗ್ಗೆ ಕೊಂಚ ಸಂಕ್ಷಿಪ್ತ ವಿವರವನ್ನು ತಿಳಿಯೋಣ. ಅದರಲ್ಲಿ ಬ್ರೆಝಾ ರೂ.8.29 ಲಕ್ಷದಿಂದ ರೂ.14.14 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯನ್ನು ಹೊಂದಿದ್ದು, ರೂಪಾಂತರಗಳಿಗೆ ಅನುಗುಣವಾಗಿ 19.8 - 20.15 kmpl ಮೈಲೇಜ್ ನೀಡುತ್ತದೆ. 9 ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ರೂ.10.70 ಲಕ್ಷದಿಂದ ರೂ.19.79 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಇದು ಕೂಡ ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯನ್ನು ಹೊಂದಿದೆ. ಐದು ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿರುವ ಈ ಕಾರು, 19.38 - 27.97 kmpl ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ರೂಪಾಂತರಗಳಿಗೆ ಅನುಗುಣವಾಗಿ ರೂ.7.46 ಲಕ್ಷದಿಂದ 13.13 ಲಕ್ಷ ಬೆಲೆಯಲ್ಲಿ ದೊರೆಯುತ್ತದೆ. 1.2 ಲೀಟರ್ ಕೆ ಸೀರಿಯಸ್ ಡುಯೆಲ್ ಜೆಟ್ ಪೆಟ್ರೋಲ್ ಹಾಗೂ 1.0 ಲೀಟರ್ ಕೆ ಸೀರಿಯಸ್ ಟರ್ಬೋ ಬೂಸ್ಟರ್ ಜೆಟ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದ್ದು, 9.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಆಫ್-ರೋಡ್ ಎಸ್‌ಯುವಿ ಎಂದು ಖ್ಯಾತಿಗಳಿಸಿರುವ ಮಾರುತಿ ಸುಜುಕಿ ಜಿಮ್ನಿ 5 ಡೋರ್, ರೂ.12.74 - 15.05 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಇದು, 1.5L ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಸ್ವೀಡ್ ಮ್ಯಾನುವಲ್ ಹಾಗೂ 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. 9 ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ಫೀಚರ್ಸ್ ಹೊಂದಿದೆ.
ಇನ್ನು, ಜೂನ್ ತಿಂಗಳಲ್ಲಿ (2023) ಮಾರುತಿ ಸುಜುಕಿ ಒಟ್ಟು 1,59,418 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದು, ಶೇಕಡ 2% ಪ್ರಗತಿ ಸಾಧಿಸಿದೆ. ಅದರಲ್ಲೂ ಎಸ್‌ಯುವಿ ಮಾರಾಟ ದಿನದಿಂದ ದಿನಕ್ಕೆ ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಕಂಪನಿ ಕಾರುಗಳೇ ಭಾರತದ ಮಾರುಕಟ್ಟೆಯಲ್ಲಿ ಅಬ್ಬರಿಸಿದರೂ ಆಶ್ಚರ್ಯಪಡುವ ಅಗತ್ಯವಿಲ್ಲ.


Click it and Unblock the Notifications