2024 ಮಾರುತಿ ಸ್ವಿಫ್ಟ್ 40 ಕಿ.ಮೀ ಮೈಲೇಜ್ ನಿಜವೇ? ಹೌದು ಇದೆಲ್ಲಾ ಹೊಸ ಎಂಜಿನ್ ಮಹಿಮೆ!

ಮಾರುತಿ ಸುಜುಕಿ ತನ್ನ ಮುಂಬರುವ ಹೊಸ ಜನ್ ಸ್ವಿಫ್ಟ್ ಮೂಲಕ ವಾಹನ ರಂಗದಲ್ಲಿ ಹೊಸ ಅಲೆಯನ್ನು ಎಬ್ಬಿಸಲು ಸಜ್ಜಾಗುತ್ತಿದೆ. ಮಾರುತಿ ಅವರು ಈ ಹ್ಯಾಚ್‌ಬ್ಯಾಕ್ ಅನ್ನು 2024 ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈಗಾಗಲೇ ಪರೀಕ್ಷಾ ಮಾದರಿಯನ್ನು ದೇಶದ ಹಲವೆಡೆ ಪರೀಕ್ಷಿಸಲಾಗಿದೆ. ಇದೀಗ ಬಿಡುಗಡೆಗೆ ಸಜ್ಜಾಗಿದೆ ಎಂದು ಹೇಳಬಹುದು.

ಮುಂಬರಲಿರುವ ಮಾರುತಿ ಸ್ವಿಫ್ಟ್ ಹೆಚ್ಚಾಗಿ ಸದ್ದು ಮಾಡುತ್ತಿರುವುದು ಅದರ ಮೈಲೇಜ್‌ನಿಂದಾಗಿಯೇ, ಮೂಲಗಳ ಪ್ರಕಾರ ಈ ಕಾರು ಪರೀಕ್ಷೆಯಲ್ಲಿ ಬರೋಬ್ಬರಿ 40km/l ಮೈಲೇಜ್ ಅನ್ನು ಹಿಂದಿರುಗಿಸಿದೆ ಎಂದು ವರದಿಯಾಗಿದೆ. ಮಾರುತಿ ಸ್ವಿಫ್ಟ್‌ನ ಈ ಬೆರಗುಗೊಳಿಸುವ ಮೈಲೇಜ್‌ಗೆ ಪ್ರಮುಖ ಕಾರಣವೆಂದರೆ ಅದರ ಹೊಸ ಪವರ್‌ಟ್ರೇನ್.

maruti-swift-2024-40-km-mileage-z12-engine-info

ಈ ಹೊಸ ಪವರ್‌ಟ್ರೇನ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನ ಈಗಿರುವ ಎಂಜಿನ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಮಾರಾಟದಲ್ಲಿರುವ ಸ್ವಿಫ್ಟ್ ಎಂಜಿನ್‌ಗೆ ಸುಧೀರ್ಘ ಇತಿಹಾಸವಿದೆ. ಇದು 1.2-ಲೀಟರ್ 4-ಸಿಲಿಂಡರ್, ನ್ಯಾಚುರಲ್ಲಿ-ಆಸ್ಪಿರೇ ಟೆಡ್ K12 ಪೆಟ್ರೋಲ್ ಎಂಜಿನ್ ಆಗಿದ್ದು, 2010 ರಲ್ಲಿ ಮೊದಲ-ಜನ್ ಮಾರುತಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನಲ್ಲಿ ಪರಿಚಯಿಸಲಾಯಿತು.

ಸುಧೀರ್ಘ ವರ್ಷಗಳ ನಂತರ ಅದರ ಜಾಗದಲ್ಲಿ ಈಗ ಹೊಸ 1.2-ಲೀಟರ್, 3-ಸಿಲಿಂಡರ್, ನ್ಯಾಚುರಲ್ಲಿ-ಆಸ್ಪಿರೇಟೆಡ್ Z12 ಪೆಟ್ರೋಲ್ ಎಂಜಿನ್ ಬರುತ್ತಿದೆ. ಇಲ್ಲಿ ಮುಖ್ಯವಾಗಿ ನೀವು ಗಮನಿಸಬೇಕಾದ ಸಂಗತಿಯೆಂದರೆ ಮುಂಬರುವ ಸ್ವಿಫ್ಟ್ ಈಗಿರುವ ಸ್ವಿಫ್ಟ್ ಎಂಜಿನ್‌ಗೆ ಹೋಲಿಸಿದರೆ ಒಂದು ಸಿಲಿಂಡರ್ ಕಡಿಮೆಯಾಗಿದೆ. ಆದ್ರೂ ಅದೇ ಸಾಮರ್ಥ್ಯವನ್ನು ಹೊಂದಿದೆ.

