ಸುರಕ್ಷತೆಯಲ್ಲಿ 0 ಸ್ಟಾರ್... ಆದರೆ ಮಾರಾಟದಲ್ಲಿ ನಂ1 ಸ್ಥಾನದಲ್ಲಿ ನಿಂತ ಕಾರು... ಟಾಟಾ, ಹ್ಯುಂಡೈಗೆ ಶಾಕ್!

ಇತ್ತೀಚಿನ ದಿನಗಳಲ್ಲಿ ಜನರು ಸುರಕ್ಷಿತ ಕಾರುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. 5 ಸ್ಟಾರ್ ರೇಟಿಂಗ್ ಇರುವ ಕಾರುಗಳನ್ನು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ಆದರೆ ಇಲ್ಲೊಂದು ಕಾರಿಗೆ ಸುರಕ್ಷತೆಯಲ್ಲಿ ಶೂನ್ಯ ರೇಟಿಂಗ್ ಇದೆ, ಆದರೂ ಮಾರಾಟ ಭರದಿಂದ ಸಾಗುತ್ತಿದೆ. 5-ಸ್ಟಾರ್ ರೇಟಿಂಗ್ ಕಾರುಗಳು ಕೂಡ ಇದರ ಪೈಪೋಟಿಯನ್ನು ಎದುರಿಸಲಾಗುತ್ತಿಲ್ಲ.

ದೇಶದಲ್ಲಿ ಜನರು ಕಾರಿನಲ್ಲಿ ಹೆಚ್ಚಿನ ಫೀಚರ್ಸ್, ಮೈಲೇಜ್ ಜೊತೆಗೆ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆಯೂ ಕೇಳುತ್ತಿದ್ದಾರೆ. ಈ ಕಾರಣದಿಂದಾಗಿಯೇ ಭಾರತದಲ್ಲಿ ಟಾಟಾ ಮೋಟಾರ್ಸ್ ಕಾರುಗಳ ಮಾರಾಟ ಹೆಚ್ಚಾಗಿದೆ. ಭಾರತ್ ಬಿ-ಎನ್‌ಸಿಎಪಿ ಬುಧವಾರ ನಡೆಸಿದ ಕ್ರ್ಯಾಶ್ ಟೆಸ್ಟ್‌ನಲ್ಲಿ ಟಾಟಾದ ಎರಡು ಕಾರುಗಳಾದ ಸಫಾರಿ ಮತ್ತು ಹ್ಯಾರಿಯರ್ ಎಸ್‌ಯುವಿಗಳು ಅತ್ಯಂತ ಸುರಕ್ಷಿತ ಕಾರುಗಳಾಗಿ ಹೊರಹೊಮ್ಮಿವೆ.

maruti-suzuki-wagonr-0-star-in-safety-but-number-1-in-sales-details

ಹ್ಯುಂಡೈನ ಹೊಸ ತಲೆಮಾರಿನ ವರ್ನಾ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್‌ ಸಾಧಿಸಿದೆ. ಆದರೆ ಟಾಟಾ ಮತ್ತು ಹ್ಯುಂಡೈ ಎಷ್ಟೇ ಸುರಕ್ಷತೆ ನೀಡಿದರೂ ಮಾರಾಟದ ವಿಷಯದಲ್ಲಿ ಮಾರುತಿ ಕಾರುಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಭಾರತದಲ್ಲಿ, ಟಾಟಾ ಮೋಟಾರ್ಸ್ ಬಜೆಟ್ ವಿಭಾಗದಲ್ಲಿಯೂ ಟಿಯಾಗೊ, ಟಿಗೊರ್, ಪಂಚ್‌ನಂತಹ ಸುರಕ್ಷಿತ ಕಾರುಗಳನ್ನು ತಯಾರಿಸುತ್ತಿದೆ.

ಆದರೆ ಇಂದಿಗೂ ಮಾರುತಿ ವ್ಯಾಗನಾರ್‌ನಂತಹ ಕಾರುಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಸುರಕ್ಷಿತ ಕಾರುಗಳಲ್ಲದಿದ್ದರೂ ಸಹ, ಬಜೆಟ್ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸುತ್ತಲೇ ಇವೆ. ಮಾಹಿತಿಯ ಪ್ರಕಾರ, ವ್ಯಾಗನ್ಆರ್ ಕಳೆದ ನವೆಂಬರ್‌ನಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರಾಗಿ ದಾಖಲೆ ನಿರ್ಮಿಸಿದೆ. ಕಂಪನಿಯು 16,567 ಯೂನಿಟ್‌ಗಳನ್ನು ಮಾರಾಟ ಮಾಡಿದ್ದು, ಶೇ13 ರಷ್ಟು ವಾರ್ಷಿಕ ಬೆಳವಣಿಗೆ ಸಾಧಿಸಿದೆ.

