ಬೈಕ್‌ನಂತೆ ಮೈಲೇಜ್, ಸೂಪರ್ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೆ ಸಜ್ಜಾದ ಹೊಸ ಹ್ಯುಂಡೈ ಕಾರು
ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಭರ್ಜರಿಯಾಗಿ ಸಜ್ಜಾಗುತ್ತಿದೆ. ಇದಕ್ಕಾಗಿ ಹ್ಯುಂಡೈ ಭಾರತದಲ್ಲಿ ತನ್ನ ಕಾರುಗಳ ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ವಿಸ್ತರಿಸಲಿದೆ. ಇದರ ಭಾಗವಾಗಿ ಹೊಸ ಹ್ಯುಂಡೈ ಎಕ್ಸ್‌ಟರ್ (Hyundai Exter) ಎಂಬ ಮೈಕ್ರೋ ಎಸ್‌ಯುವಿ ಬಿಡುಗಡೆಯಾಗಲಿದೆ.
ಹ್ಯುಂಡೈ ತಮ್ಮ ಹೊಸ ಕಾರು ಎಕ್ಸ್‌ಟರ್ ಅನ್ನು 10 ಜುಲೈ 2023 ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ. ಇದಕ್ಕೂ ಮೊದಲು ಈ ಪುಟ್ಟ ಕಾರಿನ ಆಸಕ್ತಿದಾಯಕ ಹೊಸ ವಿವರಗಳನ್ನು ಬಹಿರಂಗಪಡಿಸುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಹೊಸ ಹ್ಯುಂಡೈ ಎಕ್ಸ್‌ಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಎಕ್ಸ್‌ಟರ್ ಟಾಟಾ ಪಂಚ್, ಸಿಟ್ರನ್ ಸಿ3 ಮತ್ತು ಮಾರುತಿ ಇಗ್ನಿಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಹೊಸ ಹ್ಯುಂಡೈ ಎಕ್ಸ್‌ಟರ್ ಕಾರಿನ ಮುಂಭಾಗ ಪ್ಯಾರಾಮೆಟ್ರಿಕ್ ಫ್ರಂಟ್ ಗ್ರಿಲ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಕ್ಲಾಮ್‌ಶೆಲ್ ಬಾನೆಟ್ ಮತ್ತು ಎಚ್ ಆಕಾರದ ಎಲ್‌ಇಡಿ ಟೈಲ್ ಲ್ಯಾಂಪ್‌ಗಳನ್ನು ಒಳಗೊಂಡಿದೆ. ಸುಲಭವಾಗಿ ಪ್ರವೇಶಿಸಲು ಮತ್ತು ಹೊರಬರಲು ಡೋರುಗಳು ವಿಶಾಲವಾಗಿ ತೆರೆದುಕೊಳ್ಳುತ್ತವೆ. ಹೊಸ ಚಿತ್ರಗಳಲ್ಲಿ ಎಲೆಕ್ಟ್ರಿಕ್ ಸನ್‌ರೂಫ್, ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಗಳು ಇತ್ಯಾದಿಗಳನ್ನು ಕಾಣಬಹುದು.
ಹ್ಯುಂಡೈ ಕಂಪನಿಯು ಕಾರಿನ ಹೊರಭಾಗದ ವಿನ್ಯಾಸ ಮೊದಲು ಇಂಟಿರಿಯರ್ ಚಿತ್ರ ಬಹಿರಂಗಪಡಿಸಿ ಒಳಭಾಗದ ಮಾಹಿತಿಗಳನ್ನು ಬಹಿರಂಗಪಡಿಸಿದ್ದರು. ಈ ಹೊಸ ಹ್ಯುಂಡೈ ಎಕ್ಸ್‌ಟರ್ ಎಸ್‍ಯುವಿಯು ಇಂಚಿನ HD ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 4.2-ಇಂಚಿನ ಬಣ್ಣದ TFT ಮಲ್ಟಿ-ಇನ್‌ಫರ್ಮೇಶನ್ ಡಿಸ್‌ಪ್ಲೇಯೊಂದಿಗೆ ಸುಧಾರಿತ ಡಿಜಿಟಲ್ ಕ್ಲಸ್ಟರ್‌ನೊಂದಿಗೆ ಸಜ್ಜುಗೊಂಡಿದೆ, ಬ್ಲೂಲಿಂಕ್ ತಂತ್ರಜ್ಞಾನವನ್ನು ಸಂಪೂರ್ಟ್ ಮಾಡುತ್ತದೆ.

ಹ್ಯುಂಡೈ ಎಕ್ಸ್‌ಟರ್ ಕನೆಕ್ಟಿವಿಟಿ ಫೀಚರ್ಸ್, 90 ಎಂಬೆಡೆಡ್ ವಾಯ್ಸ್ ಕಮಾಂಡ್‌ಗಳು ಮತ್ತು ಓವರ್-ದಿ-ಏರ್ (OTA) ಇನ್ಫೋಟೈನ್‌ಮೆಂಟ್ ಮತ್ತು ಮ್ಯಾಪ್ ನವೀಕರಣಗಳಿಗೆ ಬೆಂಬಲವನ್ನು ನೀಡುತ್ತದೆ. ಈ ಕಾರಿನಲ್ಲಿ ಇನ್‌ಫೋಟೈನ್‌ಮೆಂಟ್ ಯೂನಿಟ್ ಇನ್-ಬಿಲ್ಟ್ ನ್ಯಾವಿಗೇಷನ್‌ನೊಂದಿಗೆ ಬರುತ್ತದೆ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಿಸ್ಟಂಗಳನ್ನು ಬೆಂಬಲಿಸುತ್ತದೆ. ಇದನ್ನು 10 ಪ್ರಾದೇಶಿಕ ಮತ್ತು ಎರಡು ಜಾಗತಿಕ ಭಾಷೆಗಳಲ್ಲಿ ಕಸ್ಟಮೈಸ್ ಮಾಡಬಹುದಾಗಿದೆ.
ಇದರೊಂದಿಗೆ ಇನ್‌ಫೋಟೈನ್‌ಮೆಂಟ್ ಯೂನಿಟ್ ಇನ್-ಬಿಲ್ಟ್ ನ್ಯಾವಿಗೇಷನ್‌ನೊಂದಿಗೆ ಬರುತ್ತದೆ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಿಸ್ಟಮ್‌ಗಳನ್ನು ಸಂಪೂರ್ಟ್ ಮಾಡುತ್ತದೆ. ಇದನ್ನು 10 ಪ್ರಾದೇಶಿಕ ಮತ್ತು ಎರಡು ಜಾಗತಿಕ ಭಾಷೆಗಳಲ್ಲಿ ಕಸ್ಟಮೈಸ್ ಮಾಡಬಹುದು. ಡಿಜಿಟಲ್ ಕ್ಲಸ್ಟರ್ ಡ್ರೈವ್ ಅಂಕಿಅಂಶಗಳು, ಪಾರ್ಕಿಂಗ್ ದೂರ, ಡೋರ್ ತೆರೆಯುವುದು, ಸನ್‌ರೂಫ್ ಓಪನ್ ಮತ್ತು ಸೀಟ್‌ಬೆಲ್ಟ್ ರಿಮೈಂಡರ್ ಡಿಸ್‌ಪ್ಲೇಯಂತಹ ಮಾಹಿತಿಗಳನ್ನು ಪ್ರದರ್ಶಿಸುತ್ತವೆ.

ಇನ್ನು ಈ ಹೊಸ ಕಾರಿನ ಒಳಗಿನ ಕನೆಕ್ಟಿವಿಟಿ ಫೀಚರ್ಸ್ ಸುರಕ್ಷತೆ ಮತ್ತು ಭದ್ರತೆ, ರಿಮೋಟ್ ಸೇವೆಗಳು, ಸ್ಥಳ ಆಧಾರಿತ ಫಂಕ್ಷನ್ ಮತ್ತು ವಾಯ್ಸ್ ಸಹಾಯಕ್ಕೆ ಸಂಬಂಧಿಸಿವೆ. ಎಂಬೆಡೆಡ್ ವಾಯ್ಸ್ ಕಮಾಂಡ್‌ಗಳು ಇಂಟರ್ನೆಟ್ ಸಂಪರ್ಕವಿಲ್ಲದೆ ಸಹ ಕಾರ್ಯನಿರ್ವಹಿಸುತ್ತವೆ. ಈ ಕಮಾಂಡ್‌ಗಳು ಹಿಂಗ್ಲಿಷ್‌ನಲ್ಲಿರಬಹುದು, ಇದು ಭಾರತೀಯ ಡ್ರೈವರ್‌ಗಳಿಗೆ ಸೂಕ್ತವಾಗಿದೆ. ಈ ಕಾರಿನಲ್ಲಿ "ಸನ್‌ರೂಫ್ ಖೋಲೋ", "ಟೆಂಪರೇಚರ್ ಕಾಮ್ ಕಾರ್ದೋ ಮತ್ತು ಇನ್ನೂ ಹೆಚ್ಚಿನ ಪದಗಳನ್ನು ಬಳಸುತ್ತದೆ.
ಈ ಹೊಸ ಹ್ಯುಂಡೈ ಎಕ್ಸ್‌ಟರ್ ಕಾರು EX, S, SX, SX (O) ಮತ್ತು SX (O) ಕನೆಕ್ಟ್ ಎಂಬ 5 ಟ್ರಿಮ್‌ಗಳಲ್ಲಿ ಬರುತ್ತದೆ. ಹ್ಯುಂಡೈ ಎಕ್ಸ್‌ಟರ್ ಮಿನಿ ಎಸ್‌ಯುವಿಯ ಪವರ್‌ಟೈನ್ ಸೆಟಪ್ 1.2 ಲೀಟರ್ ಕಪ್ಪಾ ಪೆಟ್ರೋಲ್ ಮತ್ತು 1.2 ಲೀಟರ್ ಕಪ್ಪಾ ಪೆಟ್ರೋಲ್ ಅನ್ನು ಫ್ಯಾಕ್ಟರಿ-ಫಿಟ್ ಮಾಡಿದ ಸಿಎನ್‌ಜಿ ಕಿಟ್‌ನೊಂದಿಗೆ ಒಳಗೊಂಡಿರುತ್ತದೆ. ಈ ಕಾರಿನ ಸಿಎನ್‌ಜಿ ಆವೃತ್ತಿಯು 28 ಕಿ.ಮೀ ಮೈಲೇಜ್ ನೀಡಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications