Maruti Swift: ಬೈಕ್‌ಗೆ ಸರಿ ಸಮನಾದ ಮೈಲೇಜ್ ನೀಡುತ್ತೆ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರು.. ಬಿಡುಗಡೆ ಯಾವಾಗ?

ಭಾರತದಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ (Maruti Suzuki) ಕಂಪನಿ ಕಾರುಗಳು ದೊಡ್ಡಮಟ್ಟದಲ್ಲಿ ಫೇಮಸ್ ಆಗಿವೆ. ಅವುಗಳ ಕಾರ್ಯಕ್ಷಮತೆ, ವಿನ್ಯಾಸ ಹಾಗೂ ವೈಶಿಷ್ಟ್ಯ ಪ್ರತಿಯೊಬ್ಬ ಗ್ರಾಹಕರಿಗೆ ಇಷ್ಟವಾಗುತ್ತದೆ. ಇದೀಗ, ಹೊಸ ತಲೆಮಾರಿನ ಸ್ವಿಫ್ಟ್ ಕಾರನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಕಂಪನಿ ನಿರತವಾಗಿದೆ. ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಮಾರುತಿ ಸುಜುಕಿ, ನೆಕ್ಸ್ಟ್ ಜನರೇಷನ್ ಸ್ವಿಫ್ಟ್ ಕಾರನ್ನು ಮುಂದಿನ ವರ್ಷ (2024) ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿದೆ ಎಂದು ವರದಿಯಾಗಿದೆ. ಅದಕ್ಕಾಗಿ ಕಂಪನಿ ಈಗಿನಿಂದಲೇ ತಯಾರಿ ಆರಂಭಿಸಿದ್ದು, ಯುರೋಪ್ ನಲ್ಲಿ ಹಲವು ಬಾರಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದೆ. 2005ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದ ಸ್ವಿಫ್ಟ್ ಕಾರು ಅಂದಿನಿಂದ ಇಂದಿನವರೆಗೆ ಅತಿಹೆಚ್ಚು ಮಾರಾಟವಾಗಿರುವ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಆಗಿದೆ.

Maruti Swift: ಬೈಕ್‌ಗೆ ಸರಿ ಸಮನಾದ ಮೈಲೇಜ್ ನೀಡುತ್ತೆ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರು.. ಬಿಡುಗಡೆ ಯಾವಾಗ?

ಸದ್ಯ, ಖರೀದಿಗೆ ದೊರೆಯುವ ಸ್ವಿಫ್ಟ್ ಗೆ ಹೋಲಿಸಿದರೆ, ಹೊಸ ತಲೆಮಾರಿನ ಕಾರಿನ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಫ್ರಂಟ್ ಫಾಸಿಯಾ ಹಾಗೂ ಬಾನೆಟ್ ನಲ್ಲಿ ಹಲವು ಮಾರ್ಪಾಡುಗಳಾಗಿದ್ದು, ಹೊಸದಾದ ಬಂಪರ್ ಹಾಗೂ ಹೈಡ್ ಲೈಟ್ಸ್ ಅನ್ನು ಪಡೆದುಕೊಂಡಿರಲಿದೆ. ಕ್ಯಾಬಿನ್ ಮೊದಲಿಗಿಂದ ಹೆಚ್ಚು ವಿಶಾಲವಾಗಿದ್ದು, ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಪ್ರಮುಖವಾಗಿ ಫ್ರಾಂಕ್ಸ್ ಹಾಗೂ ಬಲೆನೊ ಕಾರುಗಳು ಪಡೆದಿರುವಂತೆ 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿರಲಿದೆ.

ನೂತನ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅತ್ಯಾಧುನಿಕ 1.2 ಲೀಟರ್ 3 ಪಾಟ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಾಗಬಹುದು. ಇದರೊಟ್ಟಿಗೆ ಹಿಂದಿನ ಮಾದರಿಯಂತೆ 1.2 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಬಹುದು. ಆದರೆ, 1.0 ಲೀಟರ್ ಬೂಸ್ಟರ್ ಜೆಟ್ 3 ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಸಿಗುವುದು ಅನುಮಾನವಾಗಿದೆ.

Maruti Swift: ಬೈಕ್‌ಗೆ ಸರಿ ಸಮನಾದ ಮೈಲೇಜ್ ನೀಡುತ್ತೆ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರು.. ಬಿಡುಗಡೆ ಯಾವಾಗ?

ಹಲವರಿಗೆ ಈ ಕಾರು, ಎಷ್ಟು ಮೈಲೇಜ್ ನೀಡುತ್ತದೆ ಎಂಬ ಕುತೂಹಲವಿರಬಹುದು. ಬಹುತೇಕ ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಬರುವ ನೀರಿಕ್ಷೆ ಇರುವುದರಿಂದ ಸರಿ ಸುಮಾರು 35 ರಿಂದ 40 kmpl ಮೈಲೇಜ್ ನೀಡಬಹುದು. ಆಗೊಮ್ಮೆ ಇದು ಸಾದ್ಯವಾದರೆ, ಮಾರುತಿ ಸುಜುಕಿ ಸ್ವಿಫ್ಟ್ ಅತಿಹೆಚ್ಚು ಮೈಲೇಜ್ ನೀಡುವ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಬೆಲೆ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೂ ಕೈಗೆಟುಕುವ ದರದಲ್ಲಿ ಸಿಗಲಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ರೂ.5.99 ಲಕ್ಷದಿಂದ ರೂ.9.03 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದರ 1.2 ಲೀಟರ್ ಡುಯೆಲ್ ಜೆಟ್ ಪೆಟ್ರೋಲ್ ಎಂಜಿನ್ 90 PS ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್/ AMT ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

Maruti Swift: ಬೈಕ್‌ಗೆ ಸರಿ ಸಮನಾದ ಮೈಲೇಜ್ ನೀಡುತ್ತೆ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರು.. ಬಿಡುಗಡೆ ಯಾವಾಗ?

CNG ಕಿಟ್ ಹೊಂದಿರುವ ಕಾರು, 77.5 PS ಗರಿಷ್ಠ ಪವರ್ ಹಾಗೂ 98.5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಈ ಕಾರು, 22.38 - 22.56 kmpl ಮೈಲೇಜ್ ನೀಡುತ್ತದೆ. ವೈಶಿಷ್ಟ್ಯದ ವಿಚಾರದಲ್ಲೂ ಹೆಚ್ಚು ಆಕರ್ಷಣೀಯವಾಗಿದ್ದು, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆಟೋ ಎಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯೆಲ್ ಫ್ರಂಟ್ ಏರ್ ಬ್ಯಾಗ್ ಹೊಂದಿದೆ.

ಒಟ್ಟಾರೆ, ಮಾರುತಿ ಸುಜುಕಿ ಹೊಸ ತಲೆಮಾರಿನ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ಮುಂದಿನ ವರ್ಷ ಬಿಡುಗಡೆ ಮಾಡಲಿದ್ದು, ಇದು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುವುದರಿಂದ ಗ್ರಾಹಕರು ದೊಡ್ಡಮಟ್ಟದಲ್ಲಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಲಾಂಚ್ ಆದ ಮೇಲೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ. ಹಾಗೆಯೇ ಪ್ರತಿಸ್ಪರ್ಧಿ ಕಂಪನಿ ಕಾರುಗಳಿಗೆ ಹೇಗೆ ಪೈಪೋಟಿ ನೀಡಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

Article Published On: Wednesday, May 24, 2023, 13:51 [IST]
English summary
Maruti suzuki swift coming in 2024 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+