Maruti WagonR: ಕ್ರ್ಯಾಶ್ ಟೆಸ್ಟ್‌ನಲ್ಲಿ ಕೇವಲ 1 ಸ್ಟಾರ್ ಪಡೆದು ಮತ್ತೆ ನಿರಾಸೆಗೊಳಿಸಿದ ಮಾರುತಿ ವ್ಯಾಗನ್‍ಆರ್

ಮಾರುತಿ ಸುಜುಕಿ ವ್ಯಾಗನ್‍ಆರ್ ಸುಮಾರು ಎರಡು ದಶಕಗಳಿಂದ ಮಾರಾಟದಲ್ಲಿದೆ. ಈ ವ್ಯಾಗನ್‍ಆರ್ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ ದೇಶದಲ್ಲಿ ಪ್ರಾರಂಭಿಸಿದಾಗಿನಿಂದಲೂ ಕೂಡ ಉತ್ತಮ ಬೇಡಿಕೆಯಿಂದ ಮಾರಾಟವಾಗುತ್ತಿದೆ. ಈಗ ಮೂರನೇ ತಲೆಮಾರಿನ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಈ ಮಾರುತಿ ವ್ಯಾಗನ್‍ಆರ್ ಮತ್ತೆ ನಿರಾಸೆ ಗೊಳಿಸಿದೆ.

ಇತ್ತೀಚಿನ ಸುತ್ತಿನ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಮಾರುತಿ ಸುಜುಕಿಯ ಎಂಟ್ರಿ-ಲೆವೆಲ್ ಹ್ಯಾಚ್‌ಬ್ಯಾಕ್ ವ್ಯಾಗನ್ಆರ್ ಅನ್ನು ಒಳಪಡಿಸಿದೆ. ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ವಯಸ್ಕ ಪ್ರಯಾಣಿಕರ ವಿಭಾಗದಲ್ಲಿ ಸಿಂಗಲ್ ಸ್ಟಾರ್ ಮತ್ತು ಮಕ್ಕಳ ವಿಭಾಗದಲ್ಲಿ ಶೂನ್ಯ ಅಂಕವನ್ನು ಗಳಿಸಿದೆ. ವ್ಯಾಗನ್‍ಆರ್ ಕಾರನ್ನು 2019 ರಲ್ಲಿ ಟೆಸ್ಟ್ ಮಾಡಲಾಗಿತ್ತು. ಈ ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರನ್ನು ಟೆಸ್ಟ್ ಮಾಡಲಾಗಿತ್ತು.

Maruti Suzuki Wagonr

ಆ ಸಂದರ್ಭದಲ್ಲಿ ಮಾರುತಿ ವ್ಯಾಗನ್‍ಆರ್ ಕಾರು 2 ಸ್ಟಾರ್ ಗಳನ್ನು ಪಡೆದುಕೊಂಡಿದೆ. 2023ಕರಲ್ಲಿ ಕ್ರ್ಯಾಶ್ ಟೆಸ್ಟ್‌ ಹೆಚ್ಚು ಕಠಿಣ ಮಾಡಿದ್ದಾರೆ. ಇದರಿಂದ ಟೆಸ್ಟ್ ವೇಳೆಯಲ್ಲಿ ಅಂಕಗಳಲ್ಲಿ ಕುಸಿತ ಕಂಡುಬಂದಿದೆ. ಮಾರುತಿ ಸುಜುಕಿ ವ್ಯಾಗನ್‍ಆರ್ ಗರಿಷ್ಠ 34 ಅಂಕಗಳಲ್ಲಿ 19.69 ಅಂಕಗಳನ್ನು ಗಳಿಸಿದೆ. ಮುಂಭಾಗದ ಆಫ್‌ಸೆಟ್ ತಡೆಗೋಡೆ ಟೆಸ್ಟ್‌ನಲ್ಲಿ ಅಂಕಗಳನ್ನು ಮತ್ತು ಸೈಡ್ ಮೂವೇಬಲ್ ಡಿಫಾರ್ಮಬಲ್ ಬ್ಯಾರಿಯರ್ ಟೆಸ್ಟ್‌ನಲ್ಲಿ 13 ಅಂಕಗಳನ್ನು ಸಹ ಗಳಿಸಿದೆ.