maruti-swift-2024-40-km-mileage-z12-engine-info

ಹೊಸ Z12 ಎಂಜಿನ್ ಕಡಿಮೆ ಸಿಲಿಂಡರ್‌ಗಳೊಂದಿಗೆ ಒಂದೇ ರೀತಿಯ ಸಾಮರ್ಥ್ಯವನ್ನು ಹೊಂದಿರುವುದರಿಂದ, ಎಂಜಿನ್ ಉತ್ತಮ ವಾಲ್ಯೂಮೆಟ್ರಿಕ್ ದಕ್ಷತೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಇದು ಹಳೆಯ 4-ಸಿಲಿಂಡರ್ ಎಂಜಿನ್‌ಗೆ ಹೋಲಿಸಿದರೆ ಉತ್ತಮ ಟಾರ್ಕ್ ಔಟ್‌ಪುಟ್‌ ಜೊತೆಗೆ 3-ಸಿಲಿಂಡರ್ ಎಂಜಿನ್ ಆಗಿರುವುದರಿಂದ, ಹೊಸ Z12 ಎಂಜಿನ್ ಈಗಿರುವ ಮಾರುತಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನಲ್ಲಿರುವ K12 ಎಂಜಿನ್‌ಗಿಂತ ಹಗುರವಾಗಿರುತ್ತದೆ.

Z12 ಎಂಜಿನ್‌ನ ಈ ಹಗುರವಾದ ತೂಕ ಮತ್ತು ಉತ್ತಮ ಟಾರ್ಕ್‌ನಿಂದಾಗಿ 2024 ರ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನ ಕಾರ್ಯಕ್ಷಮತೆ ಮತ್ತು ದಕ್ಷತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. Z12 ಎಂಜಿನ್ ನ್ಯೂನತೆಗಳಿಲ್ಲ. 3-ಸಿಲಿಂಡರ್ ಎಂಜಿನ್ ಆಗಿರುವುದರಿಂದ, Z12 ಎಂಜಿನ್ ಹೆಚ್ಚಿದ ಕಂಪನಗಳನ್ನು ಹೊಂದಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

maruti-swift-2024-40-km-mileage-z12-engine-info

ಮೂಲಗಳ ಪ್ರಕಾರ, 2024 ರ ಮಾರುತಿ ಸುಜುಕಿ ಸ್ವಿಫ್ಟ್‌ನಲ್ಲಿ ಮುಂಬರುವ Z12 ಎಂಜಿನ್ ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ನೀಡುವ ನಿರೀಕ್ಷೆಯಿಲ್ಲ. ಏಕೆಂದರೆ, ಯಾವುದೇ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವು ಎಂಜಿನ್‌ನ ಉತ್ಪಾದನಾ ವೆಚ್ಚವನ್ನು ಹೆಚ್ಚಿಸುತ್ತದೆ. ಹಾಗಾಗಿ ಕಂಪನಿ ಕೂಡ ಈ ಆಯ್ಕೆಯನ್ನು ನೀಡುವುದಿಲ್ಲ ಎನ್ನಲಾಗಿದೆ.

ಹೊಸ Z12 ಎಂಜಿನ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನಲ್ಲಿ K12 ಸರಣಿಯ ಎಂಜಿನ್‌ನ ಅದೇ ಸ್ವಭಾವವನ್ನು ನಾವು ಕಳೆದುಕೊಳ್ಳುತ್ತೇವೆಯಾದರೂ, ಹೆಚ್ಚಿನ ಭಾರತೀಯ ಗ್ರಾಹಕರು ಹೊಸ Z12 ಎಂಜಿನ್‌ನಿಂದ ನೀಡಲಾದ ಹೆಚ್ಚುವರಿ ಟಾರ್ಕ್ ಮತ್ತು ಮೈಲೇಜ್ ಅಂಕಿಅಂಶವನ್ನು ಮೆಚ್ಚುತ್ತಾರೆ ಎಂದು ಕಂಪನಿ ಭಾವಿಸಿದೆ. ಆದರೆ ಇದು ಯಾವಮಟ್ಟಿಗೆ ಯಶಸ್ವಿಯಾಗಲಿದೆ ಕಾದುನೋಡಬೇಕಿದೆ.

maruti-swift-2024-40-km-mileage-z12-engine-info

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, November 11, 2023, 12:54 [IST]
English summary
Maruti swift 2024 40 km mileage z12 engine info
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+