ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಸಜ್ಜಾದ ಹೋಂಡಾ ಎಸ್‍ಯುವಿ: ಮಾರುತಿ-ಟೊಯೊಟಾಗೆ ನಡುಕ ಶುರು
ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ತನ್ನ ಹೊಸ ಮಿಡ್ ಸೈಜ್ ಎಸ್‍ಯುವಿಯನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಹೊಸ ಹೋಂಡಾ ಎಲಿವೇಟ್ ಎಸ್‍ಯುವಿಯು ಜೂನ್ 6 ರಂದು ನವ ದೆಹಲಿಯಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ. ಈ ಹೊಸ ಹೋಂಡಾ ಎಲಿವೇಟ್ ಎಸ್‍ಯುವಿಯು ಅತ್ಯಾಧುನಿಕ ತಂತ್ರಜ್ಙಾನ ಮತ್ತು ಫೀಚರ್ಸ್ ಗಳೊಂದಿಗೆ ಬರಲಿದೆ.
ಹೊಸ ಹೋಂಡಾ ಎಲಿವೇಟ್ ಎಸ್‍ಯುವಿಯು ಜನಪ್ರಿಯ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಭಾರತದಲ್ಲಿ ಮುಂಬರುವ ಎಲ್ಲಾ ಹೋಂಡಾ ಕಾರುಗಳ ಜೊತೆಗೆ ಎಲಿವೇಟ್ ಈಗ ಹೋಂಡಾ ಸೆನ್ಸಿಂಗ್ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನೊಂದಿಗೆ ಬರಲಿದೆ ಎಂದು ಹೋಂಡಾ ಘೋಷಿಸಿದೆ. ಹೋಂಡಾ ಸೆನ್ಸಿಂಗ್ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಎಂಬುದು ಸುರಕ್ಷತಾ ಫೀಚರ್ ಆಗಿದೆ.

ADAS ಫೀಚರ್ ಚಾಲಕರ ಜಾಗೃತಿಯನ್ನು ಹೆಚ್ಚಿಸಲು ಮತ್ತು ರಸ್ತೆಗಳಲ್ಲಿ ಅಪಘಾತವನ್ನು ಕಡಿಮೆಗೊಳಿಸಲು ವಿನ್ಯಾಸಗೊಳಿಸಲಾದ ಸುರಕ್ಷತಾ ತಂತ್ರಜ್ಞಾನಗಳ ಬ್ರ್ಯಾಂಡ್‌ನ ಸೂಟ್ ಆಗಿದೆ. ಡ್ರೈವಿಂಗ್ ಸುರಕ್ಷತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ವೈಶಿಷ್ಟ್ಯಗಳ ಸಮಗ್ರ ಶ್ರೇಣಿಯನ್ನು ಒದಗಿಸಲು ಇದು ವಿವಿಧ ಸೆನ್ಸರ್ ಗಳನ್ನು ಮತ್ತು ಕ್ಯಾಮೆರಾಗಳನ್ನು ಸಂಯೋಜಿಸುತ್ತದೆ. ಹೋಂಡಾ ಸೆನ್ಸಿಂಗ್‌ನ ಪ್ರಮುಖ ಅಂಶಗಳಲ್ಲಿ ಒಂದಾದ ಕೊಲೆಷನ್ ಮಿಟಿಗೇಷನ್ ಬ್ರೇಕಿಂಗ್ ಸಿಸ್ಟಮ್ (CMBS).
ಈ ಸಿಸ್ಟಂ ಮುಂದೆ ಇರುವ ವಾಹನಗಳು ಅಥವಾ ಅಡೆತಡೆಗಳನ್ನು ಪತ್ತೆಹಚ್ಚಲು ಕ್ಯಾಮರಾಗಳನ್ನು ಬಳಸಿಕೊಳ್ಳುತ್ತದೆ. ಸಂಭಾವ್ಯ ಘರ್ಷಣೆ ಪತ್ತೆಯಾದರೆ, ಅದು ಆಟೋಮ್ಯಾಟಿಕ್ ಆಗಿ ಬ್ರೇಕ್‌ಗಳನ್ನು ಅನ್ವಯಿಸುತ್ತದೆ ಅಥವಾ ಚಾಲಕನನ್ನು ಎಚ್ಚರಿಸಲು ಮತ್ತು ಕ್ರಮ ತೆಗೆದುಕೊಳ್ಳಲು ದೃಶ್ಯ ಮತ್ತು ವಾಯ್ಸ್ ಅಲರ್ಟ್ ಗಳನ್ನು ಒದಗಿಸುತ್ತದೆ. ಇನ್ನು ಹೋಂಡಾ ಎಲಿವೇಟ್ ಐದನೇ ತಲೆಮಾರಿನ ಸಿಟಿಯೊಂದಿಗೆ ಹಲವಾರ ಸಾಮ್ಯತೆಗಳನ್ನು ಹೊಂದಿರುತ್ತದೆ. ಹೋಂಡಾ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಅಮೇಜ್ ಮತ್ತು ಸಿಟಿ ಕಾರುಗಳನ್ನು ಮಾರಾಟ ಮಾಡುತ್ತಿದೆ.
