Maruti Suzuki: ಬೇಡಿಕೆಗೆ ಅನುಗುಣವಾಗಿ 2024 ರಲ್ಲಿ 3 ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಮಾರುತಿ!

ಭಾರತದಲ್ಲಿ ಅಗ್ಗದ ಬೆಲೆಗೆ ಹಲವು ಕಾರುಗಳನ್ನು ಪರಿಚಯಿಸಿರುವ ಮಾರುತಿ ಸುಜುಕಿ (Maruti Suzuki) ಬಹುತೇಕ ವಿಭಾಗಗಳಲ್ಲಿ ತನ್ನ ಅಧಿಪತ್ಯವನ್ನು ಮುಂದುವರೆಸಿದೆ. ಆದ್ರೆ ಇತ್ತೀಚೆಗೆ ಇತರ ಬ್ರಾಂಡ್‌ಗಳು ಕೂಡ ಸ್ಪರ್ಧಾತ್ಮಕ ಬೆಲೆಯಲ್ಲಿ ಕಾರುಗಳನ್ನು ಬಿಡುಗಡೆ ಮಾಡಿರುವುದರಿಂದ ಪೈಪೋಟಿ ಹೆಚ್ಚಾಗಿದೆ. ಹಾಗಾಗಿ ಮಾರುತಿ ಸುಜುಕಿ ಆಕ್ರಮಣಕಾರಿ ಉತ್ಪನ್ನ ತಂತ್ರವನ್ನು ಅಳವಡಿಸಿಕೊಳ್ಳಲು ಸಿದ್ಧವಾಗಿದೆ.

ಇತ್ತೀಚಿನ ಸಂದರ್ಶನವೊಂದರಲ್ಲಿ Maruti Suzuki ಅಧ್ಯಕ್ಷ ಆರ್.ಸಿ ಭಾರ್ಗವ ಮಾತನಾಡಿ, 2031 ರ ವೇಳೆಗೆ ಐದು ಹೊಸ ICE (ಇಂಧನ ಚಾಲಿತ ವಾಹನಗಳು ಅಥವಾ ಆಂತರಿಕ ದಹನಕಾರಿ ಎಂಜಿನ್) ಮಾದರಿಗಳನ್ನು ಪರಿಚಯಿಸಲಾಗುವುದು ಎಂದು ಅವರು ಹೇಳಿದರು. ಅಂತೆಯೇ, ಭಾರ್ಗವ ಅವರು ತಮ್ಮ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸುವ ಯೋಜನೆಯನ್ನು ಕೂಡ ಬಹಿರಂಗಪಡಿಸಿದ್ದರು.

maruti-suzuki-to-launch-3-new-cars-in-2024-details

ಆದರೆ ಯಾವ ಮಾಡೆಲ್‌ಗಳು ಬರಲಿವೆ ಎಂಬುದು ಇನ್ನೂ ದೃಢಪಟ್ಟಿಲ್ಲ. ನಮ್ಮ ಪ್ರಕಾರ 3 ಸಾಲಿನ ಹೊಸ SUV ಅನ್ನು ಪರಿಚಯಿಸುವ ಸಾಧ್ಯತೆಯಿದೆ. ಕೆಲವು ಊಹಾಪೋಹಗಳ ಪ್ರಕಾರ ಮಾರುತಿ ಸುಜುಕಿ 7 ಆಸನಗಳ ಎಸ್‌ಯುವಿಯನ್ನು ಸಿದ್ಧಪಡಿಸುತ್ತಿದೆ. ಇದು ಗ್ರ್ಯಾಂಡ್ ವಿಟಾರಾ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರಬಹುದು.

ಈ ಮಾದರಿಯು ಪವರ್‌ಟ್ರೇನ್ ಜೊತೆಗೆ ಗ್ರ್ಯಾಂಡ್ ವಿಟಾರಾದಂತೆ ಅದೇ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಹೆಚ್ಚಿನ ಸ್ಥಳಾವಕಾಶದೊಂದಿಗೆ ದೊಡ್ಡ ಇಂಟೀರಿಯರ್ ಅನ್ನು ಪಡೆದುಕೊಳ್ಳಲಿದೆ. ಸದ್ಯ ಈಗಿರುವ ಮಾರುತಿ ಗ್ರ್ಯಾಂಡ್ ವಿಟಾರಾ 1.5L K15C ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಅಥವಾ 1.5L ಅಟ್ಕಿನ್ಸನ್ ಸೈಕಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಇದು ಕ್ರಮವಾಗಿ 103bhp ಮತ್ತು 115bhp ಪವರ್ ಉತ್ಪಾದಿಸುತ್ತದೆ.

maruti-suzuki-to-launch-3-new-cars-in-2024-details

ಮುಂಬರಲಿರುವ ಹೊಸ 3-ಸಾಲಿನ SUV ಅನ್ನು ಮಾರುತಿ ಸುಜುಕಿಯ ಇತ್ತೀಚೆಗೆ ಸ್ಥಾಪಿಸಲಾದ ಖಾರ್ಖೋಡಾ ಸೌಲಭ್ಯದಲ್ಲಿ ತಯಾರಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ 7-ಆಸನಗಳ SUV ಬಿಡುಗಡೆಯಾದ ನಂತರ ಹ್ಯುಂಡೈ ಅಲ್ಕಾಜರ್ ಮತ್ತು ಮಹೀಂದ್ರಾ XUV700 ನೊಂದಿಗೆ ಸ್ಪರ್ಧಿಸುತ್ತದೆ. ಸದ್ಯಕ್ಕೆ ಇದು ಕೇವಲ ಊಹಾಪೋಹವಾಗಿದ್ದು, ಕಂಪನಿಯು ಇದನ್ನು ಇನ್ನೂ ದೃಢಪಡಿಸಿಲ್ಲ.

ಈ ದೊಡ್ಡ ಎಸ್‌ಯುವಿ ಜೊತೆಗೆ ಹೊಸ ಹ್ಯಾಚ್‌ಬ್ಯಾಕ್, ಮೈಕ್ರೋ SUV ಮತ್ತು ಕೈಗೆಟುಕುವ MPV ಅನ್ನು ಕೂಡ ತರಲಿದ್ದು, ಈ ಎಂಪಿವಿ Kia Carens ವಿರುದ್ಧ ಸ್ಪರ್ಧಿಸಲು ಪರಿಚಯಿಸಬಹುದು. ಇದರ ಬೆಲೆ ಸುಮಾರು 10.45 ಲಕ್ಷದಿಂದ 19.45 ಲಕ್ಷ ರೂ. ನಡುವೆ ಇರಬಹುದು. ಇನ್ನು ಹ್ಯಾಚ್‌ಬ್ಯಾಕ್ ಮತ್ತು ಮೈಕ್ರೋ ಎಸ್‌ಯುವಿಯನ್ನು ಸಹ ಬಿಡುಗಡೆ ಮಾಡಲು ಯೋಜಿಸುತ್ತಿದೆ.

maruti-suzuki-to-launch-3-new-cars-in-2024-details

ಇದನ್ನು ಬಹುಶಃ ಸೆಲೆರಿಯೊ, ಆಲ್ಟೊಗೆ ಉತ್ತರಾಧಿಕಾರಿಯಾಗಿ ತರಲಾಗುವುದು. ಇದು ಹುಂಡೈ ಎಕ್ಸ್‌ಸೆಂಟ್ ಮತ್ತು ಟಾಟಾ ಪಂಚ್‌ಗೆ ಪೈಪೋಟಿ ನೀಡಲಿದೆ. ಇವುಗಳ ಜೊತೆಗೆ ಮುಂದಿನ ವರ್ಷ ಇನ್ನೂ 3 ಹೊಸ ಕಾರುಗಳನ್ನು ಮಾರುತಿ ಸುಜುಕಿ ಪರಿಚಯಿಸಲು ತಯಾರಿ ನಡೆಸುತ್ತಿದೆ. ಇವುಗಳಲ್ಲಿ ಮುಂದಿನ ಪೀಳಿಗೆಯ ಸ್ವಿಫ್ಟ್, ಡಿಜೈರ್ ಮತ್ತು EVX ಪರಿಕಲ್ಪನೆ ಆಧಾರಿತ ಎಲೆಕ್ಟ್ರಿಕ್ SUV ಸೇರಿವೆ.

ಹೊಸ ಸ್ವಿಫ್ಟ್ ಮತ್ತು ಡಿಜೈರ್ ಮಾದರಿಗಳು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ. EVX ಎಲೆಕ್ಟ್ರಿಕ್ SUV ಅಕ್ಟೋಬರ್ ಅಥವಾ ನವೆಂಬರ್ 2024 ರ ವೇಳೆಗೆ ಬಿಡುಗಡೆಯಾಗಲಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಮಾರುತಿ ಸುಜುಕಿಯ ಮೊದಲ ಇವಿ ಕಾರಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮಾರುತಿಯ ಮೊದಲ ಇವಿ ದೇಶದಲ್ಲಿ ಅತ್ಯಂತ ಕೈಗೆಟುಕುವ ಇವಿ ಕಾರಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, December 4, 2023, 15:37 [IST]
English summary
Maruti suzuki to launch 3 new cars in 2024 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+