ಮಾರುತಿ, ಟಾಟಾ ಕಂಪನಿಗಳಿಗೆ ಸೆಡ್ಡು ಹೊಡೆಯಲು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿವೆ ಹ್ಯುಂಡೈ

ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹುಂಡೈ ಮೋಟಾರ್ ಇಂಡಿಯಾ ನ್ಯೂ ಜನರೇಷನ್ ವೆರ್ನಾ ಸೆಡಾನ್ ಮತ್ತು ನವೀಕರಿಸಿದ ಅಲ್ಕಾಜರ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ, ಹೊಸ ವೆರ್ನಾ ಸೆಡಾನ್ ಮಾರ್ಚ್ 21ಕ್ಕೆ ಬಿಡುಗಡೆಯಾಗಲಿದ್ದು, ಆದರೆ ಹೊಸ ಅಲ್ಕಾಜರ್ ಎಸ್‍ಯುವಿಯ ಬಿಡುಗಡೆ ದಿನಾಂಕ ಬಹಿರಂಗವಾಗಿಲ್ಲ.

ಹೊಸ ಹ್ಯುಂಡೈ ವೆರ್ನಾ: ಮೊದಲಿಗೆ ಈ ಹೊಸ ಹ್ಯುಂಡೈ ವೆರ್ನಾ ಕಾರಿನ ಬಗ್ಗೆ ಹೇಳುವುದಾದರೆ, 2023ರ ಹ್ಯುಂಡೈ ವೆರ್ನಾ ಕಾರಿನಲ್ಲಿ ಅಲಾಯ್ ವ್ಜೀಲ್ ಗಳು, ಎಲ್ಇಡಿ ಡಿಆರ್ಎಲ್ ಗಳೊಂದಿಗೆ 1.5 ಲೀಟರ್ ಟರ್ಬೊ ಬ್ಯಾಡ್ಜಿಂಗ್ನೊಂದಿಗೆ ಸಜ್ಜುಗೊಂಡಿದೆ. ಟೀಸರ್ ವೀಡಿಯೊದಲ್ಲಿ ಇಂಟಿರಿಯರ್ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಟೀಸರ್ ನಲ್ಲಿ, ಈ ಕಾರಿನ ಸ್ಟೀರಿಂಗ್ ವೀಲ್‌ನಲ್ಲಿ ಲೇನ್ ಅಸಿಸ್ಟ್ ಬಟನ್ ಅನ್ನು ಗಮನಿಸಬಹುದು.

ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿವೆ ಹ್ಯುಂಡೈ

ಲೇನ್ ಮಾಡಲಾದ ಮಾದರಿಯು ADAS (ಅಡ್ವೆನ್ಸ್ಡ್ ಡ್ರೈವರ್ ಅಸಿಸ್ಟ್ ಸಿಸ್ಟಂ) ಅನ್ನು ಟಾಪ್-ಸ್ಪೆಕ್ SX (O) ಟ್ರಿಮ್ ಹೊಂದಿರುತ್ತದೆ. ನ್ಯೂ ಜನರೇಷನ್ ಹ್ಯುಂಡೈ ವೆರ್ನಾ ಕಾರಿನಲ್ಲಿ ಪ್ರಮುಖ ವಿನ್ಯಾಸ ಬದಲಾವಣೆಗಳನ್ನು ಮಾಡಲಾಗಿದೆ. ಸೆಡಾನ್ ಬ್ರ್ಯಾಂಡ್‌ನ ಹೊಸ ವಿನ್ಯಾಸದ ಭಾಷೆಯನ್ನು ಹೊಂದಿದೆ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಟ್ರೆಪೆಜಾಯ್ಡಲ್ ಫ್ರಂಟ್ ಗ್ರಿಲ್, ಹುಡ್‌ನಲ್ಲಿ ಸಿಗ್ನೇಚರ್ ಬ್ಯಾಡ್ಜ್ ಮತ್ತು ಮುಂಭಾಗದಲ್ಲಿ ಪೂರ್ಣ ಉದ್ದದ ಎಲ್‌ಇಡಿ ಡಿಆರ್‌ಎಲ್‌ಗಳ ಸ್ಟ್ರಿಪ್ ಗಳನ್ನು ಹೊಂದಿದೆ.

ಈ ಹೊಸ ಹ್ಯುಂಡೈ ವೆರ್ನಾ ಕಾರಿನಲ್ಲಿ ಸ್ಲೋಪಿಂಗ್ ರೂಫ್ ಲೈನ್, ಸನ್‌ರೂಫ್ ಮತ್ತು ವಿಭಿನ್ನವಾಗಿ ವಿನ್ಯಾಸಗೊಳಿಸಲಾದ ಸಿ ಪಿಲ್ಲರ್‌ಗಳನ್ನು ಹೊಂದಿವೆ. ಇದರೊಂದಿಗೆ ಸನ್‌ರೂಫ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಡೈಮಂಡ್ ಕಟ್ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.ಈ ಕಾರಿನಲ್ಲಿ ಬ್ಲ್ಯಾಕ್ ಔಟ್ ಬಿ ಪಿಲ್ಲರ್‌ಗಳು ಮತ್ತು ದೊಡ್ಡ ಗ್ಲಾಸ್ ಪ್ರದೇಶವನ್ನು ಹೊಂದಿದೆ. ಈ ಕಾರಿನ ಹಿಂಭಾಗದಲ್ಲಿ ಹೊಸ ಹೈಟೆಕ್ "H-ಟೈಲ್ ಲ್ಯಾಂಪ್" ಅನ್ನು ಹೊಂದಿದೆ.

ಅದು H ಲೋಗೋ ತರಹದ ಆಕಾರವನ್ನು ಹೊಂದಿದೆ, ಈ ಕಾರಿನಲ್ಲಿ ವಿಂಗ್ ತರಹದ ಆಕಾರವನ್ನು ರಚಿಸುತ್ತದೆ. 2023ರ ಹ್ಯುಂಡೈ ವೆರ್ನಾ ಕಾರಿನಲ್ಲಿ 4535 ಎಂಎಂ ಉದ್ದ, 1765 ಎಂಎಂ ಅಗಲ ಮತ್ತು 1475 ಎಂಎಂ ಎತ್ತರವನ್ನು ಹೊಂದಿದೆ. ಈ ಕಾರಿನ 1.5-ಲೀಟರ್, ನ್ಯಾಚುರಲ್ ಆಸ್ಪೈರರ್ಡ್ ಪೆಟ್ರೋಲ್ ಎಂಜಿನ್ ಆಗಿರುತ್ತದೆ. ಈ ಎಂಜಿನ್ 113.18 ಬಿಹೆಚ್‍ಪಿ ಪವರ್ ಮತ್ತು 143.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹ್ಯುಂಡೈ ಅಲ್ಕಾಜರ್: ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ತನ್ನ ಎಸ್‍ಯುವಿ ಪೋರ್ಟ್ಫೋಲಿಯೊವನ್ನು ಮತ್ತಷ್ಟು ಬಲಪಡಿಸಲು 7-ಸೀಟರ್ ಅಲ್ಕಾಜರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತು. ಈ ಹೊಸ ಹ್ಯುಂಡೈ ಅಲ್ಕಾಜರ್ 7-ಸೀಟರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದ್ದು, ಈ ಎಸ್‍ಯುವಿಯ 2023ರ ಆವೃತ್ತಿಯನ್ನು ಬಿಡುಗಡೆಗೊಳಿಸಲಿದೆ, ಇದೀಗ ಹ್ಯುಂಡೈ ಕಂಪನಿಯು 2023ರ ಅಲ್ಕಾಜರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಈ 2023ರ ಅಲ್ಕಾಜರ್ 3-ಸಾಲಿನ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹೊಸ ಮಾದರಿಯನ್ನು ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ಸಿಗ್ನೇಚರ್ ಹುಂಡೈ ಡೀಲರ್‌ಶಿಪ್‌ಗಳಲ್ಲಿ ರೂ.25,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು. ಈ ಹೊಸ ಹ್ಯುಂಡೈ ಅಲ್ಕಾಜರ್ ಎಸ್‍ಯುವಿಯಲ್ಲಿ 1.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದೆ ಎಂದು ಹ್ಯುಂಡೈ ದೃಢಪಡಿಸಿದೆ.

ಹೊಸ 1.5-ಲೀಟರ್ T-GDi 4 ಸಿಲಿಂಡರ್ ಎಂಜಿನ್ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ ಕಾರಿಗೆ ನೀಡಲಾಗುತ್ತದೆ. ಈ ಹೊಸ ಹ್ಯುಂಡೈ ವೆರ್ನಾ ಕಾರು ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಎಂಜಿನ್ ಹ್ಯುಂಡೈನಾದ್ಯಂತ 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಬದಲಾಯಿಸುತ್ತದೆ. ಹುಂಡೈ ಈಗಾಗಲೇ ಕ್ರೆಟಾ ಲೈನ್-ಅಪ್‌ನಿಂದ 1.4 ಲೀಟರ್ ಟರ್ಬೊ ಎಂಜಿನ್ ಅನ್ನು ತೆಗೆದುಹಾಕಿದೆ.

Article Published On: Tuesday, March 7, 2023, 18:40 [IST]
English summary
New hyundai cars launching soon details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+