ಆಕರ್ಷಕ ಬೆಲೆಯಲ್ಲಿ ಹೊಸ ಹೋಂಡಾ ಎಲಿವೇಟ್ ಬಿಡುಗಡೆ: ಮಾರುತಿ-ಟೊಯೊಟಾಗೆ ನಡುಕ ಶುರು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ ತನ್ನ ಬಹುನಿರೀಕ್ಷಿತ ಹೊಸ ಹೋಂಡಾ ಎಲಿವೇಟ್ (Honda Elevate) ಎಸ್‍ಯುವಿಯನ್ನು ಭಾರತಿಯ ಮಾರುಕಟ್ಟೆಯಲ್ಲಿ ಕೊನೆಗೂ ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಎಲಿವೇಟ್ ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10,99,900 ಆಗಿದೆ.
ಹೊಸ ಹೋಂಡಾ ಎಲಿವೇಟ್ ಎಸ್‍ಯುವಿಯ ಟಾಪ್ ಎಂಡ್ ವೆರಿಯಂಟ್‌ನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.16 ಲಕ್ಷವಾಗಿದೆ. ಈ ಹೊಸ ಹೋಂಡಾ ಎಲಿವೇಟ್ ಎಸ್‍ಯುವಿಯ SV, V, VX ಮತ್ತು ZX ಎಂಬ ನಾಲ್ಕು ಟ್ರಿಮ್ ಹಂತಗಳಲ್ಲಿ ಲಭ್ಯವಿದೆ. ಹೊಸ ಹೋಂಡಾ ಎಲಿವೇಟ್ ಎಸ್‌ಯುವಿಯಲ್ಲಿ 1.5-ಲೀಟರ್, ಡಿಒಹೆಚ್‌ಸಿ, 4-ಸಿಲಿಂಡರ್, ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5ನೇ ತಲೆಮಾರಿನ ಹೋಂಡಾ ಸಿಟಿಯಲ್ಲಿ ಲಭ್ಯವಿದೆ.

ಎಲಿವೇಟ್ ಎಸ್‍ಯುವಿ ಈ ಎಂಜಿನ್ 6,600rpm ನಲ್ಲಿ 119.4 bhp ಪವರ್ ಮತ್ತು 4,300rpm ನಲ್ಲಿ 145 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೋಂಡಾ ಎಲಿವೇಟ್ ಎಸ್‌ಯುವಿಯಲ್ಲಿ ಈ 1.5-ಲೀಟರ್ ಎಂಜಿನ್ ಹೊಂದಿರುವ ಟ್ರಾನ್ಸ್‌ಮಿಷನ್ ಆಯ್ಕೆಗಳು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು ಸಿವಿಟಿ ಗೇರ್‌ಬಾಕ್ಸ್ ಅನ್ನು ಒಳಗೊಂಡಿವೆ.
ಹೋಂಡಾ ಪ್ರಕಾರ, ಹೋಂಡಾ ಎಲಿವೇಟ್ ಎಸ್‍ಯುವಿ ಮ್ಯಾನುವಲ್ ರೂಪಾಂತರವು 15.31 ಕಿ.ಮೀ ಮೈಲೇಜ್ ನೀಡಿದರೆ, CVT ರೂಪಾಂತರವು 16.92 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಹೋಂಡಾ ಎಲಿವೇಟ್ ಎಸ್‍ಯುವಿಯನ್ನು ಹೋಂಡಾ ಆರ್&ಡಿ ಏಷ್ಯಾ ಪೆಸಿಫಿಕ್, ಥೈಲ್ಯಾಂಡ್ ಅಭಿವೃದ್ಧಿಪಡಿಸಿದೆ. ಈ ಹೊಸ ಎಸ್‍ಯುವಿಯು ಅತ್ಯಾಧುನಿಕ ಸೌಕರ್ಯ ಮತ್ತು ತಂತ್ರಜ್ಞಾನದ ಜೊತೆಗೆ ಸ್ಥಿತಿ ಮತ್ತು ಹೆಚ್ಚು ವಿಶೇಷವಾದ ಖರೀದಿದಾರರನ್ನು ಆಕರ್ಷಿಸಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಈ ಹೊಸ ಎಸ್‍ಯುವಿ ಮಾದರಿಯ ವಿನ್ಯಾಸವು ನ್ಯೂ ಜನರೇಷನ್ CR-V ಮತ್ತು WR-V ಎಸ್‍ಯುವಿಗಳಿಂದ ಸ್ಫೂರ್ತಿ ಪಡೆದಿದೆ. ಇವುಗಳು ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಹೊಸ ಹೋಂಡಾ ಎಲಿವೇಟ್ ಎಸ್‍ಯುವಿಯ ಮಧ್ಯದಲ್ಲಿ ದೊಡ್ಡ ಸಿಗ್ನೇಚರ್ ಬ್ಯಾಡ್ಜ್‌ನೊಂದಿಗೆ ಫ್ಲಾಟ್ ನೋಸ್, ಮೆಶ್ ಇನ್ಸರ್ಟ್‌ನೊಂದಿಗೆ ಪರಿಚಿತ ಗ್ರಿಲ್ ಮತ್ತು ದಪ್ಪ ಕ್ರೋಮ್ ಸ್ಲೇಟ್ ಹೊಂದಿದೆ.
ಈ ಹೊಸ ಹೋಂಡಾ ಎಲಿವೇಟ್ ಎಸ್‍ಯುವಿಯ ರೂಪಾಂತರಗಳ ಅನುಗುಣವಾಗಿ ಫಿಚರ್ಸ್ ಗಳನ್ನು ಬಹಿರಂಗಪಡಿಸಿದೆ. ಇದರಲ್ಲು SV ರೂಪಾಂತರದಲ್ಲಿ, ಬೀಜ್ ಫ್ಯಾಬ್ರಿಕ್ ಅಪ್ಹೋಲ್ಸ್ಟರಿ ಮತ್ತು 60:40 ಸ್ಪ್ಲಿಟ್ ಹಿಂಬದಿ ಸೀಟುಗಳನ್ನು ಹೊಂದಿವೆ. ಇದರೊಂದಿಗೆ ಆಟೋ AC ವಿಟ್ hPM 2.5 ಕ್ಯಾಬಿನ್ ಏರ್ ಪ್ಯೂರಿಫೈಯಿಂಗ್ ಫಿಲ್ಟರ್, ಎಂಜಿನ್ ಪುಶ್ ಬಟನ್ ಜೊತೆಗೆ ಹೋಂಡಾ ಸ್ಮಾರ್ಟ್ ಎಂಟ್ರಿ ಸಿಸ್ಟಮ್, ಡ್ಯುಯಲ್ ಫ್ರಂಟ್ SRS ಏರ್‌ಬ್ಯಾಗ್‌ಗಳು, LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು LED ಟೈಲ್‌ಲ್ಯಾಂಪ್‌ಗಳಿವೆ.
ಈ ಹೊಸ ಎಸ್‍ಯುವಿಯ V ರೂಪಾಂತರದಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ವೈರ್‌ಲೆಸ್ ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಹೋಂಡಾ ಕನೆಕ್ಟ್ ಹೊಂದಿದೆ. ಇದರೊಂದಿಗೆ 8-ಸ್ಪೀಕರ್ ಆಡಿಯೊ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಮತ್ತು HFT ಸ್ವಿಚ್‌ಗಳು, ಮಲ್ಟಿ-ಆಂಗಲ್ ರಿಯರ್ ವ್ಯೂ ಕ್ಯಾಮೆರಾ ಮತ್ತು ಇತರ ಫೀಚರ್ಸ್ ಗಳನ್ನು ಹೊಂದಿವೆ.
ಹೋಂಡಾ ಎಲಿವೇಟ್ ಎಸ್‍ಯುವಿಯ VX ರೂಪಾಂತರದಲ್ಲಿ 7-ಇಂಚಿನ HD ಬಣ್ಣದ TFT ಮೀಟರ್ ಕ್ಲಸ್ಟರ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, 6-ಸ್ಪೀಕರ್ ಆಡಿಯೊ ಸಿಸ್ಟಮ್, ಲೇನ್‌ವಾಚ್ ಕ್ಯಾಮೆರಾ ಮತ್ತು ಒನ್-ಟಚ್ ಎಲೆಕ್ಟ್ರಿಕ್ ಸನ್‌ರೂಫ್ ಆಟೋವನ್ನು ಹೊಂದಿದೆ. ಹೋಂಡಾ ಎಲಿವೇಟ್ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರ್ಡರ್, ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮತ್ತು ಶೇರ್ ಮಾಡಲ್ಯ್ ಮರೆಯದಿರಿ.


Click it and Unblock the Notifications








