ಎದುರಾಳಿಗಳಿಗೆ ಸೆಡ್ಡು ಹೊಡೆಯಲು ಹೊಸ ನವೀಕರರಣಗಳೊಂದಿಗೆ ಬರುತ್ತಿದೆ ಹ್ಯುಂಡೈ i20 ಕಾರು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಭಾರತದ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಭರ್ಜರಿಯಾಗಿ ಸಜ್ಜಾಗುತ್ತಿದೆ, ಇದಕ್ಕಾಗಿ ಹ್ಯುಂಡೈ ಕಂಪನಿಯು ಭಾರತದಲ್ಲಿ ತನ್ನ ಕಾರುಗಳ ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ವಿಸ್ತರಿಸಲಿದೆ. ಇದರ ಭಾಗವಾಗಿ ತನ್ನ ಬಹುನಿರೀಕ್ಷಿತ ಹ್ಯುಂಡೈ ಎಕ್ಸ್‌ಟರ್ ಕಾರನ್ನು ಬಿಡುಗಡೆಗೊಳಿಸಲಿದೆ.
ಇದರ ಜೊತೆಗೆ ಹ್ಯುಂಡೈ ಕಂಪನಿಯು ಹ್ಯುಂಡೈ i20 ಫೇಸ್‌ಲಿಫ್ಟ್ (Hyundai i20 Facelift) ಕಾರು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ i20 ಕಾರು ಈ ವರ್ಷದ ಅಂತ್ಯದ ವೇಳೆಗೆ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಹ್ಯುಂಡೈ ಕಂಪನಿಯು ಬಿಡುಗಡೆಯ ಕುರಿತು ಯಾವುದೇ ಅಧಿಕೃತ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ, ಹ್ಯುಂಡೈ i20 ಫೇಸ್‌ಲಿಫ್ಟ್ ಕಾರು ಕೆಲವು ಕಾಸ್ಮೆಟಿಕ್ ಮತ್ತು ವೈಶಿಷ್ಟ್ಯದ ನವೀಕರಣಗಳೊಂದಿಗೆ ರಿಫ್ರೆಶ್ ಆಗಿ ಬರುತ್ತದೆ.

2023ರ ಹ್ಯುಂಡೈ i20 ಕಾರಿನ ಒಳಭಾಗದಲ್ಲಿ ಹೊಸ ಥೀಮ್ ಅನ್ನು ಹೊಂದಿರುತ್ತದೆ. ಹಣದ ಮೌಲ್ಯಕ್ಕೆ ಪ್ಯಾಕೇಜ್ ಅನ್ನು ಹೆಚ್ಚಿಸಲು, ಕಾರು ತಯಾರಕರು ಅದನ್ನು ಡ್ಯಾಶ್‌ಕ್ಯಾಮ್, ಆಂಬಿಯೆಂಟ್ ಲೈಟಿಂಗ್ ಸಿಸ್ಟಮ್ ಮತ್ತು ಸ್ಟ್ಯಾಂಡರ್ಡ್ 6 ಏರ್‌ಬ್ಯಾಗ್‌ಗಳೊಂದಿಗೆ ಸಜ್ಜುಗೊಳಿಸುವ ಸಾಧ್ಯತೆಯಿದೆ. ಹುಂಡೈನ ಮುಂಬರುವ ಎಕ್ಸ್‌ಟರ್ ಮೈಕ್ರೋ ಎಸ್‌ಯುವಿ ಕೂಡ ಆಕರ್ಷಕ ಡ್ಯಾಶ್‌ಕ್ಯಾಮ್‌ನೊಂದಿಗೆ ಬರಲಿದೆ.
ಹ್ಯುಂಡೈ i20 ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್‌ನ ನವೀಕರಿಸಿದ ಆವೃತ್ತಿಯು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕನೆಕ್ಟಿವಿಟೀ ಕಾರ್ ಟೆಕ್, ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಅನ್ನು ನೀಡುವುದನ್ನು ಮುಂದುವರಿಸುತ್ತದೆ.

ಹೊಸ ಹ್ಯುಂಡೈ i20 ಫೇಸ್‌ಲಿಫ್ಟ್‌ನ ಕಾರಿನ ಮುಂಭಾಗದ ಫಾಸಿಕವು ಪ್ರಮುಖ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಇದು ಸ್ವಲ್ಪ ಟ್ವೀಕ್ ಮಾಡಿದ ಬಂಪರ್, ಆಕರ್ಷಕ ಗ್ರಿಲ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್‌ಗಳನ್ನು ಸ್ವೀಕರಿಸುತ್ತದೆ. ಇನ್ನು ಈ ಹ್ಯುಂಡೈ i20 ಫೇಸ್‌ಲಿಫ್ಟ್ ಕಾರಿನಲಿ ಎಲ್ಇಡಿ ಡಿಆರ್ಎಲ್ಗಳನ್ನು ಸಹ ಸ್ವಲ್ಪಮಟ್ಟಿಗೆ ಮರುಸ್ಥಾಪಿಸಲಾಗುತ್ತದೆ.
ಹ್ಯಾಚ್ Z- ಆಕಾರದ ಎಲ್ಇಡಿ ಒಳಸೇರಿಸುವಿಕೆಯೊಂದಿಗೆ ಹೊಸ ಟೈಲ್ಲ್ಯಾಂಪ್ ಕ್ಲಸ್ಟರ್ಗಳನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಅಸ್ತಿತ್ವದಲ್ಲಿರುವ ಪೋಲಾರ್ ವೈಟ್, ಫಿಯರಿ ರೆಡ್, ಟೈಫೂನ್ ಸಿಲ್ವರ್, ಟೈಟಾನ್ ಗ್ರೇ, ಸ್ಟಾರ್ರಿ ನೈಟ್, ಫಿಯರಿ ರೆಡ್ ವಿತ್ ಬ್ಲ್ಯಾಕ್ ರೂಫ್ ಮತ್ತು ಪೋಲಾರ್ ವೈಟ್ ವಿಥ್ ಬ್ಲ್ಯಾಕ್ ರೂಫ್ ಜೊತೆಗೆ ಹೊಸ ಬಾಹ್ಯ ಬಣ್ಣ ಆಯ್ಕೆಗಳು ಇರಬಹುದು.

ಇನ್ನು ಈ ಹೊಸ ಸಹ್ಯಾಚ್ Z- ಆಕಾರದ ಎಲ್ಇಡಿ ಇನ್ಸರ್ಟ್ ಗಳೊಂದಿಗೆ ಹೊಸ ಟೈಲ್ ಲ್ಯಾಂಪ್ ಗಳನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಹೊಸ ಹ್ಯುಂಡೈ i20 ಫೇಸ್‌ಲಿಫ್ಟ್ ಕಾರು ಪೋಲಾರ್ ವೈಟ್, ಫಿಯರಿ ರೆಡ್, ಟೈಫೂನ್ ಸಿಲ್ವರ್, ಟೈಟಾನ್ ಗ್ರೇ, ಸ್ಟಾರ್ರಿ ನೈಟ್, ಫಿಯರಿ ರೆಡ್ ವಿತ್ ಬ್ಲ್ಯಾಕ್ ರೂಫ್ ಮತ್ತು ಪೋಲಾರ್ ವೈಟ್ ವಿಥ್ ಬ್ಲ್ಯಾಕ್ ರೂಫ್ ಜೊತೆಗೆ ಹೊಸ ಬಾಹ್ಯ ಬಣ್ಣ ಆಯ್ಕೆಗಳೊಂದಿಗೆ ಬರುತ್ತದೆ.
ಪ್ರಸ್ತುತ ಹೊಸ ಹ್ಯುಂಡೈ i20 ಫೇಸ್‌ಲಿಫ್ಟ್ ಕಾರಿನಲ್ಲಿ 1.2 ಲೀಟರ್ ನ್ಯಾಚುರಲ್ ಆಸ್ಪರರ್ಡ್ ಮತ್ತು 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ಗಳನ್ನು ನೀಡುವುದನ್ನು ಮುಂದುವರಿಸಲಾಗುತ್ತದೆ. ಇದರಲ್ಲಿ 1.2 ಲೀಟರ್ ನ್ಯಾಚುರಲ್ ಆಸ್ಪರರ್ಡ್ ಎಂಜಿನ್ 83 bhp ಪವರ್ ಮತ್ತು 114 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನ್ನು ಈ ಕಾರಿನ ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 12 0bhp ಮತ್ತು 172 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಹುಂಡೈ i20 ಫೇಸ್‌ಲಿಫ್ಟ್ ಅದೇ 5-ಸ್ಪೀಡ್ ಮ್ಯಾನುವಲ್, 7-ಸ್ಪೀಡ್ DCT ಆಟೋಮ್ಯಾಟಿಕ್ ಮತ್ತು CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗುತ್ತದೆ.


Click it and Unblock the Notifications