Honda Suv: ಹ್ಯುಂಡೈ ಕ್ರೆಟಾ ಎದುರಾಳಿಯಾಗಿ ಬರುತ್ತಿದೆ ಹೊಸ ಹೋಂಡಾ ಎಸ್‍ಯುವಿ

ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ತನ್ನ ಇತ್ತೀಚೆಗೆ ಸಿಟಿ ಸೆಡಾನ್ ಅನ್ನು ಆರ್‌ಡಿಇ-ಕಂಪ್ಲೈಂಟ್ ಎಂಜಿನ್‌ಗಳು ,ಹೊಸ ಫೀಚರ್ಸ್ ಮತ್ತು ಆಕರ್ಷಕ ವಿನ್ಯಾಸದ ನವೀಕರಣಗಳೊಂದಿಗೆ ಪರಿಚಯಿಸಿತು. ಇದೀಗ ಹೋಂಡಾ ಕಂಪನಿಯು ತನ್ನ ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಿದ್ದವಾಗುತ್ತಿದೆ.

ಹೋಂಡಾ ಶೀಘ್ರದಲ್ಲೇ ಭಾರತದಲ್ಲಿ ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ. ಈ ಹೊಸ ಹೋಂಡಾ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ನೇರವಾಗಿ ಹ್ಯುಂಡೈ ಕ್ರೆಟಾಗೆ ಪೈಪೋಟಿಯನ್ನು ನೀಡುತ್ತದೆ, ಹೋಂಡಾ ಕಂಪನಿಯು ಈ ಹೊಸ ಎಸ್‍ಯುವಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಆದರೆ ಕೆಲವು ಹೋಂಡಾ ಡೀಲರ್‌ಶಿಪ್‌ಗಳು ಮುಂಬರುವ ಈ ಮಿಡ್ ಎಸ್‍ಯುವಿಗಾಗಿ ಪ್ರಿ-ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ ಎಂದು ವರದಿಗಳಾಗಿದೆ.

New Honda SUV

ಈ ಹೋಂಡಾ ಎಸ್‍ಯುವಿಯು ಭಾರಾದಲ್ಲಿ ಹಲವು ಬಾರೀ ರೋಡ್ ಟೆಸ್ಟ್ ಮಾಡಿದ್ದಾರೆ. ಇದು ಇಂಡೋನೇಷಿಯನ್ WR-V ಎಸ್‍ಯುವಿಯನ್ನು ಆಧರಿಸುತ್ತದೆ ಎಂದು ಹೇಳಲಾಗುತ್ತಿದೆ. ಇದು ಹಿಂದಿನ ಮಾದರಿಯಿಂದ ಭಿನ್ನವಾಗಿಸಲು ಭಾರತದಲ್ಲಿ ಹೊಸ ಹೆಸರನ್ನು ನೀಡಬಹುದು, ಈ ಹೊಸ ಹೋಂಡಾ ಎಸ್‍ಯುವಿಯು 2023ರ ಏಪ್ರಿಲ್ ತಿಂಗಳಿನಲ್ಲಿ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಇನ್ನು ಈ ಎಸ್‍ಯುವಿಯು ದೀಪಾವಳಿ ಹಬ್ಬದ ಅವಧಿಯಲ್ಲಿ ಬಿಡುಗಡೆಯಾಗಬಹುದು.

ಈ ಹೊಸ ಎಸ್‍ಯುವಿಯು ಹೋಂಡಾ ಸಿಟಿಯಿಂದ 121 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ 1.5-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ ಅನ್ನು CVT ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಎಸ್‍ಯುವಿಯ ಒಳಭಾಗದಲ್ಲಿ ಸಂಪೂರ್ಣ ಕಪ್ಪು ಥೀಮ್ ಮತ್ತು ಏಳು ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಅಮೇಜ್‌ನಂತೆಯೇ ಕಾಣುತ್ತದೆ. ಈ ಹೊಸ ಎಸ್‍ಯುವಿ ಅಮೇಜ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

New Honda SUV

ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಭಾರತದಲ್ಲಿ, ಅವರು RS ಆವೃತ್ತಿಯನ್ನು ತರುತ್ತಾರೆಯೇ ಎಂದು ನಮಗೆ ತಿಳಿದಿಲ್ಲ. ಮತ್ತೊಂದು ಸಾಧ್ಯತೆಯೆಂದರೆ, ವಾಹನವು ಹೋಂಡಾ ಸಿಟಿ ಹೈಬ್ರಿಡ್‌ನಿಂದ ಪೆಟ್ರೋಲ್-ಹೈಬ್ರಿಡ್ ಮೋಟಾರ್ ಅನ್ನು ಹೊಂದಿರುತ್ತದೆ, ಈ ಹೊಸ ಹೋಂಡಾ ಎಸ್‍ಯುವಿಯು ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಹೈರೈಡರ್ ನಂತಹ ಹೈಬ್ರಿಡ್ ಎಸ್‍ಯುವಿಗಳಿಗೂ ಪೈಪೋಟಿ ನೀಡುತ್ತದೆ.

ರಾಜಸ್ಥಾನದಲ್ಲಿರುವ ಕಾರು ತಯಾರಕರ ತಪುಕರ ಮೂಲದ ಸ್ಥಾವರವು ಹೊಸ ಹೋಂಡಾ ಎಸ್‍ಯುವಿಯ ಉತ್ಪಾದನಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಹೋಂಡಾ ಕಾರ್ಸ್ ಇಂಡಿಯಾ ತನ್ನ ಉತ್ಪಾದನಾ ಸಾಮರ್ಥ್ಯವನ್ನು ದಿನಕ್ಕೆ 540 ಯುನಿಟ್‌ಗಳಿಂದ 660 ಯುನಿಟ್‌ಗಳಿಗೆ ಏರಿಸುವ ಗುರಿಯನ್ನು ಹೊಂದಿದೆ, ಹೋಂಡಾ ಕಂಪನಿಯು ಹೊಸ ಎಸ್‍ಯುವಿಯ ಸಿಲೂಯೆಟ್ ಮತ್ತು ನೇರವಾದ ನಿಲುವನ್ನು ತೋರಿಸುವ ಟೀಸರ್ ಚಿತ್ರವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದರು.

New Honda SUV

ಬಿಡುಗಡೆಯಾಗಲಿರುವ ಈ ಹೊಸ ಹೋಂಡಾ ಎಸ್‍ಯುವಿಯ ವಿನ್ಯಾಸವು ಜಾಗತಿಕ-ಸ್ಪೆಕ್ ಹೊಸ WR-V ಮಾದರಿಯಿಂದ ಸ್ಫೂರ್ತಿ ಪಡೆದಿದೆ. ಈ ಹೊಸ ಹೋಂಡಾ ಎಸ್‍ಯುವಿ ಮೆಶ್ ಮಾದರಿಯ ಗ್ರಿಲ್, ಎಲ್ಇಡಿ DRL ಗಳೊಂದಿಗೆ ಎಲ್ಇಡಿ ಹೆಡ್ ಲ್ಯಾಂಪ್ ಗಳು ಮತ್ತು ಉದ್ದವಾದ ಬಾನೆಟ್ ಇರುತ್ತದೆ. ಸ್ವಲ್ಪ ಮೊನಚಾದ ರೂಫ್, ಎಲೆಕ್ಟ್ರಿಕ್ ಸನ್‌ರೂಫ್, ಟೈಲ್‌ಗೇಟ್ ಮೌಂಟೆಡ್ ಸ್ಪಾಯ್ಲರ್ ಮತ್ತು ಎಲ್‌ಇಡಿ ಅಂಶಗಳೊಂದಿಗೆ ಸುತ್ತುವ ಟೈಲ್‌ಲ್ಯಾಂಪ್‌ಗಳೊಂದಿಗೆ ಎಸ್‌ಯುವಿ ನೇರವಾದ ನಿಲುವನ್ನು ಹೊಂದಿರಲಿದೆ.

ಇತ್ತೀಚಿನ ಸ್ಪೈ ಚಿತ್ರಗಳು, ಹೋಂಡಾದ ಕ್ರೆಟಾ ಪ್ರತಿಸ್ಪರ್ಧಿ ರಾಡಾರ್ ಆಧಾರಿತ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟ್ ಸಿಸ್ಟಂ) ತಂತ್ರಜ್ಞಾನದೊಂದಿಗೆ ಬರಲಿದೆ. ಇದು ಬ್ರೇಕಿಂಗ್ ಸಿಸ್ಟಮ್, ಲೇನ್ ಕೀಪಿಂಗ್ ಅಸಿಸ್ಟ್ ಸಿಸ್ಟಮ್, ಆಟೋನೊಮಸ್ ಎಮರ್ಜನ್ಸಿ ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋ ಹೈ-ಬೀಮ್‌ನಂತಹ ಸುಧಾರಿತ ಸುರಕ್ಷತಾ ಫೀಚರ್ಸ್ ಗಳನ್ನು ಕೂಡ ನೀಡುತ್ತದೆ. ಈ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೇವೆ.

Article Published On: Saturday, April 1, 2023, 17:04 [IST]
English summary
New honda suv india launch soon details
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+