Mahindra Thar: ಬಿಡುಗಡೆಗೆ ಇನ್ನಷ್ಟು ದಿನ ಬಾಕಿ.. ಹೊಸ ಮಹೀಂದ್ರಾ ಥಾರ್ 5-ಡೋರ್ ವೈಶಿಷ್ಟ್ಯ ಹೇಗಿದೆ ಗೊತ್ತಾ?
ಆಫ್-ರೋಡಿಂಗ್ ಚಾಲನೆಯನ್ನು ಇಷ್ಟಪಡುವವರಿಗೆ ನಿಮಿಷ್ಟದ ಕಾರು ಯಾವುದೇ ಎಂದು ಕೇಳಿದರೆ, ಅವರಿಂದ ಬರುವ ಒಂದೇ ಉತ್ತರ ಮಹೀಂದ್ರಾ ಥಾರ್ (Mahindra Thar) ಎಂದು. ಅಷ್ಟರಮಟ್ಟಿಗೆ ಜನಪ್ರಿಯವಾಗಿದೆ. ಸದ್ಯ, ಕಂಪನಿಯು ಈ ಎಸ್‌ಯುವಿಯನ್ನು 5 ಡೋರ್ ಆಯ್ಕೆಯಲ್ಲಿ ಅಭಿವೃದ್ಧಿಪಡಿಸುತ್ತಿದ್ದು, ಇತ್ತೀಚೆಗೆ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದೆ.
ಈ ವೇಳೆ, ಸೆರೆಹಿಡದ ಸ್ಪೈ ಚಿತ್ರಗಳು ಇಂಟರ್ನೆಟ್ ನಲ್ಲಿ ಸೋರಿಕೆಯಾಗಿದ್ದು, ಅದರಲ್ಲಿ ಒಳಭಾಗದಲ್ಲಿ ವೈಶಿಷ್ಟ್ಯಗಳನ್ನು ನೋಡಬಹುದು. ಪ್ರಸ್ತುತ ಖರೀದಿಗೆ ದೊರೆಯುವ 3 ಡೋರ್ ಥಾರ್ ಎಸ್‌ಯುವಿಗೆ ಹೋಲಿಸಿದರೆ, 5 ಡೋರ್ ಥಾರ್ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದೆ. ಮುಖ್ಯವಾಗಿ, ದೊಡ್ಡದಾದ 12.3 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ.

ಮುಂಬರುವ ಮಹೀಂದ್ರಾ ಥಾರ್ 5 - ಡೋರ್, ನವೀನ ಸ್ಟೀರಿಂಗ್ ವೀಲ್ ಪಡೆದಿದೆ. ಇದು, XUV700ಗೆ ಹೋಲಿಕೆಯಾಗುತ್ತದೆ. ಜೊತೆಗೆ ವೃತ್ತಾಕಾರದ ಎಸಿ ವೆಂಟ್ಸ್ ಅನ್ನು ಹೊಂದಿದೆ. ಇದರೊಟ್ಟಿಗೆ ಆರ್ಮ್‌ರೆಸ್ಟ್ ಇದ್ದು, ಹಳೆಯ ಕಾರುಗಳಂತೆ ಡೋರ್ ಪ್ಯಾಡ್‌ಗಳಲ್ಲಿ ವಿಂಡೋ ಸ್ವಿಚ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಈ ಮೂಲಕ ಹೊಸ 5 - ಡೋರ್ ಎಸ್‌ಯುವಿ, ಕ್ಯಾಬಿನ್ ಒಳಭಾಗದಲ್ಲಿ ಅತ್ಯಾಧುನಿಕ ವಿನ್ಯಾಸವನ್ನು ಪಡೆದಿದೆ.
ಹೊಸ ಥಾರ್ ಇನ್ನೂ ಯಾವ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ನೋಡುವುದಾದರೆ, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ, ವೈರ್‌ಲೆಸ್ ಚಾರ್ಜರ್, ಕ್ರೂಸ್ ಕಂಟ್ರೋಲ್, ರೇರ್ ಎಸಿ ವೆಂಟ್ಸ್, ಆಟೋ ಡಿಮ್ಮಿಂಗ್ ಐಆರ್‌ವಿಎಂ, ಆಟೋ ಹೆಡ್‌ಲ್ಯಾಂಪ್ಸ್ ಮತ್ತು ಸೆನ್ಸಿಂಗ್ ವೈಪರ್ಸ್ ಅನ್ನು ಪಡೆದಿರುವ ನೀರಿಕ್ಷೆಯಿದೆ.

ಹೊಸ ಮಹೀಂದ್ರಾ ಥಾರ್ 5 - ಡೋರ್, ಎರಡು ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು. ಅವುಗಳೆಂದರೆ, 2.0 - ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.2 - ಲೀಟರ್ ಡೀಸೆಲ್ ಎಂಜಿನ್. ಕ್ರಮವಾಗಿ, 150 bhp ಪವರ್, 320 Nm ಪೀಕ್ ಟಾರ್ಕ್, 130 bhp ಗರಿಷ್ಠ ಪವರ್ 300 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಬಹುದು. ಕಂಪನಿಯು ಈವರೆಗೆ ಈ ಎಸ್‌ಯುವಿ ಬೆಲೆಯನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ.
ಪ್ರಸ್ತುತ, ದೇಶದಲ್ಲಿ 3 - ಡೋರ್ ಆಯ್ಕೆಯಲ್ಲಿ ಸಿಗುವ ಮಹೀಂದ್ರಾ ಥಾರ್, ರೂ.10.54 ಲಕ್ಷದಿಂದ ರೂ.16.78 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆಯಲ್ಲಿ ದೊರೆಯಲಿದ್ದು, ಅದಕ್ಕೆ ತಕ್ಕಂತೆ ಕಾರ್ಯಕ್ಷಮತೆಯನ್ನು ಹೊಂದಿದೆ. 4WD (ಫೋರ್ ವೀಲ್ ಡ್ರೈವ್) ಹಾಗೂ RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದೆ.
ಮಹೀಂದ್ರಾ ಥಾರ್ ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಕೊಂಚ ಕಡಿಮೆ ಇಂಧನ ದಕ್ಷತೆ ಹೊಂದಿದ್ದು, 15.2 kmpl ಮೈಲೇಜ್ ನೀಡುತ್ತದೆ. ಎವರೆಸ್ಟ್ ವೈಟ್, ರೆಡ್ ರೇಜ್, ನಪೋಲಿ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದ್ದು 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮ್ಯಾನ್ಯುವಲ್ ಎಸಿ ಮತ್ತು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications