ಮಾರುತಿ ಸುಜುಕಿಯಿಂದ ದೊಡ್ಡ ಘೋಷಣೆ
ಭಾರತದ ಪ್ರಮುಖ ಕಾರು ತಯಾಕರ ಕಂಪನಿಯಾಗಿ ಗುರುತಿಸಿಕೊಂಡಿರುವ 'ಮಾರುತಿ ಸುಜುಕಿ' ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಬಹುಬೇಡಿಕೆಯ ವ್ಯಾಗನ್ ಆರ್ (Wagon R) ಕಾರಿನ ಮೇಲೆ ದೊಡ್ಡ ಮಟ್ಟದ ರಿಯಾಯಿತಿಯನ್ನು ಕೊಡುವುದಾಗಿ ತಿಳಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
ಬಣ್ಣಗಳ ಹಬ್ಬ ಹೋಳಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಡಿಸ್ಕೌಂಟ್ ನೀಡುತ್ತಿದೆ. ನೀವು ಈ ತಿಂಗಳು ಕೈಗೆಟುಕುವ ಬೆಲೆಯ ನೂತನ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ, 'ಮಾರುತಿ ಸುಜುಕಿ' ಕಾರುಗಳನ್ನು ಆಯ್ಕೆ ಮಾಡಬಹುದು. ಪೆಟ್ರೋಲ್ ಮಾದರಿಗಳ ಮೇಲೆ ಸುಮಾರು ರೂ.90,000 ವರೆಗೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಆದರೆ, ಈ ಆಫರ್‌ಗಳು ದೇಶಾದ್ಯಂತ ವಿವಿಧ ಶೋರೂಂ ಆಧರಿಸಿ, ಬೇರೆ-ಬೇರೆಯಾಗಿರಲಿದ್ದು, ಅಲ್ಲಿಗೆ ತೆರಳುವ ಮೂಲಕ ಸ್ಪಷ್ಟ ಮಾಹಿತಿ ಪಡೆಯಬಹುದು.

ಮಾರುತಿ ಸುಜುಕಿಯ ವ್ಯಾಗನ್ ಆರ್ ಕಾರಿನ ಜೊತೆಗೆ ಆಲ್ಟೊ ಕೆ10, ಎಸ್ ಪ್ರೆಸ್ಸೊ ಹಾಗೂ ಸೆಲೆರಿಯೊ ಹ್ಯಾಚ್‌ಬ್ಯಾಕ್‌ಗಳಿಗೂ ರಿಯಾಯಿತಿ ಪ್ರಯೋಜನ ಲಭ್ಯವಿದೆ. ರೂ.15,000 ಎಕ್ಸ್‌ಚೇಂಜ್ ಬೋನಸ್ ಹಾಗೂ ರೂ.4000 ಕಾರ್ಪೊರೇಟ್ ಡಿಸ್ಕೌಂಟ್ ಸಿಗಲಿದೆ. ಸದ್ಯ, ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ವ್ಯಾಗನ್ ಆರ್ ಆರಂಭಿಕ ಮಾದರಿಯು ಎಕ್ಸ್ ಶೋರೂಂ ಪ್ರಕಾರ, ರೂ.5.53 ಲಕ್ಷ, ಟಾಪ್ ಎಂಡ್ ಮಾದರಿ ರೂ.7.30 ಲಕ್ಷ ಬೆಲೆಯನ್ನು ಹೊಂದಿದೆ.
ಮಾರುತಿ ಸುಜುಕಿ ವ್ಯಾಗನ್ ಆರ್ ಎಂಜಿನ್ ಮಾದರಿಗೆ ಅನುಗುಣವಾಗಿ ರಿಯಾಯಿತಿಯನ್ನು ಹೊಂದಿದೆ. 1.0 ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿರುವ ಕಾರು, ರೂ.40,000 ನಗದು ರಿಯಾಯಿತಿ. 1.2 ಲೀಟರ್ ಎಂಜಿನ್ ಹೊಂದಿರುವ ಕಾರು, ರೂ.25,000 ವರೆಗೆ ಕ್ಯಾಶ್ ಡಿಸ್ಕೌಂಟ್ ಪಡೆದಿದೆ. ಜೊತೆಗೆ ರೂ.20,000 ಎಕ್ಸ್‌ಚೇಂಜ್ ಬೋನಸ್ ಹಾಗೂ ರೂ.4000 ಕಾರ್ಪೊರೇಟ್ ರಿಯಾಯತಿಯನ್ನು ಪಡೆದಿದ್ದು, ದೇಶೀಯ ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಲಿದೆ.
ವ್ಯಾಗನ್ ಆರ್ CNG ಆವೃತ್ತಿ ಮೇಲೆ ನೀಡುತ್ತಿರುವ ರಿಯಾಯತಿ ಬಗ್ಗೆ ಹೇಳುವುದಾದರೆ, ಇದು ರೂ.10,000 ನಗದು ರಿಯಾಯಿತಿ ಹಾಗೂ ರೂ.15,000 ಎಕ್ಸ್‌ಚೇಂಜ್ ಬೋನಸ್ ಅನ್ನು ಪಡೆದಿದೆ. ವ್ಯಾಗನ್ ಆರ್ ಆಟೋಮೆಟಿಕ್ ಆವೃತ್ತಿ ಕೂಡ ಡಿಸ್ಕೌಂಟ್ ಆಫರ್ ಒಳಗೊಂಡಿದ್ದು, ರೂ.20,000 ಎಕ್ಸ್‌ಚೇಂಜ್ ಬೋನಸ್ ಹಾಗೂ 4,000 ಕಾರ್ಪೊರೇಟ್ ರಿಯಾಯತಿಯನ್ನು ಹೊಂದಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಈ ಹ್ಯಾಚ್‌ಬ್ಯಾಕ್ ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗಬಹುದು.
ಸದ್ಯ, ಮಾರುತಿ ಸುಜುಕಿ ವ್ಯಾಗನ್ ಆರ್ ನಾಲ್ಕು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. 1 ಲೀಟರ್ ಎಂಜಿನ್, 67 PS ಪವರ್, 89 Nm ಪೀಕ್ ಟಾರ್ಕ್, 1.2 ಲೀಟರ್ ಎಂಜಿನ್ 90 PS ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5 ಸ್ವೀಡ್ ಮ್ಯಾನುವಲ್ ಅಥವಾ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.
ಅಲ್ಲದೆ, ವ್ಯಾಗನ್ ಆರ್ CNG ಕಿಟ್ ಆಯ್ಕೆಯನ್ನು ಹೊಂದಿದ್ದು, ಇದರ 1 ಲೀಟರ್ ಎಂಜಿನ್ 57 PS ಪವರ್ ಹಾಗೂ 82.1 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಇದರ ಪೆಟ್ರೋಲ್ ಎಂಜಿನ್ 25.19 kmpl ಹಾಗೂ CNG ಎಂಜಿನ್ 34.05km/kg ಮೈಲೇಜ್ ನೀಡಲಿದೆ. 7 ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 14 ಇಂಚಿನ ಅಲಾಯ್ ವೀಲ್ಸ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನು, ಹೋಳಿ ಹಬ್ಬದ ಸಂಭ್ರಮವನ್ನು ದ್ವಿಗುಣಗೊಳಿಸಲು ಈ ಆಕರ್ಷಕ ರಿಯಾಯಿತಿ ಪ್ರಯೋಜನವನ್ನು ಘೋಷಿಸಿದ್ದು, ಇದರಿಂದ ಮಾರುತಿ ಸುಜುಕಿಯ ಹೊಸ ಕಾರು ಖರೀದಿಬೇಕು ಎಂದು ಕೊಂಡಿರುವ ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಡಿಸ್ಕೌಂಟ್ ಘೋಷಣೆಯಿಂದ ಮಾರುತಿ ಸುಜುಕಿಯ ಮಾರಾಟ ಪ್ರಮಾಣವು ಮತ್ತಷ್ಟು ಸುಧಾರಿಸಲಿದ್ದು, ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗಲಿದೆ. ಬಹುತೇಕ ಡಿಸ್ಕೌಂಟ್ ಆಫರ್ ಈ ತಿಂಗಳ ಪೂರ್ತಿ ಇರಬಹುದು ಎಂದು ಅಂದಾಜಿಸಲಾಗಿದೆ.


Click it and Unblock the Notifications