ಬೈಕ್‌ನಂತೆ ಮೈಲೇಜ್, ಗರಿಷ್ಠ ಸುರಕ್ಷತೆಯೊಂದಿಗೆ ಬರುತ್ತಿದೆ ಹೊಸ ಹ್ಯುಂಡೈ ಕಾರು: ಟಾಟಾ ಪಂಚ್‍‍ಗೆ ಆತಂಕ ಶುರು

ಭಾರತದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಭರ್ಜರಿಯಾಗಿ ಸಜ್ಜಾಗುತ್ತಿದೆ. ಇದಕ್ಕಾಗಿ ಹ್ಯುಂಡೈ ಭಾರತದಲ್ಲಿ ತನ್ನ ಕಾರುಗಳ ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. ಇದೀಗ ಹ್ಯುಂಡೈ ಎಕ್ಸ್‌ಟರ್ (Hyundai Exter) ಎಂಬ ಮೈಕ್ರೋ ಎಸ್‌ಯುವಿಯನ್ನು ಬಿಡುಗಡೆಯಾಗಲು ರೆಡಿಯಾಗಿದೆ.

ಹೊಸ ಹ್ಯುಂಡೈ ಎಕ್ಸ್‌ಟರ್ ಎಸ್‍ಯುವಿಯನ್ನು ಖರೀದಿಸಲು ಬಯಸುವ ಗ್ರಾಹಕರು 11,000 ರೂಪಾಯಿಗಳ ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಹೊಸ ಮಾದರಿಯನ್ನು ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ಡೀಲರ್‌ಶಿಪ್‌ನಲ್ಲಿ ಬುಕ್ ಮಾಡಬಹುದು. ಹೊಸ ಹ್ಯುಂಡೈ ಎಕ್ಸ್‌ಟರ್ ಎಸ್‍ಯುವಿಯು ಮೊದಲ ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಡ್ಯುಯಲ್ ಕ್ಯಾಮೆರಾಗಳೊಂದಿಗೆ ಡ್ಯಾಶ್‌ಕ್ಯಾಮ್ ನೊಂದಿಗೆ ಬರಲಿದೆ. ಈ ಹೊಸ ಹ್ಯುಂಡೈ ಎಕ್ಸ್‌ಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಪಂಚ್‍‍ಗೆ ಪೈಪೋಟಿ ನೀಡುತ್ತದೆ.

Hyundai Exter

ಈ ಹೊಸ ಹ್ಯುಂಡೈ ಎಕ್ಸ್‌ಟರ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯು ಪ್ಯಾರಾಮೆಟ್ರಿಕ್ ವಿನ್ಯಾಸದ ಮುಂಭಾಗದ ಗ್ರಿಲ್ ಜೊತೆಗೆ H- ಆಕಾರದ LED DRL ಸಿಗ್ನೆಚರ್ ಸ್ಟೈಲ್ ಒಳಗೊಂಡಿದೆ. ಈ ಹೊಸ ಹ್ಯುಂಡೈ ಎಕ್ಸ್‌ಟರ್ ಎಸ್‍ಯುವಿಯು ಪ್ಯಾರಾಮೆಟ್ರಿಕ್ ವಿನ್ಯಾಸದ ಮುಂಭಾಗದ ಗ್ರಿಲ್ ಜೊತೆಗೆ H- ಆಕಾರದ LED DRL ಸಿಗ್ನೆಚರ್ ಸ್ಟೈಲ್ ಒಳಗೊಂಡಿದೆ. ಟಾಪ್ ರೂಪಾಂತರಗಳು ಚೌಕಾಕಾರದ ಹೆಡ್‌ಲೈಟ್ ಹೌಸಿಂಗ್‌ನಲ್ಲಿ ಸುತ್ತುವರಿದ ರೌಂಡ್ ಪ್ರೊಜೆಕ್ಟರ್ ಹೆಡ್‌ಲೈಟ್ ಪಡೆಯುತ್ತವೆ.

