ಟಾಟಾ ಪಂಚ್ ಎದೆಯಲ್ಲಿ ನಡುಕ ಹುಟ್ಟಿಸಿದ ಬಹುನಿರೀಕ್ಷಿತ ಹ್ಯುಂಡೈ ಎಕ್ಸ್‌ಟರ್ ಬಿಡುಗಡೆ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ದೇಶಿಯ ಮಾರುಕಟ್ಟೆಯಲ್ಲಿ ತನ್ನ ಬಹುನಿರೀಕ್ಷಿತ ಹ್ಯುಂಡೈ ಎಕ್ಸ್‌ಟರ್ (Hyundai Exter) ಎಂಬ ಮೈಕ್ರೋ ಎಸ್‌ಯುವಿ ಬಿಡುಗಡೆಗೊಳಿಸಿದೆ. ಈ ಹೊಸ ಹ್ಯುಂಡೈ ಎಕ್ಸ್‌ಟರ್ ಮೈಕ್ರೋ ಎಸ್‌ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5,99,900 ಆಗಿದೆ.
ಈ ಹೊಸ ಹ್ಯುಂಡೈ ಎಕ್ಸ್‌ಟರ್ ಕಾರಿನ ಟಾಪ್-ಸ್ಪೆಕ್ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.9,31,990 ಆಗಿದೆ. ಈ ಹೊಸ ಹ್ಯುಂಡೈ ಎಕ್ಸ್‌ಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಪಂಚ್, ಸಿಟ್ರನ್ ಸಿ3 ಮತ್ತು ಮಾರುತಿ ಇಗ್ನಿಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಇತ್ತೀಚೆಗೆ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಹ್ಯುಂಡೈನ ಘಟಕದಲ್ಲಿ ಹೊಸ ಹ್ಯುಂಡೈ ಎಕ್ಸ್‌ಟರ್ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲಾಗಿದೆ.

ಹೊಸ ಎಕ್ಸ್‌ಟರ್ ಕಾರಿನಲ್ಲಿ 1.2-ಲೀಟರ್, 4-ಸಿಲಿಂಡರ್ ಎಂಜಿನ್‌ನೊಂದಿಗೆ ಬಂದಿದೆ. ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ. ಪೆಟ್ರೋಲ್ ರೂಪದಲ್ಲಿ, ಹುಂಡೈ ಎಕ್ಸ್‌ಟರ್‌ನ ಎಂಜಿನ್ 81.8 bhp ಪವರ್ ಮತ್ತು 113.8 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನು CNG ಗೆ ರೂಪದಲ್ಲಿ 67.7 bhp ಪವರ್ ಮತ್ತು 95.2 Nm ನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಕ್ಸ್‌ಟರ್ ಪೆಟ್ರೋಲ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ ಎಎಮ್‌ಟಿ ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುತ್ತದೆ. ಆದರೆ ಎಕ್ಸ್‌ಟರ್ ಸಿಎನ್‌ಜಿಯನ್ನು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ನೀಡಲಾಗುತ್ತದೆ.

ಹೊಸ ಎಕ್ಸ್‌ಟರ್ ಪೆಟ್ರೋಲ್ ಮಾದರಿಯು 19.4 ಕಿ.ಮೀ ಮೈಲೇಜ್ ನೀಡಿದರೆ, AMT ಜೊತೆಗೆ 19.2 ಕಿ.ಮೀ ಮೈಲೇಜ್ ಇಳಿಯುತ್ತದೆ. ಎಕ್ಸ್‌ಟರ್ CNG ಆವೃತ್ತಿಯು 27.1 ಕಿ.ಮೀ ಮೈಲೇಜ್ ನೀಡುತ್ತದೆ. ಈ ಹೊಸ ಹ್ಯುಂಡೈ ಎಕ್ಸ್‌ಟರ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಕಾರಿನ ಮುಂಭಾಗ ಪ್ಯಾರಾಮೆಟ್ರಿಕ್ ಫ್ರಂಟ್ ಗ್ರಿಲ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಕ್ಲಾಮ್‌ಶೆಲ್ ಬಾನೆಟ್ ಮತ್ತು ಎಚ್ ಆಕಾರದ ಎಲ್‌ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿವೆ.
ಇನ್ನು ಈ ಮೈಕ್ರೋ ಎಸ್‍ಯುವಿಗೆ ಸುಲಭವಾಗಿ ಪ್ರವೇಶಿಸಲು ಮತ್ತು ಹೊರಬರಲು ಡೋರುಗಳು ವಿಶಾಲವಾಗಿ ತೆರೆದುಕೊಳ್ಳುತ್ತವೆ. ಹೊಸ ಚಿತ್ರಗಳಲ್ಲಿ ಎಲೆಕ್ಟ್ರಿಕ್ ಸನ್‌ರೂಫ್, ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಗಳು ಇತ್ಯಾದಿಗಳನ್ನು ಹೊಂದಿವೆ. ಈ ಎಕ್ಸ್‌ಟರ್ ಎಸ್‍ಯುವಿಯ ಒಳಭಾಗದಲ್ಲಿ ಇಂಚಿನ HD ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 4.2-ಇಂಚಿನ ಬಣ್ಣದ TFT ಮಲ್ಟಿ-ಇನ್‌ಫರ್ಮೇಶನ್ ಡಿಸ್‌ಪ್ಲೇಯೊಂದಿಗೆ ಸುಧಾರಿತ ಡಿಜಿಟಲ್ ಕ್ಲಸ್ಟರ್‌ನೊಂದಿಗೆ ಸಜ್ಜುಗೊಂಡಿದೆ.
ಇದರೊಂದಿಗೆ ಬ್ಲೂಲಿಂಕ್ ತಂತ್ರಜ್ಞಾನವನ್ನು ಸಂಪೂರ್ಟ್ ಮಾಡುತ್ತದೆ. ಈ ಹ್ಯುಂಡೈ ಎಕ್ಸ್‌ಟರ್ ಕಾರಿನಲ್ಲಿ ಕನೆಕ್ಟಿವಿಟಿ ಫೀಚರ್ಸ್, 90 ಎಂಬೆಡೆಡ್ ವಾಯ್ಸ್ ಕಮಾಂಡ್‌ಗಳು ಮತ್ತು ಓವರ್-ದಿ-ಏರ್ (OTA) ಇನ್ಫೋಟೈನ್‌ಮೆಂಟ್ ಮತ್ತು ಮ್ಯಾಪ್ ನವೀಕರಣಗಳಿಗೆ ಬೆಂಬಲವನ್ನು ನೀಡುತ್ತದೆ. ಈ ಕಾರಿನಲ್ಲಿ ಇನ್‌ಫೋಟೈನ್‌ಮೆಂಟ್ ಯೂನಿಟ್ ಇನ್-ಬಿಲ್ಟ್ ನ್ಯಾವಿಗೇಷನ್‌ನೊಂದಿಗೆ ಬರುತ್ತದೆ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಿಸ್ಟಂಗಳನ್ನು ಬೆಂಬಲಿಸುತ್ತದೆ.
ಇದರೊಂದಿಗೆ 10 ಪ್ರಾದೇಶಿಕ ಮತ್ತು ಎರಡು ಜಾಗತಿಕ ಭಾಷೆಗಳಲ್ಲಿ ಕಸ್ಟಮೈಸ್ ಮಾಡಬಹುದು. ಇನ್ನು ಹ್ಯುಂಡೈ ಎಕ್ಸ್‌ಟರ್ ಕಾರಿನ ಒಳಗಿನ ಕನೆಕ್ಟಿವಿಟಿ ಫೀಚರ್ಸ್ ಸುರಕ್ಷತೆ ಮತ್ತು ಭದ್ರತೆ, ರಿಮೋಟ್ ಸೇವೆಗಳು, ಸ್ಥಳ ಆಧಾರಿತ ಫಂಕ್ಷನ್ ಮತ್ತು ವಾಯ್ಸ್ ಸಹಾಯಕ್ಕೆ ಸಂಬಂಧಿಸಿವೆ. ಎಂಬೆಡೆಡ್ ವಾಯ್ಸ್ ಕಮಾಂಡ್‌ಗಳು ಇಂಟರ್ನೆಟ್ ಸಂಪರ್ಕವಿಲ್ಲದೆ ಸಹ ಕಾರ್ಯನಿರ್ವಹಿಸುತ್ತವೆ. ಈ ಕಮಾಂಡ್‌ಗಳು ಇಂಗ್ಲಿಷ್‌ನಲ್ಲಿರಬಹುದು, ಇದು ಭಾರತೀಯ ಡ್ರೈವರ್‌ಗಳಿಗೆ ಸೂಕ್ತವಾಗಿದೆ.


Click it and Unblock the Notifications