Maruti Swift: ಹೊಸ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಮೈಲೇಜ್ ಬಹಿರಂಗ!, ಬೈಕ್‌ನಂತೆ ಇದ್ಯಾ?
ಟೋಕಿಯೊದಲ್ಲಿ ನಡೆದ ಜಪಾನೀಸ್ ಮೊಬಿಲಿಟಿ ಶೋ (Japanese Mobility Show)ನಲ್ಲಿ ಕಳೆದ ತಿಂಗಳು ಸುಜುಕಿ (Suzuki), ನಾಲ್ಕನೇ ತಲೆಮಾರಿನ ಸ್ವಿಫ್ಟ್ (fourth-generation Swift) ಕಾರನ್ನು ಅನಾವರಣಗೊಳಿಸಿತ್ತು. ಭಾರತದಲ್ಲೂ ಹೊಸ ಸ್ವಿಫ್ಟ್ ಪರೀಕ್ಷೆ ನಡೆಸಲು ಮಾರುತಿ ಪ್ರಾರಂಭಿಸಿದ್ದು, ಈ ಕಾರಿನ ಮೈಲೇಜ್ ಬಗ್ಗೆ ಒಂದಿಷ್ಟು ವಿವರಗಳು ಸೋರಿಕೆಯಾಗಿವೆ.
ಮುಂದಿನ ವರ್ಷ (2024) ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift), ಹೊಸದಾದ 1.2 - ಲೀಟರ್, 3 - ಸಿಲಿಂಡರ್, ಝಡ್12ಇ ಎಂಜಿನ್ ಹೊಂದಿರಲಿದೆ. ಸದ್ಯಕ್ಕೆ ಕಾರ್ಯಕ್ಷಮತೆ ಕುರಿತು ಮಾಹಿತಿ ಲಭ್ಯವಿಲ್ಲ. ಆದರೂ 100 bhp ಗರಿಷ್ಠ ಪವರ್ ಹಾಗೂ 150 Nm ಪೀಕ್ ಟಾರ್ಕ್ ಉತ್ಪಾದಿಸಬಹುದು. ಸಿವಿಟಿ ಗೇರ್ ಬಾಕ್ಸ್, ಆಯ್ಕೆಯಲ್ಲೂ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಹೊಸ ಮಾರುತಿ ಸುಜುಕಿ ಸ್ವಿಫ್ಟ್ ನಾನ್ ಹೈಬ್ರಿಡ್ ಮತ್ತು ಹೈಬ್ರಿಡ್ ಎಂಜಿನ್ ಹೊಂದಿರುವ ಕಾರು, 23.40 kmpl - 24.50 kmpl ಮೈಲೇಜ್ ನೀಡಬಹುದು ಎಂದು ಹೇಳಲಾಗಿದೆ. ಪ್ರಸ್ತುತ ಭಾರತದಲ್ಲಿ ಮಾರಾಟವಾಗುವ ಮಾರುತಿ ಸುಜುಕಿ ಸ್ವಿಫ್ಟ್ 1.2 - ಲೀಟರ್, 4 ಸಿಲಿಂಡರ್, ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್‌ನಿಂದ ಹೊಂದಿದ್ದು,, 22.38 kmpl - 22.56 kmpl ಇಂಧನ ದಕ್ಷತೆ ಹೊಂದಿದೆ.
ಈ ನೂತನ ಮಾರುತಿ ಸುಜುಕಿ ಸ್ವಿಫ್ಟ್ ವಿನ್ಯಾಸ ಹಾಗೂ ವೈಶಿಷ್ಟ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಹೊಂದಿರಲಿದೆ. ಪ್ರಮುಖವಾಗಿ, ಹ್ಯಾಚ್‌ಬ್ಯಾಕ್ ಮರು-ವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್, ಹೊಸದಾದ ಕಪ್ಪು ಬಣ್ಣದ ಗ್ರಿಲ್ ಅನ್ನು ಪಡೆದಿರಲಿದೆ. ಡಿಆರ್‌ಎಲ್ ಕೂಡ ನವೀನವಾಗಿದ್ದು, ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್‌ನ್ನು ಹೊಂದಿರಲಿದ್ದು, ಡ್ಯುಯಲ್ - ಟೋನ್ ವೀಲ್ಸ್ ಒಳಗೊಂಡಿರಲಿದೆ.
ವೈಶಿಷ್ಟ್ಯದ ವಿಚಾರವಾಗಿ ಹೇಳುವುದಾದರೆ, ಹೊಸದಾದ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಕನೆಕ್ಟ್ ಕಾರ್ ಕಾರ್ ಟೆಕ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಅನ್ನು ಹೊಂದಿರುವ ಸಾಧ್ಯತೆಯಿದೆ. ಸುರಕ್ಷತೆ ದೃಷ್ಟಿಯಿಂದ ಕೂಡ ಅತ್ಯುತ್ತಮವಾಗಿದ್ದು, 360-ಡಿಗ್ರಿ ಕ್ಯಾಮೆರಾ, ಡ್ಯುಯಲ್ ಸೆನ್ಸರ್ ಬ್ರೇಕ್ ಸಪೋರ್ಟ್, ಅಡಾಪ್ಟಿವ್ ಹೈ ಬೀಮ್ ಅಸಿಸ್ಟ್, ಡ್ರೈವರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಪಡೆದಿರಲಿದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಾರುತಿ ಸುಜುಕಿ ಸ್ವಿಫ್ಟ್ 5.99 ಲಕ್ಷದಿಂದ ರೂ.9.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಜೊತೆಗೆ ಪೆಟ್ರೋಲ್, ಸಿಎನ್‌ಜಿ ಎಂಜಿನ್ ಹಾಗೂ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿದೆ. ಮೈಲೇಜ್ ವಿಚಾರಕ್ಕೆ ಬರುವುದಾದರೆ, 22.38 - 22.56 kmpl ಇಂಧನ ದಕ್ಷತೆಯನ್ನು ಹೊಂದಿದೆ.
ವೈಶಿಷ್ಟ್ಯದ ವಿಚಾರಕ್ಕೆ ಬರುವುದಾದರೆ, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಸಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಸೇಫ್ಟಿ ಸಲುವಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಹಿಲ್-ಹೋಲ್ಡ್ ಕಂಟ್ರೋಲ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಒಳಗೊಂಡಿದೆ.
ಇನ್ನು, ಹೊಸ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್, ಮುಂದಿನ ವರ್ಷದ ಆರಂಭದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ವೈಶಿಷ್ಟ್ಯದ ವಿಚಾರದಲ್ಲಿಯೂ ಹೆಚ್ಚು ಅತ್ಯಾಧುನಿಕವಾಗಿರಲಿದ್ದು, ಲಾಂಚ್ ಆದ ಮೇಲೆ ಎಲ್ಲದಕ್ಕೂ ಉತ್ತರ ಸಿಗಲಿದೆ. ಅಲ್ಲಿಯವರೆಗೂ ಕಾಯಬೇಕು ಅಷ್ಟೇ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications