ಸೂಪರ್ ಮೈಲೇಜ್‌ನೊಂದಿಗೆ ಲಾಭ ತಂದುಕೊಡುವ ಮಹೀಂದ್ರಾ ಸುಪ್ರೊ ಸಿಎನ್‌ಜಿ ಡ್ಯುಯೊ ಬಿಡುಗಡೆ
ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಸುಪ್ರೊ ಸಿಎನ್‌ಜಿ ಡ್ಯುಯೊ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಸುಪ್ರೊ ಸಿಎನ್‌ಜಿ ಡ್ಯುಯೊ ಮಾದರಿಯ ಆರಂಬಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.6.32 ಲಕ್ಷವಾಗಿದೆ. ಇದು ಮಹೀಂದ್ರಾ ಕಂಪನಿಯ ಡ್ಯುಯಲ್-ಇಂಧನ ಸಣ್ಣ ವಾಣಿಜ್ಯ ವಾಹನವಾಗಿದೆ.
ಹೊಸ ಮಹೀಂದ್ರಾ ಸುಪ್ರೊ ಸಿಎನ್‌ಜಿ ಡ್ಯುಯೊ (Mahindra Supro CNG Duo) ಮಾದರಿಯು ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ. ಈ ಹೊಸ ವಾಣಿಜ್ಯ ವಾಹನವು ಕೈಗೆಟುಕುವ ಬೆಲೆ, ಹೆಚ್ಚು ಪವರ್ ಫುಲ್, ಹೆಚ್ಚಿನ ಪೇಲೋಡ್ ಸಾಮರ್ಥ್ಯ ಮತ್ತು ಹೆಚ್ಚಿನ ಮೈಲೇಜ್ ಅನ್ನು ಹೊಂದಿದೆ. ಇದು ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಮಹೀಂದ್ರಾ ಸುಪ್ರೊ ಸಿಎನ್‌ಜಿ ಡ್ಯುಯೊ ಮಾದರಿಯಲ್ಲಿ 909 ಸಿಸಿ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 26.8bhp ಮತ್ತು 60Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 4-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದು ಮುಂಭಾಗದ ವ್ಹೀಲ್ ಗಳಿಗೆ ಪವರ್ ಕಳುಹಿಸುತ್ತದೆ. ಈ ಹೊಸ ಮಹೀಂದ್ರಾ ವಾಣಿಜ್ಯ ವಾಹನವು 23.35km/kg ಮೈಲೇಜ್ ಅನ್ನು ನೀಡುತ್ತದೆ.
ಮಹೀಂದ್ರಾ ಸುಪ್ರೊ ಸಿಎನ್‌ಜಿ ಡ್ಯುಯೊ ಎರಡು ಸಿಎನ್‌ಜಿ ಟ್ಯಾಂಕ್‌ಗಳನ್ನು ಹೊಂದಿದ್ದು, ಇದು ಒಟ್ಟು 75 ಲೀಟರ್ ಸಿಎನ್‌ಜಿ ಸಾಮರ್ಥ್ಯವನ್ನು ಹೊಂದಿದೆ. ಸಿಎನ್‌ಜಿ ಟ್ಯಾಂಕ್‌ಗಳ ಜೊತೆಗೆ, ಸುಪ್ರೊ ಸಿಎನ್‌ಜಿ ಡ್ಯುಯೊ ಪೆಟ್ರೋಲ್‌ಗಾಗಿ 5-ಲೀಟರ್ ಸ್ಟೋರೇಜ್ ಟ್ಯಾಂಕ್ ಅನ್ನು ಸಹ ಒಳಗೊಂಡಿದೆ. ಒಟ್ಟಾರೆಯಾಗಿ, ಸುಪ್ರೊ ಸಿಎನ್‌ಜಿ ಡ್ಯುಯೊ ತನ್ನ ಡ್ಯುಯಲ್-ಇಂಧನ ಸೆಟಪ್‌ನೊಂದಿಗೆ 325 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಮಹೀಂದ್ರಾದ ಸುಪ್ರೊ ಸಿಎನ್‌ಜಿ ಡ್ಯುಯೊ ಕೆಲವು ಭಾರವಾದ ಲಗ್ಗೆಜ್ ಗಳನ್ನು ಸಹ ಸಾಗಿಸಬಲ್ಲದು. ಈ ಮಾದರಿ 750 ಕಿಲೋಗ್ರಾಂಗಳ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಮಹೀಂದ್ರಾದ ಸುಪ್ರೊ ಸಿಎನ್‌ಜಿ 145 R12, 8PR ಟೈರ್‌ಗಳೊಂದಿಗೆ 12-ಇಂಚಿನ ಸ್ಟೀಲ್ ವ್ಹೀಲ್ ಗಳನ್ನು ಹೊಂದಿದೆ. ಈ ಸಣ್ಣ ವಾಣಿಜ್ಯ ವಾಹನವಾವು 158mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.
ಮಹೀಂದ್ರಾ ಸುಪ್ರೊ ಸಿಎನ್‌ಜಿ ಡ್ಯುಯೊ ಮಾದರಿಯ ಮೇಲೆ 3 ವರ್ಷಗಳು/80,000 ಕಿಮೀ ಕ್ಲಾಸ್-ಲೀಡಿಂಗ್ ವಾರಂಟಿಯೊಂದಿಗೆ ಬರುತ್ತದೆ. ಸುಪ್ರೊ ಸಿಎನ್‌ಜಿ ಡ್ಯುಯೊ ವಾಹನವು ಡೈಮಂಡ್ ವೈಟ್ ಮತ್ತು ಡೀಪ್ ವಾರ್ಮ್ ಬ್ಲೂ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ನಿಮ್ಮ ಮೆಚ್ಚಿನ ಬಣ್ಣಗಳ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಮಹೀಂದ್ರಾ ಸುಪ್ರೊ ಸಿಎನ್‌ಜಿ ಡ್ಯುಯೊ ವಾಣಿಜ್ಯ ವಾಹನದ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದು ದೊಡ್ಡ ಭಾರೀ ವಾಹನಗಳಲ್ಲಿ ಕಂಡುಬರುವ ಲೀಫ್ ಸ್ಪ್ರಿಂಗ್ ಸಸ್ಪೆಕ್ಷನ್ ಅನ್ನು ಹೊಂದಿದೆ. ಇದರ ಮುಂಭಾಗದಲ್ಲಿ 8 ಲೀಫ್ ಸ್ಪ್ರಿಂಗ್ ಸೌಲಭ್ಯ ಮತ್ತು ಹಿಂಭಾಗದಲ್ಲಿ 7 ಲೀಫ್ ಸ್ಪ್ರಿಂಗ್ ಸೌಲಭ್ಯವಿದೆ. ಈ ರೀತಿಯ ಸಸ್ಪೆಕ್ಷನ್ ಉತ್ತವಾಗಿ ಕಾರ್ಯ ನಿರ್ವಹಿಸುತ್ತದೆ.
2016 ರಲ್ಲಿ ಪ್ರಾರಂಭವಾದಾಗಿನಿಂದ, ಮಹೀಂದ್ರಾ & ಮಹೀಂದ್ರಾ ಸುಪ್ರೋ ಸಣ್ಣ ವಾಣಿಜ್ಯ ವಾಹನಗಳ 1.75 ಲಕ್ಷ ಯುನಿಟ್ ಗಳನ್ನು ಮಾರಾಟ ಮಾಡಿದೆ. ಇಂಟರ್-ಸಿಟಿಯಲ್ಲಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಮಹೀಂದ್ರಾ ಸುಪ್ರೊ ಸಿಎನ್‌ಜಿ ಡ್ಯುಯೊ ಸಂಸ್ಥೆಯ ಮೊದಲ ಡ್ಯುಯಲ್-ಇಂಧನ ಸಣ್ಣ ವಾಣಿಜ್ಯ ವಾಹನವಾಗಿದೆ.


Click it and Unblock the Notifications