ಖಡಕ್ ಲುಕ್, ಅದ್ಬುತ ಮೈಲೇಜ್ ನೀಡುವ Honda Elevate ಎಸ್‌ಯುವಿ ರಿವ್ಯೂ ವಿಡಿಯೋ...

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾದ ಪ್ರಸಿದ್ಧ SUV ಎಂದರೆ CR-V. ಆದ್ರೆ ಇದರ ಬೆಲೆಯಿಂದಾಗಿ ಭಾರತದಲ್ಲಿ ಯಶಸ್ಸನ್ನು ಸಾಧಿಸಲಿಲ್ಲ. ಹಾಗೆಂದು ಹೋಂಡಾ ಸಮೂಹ-ಮಾರುಕಟ್ಟೆಯ SUV ಮಾರ್ಗದಲ್ಲಿ ಹೋಗಲು ಪ್ರಯತ್ನಿಸಲಿಲ್ಲ ಎಂದರ್ಥವಲ್ಲ. ಇದರ ಬಳಿಕ BR-V ಕೂಡ ಬಂತು, ಆದ್ರೆ ಸರಿಯಾದ SUV ನಂತೆ ಕಾಣಲಿಲ್ಲ.

ಮಾರಾಟ ಕೂಡ ಅಷ್ಟಕ್ಕಷ್ಟೇ ಇದ್ದ ಕಾರಣ ಇದು ಕೂಡ ಅಷ್ಟೇನು ಕ್ಲಿಕ್ ಆಗಲಿಲ್ಲ. ಆದರೆ ಇದೀಗ SUV ವಿಭಾಗವನ್ನು ಆಳಲು ಹೊಸ ಎಸ್‌ಯುವಿ ಎಲಿವೇಟ್‌ನೊಂದಿಗೆ ಹೋಂಡಾ ಹಿಂತಿರುಗಿದೆ. ಹಾಗಾದರೆ Honda Elevate ಭಾರತೀಯ SUV ವಿಭಾಗದಲ್ಲಿ ಕ್ರಾಂತಿ ಸೃಷ್ಟಿಸಲಿದೆಯೇ? ಇದನ್ನು ನಾವೇ ತಿಳಿದುಕೊಳ್ಳಲು ಉದಯಪುರದಲ್ಲಿ ಹೊಸ ಹೋಂಡಾ ಎಲಿವೇಟ್ ಅನ್ನು ಓಡಿಸಿದ್ದೇವೆ. ಕಾರಿನ ಸಂಪೂರ್ಣ ರಿವ್ಯೂವನ್ನು ಕೆಳಗೆ ನೋಡೋಣ.

ಎಲಿವೇಟ್ ನ್ಯಾಚುರಲ್ಲಿ ಆಸ್ಪಿರೇಟೆಡ್ DOHC, 1.5-ಲೀಟರ್, 4 ಸಿಲಿಂಡರ್, i-VTEC ಪೆಟ್ರೋಲ್ ಎಂಜಿನ್ ಹೊಂದಿದೆ. ಹೊಸ ಹೋಂಡಾ ಎಲಿವೇಟ್‌ನಲ್ಲಿ, ಎಂಜಿನ್ 6,600 ಆರ್‌ಪಿಎಂ ನಲ್ಲಿ 119.35 ಬಿಹೆಚ್‌ಪಿ ಪವರ್ ಮತ್ತು 4,300 ಆರ್‌ಪಿಎಂ ನಲ್ಲಿ 145 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ.

ಎಲಿವೇಟ್ ತನ್ನ ಮುಂಭಾಗದ ಚಕ್ರಗಳಿಗೆ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ CVT ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನಿಂದ ಸಹಾಯವನ್ನು ನೀಡುತ್ತದೆ. ಮ್ಯಾನುಯಲ್ ಗೇರ್‌ಬಾಕ್ಸ್‌ನೊಂದಿಗೆ ಎಲಿವೇಟ್ 15.31km/l ಮೈಲೇಜ್ ಅನ್ನು ಹಿಂದಿರುಗಿಸುತ್ತದೆ, ಹಾಗೆಯೇ CVT ನೋಡಿಕೊಂಡರೆ 16.92km/l ಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

new-honda-elevate-suv-review-video

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಹೋಂಡಾ ಎಲಿವೇಟ್ ಮೂಲಕ ಜಪಾನಿನ ಸಂಸ್ಥೆಯು ಅಂತಿಮವಾಗಿ ತನ್ನ SUV ಯನ್ನು ಭಾರತೀಯ ಮಾರುಕಟ್ಟೆಯಲ್ಲಿ ನೆಲೆಯೂರುವಂತೆ ಮಾಡಲು ನೋಡುತ್ತಿದೆ. ಅದರ ಬಾಕ್ಸಿ ಆಕಾರ, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ಆರಾಮದಾಯಕ ಕ್ಯಾಬಿನ್ ಮತ್ತು ಪವರ್‌ಟ್ರೇನ್‌ಗಳೊಂದಿಗೆ, ಹೋಂಡಾ ಎಲಿವೇಟ್ ಹ್ಯುಂಡೈ, ಕಿಯಾ, ಮಾರುತಿ ಮತ್ತು ಟೊಯೊಟಾದ ಕಾರುಗಳಿಂದ ಗ್ರಾಹಕರನ್ನು ತನ್ನತ್ತ ಸೆಳೆಯಲು ಉತ್ತಮ ಆಯ್ಕೆಯನ್ನು ನೀಡುತ್ತಿದೆ.

More from DriveSpark

Article Published On: Tuesday, August 1, 2023, 11:36 [IST]
English summary
New honda elevate suv review video
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+