ಭಾರತದಲ್ಲಿ ಕ್ರಾಂತಿ ಮಾಡಲು ನವೀಕರಣಗಳೊಂದಿಗೆ ಬರಲಿದೆ ಹುಂಡೈ ಕಂಪನಿಯ ಗೇಮ್ ಚೇಂಜರ್ ಕ್ರೆಟಾ

ಹ್ಯುಂಡೈ ಕ್ರೆಟಾ (Hyundai Creta) ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಅತ್ಯಂತ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಜನಪ್ರಿಯ ಮಾದರಿಯಾಗಿದೆ. ಹುಂಡೈ ಕಂಪನಿಯು ತನ್ನ ಹೊಸ ಕ್ರೆಟಾ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯು ಮುಂದಿನ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಈ ಹೊಸ ಹ್ಯುಂಡೈ ಕ್ರೆಟಾ ಎಸ್‍ಯುವಿಯ ಉತ್ಪಾದನೆಯು ಚೆನ್ನೈ ಮೂಲದ ಸೌಲಭ್ಯದಲ್ಲಿ ಪ್ರಾರಂಭವಾಗಲಿದೆ. ಹೊಸ ಕ್ರೆಟಾದ ಸ್ಪೈ ಚಿತ್ರಗಳು ಮತ್ತು ವೀಡಿಯೊಗಳು ಅದರ ವಿನ್ಯಾಸ ಬದಲಾವಣೆಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ಮೌಲ್ಯಯುತ ಒಳನೋಟಗಳನ್ನು ಬಹಿರಂಗಪಡಿಸಿತು. ಹೊಸ ಹುಂಡೈ ಕ್ರೆಟಾ ಮಾದರಿಯು ಹೊಸ ವೆರ್ನಾ ಸೆಡಾನ್‌ನಿಂದ ಒಳಭಾಗ ಮತ್ತು ವೈಶಿಷ್ಟ್ಯಗಳನ್ನು ಹಂಚಿಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.

New Hyundai Creta

ಹ್ಯುಂಡೈ ಈಗಾಗಲೇ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕ್ರೆಟಾ ಫೇಸ್‌ಲಿಫ್ಟ್ ಅನ್ನು ಮಾರಾಟ ಮಾಡುತ್ತಿದೆ. ಹೊಸ ಕ್ರೆಟಾ ಹಲವಾರು ಭಾರತ-ನಿರ್ದಿಷ್ಟ ವಿನ್ಯಾಸ ಬದಲಾವಣೆಗಳನ್ನು ಮತ್ತು ಒಳಾಂಗಣವನ್ನು ಸ್ವೀಕರಿಸುತ್ತದೆ ಎಂದು ಕೊರಿಯನ್ ದೈತ್ಯ ಕಂಪನಿಯು ಹೇಳಿದೆ. ಈ ಹೊಸ ಹುಂಡೈ ಕ್ರೆಟಾ ಎಸ್‍ಯುವಿಯು 2023ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಈ ಹೊಸ ಹುಂಡೈ ಕ್ರೆಟಾ ಹೊಸ ವೆರ್ನಾ ಸೆಡಾನ್‌ನೊಂದಿಗೆ ಇಂಟೀರಿಯರ್ ಸ್ಟೈಲಿಂಗ್ ಅನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ.

ಹುಂಡೈ ಕ್ರೆಟಾ ಇದು ಇಂಟಿಗ್ರೇಟೆಡ್ ಡ್ಯುಯಲ್ ಡಿಸ್‌ಪ್ಲೇ ಸೆಟಪ್ ಅನ್ನು ಪಡೆಯುವ ನಿರೀಕ್ಷೆಯಿದೆ. ಇದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ಗಾಗಿ ಮತ್ತು ಇನ್ನೊಂದು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಗಾಗಿ ಆಗಿದೆ. ಇದಲ್ಲದೆ ಎಸ್‍ಯುವಿ ವೆರ್ನಾದ ಬದಲಾಯಿಸಬಹುದಾದ ಹವಾಮಾನ ಮತ್ತು ಇನ್ಫೋಟೈನ್‌ಮೆಂಟ್ ಕಂಟ್ರೋಲ್ ಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಹೊಸ ಹೊಸ ಹುಂಡೈ ಕ್ರೆಟಾ ಎಸ್‍ಯುವಿಯಲ್ಲಿ ಇಂಡಿಯಾ-ಸ್ಪೆಕ್ ಹೊಸ ಕ್ರೆಟಾ ವಿಭಿನ್ನ ಶೈಲಿಯನ್ನು ಹೊಂದಿರುತ್ತದೆ.

New Hyundai Creta

ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿರುವ ಫೇಸ್‌ಲಿಫ್ಟೆಡ್ ಮಾಡೆಲ್‌ನಿಂದ ಸ್ಟೈಲಿಂಗ್ ಸೂಚನೆಗಳನ್ನು ಹಂಚಿಕೊಳ್ಳುವುದಿಲ್ಲ. ವೆರ್ನಾದಂತೆಯೇ, ಹೊಸ ಹ್ಯುಂಡೈ ಕ್ರೆಟಾ ಪ್ಯಾರಾಮೆಟ್ರಿಕ್ ಜ್ಯುವೆಲ್ ಮಾದರಿಯ ಮುಂಭಾಗದ ಗ್ರಿಲ್ ಮತ್ತು ಸಂಪರ್ಕಿತ LED DRL ಗಳು ಮತ್ತು ಟೈಲ್-ಲೈಟ್‌ಗಳನ್ನು ಪಡೆಯಬಹುದು ಎಂದು ನಿರೀಕ್ಷೆಯಿದೆ. ಕ್ರೆಟಾ ಟರ್ಬೊ ರೂಪಾಂತರವು ಕೆಲವು ವಿನ್ಯಾಸ ಮತ್ತು ಆಂತರಿಕ ಬದಲಾವಣೆಗಳನ್ನು ಸಹ ಪಡೆಯುತ್ತದೆ.

ಈ ಹೊಸ ಹುಂಡೈ ಕ್ರೆಟಾ ಎಸ್‍ಯುವಿಯಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದು 1.5-ಲೀಟರ್ NA ಪೆಟ್ರೋಲ್ ಮತ್ತು 1.5L ಟರ್ಬೊ ಡೀಸೆಲ್ ಎಂಜಿನ್ ಗಳಾಗಿದೆ. ಹ್ಯುಂಡೈ ಕಂಪನಿಯು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಸ್ಥಗಿತಗೊಳಿಸಿದೆ. ಏಕೆಂದರೆ ಇದನ್ನು BS6 ಹಂತ II ಹೊರಸೂಸುವಿಕೆಯ ಮಾನದಂಡಗಳನ್ನು ಪೂರೈಸಲು ನವೀಕರಿಸಲಾಗುವುದಿಲ್ಲ.

ಹೊಸ ಹ್ಯುಂಡೈ ಕ್ರೆಟಾವು ಹೊಸ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಸ್ವೀಕರಿಸುತ್ತದೆ, ಇದನ್ನು ಇತ್ತೀಚೆಗೆ ಹೊಸ ವೆರ್ನಾ ಮತ್ತು ಅಲ್ಕಾಜರ್‌ನಲ್ಲಿ ಪರಿಚಯಿಸಲಾಗಿದೆ. ಈ ಪವರ್‌ಟ್ರೇನ್ 160PS ಮತ್ತು 253Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.4 ಲೀಟರ್ ಟರ್ಬೊ ಯುನಿಟ್ ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಹೊಸ ಕ್ರೆಟಾ 1.5 ಲೀಟರ್ ಅದರ ವರ್ಗದಲ್ಲಿ ಅತ್ಯಂತ ಶಕ್ತಿಶಾಲಿ ಮಾದರಿಗಲಿದೆ.

ಈ ಹೊಸ ಎಸ್‍ಯುವಿಯಲ್ಲಿ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಇದರ ಸೈಡ್ ಪ್ರೊಫೈಲ್ ಬದಲಾಗದೆ ಉಳಿಯುತ್ತದೆ. ಹೊಸ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ, ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಕದ್ದ ವಾಹನ ಟ್ರ್ಯಾಕಿಂಗ್ ಪೀಚರ್ ಅನ್ನು ಹೊಂದಿದೆ. ಇದರೊಂದಿಗೆ ಲೇನ್ ಕೀಪ್ ಅಸಿಸ್ಟ್, ಆಟೋನೊಮಸ್ ಎಮರ್ಜ್ನಸಿ ಬ್ರೇಕಿಂಗ್ ಮತ್ತು ಫಾರ್ವರ್ಡ್ ಕಲಿಷನ್ ಅವೆಡೈನ್ಸ್ ಅನ್ನು ಒಳಗೊಂಡಿದೆ.

ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ನೀಡಲಾಗಿರುವುದರಿಂದ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್ಸ್) ಸೇರಿದಂತೆ ಹೊಸ ಫೀಚರ್ಸ್ ಗಳನ್ನು ಹೊಂದಿವೆ. ಈ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಅನ್ನು ಮೊದಲು GIIAS 2021 ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಯಿತು. ಅದರ ವಿನ್ಯಾಸ ಮತ್ತು ಒಳಾಂಗಣದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ, ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿಗಳು ಬಹಿರಂಗವಾಗಲಿದೆ.

Article Published On: Thursday, September 14, 2023, 8:30 [IST]
English summary
New hyundai creta suv launch details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+