ಅತ್ಯಧಿಕ ಮೈಲೇಜ್, ಹೈಬ್ರಿಡ್ ಎಂಜಿನ್‌, ಹೊಸ ವಿನ್ಯಾಸದೊಂದಿಗೆ ಬರಲಿದೆ ಮಾರುತಿ ಸ್ವಿಫ್ಟ್

ಮಾರುತಿ ಸುಜುಕಿ ಸದ್ಯ ದೇಶದಲ್ಲಿ ತನ್ನ ಬಹುತೇಕ ಮಾದರಿಗಳನ್ನು ಹೈಬ್ರಿಡ್ ಎಂಜಿನ್‌ನೊಂದಿಗೆ ತರಲು ಸಜ್ಜಾಗುತ್ತಿದೆ. ಈ ಹಿಂದೆ ಭಾರತೀಯ ಮಾರಿಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಸ್ವಿಫ್ಟ್ ಮಾದರಿಯನ್ನು 2024 ರಲ್ಲಿ ಹಲವು ಬದಲಾವಣೆಗಳನ್ನು ಮಾಡಿ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಯಾವೆಲ್ಲಾ ಬದಲಾವಣೆಗಳನ್ನು ನಿರೀಕ್ಷಿಸಬಹುದು ಎಂಬುದನ್ನು ಇಲ್ಲಿ ನೋಡೋಣ.

ಹೊಸ ಸ್ವಿಫ್ಟ್ ಅನ್ನು ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರೋಬ್ಬರಿ 35 ಕಿ.ಮೀ.ಗಿಂತ ಹೆಚ್ಚಿನ ಇಂಧನ ದಕ್ಷತೆಯೊಂದಿಗೆ ನೀಡಲಾಗುವುದು ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇದನ್ನು ವೈಶಿಷ್ಟ್ಯ-ಸಮೃದ್ಧ ಪ್ಯಾಕೇಜ್‌ನೊಂದಿಗೆ ನೀಡಲಾಗುತ್ತದೆ. 2024 ರ ಆರಂಭದಲ್ಲಿ ಪಾದಾರ್ಪಣೆ ಮಾಡುವ ಸಾಧ್ಯತೆಯಿರುವ ಹೊಸ-ಜನ್ ಸ್ವಿಫ್ಟ್ ಅನ್ನು ಸಂಪೂರ್ಣವಾಗಿ ಹೊಸ ಬಾಹ್ಯ ಸ್ಟೈಲಿಂಗ್ ಮತ್ತು ಆಕರ್ಷಕ ಇಂಟೀರಿಯರ್ ಸೇರಿದಂತೆ ಆಧುನಿಕ ಫೀಚರ್‌ಗಳೊಂದಿಗೆ ಪರಿಚಯಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಅತ್ಯಧಿಕ ಮೈಲೇಜ್, ಹೈಬ್ರಿಡ್ ಎಂಜಿನ್‌, ಹೊಸ ವಿನ್ಯಾಸದೊಂದಿಗೆ ಬರಲಿದೆ ಮಾರುತಿ ಸ್ವಿಫ್ಟ್

ಹೊಸ ಸ್ವಿಫ್ಟ್ ಪ್ರಸ್ತುತ ಮಾದರಿಗಿಂತ ಸ್ವಲ್ಪ ದೊಡ್ಡದಾಗಿರುತ್ತದೆ. ಉದ್ದವಾದ ವೀಲ್ ಬೇಸ್ ಮತ್ತು ವಿಶಾಲವಾದ ಟ್ರ್ಯಾಕ್ ಅನ್ನು ಪಡೆಯುವ ಸಾಧ್ಯತೆಯಿದೆ. ಇದರ ಜೊತೆಗೆ, ಹ್ಯಾಚ್‌ಬ್ಯಾಕ್‌ಗೆ ಆಕರ್ಷಕ ಮತ್ತು ಸ್ಪೋರ್ಟಿ ಮುಂಭಾಗದ ಗ್ರಿಲ್ ಅನ್ನು ಸಹ ನೀಡುವ ನಿರೀಕ್ಷೆಯಿದೆ. ಇದು ತೀಕ್ಷ್ಣವಾದ ಬಂಪರ್ ವಿನ್ಯಾಸ ಮತ್ತು ದಪ್ಪ ಮುಂಭಾಗದ ಗ್ರಿಲ್‌ನಿಂದ ಸಂಪೂರ್ಣ ವಿಭಿನ್ನ ಸ್ಟೈಲಿಂಗ್ ಪಡೆಯಲಿದೆ. ಜೊತೆಗೆ, ಮಲ್ಟಿ- ಸ್ಪೋಕ್ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಸಹ ಪಡೆಯಲಿದೆ.

ಆದರೆ ಡೋರ್ ಹ್ಯಾಂಡಲ್‌ಗಳು ಮಾತ್ರ ಹಿಂದಿನ ಮಾದರಿಯಂತೆ ಅದೇ ಸಾಂಪ್ರದಾಯಿಕ ಡಿಸೈನ್‌ನಲ್ಲಿ ಬರಲಿವೆ. ಹಿಂಭಾಗವನ್ನು ನೋಡುವುದಾದರೆ ಹೊಸ ಎಲ್ಇಡಿ ಟೈಲ್ ಲೈಟ್ಸ್, ಸ್ಪೋರ್ಟಿಯಾದ ಹಿಂದಿನ ಬಂಪರ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಪ್ರಮುಖ ಸ್ಟೈಲಿಂಗ್ ನವೀಕರಣಗಳನ್ನು ಪಡೆಯುವುದು ಖಚಿತ ಎನ್ನಲಾಗುತ್ತಿದೆ. ಒಳಗೆ, ಹೊಸ ಸ್ವಿಫ್ಟ್ ಇನ್ಫೋಟೈನ್‌ಮೆಂಟ್ ವ್ಯವಸ್ಥೆಯೊಂದಿಗೆ ಪರಿಷ್ಕೃತ ಡ್ಯಾಶ್‌ ಬೋರ್ಡ್ ವಿನ್ಯಾಸವನ್ನು ಪಡೆಯಲಿದೆ. ಈ ಮೂಲಕ ಹಿಂದಿನ ಮಾದರಿಗಿಂತ ಆಧುನಿಕ ಒಳಾಂಗಣವನ್ನು ಹೊಸ ಮಾದರಿ ಪಡೆಯಲಿದೆ.

ಅತ್ಯಧಿಕ ಮೈಲೇಜ್, ಹೈಬ್ರಿಡ್ ಎಂಜಿನ್‌, ಹೊಸ ವಿನ್ಯಾಸದೊಂದಿಗೆ ಬರಲಿದೆ ಮಾರುತಿ ಸ್ವಿಫ್ಟ್

ಇಂಟೀರಿಯರ್ ಫೀಚರ್‌ಗಳ ಬಗ್ಗೆ ಮಾತನಾಡುವುದಾದರೆ ನಾವು ಹೊಸ ಸ್ವಿಫ್ಟ್‌ನಲ್ಲಿ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಅನ್ನು ಕೂಡ ನೋಡಲಿದ್ದೇವೆ. ಹ್ಯಾಚ್‌ಬ್ಯಾಕ್ ಹೊಸ ಇನ್ಸ್ಟ್ರೂಮೆಂಟ್ ಕನ್ಸೋಲ್, ಹೊಸ ಸೀಟ್‌ಗಳು ಮತ್ತು ಹೆಚ್ಚು ವಿಶಾಲವಾದ ಮತ್ತು ಆರಾಮದಾಯಕ ಹಿಂಭಾಗದ ಸೀಟ್‌ಗಳನ್ನು ಸಹ ಪಡೆಯಲಿದೆ. ಮೊದಲೇ ಹೇಳಿದಂತೆ ಮುಂಬರಲಿರುವ ಹೊಸ ಜನ್ ಸ್ವಿಫ್ಟ್ ಸ್ವಲ್ಪ ದೊಡ್ಡದಾಗಿ ಬರುವುದರಿಂದ ಹಿಂಬದಿ ಪ್ರಯಾಣಿಕರಿಗೆ ಆರಾಮ ಹಾಗೂ ಉತ್ತಮ ಪ್ರಯಾಣ ಅನುಭವಕ್ಕೆ ಅನುಕೂಲವಾಗಲಿದೆ.

ವೈಶಿಷ್ಟ್ಯಗಳ ನೋಡುವುದಾದರೆ, ಹೊಸ ಸ್ವಿಫ್ಟ್ ಪುಶ್- ಬಟನ್ ಸ್ಟಾರ್ಟ್, ಆಟೋ- ಡಿಮ್ಮಿಂಗ್ ಐಆರ್‌ವಿಎಂಎಸ್, ಎಲೆಕ್ಟ್ರಿಕ್ ಪವರ್ಡ್ ಒಆರ್‌ವಿಎಂಎಸ್, ಸ್ಟೀರಿಂಗ್- ಮೌಂಟೆಡ್ ಕಂಟ್ರೋಲ್ಸ್, ಕನೆಕ್ಟೆಡ್ ಕಾರ್ ಟೆಕ್ ಸೇರಿದಂತೆ ಇನ್ನೂ ಹೆಚ್ಚಿನದನ್ನು ಪಡೆಯಲಿದೆ. ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಹೊಸ 1.2 ಎಲ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ಎಂಜಿನ್ ಅನ್ನು ಟೊಯೋಟಾದ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಜೋಡಿಸಲಾಗುವುದು.

ಅತ್ಯಧಿಕ ಮೈಲೇಜ್, ಹೈಬ್ರಿಡ್ ಎಂಜಿನ್‌, ಹೊಸ ವಿನ್ಯಾಸದೊಂದಿಗೆ ಬರಲಿದೆ ಮಾರುತಿ ಸ್ವಿಫ್ಟ್

ಈ ಹೊಸ ಹೈಬ್ರಿಡ್ ಎಂಜಿನ್ 35 ಕಿ.ಮೀಗಿಂತ ಹೆಚ್ಚಿನ ಇಂಧನ ಆರ್ಥಿಕತೆಯನ್ನು ನೀಡುತ್ತದೆ. 1.2 ಎಲ್ ಡ್ಯುಯಲ್‌ ಜೆಟ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೊಸ ಸ್ವಿಫ್ಟ್ ಅನ್ನು ಬ್ರ್ಯಾಂಡ್ ನೀಡುವ ನಿರೀಕ್ಷೆಯಿದೆ. ಇದನ್ನು ಮ್ಯಾನುವಲ್ ಮತ್ತು ಎಎಮ್‌ಟಿ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುವುದು. ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೇರಿದಂತೆ ಭಾರತದ ಇತರ ಅನೇಕ ಮಾರುತಿ ಕಾರುಗಳಲ್ಲಿ ನಾವು ಇದೇ ತರಹದ ಒಂದೇ ಎಂಜಿನ್ ಅನ್ನು ನೋಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Friday, March 3, 2023, 14:20 [IST]
English summary
Maruti swift will come with high mileage hybrid engine new update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+