40 ಕಿ.ಮೀ ಮೈಲೇಜ್, ಅಗ್ಗದ ಬೆಲೆಯಲ್ಲಿ ಬರುತ್ತಿವೆ ಮಾರುತಿ ಕಾರುಗಳು: ಬೈಕ್‌ಗಳಿಗೆ ಪೈಪೋಟಿ ನೀಡುತ್ತಾ?

ಜನಪ್ರಿಯ ಮತ್ತು ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಪಾರುಪತ್ಯ ಸಾಧಿಸಿದೆ. ಮಾರುತಿ ಸುಜುಕಿ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರತಿ ಮಾಸಿಕ ಪ್ರಯಾಣಿಕ ಕಾರು ಮಾರಾಟ ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿದೆ.

ಮಾರುತಿ ಸುಜುಕಿ (Maruti Suzuki) ತನ್ನ ಹೊಸ ಮಾರುತಿ ಎಂಗೇಜ್ (Maruti Engage) ಕಾರನ್ನು ಜುಲೈ 5 ರಂದು ಬಿಡುಗಡೆಗೊಳಿಸುವುದಾಗಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಇದು ಟೊಯೊಟಾ ಇನೋವಾ ಹೈಕ್ರಾಸ್‌ನ ಬ್ಯಾಡ್ಜ್-ಇಂಜಿನಿಯರಿಂಗ್ ಆವೃತ್ತಿಯಾದ ಇನ್ವಿಕ್ಟೋ ಪ್ರೀಮಿಯಂ ಎಂಪಿವಿಯಾಗಿದೆ. ಇದು ಗ್ರ್ಯಾಂಡ್ ವಿಟಾರಾ ಎಸ್‍ಯುವಿಯ ಮೇಲಿನ ಸ್ಥಾನದಲ್ಲಿರುತ್ತದೆ. ಇನ್ನು ಇತ್ತೀಚೆಗೆ ಮಾರುತಿ ಸುಜುಕಿ ಕಂಪನಿಯು ಫ್ರಾಂಕ್ಸ್ ಕಾಂಪ್ಯಾಕ್ಟ್ ಎಸ್‌ಯುವಿ ಕೂಪ್ ಮತ್ತು ಜಿಮ್ನಿ ಲೈಫ್‌ಸ್ಟೈಲ್ ಆಫ್-ರೋಡ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತು.

Maruti Suzuki

ಇನ್ನು ಬಿಡುಗಡೆಯಾಗಲಿರುವ ಮಾರುತಿ ಇನ್ವಿಕ್ಟೋ ಎರಡೂವರೆ ತಿಂಗಳ ಅವಧಿಯಲ್ಲಿ ಬ್ರ್ಯಾಂಡ್‌ನ ಮೂರನೇ ಹೊಸ ಕಾರು ಆಗಿರುತ್ತದೆ. ಈ ಹೊಸ ಮಾರುತಿ ಸುಜುಕಿ ಇನ್ವಿಕ್ಟೊ ನಂತರ, ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಮತ್ತು ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ಮತ್ತು ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ 2024 ರಲ್ಲಿ ಬಿಡುಗಡೆಯಾಗಲಿವೆ. ಮುಂದಿನ ವರ್ಷ ಬಿಡುಗಡೆಯಾಗಲಿರುವ ಈ ಎರಡೂ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

ನ್ಯೂ ಜನರೇಷನ್ ಮಾರುತಿ ಸುಜುಕಿ ಸ್ವಿಫ್ಟ್: ಮುಂಬರುವ ಸ್ವಿಫ್ಟ್ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಬಾಹ್ಯ ಮತ್ತು ಒಳಭಾಗವನ್ನು ಹೊಂದಿರುತ್ತದೆ. ಈ ಕಾರು ವಿದೇಶದಲ್ಲಿ ಹಲವಾರು ಬಾರಿ ಪರೀಕ್ಷೆಗೆ ಒಳಗಾಗಿದೆ. ಈ ವರ್ಷದ ಅಂತ್ಯದ ಮೊದಲು ಅಥವಾ 2024 ರ ಆರಂಭದಲ್ಲಿ ಜಪಾನ್‌ನಲ್ಲಿ ಜಾಗತಿಕವಾಗಿ ಚೊಚ್ಚಲ ಪ್ರವೇಶ ಮಾಡಲಿದೆ. ಮುಂದಿನ ಕ್ಯಾಲೆಂಡರ್ ವರ್ಷದ ಮೊದಲಾರ್ಧದಲ್ಲಿ ಭಾರತದಲ್ಲಿ ಇದನ್ನು ಬಿಡುಗಡೆಗೊಳಿಸಬಹುದು.

Maruti Suzuki

ಈ ನ್ಯೂ ಜನರೇಷನ್ ಮಾರುತಿ ಸುಜುಕಿ ಸ್ವಿಫ್ಟ್ ಕಾರು 1.2 ಲೀಟರ್ ಮೂರು-ಸಿಲಿಂಡರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಶ್ರೇಣಿಯನ್ನು ಸೇರುತ್ತದೆ. ಈ ಕಾರಿನ ಮಿಡ್ ಸ್ಪೆಕ್ ಮತ್ತು ಟಾಪ್-ಎಂಡ್ ರೂಪಾಂತರಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಅಸ್ತಿತ್ವದಲ್ಲಿರುವ ಗ್ಯಾಸೋಲಿನ್ ಎಂಜಿನ್ ಅನ್ನು ಮುಂದುವರೆಸಬಹುದು. ಈ ಎಂಜಿನ್ ಅನ್ನು ಐದು-ಸ್ಪೀಡ್ ಗೇರ್ ಬಾಕ್ಸ್ ಮತ್ತು ಐದು-ಸ್ಪೀಡ್ AMT ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ನ್ಯೂ ಜನರೇಷನ್ ಮಾರುತಿ ಡಿಜೈರ್: ಸ್ವಿಫ್ಟ್‌ನಂತೆಯೇ, ನ್ಯೂ ಜನರೇಷನ್ ಡಿಜೈರ್ ಕಾರು ಒಳಗೆ ಮತ್ತು ಹೊರಗೆ ಪ್ರಮುಖ ಕೂಲಂಕುಷ ಪರೀಕ್ಷೆಗೆ ಒಳಪಡುತ್ತದೆ. ಇದು ಹ್ಯಾಚ್‌ಬ್ಯಾಕ್ ಸಹೋದರರೊಂದಿಗೆ ಹೋಲಿಕೆಗಳನ್ನು ಹೊಂದಿರುತ್ತದೆ. ಮೂರನೇ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ 2024 ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಲಿದೆ. 2024ರ ಸ್ವಿಫ್ಟ್‌ನಲ್ಲಿ ಚೊಚ್ಚಲವಾಗಲಿರುವ ಅದೇ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಅನ್ನು ಬಳಸುತ್ತದೆ.

Maruti Suzuki

ಈ ಎರಡೂ ಕಾರುಗಳಲ್ಲಿ, ಹೊಸ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನಗಳ ಸೇರ್ಪಡೆಯೊಂದಿಗೆ ಒಳಾಂಗಣವು ಹೆಚ್ಚು ದುಬಾರಿಯಾಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ 35-40 ಕಿ.ಮೀ ನಷ್ಟು ಮೈಲೇಜ್ ಅನ್ನು ನೀಡಬಹುದು. ಇದು ಅತ್ಯಂತ ಉತ್ತಮ ಮೈಲೇಜ್ ಆಗಿರುತ್ತದೆ. ಇದರಿಂದ ಈ ಎರಡೂ ಕಾರುಗಳು ಗ್ರಾಹಕರ ಗಮನಸೆಳೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತೇವೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ನೀವು ಮರೆಯಾಬೇಡಿ.

Article Published On: Wednesday, June 21, 2023, 16:00 [IST]
English summary
Maruti suzuki upcoming cars new gen swift and dzire details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+