maruti-suzuki-wagonr-0-star-in-safety-but-number-1-in-sales-details

ಟಾಲ್ ಬಾಯ್ ಎಂದು ಜನಪ್ರಿಯತೆ: ವ್ಯಾಗನ್ಆರ್ ಸಾಕಷ್ಟು ಹೆಡ್‌ರೂಮ್ ಮತ್ತು ಲೆಗ್‌ರೂಮ್ ನೀಡುತ್ತದೆ. ಕಂಪನಿಯು ತನ್ನ ಮೂಲ ಮಾದರಿಗಳಲ್ಲಿ 1.0 ಲೀಟರ್ ಸರಣಿಯ ಎಂಜಿನ್ ಅನ್ನು ನೀಡುತ್ತದೆ. ಉನ್ನತ ಮಾದರಿಗಳು 1.2 ಲೀಟರ್ ಎಂಜಿನ್‌ನೊಂದಿಗೆ ಬರುತ್ತವೆ. ಕಾರು 1.0 ಲೀಟರ್ ಸಿಎನ್‌ಜಿ ಆಯ್ಕೆಯೊಂದಿಗೂ ಲಭ್ಯವಿದೆ.

ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 88.5 bhp ಪವರ್ ಮತ್ತು 113 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವ್ಯಾಗನ್ಆರ್ ಮೈಲೇಜ್ ಕೂಡ ತುಂಬಾ ಚೆನ್ನಾಗಿದೆ. ಈ ಕಾರು ಪೆಟ್ರೋಲ್ ಎಂಜಿನ್‌ನಲ್ಲಿ 25 Kmpl ಮೈಲೇಜ್ ನೀಡುತ್ತದೆ, CNG ನಲ್ಲಿ 35 Km/Kg ಮೈಲೇಜ್ ನೀಡುತ್ತದೆ.

maruti-suzuki-wagonr-0-star-in-safety-but-number-1-in-sales-details

ಸುರಕ್ಷತೆಯಲ್ಲಿ 0 ಸ್ಟಾರ್: ಗ್ಲೋಬಲ್ ಎನ್‌ಸಿಎಪಿ ಪ್ರಕಾರ, ಮಾರುತಿ ವ್ಯಾಗನ್ಆರ್ ಕ್ರ್ಯಾಶ್ ಟೆಸ್ಟ್‌ನಲ್ಲಿ ಕೇವಲ 1 ಸ್ಟಾರ್ ರೇಟಿಂಗ್ ಗಳಿಸಿದೆ. ವ್ಯಾಗನ್ಆರ್ ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ 0 ಸ್ಟಾರ್ ಮತ್ತು ಮಕ್ಕಳ ಸುರಕ್ಷತೆಯಲ್ಲಿ 1 ಸ್ಟಾರ್ ರೇಟಿಂಗ್ ಪಡೆದಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ವ್ಯಾಗನ್ಆರ್ ಮಾದರಿಗಳ ತೂಕವು 835-850 ಕೆಜಿಯಷ್ಟಿದ್ದರೆ, 4 ಸ್ಟಾರ್ ರೇಟಿಂಗ್ ಪಡೆದಿರುವ ಟಾಟಾ ಟಿಗೊರ್ 992 ಕೆ.ಜಿ ತೂಕವನ್ನು ಹೊಂದಿದೆ.

ಬೆಲೆ, ವೈಶಿಷ್ಟ್ಯಗಳು: ವ್ಯಾಗನ್ಆರ್ 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 4-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್ಸ್ ಮತ್ತು ಸ್ಮಾರ್ಟ್‌ಫೋನ್ ನ್ಯಾವಿಗೇಷನ್‌ನೊಂದಿಗೆ ಬರುತ್ತದೆ. ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಹೋಲ್ಡ್ ಅಸಿಸ್ಟ್ ಪ್ರಯಾಣಿಕರ ಸುರಕ್ಷತೆಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

maruti-suzuki-wagonr-0-star-in-safety-but-number-1-in-sales-details

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, December 27, 2023, 12:00 [IST]
English summary
Maruti suzuki wagonr 0 star in safety but number 1 in sales details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+