ಅತ್ಯಂತ ಕೈಗೆಟುಕುವ ಬೆಲೆ, ಬೈಕ್‌ನಷ್ಟೇ ಮೈಲೇಜ್ ನೀಡುವ Maruti Tour H1 ವಿಶೇಷತೆಗಳು
ಭಾರತದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ ಇತ್ತೀಚೆಗೆ ವಾಣಿಜ್ಯ ಆವೃತ್ತಿಯಾಗಿ ಟೂರ್ H1 ಅನ್ನು ಪರಿಚಯಿಸಿದೆ. ಇದನ್ನು ಭಾರತದಲ್ಲಿ ರೂ. 4.81 ಲಕ್ಷಕ್ಕೆ (ಎಕ್ಸ್ ಶೋ ರೂಂ ದೆಹಲಿ) ಬಿಡುಗಡೆ ಮಾಡಲಾಗಿದೆ. ಇದು ಮೂಲತಃ ಮಾರುತಿ ಆಲ್ಟೊ K10 ನ ವಾಣಿಜ್ಯ ಅಥವಾ ಟ್ಯಾಕ್ಸಿ ಆವೃತ್ತಿಯಾಗಿರುವುದಾಗಿ ಕಂಪನಿ ಹೇಳಿದೆ.
ಈ ವಾಹನದ ಕುರಿತ ಹೆಚ್ಚಿನ ವಿಶೇಷತೆಗಳನ್ನು ಇಲ್ಲಿ ನೋಡೋಣ. ಹೊಸ ಮಾರುತಿ ಸುಜುಕಿ ಆಲ್ಟೊ ಕೆ10 ಟೂರ್ ಹೆಚ್1 ಅನ್ನು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡೂ ಆವೃತ್ತಿಗಳಲ್ಲಿ ನೀಡಲಾಗುತ್ತದೆ. ಇದರ ವೇರಿಯೆಂಟ್-ವಾರು ಬೆಲೆಗಳನ್ನು ನೋಡುವುದಾದರೆ ಪೆಟ್ರೋಲ್ ಮ್ಯಾನುವಲ್ ಬೆಲೆ 4.80 ಲಕ್ಷ ರೂ. ಇದ್ದರೆ, ದ್ವಿ-ಇಂಧನ CNG ಮ್ಯಾನುವಲ್ ಬೆಲೆ 5.70 ಲಕ್ಷ ರೂ. ಇದೆ. ಇವು ಎಕ್ಸ್ ಶೋರೂಂ ಬೆಲೆಗಳು.

ಇದರ ಎಂಜಿನ್ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದರ 1.0-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 66 ಬಿಎಚ್‌ಪಿ ಮತ್ತು 89 ಎನ್ಎಂ ಟಾರ್ಕ್ ಅನ್ನು ಹೊರ ಹಾಕುವ ಸಾಮರ್ಥ್ಯವನ್ನು ಹೊಂದಿದೆ. ದ್ವಿ-ಇಂಧನ CNG ಯಲ್ಲಿ 56 bhp ಮತ್ತು 82 Nm ಟಾರ್ಕ್ ಹೊರಹಾಕುವ ಸಾಮರ್ಥ್ಯವಿದೆ. ಇವೆರಡೂ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತವೆ.
ಒಟ್ಟಾರೆ Maruti Tour H1 ಅನ್ನು ಒಂದೇ ಟ್ರಿಮ್‌ನಲ್ಲಿ ನೀಡಲಾಗುತ್ತಿದ್ದು, ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇದಕ್ಕೆ ಮೂರು ಬಣ್ಣದ ಆಯ್ಕೆಗಳಿವೆ, ಅವುಗಳೆಂದರೆ ಮೆಟಾಲಿಕ್ ಸಿಲ್ಕಿ ಸಿಲ್ವರ್, ಆರ್ಕ್ಟಿಕ್ ವೈಟ್ ಮತ್ತು ಮೆಟಾಲಿಕ್ ಗ್ರಾನೈಟ್ ಗ್ರೇ ಬಣ್ಣಗಳಾಗಿವೆ. ಇದು ಬೈಕ್‌ನಷ್ಟೇ ಮೈಲೇಜ್ ನೀಡುವುದು ಇದರ ಪ್ರಮುಖ ವಿಶೇಷತೆಯಾಗಿದೆ.
ಮೈಲೇಜ್ ಬಗ್ಗೆ ಹೇಳುವುದಾದರೆ ಇದರ ಪೆಟ್ರೋಲ್ MT 24.64 km/l ನಷ್ಟು ಮೈಲೇಜ್ ನೀಡಿದರೆ, CNG ಆವೃತ್ತಿಯು 34.46 km/kg ವರೆಗೆ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಈ ಕಾರು 27-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊದಿದ್ದರೇ, ಸಿಎನ್‌ಜಿಗಾಗಿ 55 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದೆ.
ಹಣಕ್ಕೆ ತಕ್ಕ ಮೌಲ್ಯದಂತೆ ಮಾರುತಿ ಟೂರ್ H1 ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಂಜಿನ್ ಇಮೊಬಿಲೈಸರ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳು ಪ್ರಿ-ಟೆನ್ಷನರ್ ಮತ್ತು ಫೋರ್ಸ್ ಲಿಮಿಟರ್‌ನೊಂದಿಗೆ ಮುಂಭಾಗದ ಸೀಟ್ ಬೆಲ್ಟ್‌ಗಳು, ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್‌ಗಳನ್ನು ಪಡೆದಿದೆ.
ಒಟ್ಟಾರೆ ಕಾರಿನ ಬಗ್ಗೆ ಹೇಳುವುದಾದರೆ, ಇದು ನೆಕ್ಸ್ಟ್-ಜೆನ್ K 10C ಎಂಜಿನ್, ಪ್ರಭಾವಶಾಲಿ ಇಂಟೀರಿಯರ್ ಮತ್ತು ಹೊರಾಂಗಣ, ಅನುಕೂಲತೆ, ಉತ್ತಮ ಸೌಕರ್ಯ ಮತ್ತು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಜೊತೆಗೆ ಅತ್ಯುತ್ತಮ ಇಂಧನ ದಕ್ಷತೆಯನ್ನು ನೀಡುವ ಮೂಲಕ, ಟೂರ್ H1 ಫ್ಲೀಟ್ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ ಎಂದು ಹೇಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ.


Click it and Unblock the Notifications