ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಮಹೀಂದ್ರಾ ಸ್ಕಾರ್ಪಿಯೊ ಎನ್ ಪಿಕಪ್ ರೂಪದಲ್ಲಿ ಬರಲು ಸಜ್ಜು
ಜನಪ್ರಿಯ ಸ್ವದೇಶಿ ಮಹೀಂದ್ರಾ ಕಂಪನಿಯ ಗೇಮ್ ಚೇಂಜರ್ ಎಸ್‍ಯುವಿ ಸ್ಕಾರ್ಪಿಯೋ ಎರಡೂ ದಶಕಗಳಿಂದ ಬ್ರ್ಯಾಂಡ್‌ನ ಅತ್ಯಂತ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಮಹೀಂದ್ರಾ ಕಂಪನಿಯ ಎಸ್‍ಯುವಿಗಳ ಸರಣೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ, ಮಾರಾಟದಲ್ಲಿ ಮಹೀಂದ್ರಾ ಕಂಪನಿಗೆ ಇಂದಿಗೂ ಕೂಡ ಹೆಚ್ಚಿನ ಕೊಡುಗೆಯನ್ನು ನೀಡುವುದನ್ನು ಮುಂದುವರೆಸಿರುವುದು ವಿಶೇಷ.
ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಹಳೆಯ ತಲೆಮಾರಿನ ನವೀಕೃತ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತ್ತು. ಈ ಎಸ್‍ಯುವಿಯನ್ನು ನ್ಯೂ ಜನರೇಷನ್ ಸ್ಕಾರ್ಪಿಯೋ-ಎನ್ ಜೊತೆಗೆ ಮಾರಾಟ ಮಾಡಲಾಗುತ್ತದೆ, ಈ ಎರಡೂ ಎಸ್‍ಯುವಿಗಳು ಭರ್ಜರಿಯಾಗಿ ಮಾರಾಟವಾಗುತ್ತಿದೆ. ಎಲ್ಲಾ ಎಸ್‍ಯುವಿಗಳ ಬಿಗ್ ಡ್ಯಾಡಿ ಸ್ಕಾರ್ಪಿಯೋ ಬೇಡಿಕೆ ಹೆಚ್ಚಾಗಿರುವುದರಿಂದ ಕಾಯುವ ಅವಧಿ ಕೂಡ ಹೆಚ್ಚಾಗಿದೆ.

ಮಹೀಂದ್ರಾ ಸ್ಕಾರ್ಪಿಯೊ ಎನ್ ಎಸ್‍ಯುವಿಯ ಮುಂಬರುವ ಪಿಕಪ್ ಆವೃತ್ತಿಯನ್ನು ಟೀಸರ್ ಬಿಡುಗಡೆ ಮೂಲಕ ಮಹೀಂದ್ರಾ ಭಾರತದಲ್ಲಿನ ವಾಹನ ಉತ್ಸಾಹಿಗಳಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಅಂದಹಾಗೆ, ಮುಂಬರುವ ಮಹೀಂದ್ರಾ ಸ್ಕಾರ್ಪಿಯೊ ಎನ್ ಪಿಕಪ್ ಬಗ್ಗೆ ಇಲ್ಲಿಯವರೆಗೆ ನಮಗೆ ತಿಳಿದಿರುವ ಮಾಹಿತಿ ಇಲ್ಲಿದೆ. ಟೀಸರ್ ಪ್ರಕಾರ ಮುಂಬರುವ ಹೊಸ ಮಹೀಂದ್ರಾ ಸ್ಕಾರ್ಪಿಯೋ ಎನ್ ಪಿಕಪ್ (Mahindra Scorpio N Pickup) ಆಗಸ್ಟ್ 15 ರಂದು ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.
ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ವಿದೇಶಿ ನೆಲದಲ್ಲಿ ಈ ಮಾದರಿಯು ತನ್ನ ಪಾದಾರ್ಪಣೆ ಮಾಡಲಿದೆ. ಆಂತರಿಕವಾಗಿ Z121 ಕೋಡ್ ನೇಮ್ ಹೊಂದಿದ್ದು, ಮುಂಬರುವ ಮಹೀಂದ್ರಾ ಸ್ಕಾರ್ಪಿಯೋ ಎನ್ ಪಿಕಪ್ ಹೆಚ್ಚು ಉದ್ದವಾದ ವೀಲ್‌ಬೇಸ್‌ನೊಂದಿಗೆ ಬರುತ್ತದೆ. ಈ ಮುಂಬರುವ ಮಾದರಿಯು 3,000mm ಗಿಂತ ಹೆಚ್ಚಿನ ವೀಲ್‌ಬೇಸ್ ಅನ್ನು ಹೊಂದಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.
ಸ್ಟ್ಯಾಂಡರ್ಡ್ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿಯು 2,600mm ವ್ಹೀಲ್‌ಬೇಸ್ ಅನ್ನು ಹೊಂದಿದೆ. ಮುಂಬರುವ ಮಹೀಂದ್ರಾ ಸ್ಕಾರ್ಪಿಯೊ ಎನ್ ಮುಂಬರುವ ಪಿಕಪ್ ಆವೃತ್ತಿಯನ್ನು ಹೆಚ್ಚು ಬಳಸಬಹುದಾದ ಲೋಡಿಂಗ್ ಬೇ ನೀಡುತ್ತದೆ. ಟೀಸರ್ ವೀಡಿಯೊ ಮುಂಬರುವ ಸ್ಕಾರ್ಪಿಯೊ ಎನ್ ಪಿಕಪ್‌ನ ಡಬಲ್-ಕ್ಯಾಬ್ ಆವೃತ್ತಿಯನ್ನು ಪ್ರದರ್ಶಿಸಿದೆ. ಟೀಸರ್ ವೀಡಿಯೊವನ್ನು ನೋಡುವಾಗ, ಮುಂಬರುವ ಮಹೀಂದ್ರಾ ಸ್ಕಾರ್ಪಿಯೊ ಎನ್ ಪಿಕಪ್ ಹೊಸ ಎಲ್ಇಡಿ ಟೈಲ್ಯಾಂಪ್ ಅನ್ನು ಹೊಂದಿದೆ.
ಇದರೊಂದಿಗೆ ಸೈಡ್ ಸ್ಟೆಪ್ಸ್, ಹೊಸ ಮುಂಭಾಗದ ಗ್ರಿಲ್ ಮತ್ತು ವಿದ್ಯುತ್ ಚಾಲಿತ ಸನ್‌ರೂಫ್ ಅನ್ನು ಒಳಗೊಂಡಿದೆ. ಈ ಎಸ್‍ಯುವಿ ಈ ಎಲ್ಲಾ ವೈಶಿಷ್ಟ್ಯಗಳು ಮುಂಬರುವ ಸ್ಕಾರ್ಪಿಯೋ ಎನ್ ಪಿಕಪ್ ಅನ್ನು ಸ್ವಲ್ಪ ಹೆಚ್ಚು ಐಷಾರಾಮಿ-ಆಧಾರಿತವಾಗಿಸುತ್ತದೆ. ಭಾರತದಲ್ಲಿ ಸ್ಕಾರ್ಪಿಯೋ ಎನ್ ಪಿಕಪ್ ಅನ್ನು ಪ್ರಾರಂಭಿಸಲು ಮಹೀಂದ್ರಾ ಉದ್ದೇಶಿಸಿದೆಯೇ ಎಂಬುದು ಇನ್ನೂ ದೃಢೀಕರಿಸಲ್ಪಟ್ಟಿಲ್ಲ.
ಬಿಡುಗಡೆಯಾದರೆ, ಮುಂಬರುವ ಮಹೀಂದ್ರ ಸ್ಕಾರ್ಪಿಯೋ N ನ ಪಿಕಪ್ ಆವೃತ್ತಿಯು Isuzu V-Cross ಮತ್ತು Toyota Hilux ಡಬಲ್-ಕ್ಯಾಬ್ ಪಿಕಪ್ ಎಸ್‍ಯುವಿಗೆ ಪೈಪೋಟಿ ನೀಡುತ್ತದೆ. ಮಹೀಂದ್ರಾ ಸ್ಕಾರ್ಪಿಯೊ ಎನ್ ಎಸ್‍ಯುವಿಯು ಅದೇ 2.2-ಲೀಟರ್, ಟರ್ಬೋಚಾರ್ಜ್ಡ್, 4-ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಈ ಎಂಜಿನ್ 172.5 bhp ಪವರ್ ಮತ್ತು 400 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಅಥವಾ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಎಸ್‍ಯುವಿಯಲ್ಲಿ 4-ವೀಲ್ ಡ್ರೈವ್ ತಂತ್ರಜ್ಙಾನವನ್ನು ಹೊಂದಿದೆ. ಸಾಮಾನ್ಯ ಸ್ಕಾರ್ಪಿಯೋಗೆ ಹೋಲಿಸಿದರೆ ಸ್ಕಾರ್ಪಿಯೋ-ಎನ್ ಎಸ್‍ಯುವಿಯಲ್ಲ್ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ನೊಂದಿಗೆ 18 ಇಂಚಿನ ವ್ಹೀಲ್ ಗಳನ್ನು ನೀಡಲಾಗಿದೆ
ಲಂಬವಾಗಿ ಜೋಡಿಸಲಾದ ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಸ್ಪಾಯ್ಲರ್ ಅನ್ನು ಹೊಂದಿದೆ. ಸ್ಕಾರ್ಪಿಯೋ-ಎನ್ ಮಧ್ಯಂತರ ವೆರಿಯೆಂಟ್ ನಂತರದಲ್ಲಿ ಲಭ್ಯವಾಗುವಂತೆ ಸನ್‌ರೂಫ್, ಎಲೆಕ್ಟ್ರಿಕಲ್ ಫೋಲ್ಡಿಂಗ್ ರಿಯರ್ ವ್ಯೂ ಮಿರರ್‌ಗಳು ಮತ್ತು ಶಾರ್ಕ್-ಫಿನ್ ಆಂಟೆನಾವನ್ನು ಸಹ ಒಳಗೊಂಡಿದೆ. ಇನ್ನು ಹೊರಭಾಗದಂತೆ ಒಳಭಾಗದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದೆ. ಮುಂದಿನ ದಿನಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೊ ಎನ್ ಎಸ್‍ಯುವಿಯ ಮುಂಬರುವ ಪಿಕ್ ಅಪ್ ಆವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ.


Click it and Unblock the Notifications