ಇನ್ನು ಹ್ಯುಂಡೈ ವೆನ್ಯೂ ಕಾರಿನ ರೀತಿಯ, ಹೆಡ್‌ಲೈಟ್‌ಗಳು ಅದರ ಎಲ್‌ಇಡಿ ಡಿಆರ್‌ಎಲ್‌ಗಳ ಕೆಳಗೆ ಇವೆ. ಅದರ ಕ್ಲಾಮ್‌ಶೆಲ್ ಬಾನೆಟ್‌ನ ಕೆಳಗೆ ನಯವಾದ ಬ್ಲ್ಯಾಕ್ ಅಂಶವಿದೆ ಅದು ಚೆನ್ನಾಗಿ ಕಾಣುತ್ತದೆ. ಇನ್ನು ಈ ಎಸ್‍ಯುವಿಯ ಅಲಾಯ್ ವ್ಹೀಲ್ ಗಳು ಆಕರ್ಷಕವಾಗಿದೆ. ಇದರ ಹಿಂಭಾಗದ H- ಆಕಾರದ LED ಟೈಲ್‌ಲೈಟ್ ಅನ್ನು ಹೊಂದಿದ್ದರೆ, ಮುಂಭಾಗದಂತೆ ಹಿಂಭಾಗದಲ್ಲಿ DRL ಅನ್ನು ನೀಡಿದೆ.

ಇನ್ನು ಈ ಎಸ್‍ಯುವಿಯು ಎಕ್ಸ್‌ಟರ್‌ನ ಎತ್ತರವನ್ನು ಇನ್ನಷ್ಟು ಎದ್ದುಕಾಣುವ ರೀತಿಯ ರೂಫ್ ರೈಲ್ ಗಳಿವೆ. ಇನ್ನು ಹ್ಯುಂಡೈ ಕ್ಯಾಬಿನ್ ಬಗ್ಗೆ ಇನ್ನೂ ಮಾಹಿತಿಗಳು ಬಹಿರಂಗಪಡಿಸದಿದ್ದರೂ, ಕಂಪನಿಯು ಈಗ ಒಂದು ವಿಭಾಗ-ಮೊದಲ ವಾಯ್ಸ್-ಆಕ್ಟಿವ್ ಗೊಳಿಸಿದ ಸ್ಮಾರ್ಟ್ ಎಲೆಕ್ಟ್ರಿಕ್ ಸನ್‌ರೂಫ್‌ನೊಂದಿಗೆ ಬರಲಿದೆ ಎಂದು ದೃಢಪಡಿಸಿದೆ, ಇದು ವಾಯ್ಸ್ ಕಾಮೆಂಡ್ ಗಳಿಗೆ ಪ್ರತಿಕ್ರಿಯಿಸುತ್ತದೆ. ಈ ರೀತಿಯ ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿವೆ.

ಹ್ಯುಂಡೈ ತನ್ನ ಮುಂಬರುವ ಎಕ್ಸ್‌ಟರ್ ಎಸ್‌ಯುವಿಯಲ್ಲಿ 6 ಏರ್‌ಬ್ಯಾಗ್‌ಗಳನ್ನು ಎಲ್ಲಾ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ 25 ಇತರ ಸುರಕ್ಷತಾ ಪೀಚರ್ಸ್ ಗಳೊಂದಿಗೆ ಬರಲಿದೆ. ಹ್ಯುಂಡೈ ಇಂಡಿಯಾ ಈ ಹೊಸ ಎಕ್ಸ್‌ಟರ್ ಎಸ್‍ಯುವಿಯಲ್ಲಿ ಲೋ-ಸ್ಪೆಕ್ ರೂಪಾಂತರಗಳಲ್ಲಿ ಹೆಚ್ಚುವರಿ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ. ಇನ್ನೂ ಹೆಚ್ಚು ಆಸಕ್ತಿದಾಯಕ ಸಂಗತಿಯೆಂದರೆ, ಅಪಘಾತಗಳ ಸಂದರ್ಭದಲ್ಲಿ ಸಾಕ್ಷಿ ಒದಗಿಸಲು ಡ್ಯುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್‌ನೊಂದಿಗೆ ಬರಲಿದೆ.

ಮುಂಬರುವ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿಯಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ (ವಿಎಸ್‌ಎಂ), ಹಿಲ್-ಸ್ಟಾರ್ಟ್ ಅಸಿಸ್ಟ್, ಎಬಿಎಸ್ ಮತ್ತು ಇಬಿಡಿಯನ್ನು ಹೊಂದಿದೆ. ಇದರೊಂದಿಗೆ ಐಎಸ್‌ಒಫಿಕ್ಸ್ ಆಂಕರಿಂಗ್ ಪಾಯಿಂಟ್‌ಗಳು, ರಿಮೈಂಡರ್‌ನೊಂದಿಗೆ 3-ಪಾಯಿಂಟ್ ಸೀಟ್ ಬೆಲ್ಟ್‌ಗಳು (ಎಲ್ಲಾ ಸೀಟ್‌ಗಳು) ಒಳಗೊಂಡಿವೆ. ESS, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರಿವರ್ಸ್ ಪಾರ್ಕಿಂಗ್ ಸೆನ್ಸರ್ ಗಳು ಮತ್ತು ಇನ್ನಷ್ಟು ಫೀಚರ್ಸ್ ಗಳನ್ನು ಹೊಂದಿರಲಿವೆ.

ಈ ಹೊಸ ಹುಂಡೈ ಎಕ್ಸ್‌ಟರ್ ಕಾರು EX, S, SX, SX (O) ಮತ್ತು SX (O) ಕನೆಕ್ಟ್ ಎಂಬ 5 ಟ್ರಿಮ್‌ಗಳಲ್ಲಿ ಬರುತ್ತದೆ. ಹ್ಯುಂಡೈ ಎಕ್ಸ್‌ಟರ್ ಮಿನಿ ಎಸ್‌ಯುವಿಯ ಪವರ್‌ಟೈನ್ ಸೆಟಪ್ 1.2 ಲೀಟರ್ ಕಪ್ಪಾ ಪೆಟ್ರೋಲ್ ಮತ್ತು 1.2 ಲೀಟರ್ ಕಪ್ಪಾ ಪೆಟ್ರೋಲ್ ಅನ್ನು ಫ್ಯಾಕ್ಟರಿ-ಫಿಟ್ ಮಾಡಿದ ಸಿಎನ್‌ಜಿ ಕಿಟ್‌ನೊಂದಿಗೆ ಒಳಗೊಂಡಿರುತ್ತದೆ.

ಹ್ಯುಂಡೈ ಎಕ್ಸ್‌ಟರ್ ಎಂಟ್ರಿ ಲೆವೆಲ್ ಎಂಜಿನ್ ಆಯ್ಕೆಯು ವೆನ್ಯೂ , ಗ್ರ್ಯಾಂಡ್ ಐ10 ನಿಯೋಸ್ ಮತ್ತು ಔರಾ ನಂತಹ ಅದೇ .1.2-ಲೀಟರ್ ನ್ಯಾಚುರಲ್ ಆಸ್ಪರರ್ಡ್ ಪೆಟ್ರೋಲ್ ಆಗಿರುತ್ತದೆ . ಹ್ಯುಂಡೈ ನಂತರದ ಹಂತದಲ್ಲಿ 1.0-ಲೀಟರ್ ಟರ್ಬೊ-ಪೆಟ್ರೋಲ್ ಅನ್ನು ಸೇರಿಸಬಹುದು. ಎಕ್ಸ್‌ಟರ್ ಫ್ಯಾಕ್ಟರಿ ಸಿಎನ್‌ಜಿ ಆಯ್ಕೆಯನ್ನು ಸಹ ಪಡೆಯುತ್ತದೆ. ಇದು ಹುಂಡೈನ ಅತ್ಯಂತ ಚಿಕ್ಕ ಎಸ್‍ಯುವಿ ಆಗಿರುತ್ತದೆ. ಈ ವರ್ಷ ಜುಲೈ 10 ರಂದು ಭಾರತದಲ್ಲಿ ಹ್ಯುಂಡೈ ಎಕ್ಸ್‌ಟರ್ ಅನ್ನು ಬಿಡುಗಡೆಯಾಗಲಿದೆ.

Article Published On: Wednesday, May 31, 2023, 12:00 [IST]
English summary
New hyundai exter rear profile unveiled ahead of launch details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+