ಆಕರ್ಷಕ ಬೆಲೆ, ಸನ್‌ರೂಫ್‌ನೊಂದಿಗೆ ಧೂಳಿಬ್ಬಿಸಲು ರೆಡಿಯಾಗುತ್ತಿದೆ ಹೊಸ ಹೋಂಡಾ ಎಸ್‍ಯುವಿ
ಹೋಂಡಾ ಕಾರ್ಸ್ ಇಂಡಿಯಾ ತನ್ನ ಹೊಸ ಮಿಡ್ ಸೈಜ್ ಎಸ್‍ಯುವಿಯನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಹೊಸ ಹೋಂಡಾ ಎಲಿವೇಟ್ ಎಸ್‍ಯುವಿಯು ಜೂನ್ 6 ರಂದು ನವ ದೆಹಲಿಯಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ. ಐದು-ಸೀಟರ್ ಬ್ರ್ಯಾಂಡ್‌ನ ಪರಿಮಾಣದ ಮಾರಾಟಕ್ಕೆ ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ಹೋಂಡಾ ಎಲಿವೇಟ್ ಐದನೇ ತಲೆಮಾರಿನ ಸಿಟಿಯೊಂದಿಗೆ ಹಲವಾರ ಸಾಮ್ಯತೆಗಳನ್ನು ಹೊಂದಿರುತ್ತದೆ.
ಹೋಂಡಾ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಅಮೇಜ್ ಮತ್ತು ಸಿಟಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಮಿಡ್ ಸೈಜ್ ಎಸ್‍ಯುವಿಯು ಈಗಾಗಲೇ ಸ್ಪಾಟ್ ಟೆಸ್ಟ್ ನಡೆಸುತ್ತಿರುವಾಗ ಹಲವು ಬಾರಿ ಕಾಣಿಸಿಕೊಂಡಿದೆ. ಇದು ಸುಮಾರು 4.2-4.3 ಮೀಟರ್ ಉದ್ದವನ್ನು ಹೊಂದಿದೆ. ಹೋಂಡಾ ಎಲಿವೇಟ್ ಕಳೆದ ವರ್ಷ ಪರಿಚಯಿಸಲಾದ ಇತ್ತೀಚಿನ CR-V ಮತ್ತು ಹೊಸ ತಲೆಮಾರಿನ WR-V ನಂತಹ ಎಸ್‍ಯುವಿಗಳಂತಹ ಜಾಗತಿಕ ಮಾದರಿಗಳ ಪ್ರೇರಣೆಯನ್ನು ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಹೋಂಡಾ ಎಲಿವೇಟ್ ಎಸ್‌ಯುವಿಯನ್ನು ಭಾಗಶಃ ಎಲ್‌ಇಡಿ ಡಿಆರ್‌ಎಲ್‌ಗಳು, ಸನ್‌ರೂಫ್, ಶಾರ್ಕ್ ಫಿನ್ ಆಂಟೆನಾ ಮತ್ತು ಸ್ಪೋರ್ಟಿ ರಿಯರ್ ವಿಭಾಗದೊಂದಿಗೆ ಅದರ ನಯವಾದ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಂತೆ ಬಹಿರಂಗಪಡಿಸಿದೆ. ಈ ಎಸ್‍ಯುವಿಯು ದಪ್ಪವಾದ ಬಾಡಿ ಕ್ಲಾಡಿಂಗ್, ಬ್ಲ್ಯಾಕ್ಡ್-ಔಟ್ ಪಿಲ್ಲರ್‌ಗಳು, ಪ್ರಮುಖ ವ್ಹೀಲ್ ಅರ್ಚಾರ್, ಅಲಾಯ್ ವ್ಹೀಲ್ಸ್ ಮತ್ತು ಹೊಸ-ಜನ್ WR-V (ಗ್ಲೋಬಲ್-ಸ್ಪೆಕ್) ಅನ್ನು ಹೋಲುವ ಟೈಲ್‌ಲ್ಯಾಂಪ್‌ಗಳನ್ನು ಹೊಂದಿರುತ್ತದೆ ಎಂದು ಸ್ಪೈ ಚಿತ್ರಗಳು ಬಹಿರಂಗಪಡಿಸಿದೆ..
ಹೋಂಡಾ ಎಲಿವೇಟ್ ಐದನೇ-ಜನರೇಷನ್ ಸಿಟಿಯಂತೆಯೇ ಅದೇ ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿರುತ್ತದೆ. ಇನ್ನು ಈ ಹೋಂಡಾ ಎಲಿವೇಟ್ ಎಸ್‍ಯುವಿ ಹಿಂಭಾಗವು WR-V ಅನ್ನು ಹೋಲುವಂತೆ ಕಾಣುತ್ತದೆ ಮತ್ತು ಸುತ್ತುವ ಟೈಲ್ ಲ್ಯಾಂಪ್‌ಗಳು ಮತ್ತು ಸ್ವಲ್ಪ ಮಸ್ಕಲರ್ ಟೈಲ್‌ಗೇಟ್. ಹೋಂಡಾ ಎಲಿವೇಟ್ ಐದನೇ ಜನರೇಷನ್ ಸಿಟಿಯಂತೆಯೇ ಅದೇ ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿರುತ್ತದೆ.

ಈ ಹೊಸ ಹೋಂಡಾ ಎಲಿವೇಟ್ ಎಸ್‍ಯುವಿಯಲ್ಲಿ ಸಿಟಿ ಸೆಡಾನ್‌ನಿಂದ ಎರವಲು ಪಡೆದ 1.5 ಲೀಟರ್, ನ್ಯಾಚುರಲ್ ಆಸ್ಪರರ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಇದನ್ನು ನೀಡಬಹುದು ಎಂದು ಹೇಳಲಾಗುತ್ತಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು CVT ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಈ ಎಂಜಿನ್ 126 bhp ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಾರು ತಯಾರಕರು ಎಸ್‍ಯುವಿಯನ್ನು ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ತರಬಹುದು ಎಂದು ಹೇಳಲಾಗುತ್ತಿದೆ.
ಇನ್ನು 1.5 ಲೀಟರ್ ಪೆಟ್ರೋಲ್ ಅಟ್ಕಿನ್ಸನ್ ಸೈಕಲ್, ಮತ್ತು eCVT ಗೇರ್‌ಬಾಕ್ಸ್. ಸಿಟಿ ಹೈಬ್ರಿಡ್‌ನಲ್ಲಿ, ಸೆಟಪ್ 126 bhp ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡೂ ಪವರ್‌ಟ್ರೇನ್‌ಗಳು RDE ಮಾನದಂಡಗಳನ್ನು ಮತ್ತು E20 ಕಂಪ್ಲೈಂಟ್‌ಗಳನ್ನು ಪೂರೈಸುತ್ತವೆ. NA ಪೆಟ್ರೋಲ್ ಯುನಿಟ್ 17.8 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಇದರ ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಯು 27.13 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಈ ಹೊಸ ಹೋಂಡಾ ಎಲಿವೇಟ್ ಎಸ್‍ಯುವಿಯಲ್ಲಿ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಇಂಟಿಗ್ರೇಷನ್‌ನೊಂದಿಗೆ ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ.ಈ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು ಮತ್ತು ADAS ನ ಸೂಟ್ ಅನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಡ್ರೈವರ್ ಅಸಿಸ್ಟ್ ಮತ್ತು ಇತರ ಸುರಕ್ಷತಾ ತಂತ್ರಜ್ಞಾನಗಳನ್ನು ಹೊಂದಿಲ್ಲ. ಬೆಲೆಗೆ ಸಂಬಂಧಿಸಿದಂತೆ, ಇದರ ಎಂಟ್ರಿ ಲೆವೆಲ್ ರೂಪಾಂತರವು ಸುಮಾರು 12 ಲಕ್ಷ ರೂಪಾಯಿಗಳಾಗಿರುತ್ತದೆ.
ಇನ್ನು ಈ ಎಸ್‍ಯುವಿಯ ಟಾಪ್-ಎಂಡ್ ರೂಪಾಂತರವು 19 ಲಕ್ಷದವರೆಗೆ ವೆಚ್ಚವಾಗಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಈ ಹೊಸ ಹೋಂಡಾ ಎಲಿವೇಟ್ ಮಿಡ್ ಸೈಜ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರ್ಡರ್, ಎಂಜಿ ಆಸ್ಟರ್, ವಿಡಬ್ಲ್ಯೂ ಟೈಗನ್, ಸ್ಕೋಡಾ ಕುಶಾಕ್ ಮತ್ತು ಇತರ ಮಾದರಿಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications








