ಟಾಟಾ ಪಂಚ್‍ಗೆ 'ಪಂಚ್' ಕೊಡಲು ಸಜ್ಜಾದ ಹ್ಯುಂಡೈ ಕಾರಿನ ಇಂಟಿರಿಯರ್ ಬಹಿರಂಗ
ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಭರ್ಜರಿಯಾಗಿ ಸಜ್ಜಾಗುತ್ತಿದೆ. ಇದಕ್ಕಾಗಿ ಹ್ಯುಂಡೈ ಭಾರತದಲ್ಲಿ ತನ್ನ ಕಾರುಗಳ ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ವಿಸ್ತರಿಸಲಿದೆ. ಇದೀಗ ಹ್ಯುಂಡೈ ಎಕ್ಸ್‌ಟರ್ (Hyundai Exter) ಎಂಬ ಮೈಕ್ರೋ ಎಸ್‌ಯುವಿಯನ್ನು ಬಿಡುಗಡೆಗೊಳಿಸಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಸಜ್ಜಾಗಿದೆ.
ಇದೀಗ ಹ್ಯುಂಡೈ ಕಂಪನಿಯು ತನ್ನ ಹೊಸ ಎಕ್ಸ್‌ಟರ್ ಮೈಕ್ರೋ ಎಸ್‍ಯುವಿಯ ಇಂಟಿರಿಯರ್ ಚಿತ್ರಗಳು ಮತ್ತು ಮಾಹಿತಿಗಳನ್ನು ಬಹಿರಂಗಪಡಿಸಿದೆ. ಈ ಹೊಸ ಹ್ಯುಂಡೈ ಎಕ್ಸ್‌ಟರ್ ಎಸ್‍ಯುವಿಯು ಇಂಚಿನ HD ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 4.2-ಇಂಚಿನ ಬಣ್ಣದ TFT ಮಲ್ಟಿ-ಇನ್‌ಫರ್ಮೇಶನ್ ಡಿಸ್‌ಪ್ಲೇಯೊಂದಿಗೆ ಸುಧಾರಿತ ಡಿಜಿಟಲ್ ಕ್ಲಸ್ಟರ್‌ನೊಂದಿಗೆ ಸಜ್ಜುಗೊಂಡಿದೆ, ಬ್ಲೂಲಿಂಕ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ.

ಈ ಹೊಸ ಹ್ಯುಂಡೈ ಎಕ್ಸ್‌ಟರ್ ಕನೆಕ್ಟಿವಿಟಿ ಫೀಚರ್ಸ್, 90 ಎಂಬೆಡೆಡ್ ವಾಯ್ಸ್ ಕಮಾಂಡ್‌ಗಳು ಮತ್ತು ಓವರ್-ದಿ-ಏರ್ (OTA) ಇನ್ಫೋಟೈನ್‌ಮೆಂಟ್ ಮತ್ತು ಮ್ಯಾಪ್ ನವೀಕರಣಗಳಿಗೆ ಬೆಂಬಲವನ್ನು ನೀಡುತ್ತದೆ. ಈ ಕಾರಿನಲ್ಲಿ ಇನ್‌ಫೋಟೈನ್‌ಮೆಂಟ್ ಯೂನಿಟ್ ಇನ್-ಬಿಲ್ಟ್ ನ್ಯಾವಿಗೇಷನ್‌ನೊಂದಿಗೆ ಬರುತ್ತದೆ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಿಸ್ಟಮ್‌ಗಳನ್ನು ಬೆಂಬಲಿಸುತ್ತದೆ. ಇದನ್ನು 10 ಪ್ರಾದೇಶಿಕ ಮತ್ತು ಎರಡು ಜಾಗತಿಕ ಭಾಷೆಗಳಲ್ಲಿ ಕಸ್ಟಮೈಸ್ ಮಾಡಬಹುದು.
ಇನ್‌ಫೋಟೈನ್‌ಮೆಂಟ್ ಯೂನಿಟ್ ಇನ್-ಬಿಲ್ಟ್ ನ್ಯಾವಿಗೇಷನ್‌ನೊಂದಿಗೆ ಬರುತ್ತದೆ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಿಸ್ಟಮ್‌ಗಳನ್ನು ಸಂಪೂರ್ಟ್ ಮಾಡುತ್ತದೆ. ಇದನ್ನು 10 ಪ್ರಾದೇಶಿಕ ಮತ್ತು ಎರಡು ಜಾಗತಿಕ ಭಾಷೆಗಳಲ್ಲಿ ಕಸ್ಟಮೈಸ್ ಮಾಡಬಹುದು. ಡಿಜಿಟಲ್ ಕ್ಲಸ್ಟರ್ ಡ್ರೈವ್ ಅಂಕಿಅಂಶಗಳು, ಪಾರ್ಕಿಂಗ್ ದೂರ, ಡೋರ್ ತೆರೆಯುವುದು, ಸನ್‌ರೂಫ್ ಓಪನ್ ಮತ್ತು ಸೀಟ್‌ಬೆಲ್ಟ್ ರಿಮೈಂಡರ್ ಡಿಸ್‌ಪ್ಲೇಯಂತಹ ಮಾಹಿತಿಯನ್ನು ಪ್ರದರ್ಶಿಸುತ್ತದೆ.

