Hyundai Kona: ಅತ್ಯಾಧುನಿಕ ಸೌಲಭ್ಯವುಳ್ಳ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರು ಅನಾವರಣ

ಜಾಗತಿಕವಾಗಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೇ ವೇಳೆ ಹ್ಯುಂಡೈ ಮತ್ತು ಕಿಯಾ ಎಲೆಕ್ಟ್ರಿಕ್ ಕಾರುಗಳಿಗೆ ಸಂಬಂಧಿಸಿದಂತೆ ಅಗ್ರೇಸಿವ್ ಆಗಿ ಮುನ್ನಡೆಯುತ್ತಿದೆ. ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಈ ಎರಡು ಸಹೋದರ ಬ್ರ್ಯಾಂಡ್ ಗಳು ಭಾರೀ ವೇಗದಲ್ಲಿ ಮುನ್ನುಗು ಹೊಸ ಸಂಚಲನವನ್ನು ಸೃಷ್ಟಿಸುತ್ತಿದೆ.

ಟೆಸ್ಲಾ ಮತ್ತು BYD ಯಂತಹ ಬ್ರ್ಯಾಂಡ್ ಗಳಿಗೆ ಪೈಪೋಟಿಯಾಗಿ ಹ್ಯುಂಡೈ ಮತ್ತು ಕಿಯಾ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ. ಇತ್ತೀಚೆಗೆ ನ್ಯೂಯಾರ್ಕ್ ಇಂಟರ್‌ನ್ಯಾಶನಲ್ ಆಟೋ ಶೋನಲ್ಲಿ ಹ್ಯುಂಡೈ ತನ್ನ ಹೊಸ ಕೋನಾ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿತು. ಈ ಎರಡನೇ ತಲೆಮಾರಿನ ಮಾದರಿಯನ್ನು ಇಲ್ಲಿನ ಮಾರುಕಟ್ಟೆಗಾಗಿ ಸಣ್ಣ ಎಸ್‍ಯುವಿ ವಿಭಾಗದಲ್ಲಿ ಇರಿಸಲಾಗುತ್ತದೆ.

Hyundai Kona

ಈ ಬಾರಿ, ಹ್ಯುಂಡೈ ಎಲೆಕ್ಟ್ರಿಕ್ ಕಾರ್ ಪ್ಲಾಟ್‌ಫಾರ್ಮ್ ಅನ್ನು ಮೊದಲು ಎಲೆಕ್ಟ್ರಿಫೈಡ್ ಪವರ್‌ಟ್ರೇನ್‌ನೊಂದಿಗೆ ಅಭಿವೃದ್ಧಿಪಡಿಸಿದೆ. ಇದು ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಪಾರುಪತ್ಯ ಸಾಧಿಸುವ ಭಾಗವಾಗಿದೆ. ಹೊಸ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಈ ಸಮಯದಲ್ಲಿ ದೊಡ್ಡ ಆಯಾಮಗಳು ಮತ್ತು ಉದಾರವಾದ ಆಂತರಿಕ ಸ್ಥಳದೊಂದಿಗೆ ಬರುತ್ತದೆ. ಈ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರಿನಲ್ಲಿ 104.7-ಇಂಚಿನ ವೀಲ್‌ಬೇಸ್‌ನಲ್ಲಿ ಕುಳಿತುಕೊಳ್ಳುತ್ತದೆ ಮತ್ತು 71.9-ಇಂಚಿನ ಅಗಲದೊಂದಿಗೆ 171.5-ಇಂಚಿನ ಉದ್ದವನ್ನು ಹೊಂದಿದೆ.

ಇನ್ನು ಈ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರು 0.27 ರ ಡ್ರ್ಯಾಗ್ ಗುಣಾಂಕದೊಂದಿಗೆ, ಇತ್ತೀಚಿನ ಕೋನಾ ಎಲೆಕ್ಟ್ರಿಕ್ ಅತ್ಯುತ್ತಮ ಏರೋಡೈನಾಮಿಕ್ ಪರ್ಫಾಮೆನ್ಸ್ ಭರವಸೆ ನೀಡುತ್ತದೆ. ಈ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರಿನಲ್ಲಿ 64.8-kWh ಬ್ಯಾಟರಿಯೊಂದಿಗೆ ಪ್ಯಾಕ್ ಅನ್ನು ಹೊಂದಿದ್ದು, ಈ ಎಲೆಕ್ಟ್ರಿಕ್ ಕಾರು 418 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

Hyundai Kona

ಇನ್ನು ಈ ಹೊಸ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು 201 ಹೆಚ್‌ಪಿ ಪವರ್ ಮತ್ತು 255 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರು ಸ್ಪೋರ್ಟ್ಸ್ ಬ್ಯಾಟರಿ ಪ್ರಿ ಕಂಡೀಷನಿಂಗ್ ಇದು ತಂಪಾದ ತಾಪಮಾನದಲ್ಲಿ ಸುರಕ್ಷಿತ ಚಾರ್ಜಿಂಗ್ ಮತ್ತು ಪವರ್ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. ಹೊಸ ಚಾರ್ಜಿಂಗ್ ಪೋರ್ಟ್ ಡೋರ್ ಲ್ಯಾಂಪ್ ಸಹ ಇದೆ, ಇದು ರಾತ್ರಿ ಸಮಯದಲ್ಲಿ ಬೆಳಕಿನ ಗೋಚರತೆಯನ್ನು ನೀಡುತ್ತದೆ.

ಇದರ ಜೊತೆಗೆ, ಕೋನಾ ಎಲೆಕ್ಟ್ರಿಕ್ ಫಾರ್ವರ್ಡ್ 'ಫ್ರಂಕ್' ಸ್ಟೋರೇಜ್, ಸಕ್ರಿಯ ಗ್ರಿಲ್ ಶಟರ್‌ಗಳು, ಹೊರಭಾಗದ ವೆಹಿಕಲ್-ಟು-ಲೋಡ್ (V2L) ಸಾಮರ್ಥ್ಯ, i-PEDAL ಡ್ರೈವಿಂಗ್ ಮೋಡ್ ಮತ್ತು ನೈಜ-ಸಮಯದ ಟ್ರಾಫಿಕ್ ಪರಿಸ್ಥಿತಿಗಳಿಗೆ ಅನುಗುಣವಾಗಿ ಪುನರುತ್ಪಾದನೆಯನ್ನು ಸರಿಹೊಂದಿಸುವ ಸ್ಮಾರ್ಟ್ ರೀಜೆನೆರೇಟಿವ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಈ ಸಿಸ್ಟಂ ನೈಜ-ಸಮಯದ ಟ್ರಾಫಿಕ್ ಡೇಟಾದ ಆಧಾರದ ಮೇಲೆ ಪುನರುತ್ಪಾದಕ ಬ್ರೇಕಿಂಗ್ ಮಟ್ಟವನ್ನು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ.

Hyundai Kona

ಆದ್ದರಿಂದ ಪುನರುತ್ಪಾದಕ ಬ್ರೇಕಿಂಗ್ ಸಿಸ್ಟಮ್ ದಕ್ಷತೆಯನ್ನು ಉತ್ತಮಗೊಳಿಸುತ್ತದೆ. ಈ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರು ಹೆಡ್‌ಲೈಟ್ ಮತ್ತು ಬ್ರೇಕ್ ಲೈಟ್ ಅಂಶಗಳನ್ನು ಪ್ರತ್ಯೇಕ ಪಾಡ್‌ಗಳಲ್ಲಿ ಇರಿಸಲಾಗುತ್ತದೆ, ಈ ಎಲೆಕ್ಟ್ರಿಕ್ ಕಾರು ಎಲ್‌ಇಡಿ ಲೈಟ್ ಬಾರ್‌ಗಳನ್ನುಹೊಂದಿದೆ. ಈ ನ್ಯೂ ಜನರೇಷನ್ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು 139.7mm ಉದ್ದ ಮತ್ತು 22.86 mm ಅಗಲವಿದೆ. ಇನ್ನು ಅದರ ಅದರ ಹಿಂದಿನ ಮಾದರಿಗಿಂತ 58.42 mm ಉದ್ದದ ವೀಲ್‌ಬೇಸ್ ಹೊಂದಿದೆ.

ಈ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರಿನ ಬದಿಗಳಲ್ಲಿನ ಚೂಪಾದ ಲೈನ್ ಗಳು ಮತ್ತು ಅಥ್ಲೆಟಿಕ್ ಆಕರ್ಷಣೆಯನ್ನು ನೀಡುತ್ತವೆ. ಅದರ ಫೆಂಡರ್‌ಗಳ ಹಿಂದೆ ವ್ಹೀಲ್ ಅರ್ಚಾರ್ ಮತ್ತು ಅಂಡರ್‌ಕಟ್‌ಗಳು ಹೊಂದಿವೆ. ಇನ್ನು ಸ್ಮಾರ್ಟ್-ಲುಕಿಂಗ್ 5-ಸ್ಪೋಕ್ ವಿನ್ಯಾಸದ ಅಲಾಯ್ ವ್ಹೀಲ್ ಗಳು ಮತ್ತು ರೂಫ್-ಲೈನ್ ವಿಲೀನಗೊಂಡಿದೆ. ಈ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರಿನ ಒಳಭಾಗದಲ್ಲಿ, ಪ್ರಮುಖ ಆಕರ್ಷಣೆಯೆಂದರೆ ಅದರ ಡ್ಯುಯಲ್ 12.3 ಡಿಜಿಟಲ್ ಡಿಸ್ ಪ್ಲೇಗಳಾಗಿದೆ.

Article Published On: Wednesday, April 12, 2023, 18:00 [IST]
English summary
New hyundai kona ev revealed battery pack features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+