ಇನ್ನು ಈ ಕಾರಿನಲ್ಲಿ ಕರ್ಟನ್ ಏರ್‌ಬ್ಯಾಗ್‌ಗಳಿಲ್ಲದ ಕಾರಣ ಸೈಡ್ ಪೋಲ್ ಇಂಪ್ಯಾಕ್ಟ್ ಟೆಸ್ಟ್‌ ನಡೆಸಲಾಗಿಲ್ಲ, ಕೇವಲ ಎರಡು ಮುಂಭಾಗದ ಏರ್‌ಬ್ಯಾಗ್‌ಗಳು ಹೊಂದಿವೆ. ಈ ಕಾರಿನ ಮುಂಭಾಗದ ಇಂಪ್ಯಾಕ್ಟ್ ಟೆಸ್ಟ್‌ನಲ್ಲಿ ಚಾಲಕನಿಗೆ ಕುತ್ತಿಗೆಗೆ 'ಉತ್ತಮ' ರಕ್ಷಣೆಯನ್ನು ನೀಡಲಾಯಿತು, ತಲೆಗೂ ಉತ್ತಮ' ರಕ್ಷಣೆಯನ್ನು ನೀಡಿತು. ಆದರೆ ಚಾಲಕನ ಎದೆಗೆ 'ದುರ್ಬಲ' ರಕ್ಷಣೆಯನ್ನು ನೀಡಲಾಗಿದೆ. ಮೊಣಕಾಲುಗಳ ರಕ್ಷಣೆಯು ಕನಿಷ್ಠ ಮಟ್ಟದಲ್ಲಿದೆ.

Maruti Suzuki Wagonr

ಇನ್ನು ಡ್ಯಾಶ್‌ಬೋರ್ಡ್‌ನ ಹಿಂದೆ ಮೊಣಕಾಲುಗಳು 'ಅಪಾಯಕಾರಿ ರಚನೆಗಳೊಂದಿಗೆ' ಪ್ರಭಾವ ಬೀರಬಹುದು. ವಯಸ್ಕ ಕ್ರ್ಯಾಶ್ ರೇಟಿಂಗ್‌ನಲ್ಲಿ ಮಾರುತಿ ಸುಜುಕಿ ವ್ಯಾಗನ್‍ಆರ್ ಸಿಂಗಲ್ ಸ್ಟಾರ್ ಗಳಿಸುವಲ್ಲಿ ಯಶಸ್ವಿಯಾಗಿದೆ, ಆದರೆ ಮಕ್ಕಳ ವಿಭಾಗದಲ್ಲಿ ರಕ್ಷಣೆಯು ಉತ್ತಮವಾಗಿಲ್ಲ. ಮಾರುತಿ ಸುಜುಕಿಯು ಕಾರನ್ನು ISOFIX ನೊಂದಿಗೆ ಸಜ್ಜುಗೊಳಿಸಿಲ್ಲ ಅಥವಾ ವ್ಯಾಗನ್ ಆರ್‌ನಲ್ಲಿ CRS ಅನ್ನು ಶಿಫಾರಸು ಮಾಡಿಲ್ಲ.

ಇನ್ನು ಎಲ್ಲಾ ಸೀಟ್ ಸ್ಥಾನಗಳಿಗೆ ಮೂರು-ಪಾಯಿಂಟ್ ಸೀಟ್‌ಬೆಲ್ಟ್‌ಗಳ ಅನುಪಸ್ಥಿತಿಯಂತೆ. ಪರಿಣಾಮದ ಸಮಯದಲ್ಲಿ ಏರ್‌ಬ್ಯಾಗ್ ಅನ್ನು ನಿಯೋಜಿಸಿದರೆ, ಏರ್‌ಬ್ಯಾಗ್ ಮಗುವಿನ ಸುರಕ್ಷತೆಗೆ ಪ್ರತಿಕೂಲವಾಗಿರುತ್ತದೆ ಮಕ್ಕಳು ಮುಂಭಾಗ ಮತ್ತು ಹಿಂಭಾಗದ ಎರಡೂ ಸ್ಥಾನಗಳಲ್ಲಿ ಗಾಯಗಳ ಹೆಚ್ಚಿನ ಅಪಾಯಕ್ಕೆ ಒಳಗಾಗುತ್ತಾರೆ ಎಂದು ಪರೀಕ್ಷೆಗಳು ತೋರಿಸಿವೆ. ಗ್ಲೋಬಲ್ ಎನ್‌ಸಿಎಪಿಯ ಪ್ರಧಾನ ಕಾರ್ಯದರ್ಶಿ ಅಲೆಜಾಂಡ್ರೊ ಫುರಸ್ ಅವರು ಮಾತನಾಡಿ, ಭಾರತದಲ್ಲಿ ಮಾರಾಟವಾಗುವ ಹೊಸ ಮಾಡೆಲ್‌ಗಳಿಗೆ ಆರು ಏರ್‌ಬ್ಯಾಗ್‌ಗಳು ಕಡ್ಡಾಯವಾಗಿ ಅಗತ್ಯವಾಗಿದೆ.

ಮಾರುತಿ ಸುಜುಕಿ ಈ ಅಗತ್ಯವನ್ನು ಗ್ರಾಹಕರ ಆಯ್ಕೆಯಾಗಿಯೂ ಲಭ್ಯಗೊಳಿಸದಿರುವುದು ಗ್ಲೋಬಲ್ ಎನ್‌ಸಿಎಪಿಗೆ ವಿಶೇಷವಾದ ಚಿಂತಿಸಬೇಕಾಗಿರುವುದು ಎಂದು ಹೇಳುತ್ತಾರೆ. RDE (ರಿಯಲ್ ಡ್ರೈವಿಂಗ್ ಎಮಿಷನ್ಸ್) ನಿಯಮ ಜಾರಿಯಾಗುವುದರಿಂದ ಮಾರುತಿ ಸುಜುಕಿ ಶೀಘ್ರದಲ್ಲೇ ತನ್ನ ಅತ್ಯಂತ ಜನಪ್ರಿಯ ವ್ಯಾಗನ್ಆರ್ ಹ್ಯಾಚ್‌ಬ್ಯಾಕ್ ಮಾದರಿ ಸರಣಿಯನ್ನು ನವೀಕರಿಸುತ್ತಿದೆ. ಹೊಸ 2023ರ ಮಾರುತಿ ವ್ಯಾಗನ್ಆರ್ ಅದೇ ಪೆಟ್ರೋಲ್ ಎಂಜಿನ್‌ಗಳೊಂದಿಗೆ ಲಭ್ಯವಾಗಲಿದೆ.

ಇದು 1.0 ಲೀಟರ್ ಮತ್ತು 1.2 ಲೀಟರ್ ಎಂಜಿನ್‌ಗಳಾಗಿದೆ. ಎರಡೂ ಎಂಜಿನ್ ಗಳನ್ನು BS6 ಹಂತ II ಹೊರಸೂಸುವಿಕೆಯ ಮಾನದಂಡಗಳನ್ನು ಪೂರೈಸಲು ಟ್ಯೂನ್ ಮಾಡಲಾಗುತ್ತದೆ. ಇದರ 1.0 ಲೀಟರ್ ಎಂಜಿನ್ 67 ಬಿಹೆಚ್‍ಪಿ ಪವರ್ ಮತ್ತು 89 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 90 ಬಿಹೆಚ್‍ಪಿ ಪವರ್ ಮತ್ತು 113N ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Article Published On: Tuesday, April 4, 2023, 17:40 [IST]
English summary
Maruti wagonr scored 1 star rating in gncap crash test details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+