ಭಾರತದಲ್ಲಿ MINI ಎಲೆಕ್ಟ್ರಿಕ್ ಕೂಪರ್ ಬಿಡುಗಡೆ... ಪೆಟ್ರೋಲ್ ಮಾದರಿಗಿಂತ ದುಬಾರಿ!
BMW ಗ್ರೂಪ್ ಎಲೆಕ್ಟ್ರಿಕ್ MINI 3-ಡೋರ್ ಕೂಪರ್ SE ಆಧಾರಿತ ಹೊಸ ಚಾರ್ಜ್ಡ್ ಆವೃತ್ತಿಯನ್ನು ಭಾರತದಲ್ಲಿ 55 ಲಕ್ಷ(ಎಕ್ಸ್ ಶೋ ರೂಂ, ಭಾರತ)ರೂ.ಗೆ ಬಿಡುಗಡೆ ಮಾಡಿದೆ. ಹೊಸ ಕಾರು ಸಂಪೂರ್ಣವಾಗಿ ನಿರ್ಮಿಸಲಾದ ಘಟಕವಾಗಿ (CBU) ದೇಶಕ್ಕೆ ಆಗಮಿಸಲಿದ್ದು, ಕೇವಲ 20 ಘಟಕಗಳನ್ನು ಮಾತ್ರ ಮಾರಾಟ ಮಾಡುವುದಾಗಿ ಕಂಪನಿ ತಿಳಿಸಿದೆ.
MINI ಚಾರ್ಜ್ಡ್ ಆವೃತ್ತಿಯು ಹೊಸ ಚಿಲ್ಲಿ ರೆಡ್ ಬಣ್ಣದಲ್ಲಿ ಡ್ಯುಯಲ್-ಟೋನ್ ರೂಫ್‌ನೊಂದಿಗೆ ಬರುತ್ತದೆ. ಇದು ಹೆಡ್‌ಲ್ಯಾಂಪ್ ಮತ್ತು ಟೈಲ್‌ಲೈಟ್ ರಿಂಗ್‌ಗಳು, ಡೋರ್ ಹ್ಯಾಂಡಲ್‌ಗಳು, ಲೋಗೊ ಮತ್ತು ಟೈಲ್‌ಗೇಟ್ ಹ್ಯಾಂಡಲ್‌ಗಳಿಗೆ ಬಿಳಿ ಬಣ್ಣದ ಅಕ್ಸೆಂಟ್‌ಗಳನ್ನು ಪಡೆದಿದೆ. ಕಾರಿನ ಬಾನೆಟ್, ಬಾಗಿಲುಗಳು ಮತ್ತು ಬೂಟ್‌ನಲ್ಲಿ ಕೆಂಪು ಸ್ಪೋರ್ಟಿ ಸ್ಟ್ರೈಪ್‌ಗಳು ಮತ್ತು ಹಳದಿ ಅಕ್ಸೆಂಟ್‌ಗಳು ಇವೆ.

ಬಾನೆಟ್‌ನಲ್ಲಿನ ಏರ್ ಇಂಟೇಕ್‌ಗಳು ಕ್ರೋಮ್‌ನಲ್ಲಿ ನೀಡಲಾಗಿದ್ದು ಅದ್ದೂರಿ ಲುಕ್ ನೀಡುತ್ತದೆ. 17-ಇಂಚಿನ ಪವರ್-ಸ್ಪೋಕ್ ಅಲಾಯ್ ವೀಲ್‌ಗಳಲ್ಲಿ ವಿಶಿಷ್ಟವಾದ ನೋಟಕ್ಕಾಗಿ ಹಳದಿ ಬಣ್ಣವನ್ನು ನೀಡಲಾಗಿದೆ. ಇಂಟೀರಿಯರ್ ವಿಷಯಕ್ಕೆ ಬಂದರೆ MINI ಚಾರ್ಜ್ಡ್ ಆವೃತ್ತಿಯು ಕ್ಯಾಬಿನ್‌ನಲ್ಲಿ ಲೆಥೆರೆಟ್ ಕಾರ್ಬನ್ ಬ್ಲ್ಯಾಕ್ ಅಪ್ಹೋಲ್ಸ್ಟರಿಯೊಂದಿಗೆ ಅಪ್‌ಗ್ರೇಡ್ ಪಡೆದಿದೆ. ಹಾಗೆಯೇ ಬ್ಲಾಕ್ ಪ್ಲೇಟ್‌ನೊಂದಿಗೆ 5-ಇಂಚಿನ MID ಘಟಕವಿದ್ದು, ಇನ್ಫೋಟೈನ್‌ಮೆಂಟ್ಗಾಗಿ ಮಧ್ಯದಲ್ಲಿ 8.8-ಇಂಚಿನ ಟಚ್‌ಸ್ಕ್ರೀನ್ ನೀಡಲಾಗಿದೆ.
ಚಾರ್ಜ್ಡ್ ಆವೃತ್ತಿಯು ಸ್ಟಾರ್ಟ್/ಸ್ಟಾಪ್ ಟಾಗಲ್ ಸ್ವಿಚ್, ಗೇರ್ ಲಿವರ್ ಮತ್ತು ಡೋರ್ ಸಿಲ್ ಬ್ಯಾಡ್ಜಿಂಗ್‌ನಲ್ಲಿ ಹಳದಿ ಅಕ್ಸೆಂಟ್‌ಗಳನ್ನು ಪಡೆದಿದೆ. ಪರ್ಫಾಮೆನ್ಸ್ ವಿಷಯಕ್ಕೆ ಬಂದರೆ, 135 kW ಎಲೆಕ್ಟ್ರಿಕ್ ಮೋಟರ್‌ನಿಂದ 181 bhp ಪವರ್ ಮತ್ತು 270 Nm ಗರಿಷ್ಠ ಟಾರ್ಕ್ ಹೊರಹಾಕುತ್ತದೆ. ಈ ಮೂಲಕ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 7.3 ಸೆಕೆಂಡ್‌ಗಳಲ್ಲಿ 100 kmph ವೇಗವನ್ನು ತಲುಪುತ್ತದೆ.

ಹಾಗೆಯೇ ಇದರಲ್ಲಿ ಸ್ಪೋರ್ಟ್ ಮತ್ತು ಗ್ರೀನ್ ಎಂಬ ಎರಡು ಡ್ರೈವಿಂಗ್ ಮೋಡ್‌ಗಳು ಇವೆ. ಡ್ರೈವರ್ ಅಸಿಸ್ಟ್ ವ್ಯವಸ್ಥೆಗಳಲ್ಲಿ ಕ್ರೂಸ್ ಕಂಟ್ರೋಲ್, ಪಾರ್ಕ್ ಡಿಸ್ಟನ್ಸ್ ಕಂಟ್ರೋಲ್, ರಿಯರ್ ವ್ಯೂ ಕ್ಯಾಮೆರಾ ಮತ್ತು TPMS ಇವೆ. ಫೀಚರ್‌ಗಳ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಇನ್‌ಬಿಲ್ಟ್ ನ್ಯಾವಿಗೇಷನ್, Apple CarPlay, ಹರ್ಮನ್ ಕಾರ್ಡನ್ ಸ್ಪೀಕರ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಆಧುನಿಕ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲಾಗಿದೆ.
ಬ್ಯಾಟರಿ ವಿಷಯಕ್ಕೆ ಬಂದರೆ 32.6 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಿಂಗಲ್ ಚಾರ್ಜ್‌ನಲ್ಲಿ 270 ಕಿ.ಮೀ ರೇಂಜ್ ನೀಡುತ್ತದೆ. ಚಾರ್ಜಿಂಗ್ ವಿಷಯಕ್ಕೆ ಬಂದರೆ MINI ಇಂಡಿಯಾ ಹೊಸ ಚಾರ್ಜ್ಡ್ ಆವೃತ್ತಿಯೊಂದಿಗೆ MINI ಸ್ಮಾರ್ಟ್ ವಾಲ್‌ಬಾಕ್ಸ್ ಚಾರ್ಜರ್ ಮತ್ತು ಪೋರ್ಟಬಲ್ DC ಚಾರ್ಜಿಂಗ್ ಕೇಬಲ್‌ನ ಒಂದು-ಬಾರಿ ಸ್ಥಾಪನೆಯನ್ನು ಗ್ರಾಹಕರಿಗೆ ನೀಡುವುದಾಗಿ ತಿಳಿಸಿದೆ.

50 kW DC ಫಾಸ್ಟ್ ಚಾರ್ಜರ್ ಅನ್ನು ಬಳಸಿಕೊಂಡು 36 ನಿಮಿಷಗಳಲ್ಲಿ ಶೇ 80 ರಷ್ಟು ಚಾರ್ಜಿಂಗ್ ಮಾಡಬಹುದು ಎಂದು ಕಂಪನಿಯು ಹೇಳಿಕೊಂಡಿದೆ. ಹಾಗೆಯೇ 11 kW AC ಚಾರ್ಜರ್‌ನೊಂದಿಗೆ 2 ಗಂಟೆ 30 ನಿಮಿಷಗಳು ಮತ್ತು 2.3 kW AC ಚಾರ್ಜರ್‌ನೊಂದಿಗೆ 9 ಗಂಟೆ 43 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಮಾಡಬಹುದು ಎಂದು ತಿಳಿಸಿದೆ.
MINI ಚಾರ್ಜ್ಡ್ ಆವೃತ್ತಿಯು ಅದೇ 2 ವರ್ಷಗಳು/ಅನಿಯಮಿತ ಕಿಲೋಮೀಟರ್‌ಗಳ ವಾರಂಟಿಯನ್ನು ಪ್ರಮಾಣಿತವಾಗಿ ಪಡೆಯುತ್ತದೆ. ಇದನ್ನು ಐದು ವರ್ಷಗಳವರೆಗೆ ವಿಸ್ತರಿಸಬಹುದು. ಬ್ಯಾಟರಿ ಪ್ಯಾಕ್ ಪ್ರಮಾಣಿತವಾಗಿ 8 ವರ್ಷಗಳು ಅಥವಾ ಒಂದು ಲಕ್ಷ ಕಿಲೋಮೀಟರ್ ವಾರಂಟಿಯನ್ನು ಪಡೆಯುತ್ತದೆ. BMW ತನ್ನ ಡೀಲರ್ ನೆಟ್‌ವರ್ಕ್‌ನಾದ್ಯಂತ 35 ನಗರಗಳಲ್ಲಿ ವೇಗದ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