ಕಾರಿನ ಒಳಗಿನ ಕನೆಕ್ಟಿವಿಟಿ ಫೀಚರ್ಸ್ ಸುರಕ್ಷತೆ ಮತ್ತು ಭದ್ರತೆ, ರಿಮೋಟ್ ಸೇವೆಗಳು, ಸ್ಥಳ ಆಧಾರಿತ ಸೇವೆಗಳು ಮತ್ತು ವಾಯ್ಸ್ ಸಹಾಯಕ್ಕೆ ಸಂಬಂಧಿಸಿವೆ. ಎಂಬೆಡೆಡ್ ವಾಯ್ಸ್ ಕಮಾಂಡ್‌ಗಳು ಇಂಟರ್ನೆಟ್ ಸಂಪರ್ಕವಿಲ್ಲದೆ ಸಹ ಕಾರ್ಯನಿರ್ವಹಿಸುತ್ತವೆ. ಈ ಕಮಾಂಡ್‌ಗಳು ಹಿಂಗ್ಲಿಷ್‌ನಲ್ಲಿರಬಹುದು, ಇದು ಭಾರತೀಯ ಡ್ರೈವರ್‌ಗಳಿಗೆ ಸೂಕ್ತವಾಗಿದೆ. ಈ ಕಾರಿನಲ್ಲಿ "ಸನ್‌ರೂಫ್ ಖೋಲೋ", "ಟೆಂಪರೇಚರ್ ಕಾಮ್ ಕಾರ್ದೋ ಮತ್ತು ಇನ್ನೂ ಹೆಚ್ಚಿನ ಪದಗಳನ್ನು ಬಳಸುತ್ತದೆ.
ಈ ಹೊಸ ಕಾರು ಖರೀದಿಸಲು ಬಯಸುವ ಗ್ರಾಹಕರು 11,000 ರೂಪಾಯಿಗಳ ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಹೊಸ ಮಾದರಿಯನ್ನು ಬುಕ್ ಮಾಡಬಹುದು. ಹೊಸ ಹ್ಯುಂಡೈ ಎಕ್ಸ್‌ಟರ್ ಎಸ್‍ಯುವಿಯು ಮೊದಲ ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಡ್ಯುಯಲ್ ಕ್ಯಾಮೆರಾಗಳೊಂದಿಗೆ ಡ್ಯಾಶ್‌ಕ್ಯಾಮ್ ನೊಂದಿಗೆ ಬರಲಿದೆ. ಈ ಹೊಸ ಹ್ಯುಂಡೈ ಎಕ್ಸ್‌ಟರ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯು ಪ್ಯಾರಾಮೆಟ್ರಿಕ್ ವಿನ್ಯಾಸದ ಮುಂಭಾಗದ ಗ್ರಿಲ್ ಜೊತೆಗೆ H- ಆಕಾರದ LED DRL ಹೊಂದಿದೆ.

ಈ ಹೊಸ ಹ್ಯುಂಡೈ ಎಕ್ಸ್‌ಟರ್ ಎಸ್‍ಯುವಿಯು ಪ್ಯಾರಾಮೆಟ್ರಿಕ್ ವಿನ್ಯಾಸದ ಮುಂಭಾಗದ ಗ್ರಿಲ್ ಜೊತೆಗೆ H- ಆಕಾರದ LED DRL ಸಿಗ್ನೆಚರ್ ಸ್ಟೈಲ್ ಒಳಗೊಂಡಿದೆ. ಟಾಪ್ ರೂಪಾಂತರಗಳು ಚೌಕಾಕಾರದ ಹೆಡ್‌ಲೈಟ್ ಹೌಸಿಂಗ್‌ನಲ್ಲಿ ಸುತ್ತುವರಿದ ರೌಂಡ್ ಪ್ರೊಜೆಕ್ಟರ್ ಹೆಡ್‌ಲೈಟ್ ಪಡೆಯುತ್ತವೆ. ಇನ್ನು ಹ್ಯುಂಡೈ ವೆನ್ಯೂ ಕಾರಿನ ರೀತಿಯ, ಹೆಡ್‌ಲೈಟ್‌ಗಳು ಅದರ ಎಲ್‌ಇಡಿ ಡಿಆರ್‌ಎಲ್‌ಗಳ ಕೆಳಗೆ ಇವೆ. ಅದರ ಕ್ಲಾಮ್‌ಶೆಲ್ ಬಾನೆಟ್‌ನ ಕೆಳಗೆ ನಯವಾದ ಬ್ಲ್ಯಾಕ್ ಅಂಶ ಆಕರ್ಷವಾಗಿದೆ.
ಇದರ ಹಿಂಭಾಗದ H- ಆಕಾರದ LED ಟೈಲ್‌ಲೈಟ್ ಅನ್ನು ಹೊಂದಿದ್ದರೆ, ಮುಂಭಾಗದಂತೆ ಹಿಂಭಾಗದಲ್ಲಿ DRL ಅನ್ನು ನೀಡಿದೆ. ಇನ್ನು ಈ ಎಸ್‍ಯುವಿಯು ಎಕ್ಸ್‌ಟರ್‌ನ ಎತ್ತರವನ್ನು ಇನ್ನಷ್ಟು ಎದ್ದುಕಾಣುವ ರೀತಿಯ ರೂಫ್ ರೈಲ್ ಗಳಿವೆ. ಹ್ಯುಂಡೈ ಎಕ್ಸ್‌ಟರ್ ಮಿನಿ ಎಸ್‌ಯುವಿಯ ಪವರ್‌ಟೈನ್ ಸೆಟಪ್ 1.2 ಲೀಟರ್ ಕಪ್ಪಾ ಪೆಟ್ರೋಲ್ ಮತ್ತು 1.2 ಲೀಟರ್ ಕಪ್ಪಾ ಪೆಟ್ರೋಲ್ ಅನ್ನು ಫ್ಯಾಕ್ಟರಿ-ಫಿಟ್ ಮಾಡಿದ ಸಿಎನ್‌ಜಿ ಕಿಟ್‌ನೊಂದಿಗೆ ಒಳಗೊಂಡಿರುತ್ತದೆ.


Click it and Unblock the Notifications