ಎಲ್ಲದಕ್ಕೂ ಸೈ.. ಯಾವುದೇ ಸನ್ನಿವೇಶಕ್ಕೂ ಬಗ್ಗಲ್ಲ: ಸ್ಕಾರ್ಪಿಯೋ, ಫಾರ್ಚುನರ್ ಕಾರುಗಳೇ ಬೆಸ್ಟ್ ಅಂತೆ!
ಭಾರತದಲ್ಲಿ ಇನ್ನೇನು ಮಳೆಗಾಲ ಶುರುವಾಗಿದ್ದು, ಅದರಲ್ಲೂ ನಗರ ಪ್ರದೇಶದ ವಾಹನ ಸವಾರರ ಗೋಳು ಹೇಳತೀರದು. ರಸ್ತೆಗಳೆಲ್ಲ ಸಂಪೂರ್ಣ ಜಲಾವೃತಗೊಂಡಿರುತ್ತವೆ. ಆಗ ವಾಹನ ಚಲಾಯಿಸುವುದು ಕಷ್ಟದ ಕೆಲಸ. ರೋಡ್ ನಲ್ಲಿ ನೀರು ನಿಂತ್ರು ಸುಲಭವಾಗಿ ಚಲಿಸುವ ಕೆಲವೊಂದು ಕಾರುಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದೇವೆ.
ಮೊದಲಿಗೆ ಟೊಯೊಟಾದ ಜನಪ್ರಿಯ ಫಾರ್ಚುನರ್ ಬಗ್ಗೆ ಮಾತನಾಡೋಣ. ಇದು ಜಲಾವೃತಗೊಂಡ ರಸ್ತೆಯಲ್ಲೂ ಸುಲಭವಾಗಿ ಚಲಿಸುತ್ತದೆ. ರೋಡ್ ಮೇಲೆ ಸುಮಾರು 700 ಎಂಎಂ ನೀರು ಇದ್ದರೂ ಓಡಿಸಬಹುದು. ಭಾರತದ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚುನರ್ ರೂ.32.59 ಲಕ್ಷದಿಂದ ರೂ.50.34 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 7 ಆಸನ ವ್ಯವಸ್ಥೆ ಹಾಗೂ 4WD/ 2WD ತಂತ್ರಜ್ಞಾನದ ಆಯ್ಕೆಯಲ್ಲಿ ಸಿಗುತ್ತದೆ.

ನೂತನ ಫಾರ್ಚುನರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 10.0 kmpl ಮೈಲೇಜ್ ನೀಡುತ್ತದೆ. ಈ ಕಾರು, 9 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್‌ಪ್ಲೇ ಮತ್ತು ಕನೆಕ್ಟ್ದ್ ಕಾರ್ ಟೆಕ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆ ದೃಷ್ಟಿಯಿಂದ 7 ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಟ್ರಾಕ್ಷನ್ ಕಂಟ್ರೋಲ್, VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್) ಅನ್ನು ಪಡೆದಿದೆ.
ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿಯಲ್ಲೂ ಜಲಾವೃತಗೊಂಡ ರಸ್ತೆಯಲ್ಲಿ ಲೀಲಾಜಾಲವಾಗಿ ಸಂಚರಿಸಬಹುದು. ಇದು ರೋಡ್ ಮೇಲೆ 500 ಎಂಎಂವರೆಗೆ ನೀರು ನಿಂತ್ರು ಚಲಿಸುತ್ತದೆ. ದೇಶೀಯ ಮಾರುಕಟ್ಟೆಯಲ್ಲಿ ಸ್ಕಾರ್ಪಿಯೋ ಎನ್ ಐದು ರೂಪಾಂತರಗಳ ಆಯ್ಕೆಯಲ್ಲಿ ರೂ.13.05 - ರೂ.24.51 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗಲಿದೆ. ಅದರಲ್ಲೂ ಕೆಲವು ವೇರಿಯೆಂಟ್ ಗಳು 17-18 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿವೆ.

ಈ ಸ್ಕಾರ್ಪಿಯೋ ಎನ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಫ್ರಂಟ್, ರೇರ್ ಕ್ಯಾಮೆರಾ ಹಾಗೂ ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್ ಬಾಗ್ಸ್ ಹೊಂದಿದೆ.
ಮಳೆಗಾಲದಲ್ಲಿ ನೀರು ತುಂಬಿರುವ ರಸ್ತೆಗಳಲ್ಲಿ ಮಹೀಂದ್ರಾದ ಪ್ರಸಿದ್ಧ ಆಫ್-ರೋಡ್ ಎಸ್‌ಯುವಿಯಾಗಿರುವ ಥಾರ್ ಸುಲಭವಾಗಿ ಚಲಿಸುತ್ತದೆ. ರೋಡ್ ಮೇಲೆ 650 ಎಂಎಂ ನೀರು ಇದ್ದರೂ ಯಾವುದೇ ರೀತಿಯಲ್ಲಿ ಸಮಸ್ಯೆಯಾಗುವುದಿಲ್ಲ. ಮಹೀಂದ್ರಾ ಥಾರ್ ಎಸ್‍ಯುವಿಯ ಪೆಟ್ರೋಲ್ ರೂಪಾಂತರ ರೂ.13.49 ಲಕ್ಷ ಹಾಗೂ ಡೀಸೆಲ್ ರೂಪಾಂತರ ರೂ.10.55 ಲಕ್ಷ ಆರಂಭಿಕ ದರವನ್ನು ಹೊಂದಿದೆ.
ನೂತನ ಮಹೀಂದ್ರಾ ಥಾರ್ RWD ಅಥವಾ 4X4 ತಂತ್ರಜ್ಞಾನದ ಆಯ್ಕೆಯಲ್ಲಿ ಖರೀದಿಗೆ ಸಿಗಲಿದ್ದು, 15.2 kmpl ಮೈಲೇಜ್ ನೀಡುತ್ತದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಏರ್ ಬಾಗ್ಸ್ ಒಳಗೊಂಡಂತೆ ಹಲವು ಫೀಚರ್ಸ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications








