ಸೆಡಾನ್ ಕಾರ್ ಪ್ರಿಯರನ್ನು ಸೆಳೆಯಲು ಹೊಸ ನವೀಕರಣಗಳೊಂದಿಗೆ ಬರುತ್ತಿದೆ ಹ್ಯುಂಡೈ ವೆರ್ನಾ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹುಂಡೈ ಮೋಟಾರ್ ಇಂಡಿಯಾ ಇದೀಗ ಹ್ಯುಂಡೈ ವೆರ್ನಾ ಸೆಡಾನ್ ಅನ್ನು 2023ರ ಹ್ಯುಂಡೈ ವೆರ್ನಾ ಸೆಡಾನ್ ಅನ್ನು ಮಾರ್ಚ್ 21 ರಂದು ಬಿಡುಗಡೆಗೊಳಿಸಿದೆ. ಇದೀಗ ಹ್ಯುಂಡೈ ಕಂಪನಿಯು ಈ ವೆರ್ನಾ ಕಾರಿನ ಡಿಸೈನ್ ರಿವೀಲ್ ಮಾಡುವ ರೇಖಾಚಿತ್ರವನ್ನು ಬಹಿರಂಗಪಡಿಸಿದೆ.
ದಕ್ಷಿಣ ಕೊರಿಯಾದ ಕಾರು ತಯಾರಕರು ಈ ಹ್ಯುಂಡೈ ವೆರ್ನಾ ಕಾರಿನ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದು, ಆಸಕ್ತ ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಟೋಕನ್ ಮೊತ್ತ ರೂ.25 ಸಾವಿರ ಬುಕ್ಕಿಂಗ್ ಅನ್ನು ಮಾಡಿಕೊಳ್ಳಬಹುದು. ಈ ಹೊಸ ಹ್ಯುಂಡೈ ವೆರ್ನಾ ಕಾರಿನಲ್ಲಿ ಬ್ರ್ಯಾಂಡ್‌ನ ಜಾಗತಿಕ ವಿನ್ಯಾಸ ಶೈಲಿಯಾದ ಸೆನ್ಸುಯಸ್ ಸ್ಪೋರ್ಟಿನೆಸ್' ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಈ ಹೊಸ ಮಾದರಿಯ ವಿನ್ಯಾಸವು ನ್ಯೂ ಜನರೇಷನ್ ಹ್ಯುಂಡೈ ಎಲಾಂಟ್ರಾ ಮತ್ತು ಗ್ರ್ಯಾಂಡಿಯರ್ ಸೇರಿದಂತೆ ಹ್ಯುಂಡೈನ ಜಾಗತಿಕ ಸೆಡಾನ್‌ಗಳಿಂದ ಹೆಚ್ಚು ಪ್ರೇರಿತವಾಗಿದೆ.

ಇದು ಡಬಲ್ ಲೇಯರ್ ಹೆಡ್‌ಲ್ಯಾಂಪ್ ಸೆಟ್-ಅಪ್‌ನೊಂದಿಗೆ ಅಗ್ರೇಸಿವ್ ಮುಂಭಾಗವನ್ನು ಹೊಂದಿದೆ. ಈ ಕಾರು ಇತ್ತೀಚಿನ ಜನರೇಷನ್ ಗ್ರ್ಯಾಂಡ್ಯೂರ್ ಸೆಡಾನ್ ರೀತಿಯಲ್ಲಿದೆ, ಈ ಹೊಸ ಹ್ಯುಂಡೈ ವೆರ್ನಾ ಹೊಸ ಪ್ಯಾರಾಮೆಟ್ರಿಕ್-ಜ್ಯುವೆಲ್-ಪ್ಯಾಟರ್ನ್ ಗ್ರಿಲ್ ಜೊತೆಗೆ ಟರ್ನ್ ಸಿಗ್ನಲ್ ಇಂಟಿಗ್ರೇಷನ್ ನೊಂದಿಗೆ ಬರುತ್ತದೆ. ಈ ಹೊಸ ಕಾರಿನಲ್ಲಿ ಕ್ಯಾಸ್ಕೇಡಿಂಗ್-ಆಕಾರದ ಗ್ರಿಲ್ ಸಮಗ್ರವಾದ ಪೂರ್ಣ ಎಲ್ಇಡಿ ಹೆಡ್ ಲ್ಯಾಂಪ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಎಲ್ಇಡಿ ಲೈಟಿಂಗ್ ಅನ್ನು ಗ್ರಿಲ್ ಮೇಲೆ ಇರಿಸಲಾಗಿದೆ.
