Maruti Super Carry: ಟಾಟಾಗೆ ಪೈಪೋಟಿಯಾಗಿ ಹೊಸ ನವೀಕರಣಗಳೊಂದಿಗೆ ಮಾರುತಿಯ ಮಿನಿ-ಟ್ರಕ್ ಬಿಡುಗಡೆ
ದೇಶದ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಸೂಪರ್ ಕ್ಯಾರಿ ಮಿನಿ ಟ್ರಕ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ 2023ರ ಮಾರುತಿ ಸುಜುಕಿ ಸೂಪರ್ ಕ್ಯಾರಿ (Maruti Suzuki Super Carry) ಮಿನಿ-ಟ್ರಕ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.5,15,500 ಆಗಿದೆ.
2023ರ ಮಾರುತಿ ಸುಜುಕಿ ಸೂಪರ್ ಕ್ಯಾರಿ ಮಿನಿ-ಟ್ರಕ್ CNG ಕ್ಯಾಬ್ ಚಾಸಿಸ್ ಟ್ರಿಮ್ ಮಟ್ಟ ಸೇರಿದಂತೆ ನಾಲ್ಕು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ.ಮಾರುತಿ ಸುಜುಕಿ ಸೂಪರ್ ಕ್ಯಾರಿ ಮಿನಿ ಟ್ರಕ್ ಮಾದರಿಯ ರೂಪಾಂತರಗಳ ಅನುಗುಣವಾಗಿ ಬೆಲೆಗಳನ್ನು ನೋಡುವುದಾದರೆ, ಗ್ಯಾಸೋಲಿನ್ ಕ್ಯಾಬ್ ಚಾಸಿಸ್ ರೂಪಾಂತರದ ಬೆಲೆಯು ರೂ.5,15,500 ಗಳಾದರೆ, ಗ್ಯಾಸೋಲಿನ್ ಡೆಕ್ ರೂಪಾಂತರದ ಬೆಲೆಯು ರೂ.5,30,500 ಆಗಿದೆ.

ಇನ್ನು ಈ ಸೂಪರ್ ಕ್ಯಾರಿಯ CNG ಕ್ಯಾಬ್ ಚಾಸಿಸ್ ರೂಪಾಂತರದ ಬೆಲೆಯು ರೂ.6,15,500 ಗಳಾದರೆ, CNG ಡೆಕ್ ರೂಪಾಂತರದ ಬೆಲೆಯು ರೂ.6,30,500 ಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಕ್ಸ್ ಶೋರೂಂ ಪ್ರಕಾರವಾಗಿದೆ, ಈ ಹೊಸ ಮಾರುತಿ ಸುಜುಕಿ ಸೂಪರ್ ಕ್ಯಾರಿಯು ಸಂಸ್ಥೆಯ K12C ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.
ಈ 1.2-ಲೀಟರ್ ಎಂಜಿನ್ ಡ್ಯುಯಲ್ ಜೆಟ್ ಮತ್ತು ಡ್ಯುಯಲ್ ವಿವಿಟಿ ತಂತ್ರಜ್ಞಾನದಿಂದ ಪ್ರಯೋಜನ ಪಡೆಯುತ್ತದೆ ಮತ್ತು ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಗಳಲ್ಲಿ ನೀಡಲಾಗುತ್ತದೆ. ಪೆಟ್ರೋಲ್ ಮೋಡ್‌ನಲ್ಲಿ, 2023ರ ಮಾರುತಿ ಸುಜುಕಿ ಸೂಪರ್ ಕ್ಯಾರಿಯ ಎಂಜಿನ್ 6,000rpm ನಲ್ಲಿ 79.65 bhp ಪವರ್ ಮತ್ತು 2,900rpm ನಲ್ಲಿ 104.4 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು CNG ಮೋಡ್‌ನಲ್ಲಿ, ಮಾರುತಿ ಸೂಪರ್ ಕ್ಯಾರಿ ಮಿನಿ-ಟ್ರಕ್ 6,000 rpm ನಲ್ಲಿ 70.67 bhp ಮತ್ತು 2,800 Nm ನಲ್ಲಿ 95Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದು ಗ್ರಾಹಕರಿಗೆ ಮೊದಲಿಗಿಂತ ಕಡಿದಾದ ಗ್ರೇಡಿಯಂಟ್‌ಗಳನ್ನು ಹೆಚ್ಚಿಸಲು ಅನುವು ಮಾಡಿಕೊಡುವ ಸುಧಾರಿತ ಗ್ರೇಡಬಿಲಿಟಿ ನೀಡುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಹೊಸ ಸೂಪರ್ ಕ್ಯಾರಿಯ ಪೆಟ್ರೋಲ್ ಆವೃತ್ತಿಯು ಅದರ ಸ್ಟ್ಯಾಂಡರ್ಡ್ 'ಡೆಕ್' ರೂಪದಲ್ಲಿ ಗರಿಷ್ಠ 740 ಕಿಲೋಗ್ರಾಂಗಳಷ್ಟು ಪೇಲೋಡ್ ಅನ್ನು ಸಾಗಿಸಬಹುದು. CNG ಯೊಂದಿಗೆ K12C ಎಂಜಿನ್ ಪವರ್ ನೊಂದಿಗೆ, ಡೆಕ್ ರೂಪಾಂತರದ ಗರಿಷ್ಠ ಪೇಲೋಡ್ ಸಾಮರ್ಥ್ಯವು 625 ಕಿಲೋಗ್ರಾಂಗಳಾಗಿದೆ. ಇದು ಟಾಟಾ ಮತ್ತು ಮಹೀಂದ್ರಾ ಕಂಪನಿಗಳ ಮಿನಿ ಟ್ರಕ್ ಗಳಿಗೆ ಪೈಪೋಟಿ ನೀಡುತ್ತದೆ.