ಮಿಡ್ ಸೈಜ್ ಎಸ್‍ಯುವಿಯು ಈಗಾಗಲೇ ಸ್ಪಾಟ್ ಟೆಸ್ಟ್ ನಡೆಸುತ್ತಿರುವಾಗ ಹಲವು ಬಾರಿ ಕಾಣಿಸಿಕೊಂಡಿದೆ. ಈ ಹೊಸ ಹೋಂಡಾ ಎಲಿವೇಟ್ ಎಸ್‍ಯುವಿಯಲ್ಲಿ ಸಿಟಿ ಸೆಡಾನ್‌ನಿಂದ ಎರವಲು ಪಡೆದ 1.5 ಲೀಟರ್, ನ್ಯಾಚುರಲ್ ಆಸ್ಪರರ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಇದನ್ನು ನೀಡಬಹುದು ಎಂದು ಹೇಳಲಾಗುತ್ತಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು CVT ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.
ಈ ಎಂಜಿನ್ 126 bhp ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಾರು ತಯಾರಕರು ಎಸ್‍ಯುವಿಯನ್ನು ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ತರಬಹುದು ಎಂದು ಹೇಳಲಾಗುತ್ತಿದೆ. ಇನ್ನು 1.5 ಲೀಟರ್ ಪೆಟ್ರೋಲ್ ಅಟ್ಕಿನ್ಸನ್ ಸೈಕಲ್, ಮತ್ತು eCVT ಗೇರ್‌ಬಾಕ್ಸ್. ಸಿಟಿ ಹೈಬ್ರಿಡ್‌ನಲ್ಲಿ, ಸೆಟಪ್ 126 bhp ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೋಂಡಾ ಎಲಿವೇಟ್ ಕಾರು 25 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.
ಈ ಎರಡೂ ಪವರ್‌ಟ್ರೇನ್‌ಗಳು RDE ಮಾನದಂಡಗಳನ್ನು ಮತ್ತು E20 ಕಂಪ್ಲೈಂಟ್‌ಗಳನ್ನು ಪೂರೈಸುತ್ತವೆ. NA ಪೆಟ್ರೋಲ್ ಯುನಿಟ್ 17.8 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಇದರ ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಯು 27.13 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಮಾರುತಿ-ಟೊಯೋಟಾ ಸೋದರಸಂಬಂಧಿಗಳಾದ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್ ಸ್ಟ್ರಾಂಗ್ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿವೆ. ಈ ಮಾರುತಿ-ಟೊಯೋಟಾ ಸೋದರಸಂಬಂಧಿಗಳು 1.5-ಲೀಟರ್ ಪೆಟ್ರೋಲ್-ಹೈಬ್ರಿಡ್ ಎಂಜಿನ್ ಅನ್ನು ಪಡೆಯುತ್ತವೆ.
ಇದು 27.97 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಹೋಂಡಾ ಮಿಡ್ ಸೈಜ್ ಎಸ್‍ಯುವಿಯು ಈಗಾಗಲೇ ಸ್ಪಾಟ್ ಟೆಸ್ಟ್ ನಡೆಸುತ್ತಿರುವಾಗ ಹಲವು ಬಾರಿ ಕಾಣಿಸಿಕೊಂಡಿದೆ. ಇದು ಸುಮಾರು 4.2-4.3 ಮೀಟರ್ ಉದ್ದವನ್ನು ಹೊಂದಿದೆ. ಹೋಂಡಾ ಎಲಿವೇಟ್ ಕಳೆದ ವರ್ಷ ಪರಿಚಯಿಸಲಾದ ಇತ್ತೀಚಿನ CR-V ಮತ್ತು ಹೊಸ ತಲೆಮಾರಿನ WR-V ನಂತಹ ಎಸ್‍ಯುವಿಗಳಂತಹ ಜಾಗತಿಕ ಮಾದರಿಗಳ ಪ್ರೇರಣೆಯನ್ನು ಪಡೆದುಕೊಂಡಿದೆ.


Click it and Unblock the Notifications