ಮಾರುತಿಯ ಈ ಕಾರುಗಳನ್ನು ಕೊಳ್ಳುವ ಮುನ್ನ ಯೋಚಿಸಿ: ಲಕ್ಷಕ್ಕೂ ಅಧಿಕ ಆರ್ಡರ್‌ಗಳು ಪೆಂಡಿಂಗ್
ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಜನಮಾನಸದಲ್ಲಿ ಮನೆಮಾಡಿರುವ ಕಾರು ನಿರ್ಮಾಣ ಕಂಪನಿಯೆಂದರೆ ಅದು ಮಾರುತಿ ಸುಜುಕಿ (Maruti Suzuki). ಮಾರುತಿಯ ಬಹುತೇಕ ಎಲ್ಲಾ ಕಾರುಗಳೂ ಸಹ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿ ಮಾಡುತ್ತಲೇ ಇರುತ್ತವೇ. ಅದಕ್ಕೆ ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಜಿಮ್ನಿಯೇ ಸಾಕ್ಷಿ ಎಂದರೆ ತಪ್ಪಾಗಲಾರದು.
ಇದೀಗ ಮಾರುತಿ ಸಂಸ್ಥೆಯ ಎರಡು ಕಾರುಗಳು ಒಟ್ಟಾಗಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಆರ್ಡರ್‌ಗಳು ಬಾಕಿ ಉಳಿದುಕೊಂಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಾರುತಿ ಸುಜುಕಿ ಕಂಪನಿಯೆ ಜನಪ್ರಿಯ ಕಾರುಗಳಾದಂತಹ ಎರ್ಟಿಗಾ ಮತ್ತು XL6 ಕಾರುಗಳ ಸುಮಾರು ಒಂದು ಲಕ್ಷಕ್ಕೂ ಅಧಿಕ ಕಾರುಗಳು ಬಾಕಿ ಉಳಿದುಕೊಂಡಿವೆ.

ಇಷ್ಟೊಂದು ಆರ್ಡರ್‌ಗಳು ಬಾಕಿ ಉಳಿದುಕೊಳ್ಳಲು ಪ್ರಮುಖ ಕಾರಣ ಅದು ವಿತರಣಾ ನೆಟ್‌ವರ್ಕ್‌ಗಳ ಆಭಾವ ಎಂದು ಮಾರುತಿ ಸುಜುಕಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವಂತಹ ಶಶಾಂಕ್ ಶ್ರೀವಾಸ್ತವ ಅವರು ಮಾಧ್ಯಮಗಳೊಂದಿಗೆ ನಡೆಸಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಈ ಸಮಸ್ಯೆಯನ್ನು ಸಂಸ್ಥೆಯು ಕೆಲವೊಂದಷ್ಟು ಸಮಯದರಿಂದ ಎದುರಿಸುತ್ತಿದೆ ಎಂದು ಅವರು ಇದೇ ಸಂಧರ್ಭದಲ್ಲಿ ತಿಳಿಸಿದ್ದಾರೆ.
ಮಾರಟವಾಗಿರುವ ಸುಮಾರು 1,27,679 ಮಾರುತಿ ಎರ್ಟಿಗಾ ಕಾರುಗಳು ಮತ್ತು 36,423 ಮಾರುತಿ XL6 ಕಾರುಗಳನ್ನು ಸಾಗಿಸಲಾಗದೇ ತನ್ನಲ್ಲೇ ಉಳಿಸಿಕೊಂಡಿದೆ. ಭಾರತೀಯ ಮಾರುಕಟ್ಟೆಯ MPV ಕಾರು ಸೆಗ್ಮೆಂಟ್‌ನಲ್ಲಿ ಸುಮಾರು 5೦% ರಷ್ಟು ಶೇರ್‌ಗಳನ್ನು ಹೊಂದಿದೆ. ಕಳೆದ ಆರ್ಥಿಕ ವರ್ಷದಲ್ಲಿ ಮಾರುತಿ ಸುಜುಕಿಯ ಎರ್ಟಿಗಾ ಕಾರು ಅತೀ ಹೆಚ್ಚು ಮಾರಾಟವಾದ ಕಾರು ಎಂಬ ಹಿರಿಮೆಗೆ ಪಾತ್ರವಾಗಿತ್ತು.
ಸದ್ಯಕ್ಕೆ ಭಾರತದಲ್ಲಿ MPV ಸೆಗ್ಮಂಟ್ ಬೆಳೆಯುತ್ತಿದ್ದು, ಈ ಸೆಗ್ಮೆಂಟ್‌ನ ಕಾರುಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಈ ಸಂಧರ್ಭದಲ್ಲಿ ಮಾರುತಿಯು ವಿತರಣಾ ಸಮಸ್ಯೆಯನ್ನು ಎದುರಿಸುತ್ತಿರುವುದು ವಿಪರ್ಯಾಸವೇ ಸರಿ. ಮಾರುತಿ ಸುಜುಕಿ ಕಂಪನಿಯು ಸರಿಯಾದ ಸಮಯಕ್ಕೆ ಕಾರು ಡೆಲಿವರಿ ಆಗದೇ ಇದ್ದಲ್ಲಿ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗುವುದಂತೂ ಖಂಡಿತ.
ಇನ್ನು ಮಾರುತಿ ಎರ್ಟಿಗಾ ಕಾರಿನ ಕಾಯುವ ಕಾಲಾವಧಿ 8-10 ತಿಂಗಳವರೆಗೆ ವಿಸ್ತರಿಸಿದ್ದು, ಮಾರುತಿ ಎಕ್‌ಎಲ್ ಸಿಕ್ಸ್ ನ ಕಾಯುವಿಕೆಯ ಅವಧಿಯನ್ನು 4 ರಿಂದ 5 ತಿಂಗಳವರೆಗೆ ವಿಸ್ತರಿಸಲಾಗಿದೆ. ಹಾಗಾಗಿ ನಿಮಗೇನಾದರೂ ಎರ್ಟಿಗಾ ಕಾರು ಬೇಕಾದಲ್ಲಿ ಒಂದು ವರ್ಷಕ್ಕೂ ಮುಂಚೆಯೇ ಬುಕ್ ಮಾಡಬೇಕಾಗಬಹುದು.
ಹೀಗಿರುವಾಗಲೇ ಮಾರುತಿ ಸುಜುಕಿ ಕಂಪನಿಯು ಎಂಪಿವಿ ಕಾರು ಸೆಗ್ಮೆಂಟನ್ನು ಮತ್ತೂ ವಿಸ್ತರಿಸಲು ಹೊರಟಿದ್ದು ಕಂಪನಿಯ ಬಹು ನಿರೀಕ್ಷಿತ MPV ಕಾರಾದಂತಹ ಇನ್‌ವಿಕ್ಟೋ ವನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಈಗಾಗಲೇ ಭಾರೀ ಸದ್ದು ಮಾಡುತ್ತಿರುವ ಈ ಕಾರು ಮಾರುಕಟ್ಟೆಯಲ್ಲಿ ಯಾವ ರೀತಿ ಮುನ್ನುಗ್ಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








