ಹೊಸ ಹೋಂಡಾ ಎಸ್‍ಯುವಿ ಉತ್ಪಾದನೆ ಪ್ರಾರಂಭ: ಮಾರುತಿ-ಟೊಯೊಟಾ ಎದೆಯಲ್ಲಿ ನಡುಕ ಶುರು

ಭಾರತೀಯ ವಾಹನ ಮಾರುಕಟ್ಟೆಯು ಭಾರೀ ಬೆಳವಣಿಗೆಯನ್ನು ಸಾಧಿಸುತ್ತಿದೆ. ಇದರಿಂದ ಭಾರತದಲ್ಲಿ ಹಲವು ವಿದೇಶಿ ಕಂಪನಿಗಳು ಹೊಸ ಕಾರುಗಳನ್ನು ಪರಿಚಯಿಸುತ್ತೀವೆ. ಆದರೆ ಜನಪ್ರಿಯ ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಅಮೇಜ್ ಮತ್ತು ಸಿಟಿ ಎಂಬ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿವೆ.

ಇದರಿಂದ ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕೂಡ ತನ್ನ ಕಾರುಗಳ ಸರಣಿಯನ್ನು ವಿಸ್ತರಿಸಲು ಮುಂದಾಗಿದೆ. ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಅತಿ ಹೆಚ್ಚು ಪೈಪೋಟಿ ಹೊಂದಿರುವ ಎಸ್‍ಯುವಿ ವಿಭಾಗದಲ್ಲೇ ಹೊಸ ಮಾದರಿಯನ್ನು ಬಿಡುಗಡೆಗೊಳಿಸುವ ಜೊತೆಗೆ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಇದೀಗ ಹೋಂಡಾ ಕಾರ್ಸ್ ಇಂಡಿಯಾ (HCIL) ದೇಶದಲ್ಲಿ ಎಲಿವೇಟ್ ಎಸ್‍ಯುವಿಯ ಉತ್ಪಾದನೆಯನ್ನು ಪ್ರಾರಂಭಿಸಿದೆ.

Honda Elevate

ಹೋಂಡಾ ಕಾರ್ ಇಂಡಿಯಾ ಕಂಪನಿಯು ಅಧಿಕೃತ ಬಿಡುಗಡೆಗೆ ಮುಂಚಿತವಾಗಿ, ಈ ಎಸ್‍ಯುವಿಗೆ ಬುಕ್ಕಿಂಗ್ ದಿನದಿಂದ ದೇಶದಲ್ಲಿ 16-18 ವಾರಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಗಮನಾರ್ಹವಾಗಿ, ಇಲ್ಲಿಯವರೆಗಿನ ಒಟ್ಟು ಬುಕಿಂಗ್‌ಗಳಲ್ಲಿ, 40 ಪ್ರತಿಶತದಷ್ಟು ಅಸ್ತಿತ್ವದಲ್ಲಿರುವ ಹೋಂಡಾ ಗ್ರಾಹಕರು ಆಗಿದ್ದಾರೆ. ಇದು ನಿಜಕ್ಕೂ ಗ್ರಾಹಕರಿಗೆ ಕಂಪನಿಯ ಮೇಲೆ ಇರುವ ನಂಬಿಕೆಯನ್ನು ತೋರಿಸುತ್ತದೆ. ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಹೋಂಡಾ 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ.

ಹೋಂಡಾ ಕಾರ್ ಇಂಡಿಯಾ ಇತ್ತೀಚೆಗೆ ಮುಂಬರುವ ಎಲಿವೇಟ್ ಎಸ್‍ಯುವಿಯ ಮೈಲೇಜ್ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ. ಈ ಹೋಂಡಾ ಎಲಿವೇಟ್ ಎಸ್‍ಯುವಿಯು ಮ್ಯಾನುವಲ್ ಮಾದರಿಯು 15.31 ಕಿ.ಮೀ ಮೈಲೇಜ್ ನೀಡಿದರೆ, ಆಟೋಮ್ಯಾಟಿಕ್ ಮಾದರಿಯು 16.92 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಹೊಸ ಎಲಿವೇಟ್ ಎಸ್‍ಯುವಿಯನ್ನು ಭಾರತದಲ್ಲಿ ಈಗಾಗಲೇ ಅನಾವರಣಗೊಳಿಸಲಾಗಿದೆ.

ಈ ಹೊಸ ಹೋಂಡಾ ಎಲಿವೇಟ್ (Honda Elevate) ಎಸ್‍ಯುವಿಯು ಅತ್ಯಾಧುನಿಕ ತಂತ್ರಜ್ಙಾನ ಮತ್ತು ಫೀಚರ್ಸ್ ಗಳೊಂದಿಗೆ ಬರುತ್ತಿದೆ. ಇದು ಹೆಚ್ಚು ಪೈಪೋಟಿ ಹೊಂದಿರುವ ಮಿಡ್ ಎಸ್‍ಯುವಿ ವಿಭಾಗದಲ್ಲಿ ಸ್ಪರ್ಧಿಸಲು ಸಜ್ಜಾಗಿದೆ. ಈ ಹೋಂಡಾ ಎಲಿವೇಟ್ ಎಸ್‍ಯುವಿಯಲ್ಲಿ 1.5 ಲೀಟರ್, 4-ಸಿಲಿಂಡರ್ ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 121 bhp ಪವರ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಇನ್ನು ಇದರ 1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಯ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಮುಂಬರುವ ಹೋಂಡಾ ಎಲಿವೇಟ್ ಎಸ್‍ಯುವಿಯ ರೂಪಾಂತರಗಳ ಅನುಗುಣವಾಗಿ ಫಿಚರ್ಸ್ ಗಳನ್ನು ಬಹಿರಂಗಪಡಿಸಿದೆ. ಇದರೊಂದಿಗೆ SV ರೂಪಾಂತರದಲ್ಲಿ, ಬೀಜ್ ಫ್ಯಾಬ್ರಿಕ್ ಅಪ್ಹೋಲ್ಸ್ಟರಿ ಮತ್ತು 60:40 ಸ್ಪ್ಲಿಟ್ ಹಿಂಬದಿ ಸೀಟುಗಳನ್ನು ಹೊಂದಿವೆ.

ಇದರೊಂದಿಗೆ ಆಟೋ AC ವಿಟ್ hPM 2.5 ಕ್ಯಾಬಿನ್ ಏರ್ ಪ್ಯೂರಿಫೈಯಿಂಗ್ ಫಿಲ್ಟರ್, ಎಂಜಿನ್ ಪುಶ್ ಬಟನ್ ಜೊತೆಗೆ ಹೋಂಡಾ ಸ್ಮಾರ್ಟ್ ಎಂಟ್ರಿ ಸಿಸ್ಟಮ್, ಡ್ಯುಯಲ್ ಫ್ರಂಟ್ SRS ಏರ್‌ಬ್ಯಾಗ್‌ಗಳು, LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು LED ಟೈಲ್‌ಲ್ಯಾಂಪ್‌ಗಳಿವೆ. ಈ ಎಸ್‍ಯುವಿಯ V ರೂಪಾಂತರದಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ವೈರ್‌ಲೆಸ್ ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಹೋಂಡಾ ಕನೆಕ್ಟ್ ಹೊಂದಿದೆ.

ಇದರೊಂದಿಗೆ 8-ಸ್ಪೀಕರ್ ಆಡಿಯೊ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಮತ್ತು HFT ಸ್ವಿಚ್‌ಗಳು, ಮಲ್ಟಿ-ಆಂಗಲ್ ರಿಯರ್ ವ್ಯೂ ಕ್ಯಾಮೆರಾ ಮತ್ತು ಇತರ ಫೀಚರ್ಸ್ ಗಳನ್ನು ಹೊಂದಿವೆ. ಹೋಂಡಾ ಎಲಿವೇಟ್ ಎಸ್‍ಯುವಿಯ VX ರೂಪಾಂತರದಲ್ಲಿ 7-ಇಂಚಿನ HD ಬಣ್ಣದ TFT ಮೀಟರ್ ಕ್ಲಸ್ಟರ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, 6-ಸ್ಪೀಕರ್ ಆಡಿಯೊ ಸಿಸ್ಟಮ್, ಲೇನ್‌ವಾಚ್ ಕ್ಯಾಮೆರಾ ಮತ್ತು ಒನ್-ಟಚ್ ಎಲೆಕ್ಟ್ರಿಕ್ ಸನ್‌ರೂಫ್ ಆಟೋವನ್ನು ಹೊಂದಿದೆ.

ಹೋಂಡಾ ಎಲಿವೇಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರ್ಡರ್, ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಹೊಸ ನಿವರಹಣ ವೆಚ್ಚ ಮತ್ತು ಉತ್ತಮ ಎಂಜಿನ್ ಮೂಲಕ ಗ್ರಾಹಕರಲ್ಲಿ ವಿಶ್ವಾಸ ಮೂಡಿಸಿದ ಬ್ರ್ಯಾಂಡ್ ಆಗಿದೆ.

More from DriveSpark

Article Published On: Monday, July 31, 2023, 17:14 [IST]
English summary
New honda elevate suv production begins ahead of launch details
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+