ಬೆಂಗಳೂರಿನಲ್ಲಿ ಲಾಜಿಸ್ಟಿಕ್ಸ್ ವಾಹನ ಪರಿಚಯಿಸಿದ ಮೂವಿನ್: 850 ಕೆ.ಜಿ ಸಾಮರ್ಥ್ಯ, 120 ಕಿ.ಮೀ ರೇಂಜ್
ಲಾಜಿಸ್ಟಿಕ್ಸ್ ಬ್ರಾಂಡ್ ಮೂವಿನ್ ಯುಪಿಎಸ್ ಮತ್ತು ಇಂಟರ್ ಗ್ಲೋಬ್ ಸರ್ವೀಸಸ್ ನಡುವೆ ಜಂಟಿ ಸಹಯೋಗವನ್ನು ಪ್ರಾರಂಭಿಸಿದ್ದು, ತನ್ನ ಮೊದಲ ಮತ್ತು ಕೊನೆಯ ಹಂತದ ಡೆಲಿವರಿಗಳಿಗಾಗಿ ಎರಡನೇ ಎಲೆಕ್ಟ್ರಿಕ್ ವಾಹನಗಳ(ಇವಿ) ಬ್ಯಾಚ್ ಅನ್ನು ಬೆಂಗಳೂರಿನಲ್ಲಿ ಸೇರ್ಪಡೆಗೊಳಿಸಿದೆ.
ಮೊದಲ ಬ್ಯಾಚ್‌ಗೆ ಈ ವರ್ಷದ ಪ್ರಾರಂಭದಲ್ಲಿ ದೆಹಲಿಯ ಎನ್‌ಸಿಆರ್ ಪ್ರದೇಶದಲ್ಲಿ ಚಾಲನೆ ನೀಡಲಾಗಿತ್ತು. ಇದೀಗ ಬೆಂಗಳೂರಿನಲ್ಲೂ ಪರಿಚಯಿಸಿದ್ದು, 2023ರ ವರ್ಷಾಂತ್ಯದ ವೇಳೆಗೆ ಮುಂಬೈ, ಚೆನ್ನೈ, ಹೈದರಾಬಾದ್, ಕೊಲ್ಕತಾ, ಪುಣೆಗಳಲ್ಲಿ ಇವಿಗಳಿಗೆ ಚಾಲನೆ ನೀಡಲಿದೆ. ಈ ಇವಿಗಳ ಅನುಷ್ಠಾನದೊಂದಿಗೆ ಮೂವಿನ್ ಮುಂದಿನ 12 ತಿಂಗಳಲ್ಲಿ 200 ಟನ್‌ಗಳಷ್ಟು ಇಂಗಾಲದ ಡೈ ಆಕ್ಸೈಡ್ ಅನ್ನು ಕಡಿಮೆ ಮಾಡುವ ಗುರಿ ಹೊಂದಿರುವುದಾಗಿ ಹೇಳಿಕೊಂಡಿದೆ.

ಮೂವಿನ್ ಬಿ2ಬಿ ಲಾಜಿಸ್ಟಿಕ್ಸ್ ಬ್ರಾಂಡ್ ಆಗಿದ್ದು, ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಪೆರಿಫೆರಲ್ಸ್, ಅಪೇರೆಲ್ಸ್, ಆರೋಗ್ಯಸೇವಾ ಸಾಧನ, ವಾಹನದ ಬಿಡಿಭಾಗಗಳು, ಇ-ಕಾಮರ್ಸ್, ಔಷಧಿ, ಗ್ರಾಹಕ ಉತ್ಪನ್ನಗಳು ಮತ್ತು ಎಫ್ಎಂಸಿಜಿಯ ವಿಸ್ತಾರ ವಲಯಗಳಲ್ಲಿ ಗ್ರಾಹಕರಿಗೆ ಪೂರೈಕೆ ಮಾಡುತ್ತದೆ. ಕಂಪನಿಯು ಒಂದು ವರ್ಷದಲ್ಲಿ 49 ನಗರಗಳಿಗೆ ತನ್ನ ಜಾಲವನ್ನು ವಿಸ್ತರಿಸಿರುವುದಾಗಿ ಹೇಳಿಕೊಂಡಿದೆ.
ಇನ್ನು ಬೆಂಗಳೂರಿನಲ್ಲಿ ಪರಿಚಯಿಸಿರುವ ಹೊಸ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೇಳುವುದಾದ್ರೆ, ಪ್ರತಿ ಇವಿಯೂ 850 ಕೆ.ಜಿ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಇದು ಸಿಂಗಲ್ ಚಾರ್ಜ್‌ನಲ್ಲಿ 120 ಕಿ.ಮೀ ಓಡುತ್ತದೆ. ಲಾಜಿಸ್ಟಿಕ್ಸ್‌ಗೆ ಹೇಳಿಮಾಡಿಸಿದ ವಾಹನವಾಗಿದ್ದು, ಇಂಧನ ಖರ್ಚು ಹಾಗೂ ನಿರ್ವಹಣೆಯಲ್ಲಿ ವ್ಯಯಿಸುವ ಬಹುಪಾಲನ್ನು ಉಳಿಸಬಹುದು ಎಂದು ಕಂಪನಿ ಹೇಳಿದೆ.
ತನ್ನ ಮೊದಲ ಮತ್ತು ಕೊನೆಯ ಹಂತದ ಡೆಲಿವರಿಗಳಿಗೆ ಎಲೆಕ್ಟ್ರಿಕ್ ವಾಹನಗಳ(ಇವಿಗಳು) ಅನುಷ್ಠಾನದ ನಿರ್ಧಾರವು ಸಕಾರಾತ್ಮಕ ಮತ್ತು ಪರಿಸರ ಮೇಲಿನ ಜವಾಬ್ದಾರಿಯುತ ಆಯ್ಕೆಯಾಗಿದೆ. ಈ ಪರಿವರ್ತನೆಯು ಇಂಗಾಲದ ಹೊರಹೊಮ್ಮುವಿಕೆಗಳನ್ನು ಕಡಿಮೆ ಮಾಡಲು, ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಹೆಚ್ಚು ಸುಸ್ಥಿರ ಭವಿಷ್ಯಕ್ಕೆ ಮೂವಿನ್ ನ ಬದ್ಧತೆಯನ್ನು ನಿರೂಪಿಸುವುದಾಗಿ ಹೇಳಿಕೊಂಡಿದೆ.
ಮೂವಿನ್ ವಾಹನಗಳಿಂದ ಗ್ರಾಹಕರು ದೀರ್ಘಾವಧಿಯಲ್ಲಿ ಕಡಿಮೆ ಇಂಧನ ಮತ್ತು ನಿರ್ವಹಣೆಯ ವೆಚ್ಚಗಳ ಮೂಲಕ ವೆಚ್ಚ ಉಳಿತಾಯ ಮಾಡಲು ಸಹಕಾರಿಯಾಗಲಿವೆ. ಆದ್ದರಿಂದ ಮೂವಿನ್ ಮುಂದಿನ ತಿಂಗಳುಗಳಲ್ಲಿ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ವಾಹನಗಳ ಪ್ರಮಾಣ ಹೆಚ್ಚಿಸಲು ಯೋಜಿಸಿದೆ. ನಂತರ ಬೇಡಿಕೆಗೆ ಅನುಗುಣವಾಗಿ ಎಲ್ಲಾ ರಾಜ್ಯಗಳಲ್ಲೂ ತಮ್ಮ ವ್ಯಾಪಾರವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.
ಮೂವಿನ್ ಎಕ್ಸ್ ಪ್ರೆಸ್ ನ ನಿರ್ದೇಶಕ ಜೆಬಿ ಸಿಂಗ್ ಮಾತನಾಡಿ, "ಮೂವಿನ್ ನಲ್ಲಿ ನಾವು ಸ್ವಚ್ಛ ಶಕ್ತಿಯ ಮೊಬಿಲಿಟಿ ಪರಿಹಾರಗಳಿಗೆ ವೇಗ ತುಂಬಲು ಬದ್ಧರಾಗಿದ್ದು, ಲಾಜಿಸ್ಟಿಕ್ಸ್ ಉದ್ಯಮದಲ್ಲಿ ಸುಸ್ಥಿರತೆ, ಸಮುದಾಯ ಮತ್ತು ತಂತ್ರಜ್ಞಾನದ ಅಳವಡಿಕೆಗೆ ಆದ್ಯತೆ ನೀಡುವ ಮೂಲಕ ಸಕಾರಾತ್ಮಕ ಬದಲಾವಣೆಯನ್ನು ಉತ್ತೇಜಿಸುತ್ತಿದ್ದೇವೆ. ನಾವು ಮುಂದಿನ ತಿಂಗಳುಗಳಲ್ಲಿ ಹಲವಾರು ನಗರಗಳಲ್ಲಿ ನಮ್ಮ ವಾಹನಗಳ ವಿದ್ಯುಚ್ಛಾಲಿತಗೊಳಿಸುವುದನ್ನು ಮುಂದುವರಿಸಲು ಬದ್ಧರಾಗಿದ್ದೇವೆ" ಎಂದರು.
ಇವಿಗಳ ಬಿಡುಗಡೆ ಕುರಿತು ಆಫ್ರಿಕಾದ ಉಪಾಧ್ಯಕ್ಷ ಗೊಬಾಬ್ಲೆ ಮಾತನಾಡಿ, "ನಮ್ಮ ಮೂವಿನ್ ತಂಡದ ಕುರಿತು ನಾವು ಅಪಾರ ಹೆಮ್ಮೆ ಹೊಂದಿದ್ದೇವೆ. ಭಾರತದಲ್ಲಿ ಸುಸ್ಥಿರ ಲಾಜಿಸ್ಟಿಕ್ಸ್ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನಮ್ಮ ಪ್ರಯತ್ನಗಳಿಗೆ ವೇಗ ತುಂಬಲಿದೆ. ಯುಪಿಎಸ್‌ನಲ್ಲಿ ನಮ್ಮ ವಾಹನಗಳ ವಿದ್ಯುದೀಕರಣ ನಮಗೆ 2025ರ ವೇಳೆಗೆ ಶೇ.40ರಷ್ಟು ಗುರಿ ಹಾಗೂ 2050ರ ವೇಳೆಗೆ ಇಂಗಾಲದ ತಟಸ್ಥತೆ ಸಾಧಿಸಲು ನೆರವಾಗುತ್ತದೆ ಎಂದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








