ಆಕರ್ಷಕ ವಿನ್ಯಾಸದಲ್ಲಿ ಹ್ಯುಂಡೈ ಟ್ಯೂಸಾನ್ ಫೇಸ್‌ಲಿಫ್ಟ್ ಎಸ್‍ಯುವಿ ಅನಾವರಣ

ಜನಪ್ರಿಯ ಕಾರು ಉತ್ಪಾದನಾ ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಹ್ಯುಂಡೈ ಟ್ಯೂಸಾನ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. 2024ರ ಹ್ಯುಂಡೈ ಟ್ಯೂಸಾನ್ ಫೇಸ್‌ಲಿಫ್ಟ್ ಎಸ್‍ಯುವಿ ಮುಂದಿನ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಪ್ರಸ್ತುತ ಜನರೇಷನ್ ಹ್ಯುಂಡೈ ಟ್ಯೂಸಾನ್ (Hyundai Tucson) ಎಸ್‍ಯುವಿಯನ್ನು 2022ರ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು.

2024ರ ಹ್ಯುಂಡೈ ಟ್ಯೂಸಾನ್ ಫೇಸ್‌ಲಿಫ್ಟ್ ಎಸ್‍ಯುವಿ ಕಾಸ್ಮೆಟಿಕ್ ವಿನ್ಯಾಸ ಮತ್ತು ಒಳಾಂಗಣ ಬದಲಾವಣೆಗಳೊಂದಿಗೆ ಬರುತ್ತದೆ. ಆದರೆ ಎಂಜಿನ್ ಆಯ್ಕೆಗಳು ಒಂದೇ ಆಗಿರುತ್ತವೆ. 2024ರ ಹ್ಯುಂಡೈ ಟ್ಯೂಸಾನ್ ಫೇಸ್‌ಲಿಫ್ಟ್ ಎಸ್‍ಯುವಿ ಕಾಸ್ಮೆಟಿಕ್ ವಿನ್ಯಾಸ ಬದಲಾವಣೆಗಳೊಂದಿಗೆ ಬರುತ್ತದೆ, ಇದು ಬ್ರ್ಯಾಂಡ್‌ನ ಹೊಸ ಪ್ಯಾರಾಮೆಟ್ರಿಕ್ ಡೈನಾಮಿಕ್ಸ್ ವಿನ್ಯಾಸ ಭಾಷೆಗೆ ಅನುಗುಣವಾಗಿರುತ್ತದೆ. ಸ್ಟೈಲಿಂಗ್ ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿರುವ ನ್ಯೂ ಜನರೇಷನ್ ಕೋನಾ ಮತ್ತು ಎಲ್ಲಾ ಹೊಸ ಸಾಂಟಾ ಫೆ ಎಸ್‌ಯುವಿಯಿಂದ ಪ್ರೇರಿತವಾಗಿದೆ.

Hyundai Tucson Facelift

2024ರ ಹ್ಯುಂಡೈ ಟ್ಯೂಸಾನ್ ಫೇಸ್‌ಲಿಫ್ಟ್ ಎಸ್‍ಯುವಿಯ ಮುಂಭಾಗದ ಫಾಸಿವು ಬ್ರ್ಯಾಂಡ್‌ನ ಸಿಗ್ನೇಚರ್ ಫ್ರಂಟ್ ಗ್ರಿಲ್ ಮತ್ತು ಸ್ವಲ್ಪ ಪರಿಷ್ಕೃತ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ. ಇದು ಮುಂಭಾಗ ಮತ್ತು ಹಿಂಭಾಗದಲ್ಲಿ ಪ್ರಮುಖ ಸ್ಕಿಡ್ ಪ್ಲೇಟ್‌ಗಳು ಮತ್ತು ಹೊಸ ಅಲಾಯ್ ವ್ಹೀಲ್ ಗಳೊಂದಿಗೆ ಬರುತ್ತದೆ. ಈ ಹೊಸ ಎಸ್‍ಯುವಿಯ ಒಳಭಾಗದಲ್ಲಿ ಹೊಸ ಪ್ಯಾನೆಲ್ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಅನ್ನು ನೀಡಿದೆ.

ಇನ್ನು ಈ ಎಸ್‍ಯುವಿಯಲ್ಲಿ ಸೆಂಟರ್ ಕನ್ಸೋಲ್ ಅನ್ನು ಪರಿಷ್ಕರಿಸಲಾಗಿದೆ, ಇದು ಈಗ ವಿಭಿನ್ನ ಕಾರ್ಯಗಳಿಗಾಗಿ ಹೊಸ ಹ್ಯಾಪ್ಟಿಕ್ ಕಂಟ್ರೋಲ್ ಸ್ಟಾಕ್ ಅನ್ನು ಹೊಂದಿದೆ. ಸೆಂಟರ್ ಸ್ಟಾಕ್ ಸೆಂಟರ್ ಕನ್ಸೋಲ್‌ನ ಮುಂದೆ ದೊಡ್ಡ ಸ್ಟೋರೇಜ್ ಸ್ಪೇಸ್ ಅನ್ನು ಹೊಂದಿದೆ. 2024ರ ಹ್ಯುಂಡೈ ಟ್ಯೂಸಾನ್ ಫೇಸ್‌ಲಿಫ್ಟ್ ಎಸ್‍ಯುವಿಯು ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಪಡೆದಿಲ್ಲ ಮತ್ತು ಅದರ ಪ್ರಸ್ತುತ ಎಂಜಿನ್ ಆಯ್ಕೆಗಳೊಂದಿಗೆ ಮುಂದುವರೆದಿದೆ.

Hyundai Tucson Facelift

2024ರ ಹ್ಯುಂಡೈ ಟ್ಯೂಸಾನ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 2.0-ಲೀಟರ್ ಪೆಟ್ರೋಲ್ ಮತ್ತು ಟರ್ಬೊ ಡೀಸೆಲ್ ಎಂಜಿನ್‌ಗಳೊಂದಿಗೆ ನೀಡಲಾಗುತ್ತದೆ. ಈ ಎಂಜಿನ್ 156 bhp ಪವರ್ ಮತ್ತು 192 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಇನ್ನು ಈ ಎಸ್‍ಯುವಿಯಲ್ಲಿ 1.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ, ಅದು ಅಲ್ಕಾಜರ್‌ಗೆ 160 bhp ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಸೆಲ್ ಆವೃತ್ತಿಯು 2.0-ಲೀಟರ್ ಯೂನಿಟ್ ಅನ್ನು ಪಡೆಯುತ್ತದೆ, ಇದು 186 bhp ಮತ್ತು 416 Nm ಟಾರ್ಕ್ ಅನ್ನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Hyundai Tucson Facelift

ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಎ‍ಯುವಿಯು ಮಲ್ಟಿ-ಟೆರೈನ್ ಮೋಡ್‌ಗಳೊಂದಿಗೆ AWD ಸೆಟಪ್‌ನೊಂದಿಗೆ ಬರುತ್ತದೆ. ಇನ್ನು ಹುಂಡೈ ಕಂಪನಿಯು ತನ್ನ ಹೊಸ ಕ್ರೆಟಾ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಹುಂಡೈ ಕ್ರೆಟಾ ಮಾದರಿಯು ಹೊಸ ವೆರ್ನಾ ಸೆಡಾನ್‌ನಿಂದ ಒಳಭಾಗ ಮತ್ತು ವೈಶಿಷ್ಟ್ಯಗಳನ್ನು ಹಂಚಿಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹ್ಯುಂಡೈ ಈಗಾಗಲೇ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕ್ರೆಟಾ ಫೇಸ್‌ಲಿಫ್ಟ್ ಅನ್ನು ಮಾರಾಟ ಮಾಡುತ್ತಿದೆ. ಹೊಸ ಕ್ರೆಟಾ ಹಲವಾರು ಭಾರತ-ನಿರ್ದಿಷ್ಟ ವಿನ್ಯಾಸ ಬದಲಾವಣೆಗಳನ್ನು ಮತ್ತು ಒಳಾಂಗಣವನ್ನು ಸ್ವೀಕರಿಸುತ್ತದೆ ಎಂದು ಕೊರಿಯನ್ ದೈತ್ಯ ಕಂಪನಿಯು ಹೇಳಿದೆ. ಈ ಹೊಸ ಹುಂಡೈ ಕ್ರೆಟಾ ಹೊಸ ವೆರ್ನಾ ಸೆಡಾನ್‌ನೊಂದಿಗೆ ಇಂಟೀರಿಯರ್ ಸ್ಟೈಲಿಂಗ್ ಅನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ. ಇದು ಇಂಟಿಗ್ರೇಟೆಡ್ ಡ್ಯುಯಲ್ ಡಿಸ್‌ಪ್ಲೇ ಸೆಟಪ್ ಅನ್ನು ಪಡೆಯುವ ನಿರೀಕ್ಷೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, November 23, 2023, 16:57 [IST]
English summary
New hyundai tucson facelift revealed specs features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+