ಹೊಸ ರೂಪದಲ್ಲಿ ಬರಲಿದೆ ಬಹುನಿರೀಕ್ಷಿತ ಹೊಸ ಹ್ಯುಂಡೈ ಕ್ರೆಟಾ

Hyundai Creta (ಹ್ಯುಂಡೈ ಕ್ರೆಟಾ) ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಅತ್ಯಂತ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಜನಪ್ರಿಯ ಮಾದರಿಯಾಗಿದೆ. ಹುಂಡೈ ಕಂಪನಿಯು ತನ್ನ ಹೊಸ ಕ್ರೆಟಾ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಹೊಸ ಹ್ಯುಂಡೈ ಕ್ರೆಟಾ ಎಸ್‍ಯುವಿಯು 2024ರ ಜನವರಿ 16 ರಂದು ಅನಾವರಣವಾಗುವ ಸಾದ್ಯತೆಗಳಿದೆ. ಈ ಹೊಸ ಹುಂಡೈ ಕ್ರೆಟಾ ಮಾದರಿಯು ಹೊಸ ವೆರ್ನಾ ಸೆಡಾನ್‌ನಿಂದ ಒಳಭಾಗ ಮತ್ತು ವೈಶಿಷ್ಟ್ಯಗಳನ್ನು ಹಂಚಿಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಹ್ಯುಂಡೈ ಈಗಾಗಲೇ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕ್ರೆಟಾ ಫೇಸ್‌ಲಿಫ್ಟ್ ಅನ್ನು ಮಾರಾಟ ಮಾಡುತ್ತಿದೆ. ಹೊಸ ಕ್ರೆಟಾ ಹಲವಾರು ಭಾರತ-ನಿರ್ದಿಷ್ಟ ವಿನ್ಯಾಸ ಬದಲಾವಣೆಗಳನ್ನು ಮತ್ತು ಒಳಾಂಗಣವನ್ನು ಸ್ವೀಕರಿಸುತ್ತದೆ ಎಂದು ಕೊರಿಯನ್ ದೈತ್ಯ ಕಂಪನಿಯು ಹೇಳಿದೆ.

Hyundai Creta

ಈ ಹೊಸ ಹುಂಡೈ ಕ್ರೆಟಾ ಎಸ್‍ಯುವಿಯು 2023ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಈ ಹೊಸ ಹುಂಡೈ ಕ್ರೆಟಾ ಹೊಸ ವೆರ್ನಾ ಸೆಡಾನ್‌ನೊಂದಿಗೆ ಇಂಟೀರಿಯರ್ ಸ್ಟೈಲಿಂಗ್ ಅನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ. ಇದು ಇಂಟಿಗ್ರೇಟೆಡ್ ಡ್ಯುಯಲ್ ಡಿಸ್‌ಪ್ಲೇ ಸೆಟಪ್ ಅನ್ನು ಪಡೆಯುವ ನಿರೀಕ್ಷೆಯಿದೆ. ಇದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ಗಾಗಿ ಮತ್ತು ಇನ್ನೊಂದು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಗಾಗಿ ಆಗಿದೆ.

ಇದಲ್ಲದೆ ಎಸ್‍ಯುವಿ ವೆರ್ನಾದ ಬದಲಾಯಿಸಬಹುದಾದ ಹವಾಮಾನ ಮತ್ತು ಇನ್ಫೋಟೈನ್‌ಮೆಂಟ್ ಕಂಟ್ರೋಲ್ ಗಳನ್ನು ಪಡೆಯುವ ಸಾಧ್ಯತೆಯಿದೆ. ಹೊಸ ಹುಂಡೈ ಕ್ರೆಟಾ ಎಸ್‍ಯುವಿಯಲ್ಲಿ ಇಂಡಿಯಾ-ಸ್ಪೆಕ್ ಹೊಸ ಕ್ರೆಟಾ ವಿಭಿನ್ನ ಶೈಲಿಯನ್ನು ಹೊಂದಿರುತ್ತದೆ ಮತ್ತು ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿರುವ ಫೇಸ್‌ಲಿಫ್ಟೆಡ್ ಮಾಡೆಲ್‌ನಿಂದ ಸ್ಟೈಲಿಂಗ್ ಸೂಚನೆಗಳನ್ನು ಹಂಚಿಕೊಳ್ಳುವುದಿಲ್ಲ.

Hyundai Creta

ವೆರ್ನಾದಂತೆಯೇ, ಹೊಸ ಹ್ಯುಂಡೈ ಕ್ರೆಟಾ ಪ್ಯಾರಾಮೆಟ್ರಿಕ್ ಜ್ಯುವೆಲ್ ಮಾದರಿಯ ಮುಂಭಾಗದ ಗ್ರಿಲ್ ಮತ್ತು ಸಂಪರ್ಕಿತ LED DRL ಗಳು ಮತ್ತು ಟೈಲ್-ಲೈಟ್‌ಗಳನ್ನು ಪಡೆಯಬಹುದು ಎಂದು ನಿರೀಕ್ಷೆಯಿದೆ. ಕ್ರೆಟಾ ಟರ್ಬೊ ರೂಪಾಂತರವು ಕೆಲವು ವಿನ್ಯಾಸ ಮತ್ತು ಆಂತರಿಕ ಬದಲಾವಣೆಗಳನ್ನು ಸಹ ಪಡೆಯುತ್ತದೆ. ಆದರೆ ಈ ಹೊಸ ಎಸ್‍ಯುವಿಯು 2024ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಹೊಸ ಹುಂಡೈ ಕ್ರೆಟಾ ಎಸ್‍ಯುವಿಯಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದು 1.5-ಲೀಟರ್ NA ಪೆಟ್ರೋಲ್ ಮತ್ತು 1.5L ಟರ್ಬೊ ಡೀಸೆಲ್ ಎಂಜಿನ್ ಗಳಾಗಿದೆ. ಹ್ಯುಂಡೈ ಕಂಪನಿಯು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಸ್ಥಗಿತಗೊಳಿಸಿದೆ. ಏಕೆಂದರೆ ಇದನ್ನು BS6 ಹಂತ II ಹೊರಸೂಸುವಿಕೆಯ ಮಾನದಂಡಗಳನ್ನು ಪೂರೈಸಲು ನವೀಕರಿಸಲಾಗುವುದಿಲ್ಲ.

Hyundai Creta

ಹೊಸ ಹ್ಯುಂಡೈ ಕ್ರೆಟಾವು ಹೊಸ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಸ್ವೀಕರಿಸುತ್ತದೆ, ಇದನ್ನು ಇತ್ತೀಚೆಗೆ ಹೊಸ ವೆರ್ನಾ ಮತ್ತು ಅಲ್ಕಾಜರ್‌ನಲ್ಲಿ ಪರಿಚಯಿಸಲಾಗಿದೆ. ಈ ಪವರ್‌ಟ್ರೇನ್ 160PS ಮತ್ತು 253Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.4 ಲೀಟರ್ ಟರ್ಬೊ ಯುನಿಟ್ ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಹೊಸ ಕ್ರೆಟಾ 1.5 ಲೀಟರ್ ಅದರ ವರ್ಗದಲ್ಲಿ ಅತ್ಯಂತ ಶಕ್ತಿಶಾಲಿ ಮಾದರಿಗುತ್ತದೆ.

ಈ ಹೊಸ ಎಸ್‍ಯುವಿಯಲ್ಲಿ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಇದರ ಸೈಡ್ ಪ್ರೊಫೈಲ್ ಬದಲಾಗದೆ ಉಳಿಯುತ್ತದೆ. ಹೊಸ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ, ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಕದ್ದ ವಾಹನ ಟ್ರ್ಯಾಕಿಂಗ್ ಪೀಚರ್ ಅನ್ನು ಹೊಂದಿದೆ. ಇದರೊಂದಿಗೆ ಲೇನ್ ಕೀಪ್ ಅಸಿಸ್ಟ್, ಆಟೋನೊಮಸ್ ಎಮರ್ಜ್ನಸಿ ಬ್ರೇಕಿಂಗ್ ಮತ್ತು ಫಾರ್ವರ್ಡ್ ಕಲಿಷನ್ ಅವೆಡೈನ್ಸ್ ಅನ್ನು ಹೊಂದಿದೆ.

ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ನೀಡಲಾಗಿರುವುದರಿಂದ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್ಸ್) ಸೇರಿದಂತೆ ಹೊಸ ಫೀಚರ್ಸ್ ಗಳನ್ನು ಹೊಂದಿವೆ. ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಅನ್ನು ಮೊದಲು GIIAS 2021 ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಯಿತು. ಅದರ ವಿನ್ಯಾಸ ಮತ್ತು ಒಳಾಂಗಣದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ, ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿಗಳು ಬಹಿರಂಗವಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.

Article Published On: Tuesday, December 5, 2023, 13:46 [IST]
English summary
New hyundai creta suv to be unveil on january 2024 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+