ಈ ಸೆಡಾನ್ ಶಾರ್ಪ್ ಲೈನ್ ಗಳು ಮತ್ತು ಕ್ರೀಸ್‌ಗಳೊಂದಿಗೆ ಮಸ್ಕಲರ್ ಬಾನೆಟ್ ಅನ್ನು ಹೊಂದಿದೆ. ಈ ಹೊಸ ಹ್ಯುಂಡೈ ವೆರ್ನಾ ಕಾರಿನ ಶಾರ್ಪ್ ರೂಫ್ ನೊಂದಿಗೆ ಫಾಸ್ಟ್‌ಬ್ಯಾಕ್ ತರಹದ ಶೈಲಿಯನ್ನು ಹೊಂದಿದೆ. ಈ ಸೆಡಾನ್‌ನ ಉದ್ದಕ್ಕೂ ಬಲವಾದ ಲೈನ್ ಗಳನ್ನು ಹೊಂದಿವೆ. ಈ ಕಾರಿನಲ್ಲಿ ಮಲ್ಟಿ-ಸ್ಪೋಕ್ ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಈ ಕಾರಿನ ಹಿಂಭಾಗದಲ್ಲಿ ಹೊಸ ಹೈಟೆಕ್ "H-ಟೈಲ್ ಲ್ಯಾಂಪ್" ಅನ್ನು ಹೊಂದಿದ್ದು. ಅದು, H ಲೋಗೋ ತರಹದ ಆಕಾರವನ್ನು ಹೊಂದಿದೆ,
ಈ ಕಾರಿನಲ್ಲಿ ವಿಂಗ್ ತರಹದ ಆಕಾರವನ್ನು ರಚಿಸುತ್ತದೆ. ಒಟ್ಟಾರೆಯಾಗಿ ಈ ಹೊಸ ಹ್ಯುಂಡೈ ವೆರ್ನಾ ಕಾರು ಕೂಪ್ ಶೈಲಿಯನ್ನು ಹೊಂದಿದೆ. ಈ ಹೊಸ ಹ್ಯುಂಡೈ ವೆರ್ನಾ ಕಾರಿನ ಪವರ್‌ಟ್ರೇನ್ ಆಯ್ಕೆಗಳ ವಿಷಯದಲ್ಲಿ, ಮುಂಬರುವ 2023ರ ಹ್ಯುಂಡೈ ವೆರ್ನಾ ಸೆಡಾನ್ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರಲಿದೆ. ಈ ಕಾರಿನ 1.5-ಲೀಟರ್, ನ್ಯಾಚುರಲ್ ಆಸ್ಪೈರರ್ಡ್ ಪೆಟ್ರೋಲ್ ಎಂಜಿನ್ ಆಗಿರುತ್ತದೆ. ಈ ಎಂಜಿನ್ 113.18 ಬಿಹೆಚ್‍ಪಿ ಪವರ್ ಮತ್ತು 143.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು CVT ಗೇರ್ ಬಾಕ್ಸ್ ನಡುವೆ ಆಯ್ಕೆ ಮಾಡಬಹುದು. ಎರಡನೇ ಎಂಜಿನ್ ಆಯ್ಕೆಯು ಹೆಚ್ಚು ಪವರ್ ಫುಲ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ ಸುಮಾರು 160 bhp ಪವರ್ ಮತ್ತು 320 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.
ಮುಂಬರುವ 2023ರ ಹ್ಯುಂಡೈ ವೆರ್ನಾ ಕಾರಿನ ಎರಡೂ ಎಂಜಿನ್ ಆಯ್ಕೆಗಳು ಇತ್ತೀಚಿನ ಮತ್ತು ಹೆಚ್ಚು ಕಟ್ಟುನಿಟ್ಟಾದ ಬಿಎಸ್ 6 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ. ಇದಲ್ಲದೆ, ಈ ಎಂಜಿನ್‌ಗಳು E20 ಇಂಧನ (20 ಪ್ರತಿಶತ ಎಥೆನಾಲ್) ಜೊತೆಗೆ ಸಹ ಹೊಂದಿಕೊಳ್ಳುತ್ತವೆ. ಈ ಮುಂಬರುವ 2023ರ ಹ್ಯುಂಡೈ ವೆರ್ನಾ ಕಾರಿನಲ್ಲಿ ತಿದೊಡ್ಡ USP ಗಳಲ್ಲಿ ಒಂದೆಂದರೆ, ಸೆಡಾನ್ ADAS ಅನ್ನು ಸಹ ಹೊಂದಿದೆ ಎಂದು ಹೇಳಲಾಗುತ್ತಿದೆ.
2023ರ ಹ್ಯುಂಡೈ ವೆರ್ನಾ ಸೆಡಾನ್ ಕಾರಿನಲ್ಲಿ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಕನೆಕ್ಟೆಡ್ ಕಾರ್ ಟೆಕ್, ಸ್ಮಾರ್ಟ್ ಬೂಟ್ ಲಿಡ್‌ನಂತಹ ಫೀಚರ್ಸ್ ಗಳೊಂದಿಗೆ ಲೋಡ್ ಆಗುವ ನಿರೀಕ್ಷೆಯಿದೆ. ಈ ಕಾರಿನಲ್ಲಿ ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಇನ್ನೂ ಕೆಲವು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.


Click it and Unblock the Notifications