Hyundai Exter: ಬಿಡುಗಡೆಯಾದಷ್ಟೇ ಬೇಗ ವಿತರಣೆ ಆರಂಭ... ಗ್ರಾಹಕರಿಗೆ ಎಲ್ಲಿಲ್ಲದ ಖುಷಿ

ಭಾರತದಲ್ಲಿ ಕಾಪ್ಯಾಕ್ಟ್ ಎಸ್‌ಯುವಿಗಳಿಗೆ ಭಾರೀ ಬೇಡಿಕೆ ಇದೆ. ಎಲ್ಲಾ ಕಾರು ತಯಾರಕರಂತೆ ಹ್ಯುಂಡೈ ಕೂಡ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವನ್ನು ಆಳಲು ಜುಲೈ 10 ರಂದು Hyundai Exter ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ಕಾಂಪ್ಯಾಕ್ಟ್ ಎಸ್‌ಯುವಿಗೆ ಬೇಡಿಕೆ ಹೆಚ್ಚಾಗಿದ್ದು, ಇದೀಗ ಬುಕಿಂಗ್ ಮಾಡಿರುವ ಗ್ರಾಹಕರಿಗೆ ವಿತರಣೆ ಕೂಡ ಆರಂಭವಾಗಿದೆ.

ಪ್ರಸ್ತುತ ಹ್ಯುಂಡೈನ ಪ್ರವೇಶ ಮಟ್ಟದ ಎಸ್‌ಯುವಿ ಆಗಿ ಹ್ಯುಂಡೈ ಎಕ್ಸ್‌ಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದನ್ನು ಆರಂಭಿಕ ಬೆಲೆ ರೂ.5,99,900 ಕ್ಕೆ (ಎಕ್ಸ್ ಶೋ ರೂಂ) ಪರಿಚಯಿಸಲಾಗಿದೆ. ಈಗ ಕಂಪನಿಯು ಹ್ಯುಂಡೈ ಎಕ್ಸ್‌ಟರ್ ಮೊದಲ ಬ್ಯಾಚ್‌ನ ವಿತರಣೆಯನ್ನು ಪ್ರಾರಂಭಿಸಿದೆ.

new-hyundai-exter-deliveries-begin

ಇತ್ತಿಚೆಗಷ್ಟೇ ತಮಿಳುನಾಡಿನ ಪೆರಂಬದೂರಿನಲ್ಲಿ ಇರುವ ಹ್ಯುಂಡೈನ ಉತ್ಪಾದನಾ ಘಟಕದಲ್ಲಿ ಹೊಸ ಹ್ಯುಂಡೈ ಎಕ್ಸ್‌ಟರ್ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲಾಗಿತ್ತು. ಗ್ರಾಹಕರ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಉತ್ಪದನೆಯ ವೇಗ ಕೂಡ ಹೆಚ್ಚಾಗಿದ್ದು, ಕಂಪನಿಯು ಎಷ್ಟು ಬೇಗ ಬಿಡುಗಡೆ ಮಾಡಿದೆಯೋ ಅಷ್ಟೇ ಬೇಗ ಗ್ರಾಹಕರಿಗೆ ವಿತರಣೆ ಕೂಡ ಮಾಡಿದೆ.

ಈ ಹೊಸ ಹ್ಯುಂಡೈ ಎಕ್ಸ್‌ಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಪಂಚ್, ಸಿಟ್ರನ್ ಸಿ3 ಮತ್ತು ಮಾರುತಿ ಇಗ್ನಿಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಹಾಗೆಯೇ ಸುರಕ್ಷತೆಯ ವಿಷಯದಲ್ಲಿ ದೇಶೀಯ ಗ್ರಾಹಕರಲ್ಲಿ ದೊಡ್ಡ ಮಟ್ಟದ ನೀರಿಕ್ಷೆ ಹುಟ್ಟಿಸಿದ್ದು, ಇದು ಅತ್ಯಂತ ಸುರಕ್ಷಿತ ಎಸ್‌ಯುವಿಯಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

new-hyundai-exter-deliveries-begin

ಹ್ಯುಂಡೈ ಕಂಪನಿಯು ಎಕ್ಸ್‌ಟರ್ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಅಥವಾ 5 ಸ್ಟಾರ್ ರೇಟಿಂಗ್ ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಈ ಎಸ್‌ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳಿವೆ. ಜೊತೆಗೆ ಬೇಸ್ ಟ್ರಿಮ್‌ನಿಂದ ಟಾಪ್ ಎಂಡ್ ಟ್ರಿಮ್‌ವರೆಗೆ ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಅನ್ನು ನೀಡಲಾಗಿದ್ದು, ಗ್ಲೋಬಲ್ NCAP ಪರೀಕ್ಷೆಯಲ್ಲಿ ಉತ್ತಮ ರೇಟಿಂಗ್ ಪಡೆಯುವ ಸಾಧ್ಯೆತೆಯಿದೆ.

ಹೊಸ ಹ್ಯುಂಡೈ ಎಕ್ಸ್‌ಟರ್ ಕಾಪ್ಯಾಕ್ಟ್ ಎಸ್‌ಯುವಿಯು 5 ಟ್ರಿಮ್ ಹಂತಗಳಲ್ಲಿ ನಿಡಲಾಗುತ್ತದೆ. ಮೇಲೆ ತಿಳಿಸಿದಂತೆ ಎಸ್‌ಯುವಿಯ ಆರಂಭಿಕ ಬೆಲೆಯು ರೂ.5,99,900 ಇದ್ದರೇ, ಇದರ ಟಾಪ್ ಸ್ಪೆಕ್ ಮಾದರಿಗೆ ರೂ.9.32 ಲಕ್ಷವಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಎಂಬುದನ್ನು ಇಲ್ಲಿ ಗಮನಿಸಬೇಕು.

new-hyundai-exter-deliveries-begin

ಹೊಸ ಹ್ಯುಂಡೈ ಎಕ್ಸ್‌ಟರ್ 1.2-ಲೀಟರ್, 4-ಸಿಲಿಂಡರ್ ಎಂಜಿನ್‌ನೊಂದಿಗೆ ಬರುತ್ತದೆ. ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ. ಪೆಟ್ರೋಲ್ ರೂಪದಲ್ಲಿ ಹುಂಡೈ ಎಕ್ಸ್‌ಟರ್ ಎಂಜಿನ್ 81.8 bhp ಪವರ್ ಮತ್ತು 113.8 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. CNG ಆವೃತ್ತಿಯು 67.7 bhp ಪವರ್ ಮತ್ತು 95.2 Nm ನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಎಕ್ಸ್‌ಟರ್ ಪೆಟ್ರೋಲ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ ಎಎಮ್‌ಟಿ ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುತ್ತದೆ. ಆದರೆ ಸಿಎನ್‌ಜಿ ಆವೃತ್ತಿಯಲ್ಲಿ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ನೀಡಲಾಗಿದೆ. ಎಕ್ಸ್‌ಟರ್ ಪೆಟ್ರೋಲ್ ಮಾದರಿಯು 19.4 ಕಿ.ಮೀ ಮೈಲೇಜ್ ನೀಡಿದರೆ, AMT ಮಾದರಿ 19.2 ಕಿ.ಮೀ ಮೈಲೇಜ್ ನೀಡುತ್ತದೆ. ಇನ್ನು CNG ಆವೃತ್ತಿಯು 27.1 ಕಿ.ಮೀ ಮೈಲೇಜ್ ನೀಡುತ್ತದೆ.

Article Published On: Thursday, July 13, 2023, 11:54 [IST]
English summary
New hyundai exter deliveries begin
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+