2023ರ ಮಾರುತಿ ಸುಜುಕಿ ಸೂಪರ್ ಕ್ಯಾರಿ ಮಾದರಿಯ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ, ದೊಡ್ಡ ಸ್ಟೀರಿಂಗ್ ವೀಲ್, ಫ್ಲಾಟ್ ಸೀಟ್ ವಿನ್ಯಾಸ, ಮುಂಭಾಗದ ಡಿಸ್ಕ್ ಬ್ರೇಕ್‌ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ಸೀಟ್ ಬೆಲ್ಟ್ ರಿಮೈಂಡರ್‌ಗಳು ಮತ್ತು ಎಂಜಿನ್ ಇಮೊಬಿಲೈಸರ್ ಅನ್ನು ಒಳಗೊಂಡಿವೆ. ಇನ್ನು CNG ಆವೃತ್ತಿಯು ಮೊದಲಿನಂತೆಯೇ 5-ಲೀಟರ್ ಪೆಟ್ರೋಲ್ ಟ್ಯಾಂಕ್ ಅನ್ನು ಸಹ ಒಳಗೊಂಡಿದೆ.
ಹೊಸ ಸೂಪರ್ ಕ್ಯಾರಿ ಮಿನಿ ಟ್ರಕ್ ಬಿಡುಗಡೆಯ ಬಗ್ಗೆ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಮಾತನಾಡಿ, ಮಾರುತಿ ಸುಜುಕಿ ಯಾವಾಗಲೂ ಗ್ರಾಹಕರ ನಿರೀಕ್ಷೆಗಳನ್ನು ಮೀರಿದ ಉತ್ಪನ್ನಗಳನ್ನು ನೀಡಲು ಪ್ತ್ರಯತ್ನಿಸುತ್ತೇವೆ. ಇದರ ಭಾಗವಾಗಿ ಸೂಪರ್ ಕ್ಯಾರಿ ನಿರ್ಮಿಸಲಾಗಿದೆ. ಭಾರತೀಯ ಮಿನಿ-ಟ್ರಕ್ ಗ್ರಾಹಕರ ಅನನ್ಯ ಅವಶ್ಯಕತೆಗಳಿಗಾಗಿ, ವಾಣಿಜ್ಯ ವಾಹನ ವಿಭಾಗದಲ್ಲಿ 2016 ರಲ್ಲಿ ಪ್ರಾರಂಭವಾಗಿದೆ.
ಪ್ರಾರಂಭವಾದಾಗಿನಿಂದ 1.5 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ಣು ಸ್ವೀಕರಿಸಲಾಗಿದೆ. ಹೊಸ ಸೂಪರ್ ಕ್ಯಾರಿ ಗ್ರಾಹಕರಿಗೆ ಅತ್ಯುತ್ತಮ ಮೌಲ್ಯದ ಪ್ರತಿಪಾದನೆಯನ್ನು ನೀಡುವುದನ್ನು ಮುಂದುವರಿಸುತ್ತದೆ. ಇದು ನಮ್ಮ ವಾಣಿಜ್ಯ ಗ್ರಾಹಕರು ಮತ್ತು ಅವರ ಯಶಸ್ಸಿನ ಪಾಲುದಾರರಿಗೆ ಆದರ್ಶ ಒಡನಾಡಿ ಎಂದು ಸಾಬೀತುಪಡಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.


Click it and Unblock the Notifications








